Tag: ತುಮಕೂರು ರಸ್ತೆ

  • ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ನೆಲಮಂಗಲ: ಬೆಂಗಳೂರು- ತುಮಕೂರು ರಸ್ತೆಯನ್ನು ಸಂಪರ್ಕಿಸುವ ನವಯುಗ ಮೇಲ್ಸೇತುವೆಯಲ್ಲಿ ಬಿರುಕು ಮೂಡಿದ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    FLYOVER nelamangala 2

    ಟಿ.ದಾಸರಹಳ್ಳಿಯ ಬಳಿಯ ದೀಪಕ್ ಬಸ್ ನಿಲ್ದಾಣದ ಬಳಿ ಮೇಲ್ಸೇತುವೆ ಬಿರುಕು ಮೂಡಿದ ಪರಿಣಾಮ ಕಿಲೋಮಿಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಹೈರಾಣು ಆಗಿದ್ದಾರೆ.  ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಿದ್ದು, ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ. ಇದನ್ನೂ ಓದಿ:  ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವೆ: ಸಿಎಂ

    peenya flyover

     

    ಸರ್ವಿಸ್ ರಸ್ತೆಯಲ್ಲೂ ವಿಪರೀತ ಟ್ರಾಫಿಕ್‌ ಜಾಮ್‌ ಆದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ತುಮಕೂರು ಕಡೆಯಿಂದ ಬರುವವರು ಮಾದವಾರ ಬಳಿ ಬಲ ತಿರುವು ಪಡೆದು ನೈಸ್ ರಸ್ತೆ ಮೂಲಕ ನಗರ ಪ್ರವೇಶಕ್ಕೆ ಸೂಚನೆಯನ್ನು ನೀಡಲಾಗಿದೆ. ಬೆಂಗಳೂರಿನಿಂದ ತುಮಕೂರು ಕಡೆ ಹೋಗುವವರು, ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುಮನಹಳ್ಳಿ, ಮಾಗಡಿ ರಸ್ತೆ ಮೂಲಕ ನೈಸ್ ರಸ್ತೆಯಿಂದ ಹೊರ ಹೋಗಲು ಸೂಚಿಸಲಾಗಿದೆ.

     

    ಈ ಮೇಲ್ಸೇತುವೆ ದೋಷದಿಂದ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ಸಿಲುಕಿ ಪರದಾಡಿದೆ. 7-8 ಕಿ.ಮೀವರೆಗೆ ಟ್ರಾಫಿಕ್ ಜಾಮ್ ಆಗಿದೆ. ದುರಸ್ತಿ ಕಾರ್ಯಕ್ಕೆ ಅಂದಾಜು 6 ದಿನ ಬೇಕಾಗಿರುವ ಕಾರಣ ಅಲ್ಲಿಯವರೆಗೂ ಫ್ಲೈಓವರ್‌ ಮೇಲಿನ ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

  • ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಫಾರ್ಚೂನರ್‌ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು

    ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಫಾರ್ಚೂನರ್‌ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು

    ನೆಲಮಂಗಲ: ರಸ್ತೆ ಡಿವೈಡರ್ ದಾಟಿ ಕ್ಯಾಂಟರ್‌ಗೆ ಟೊಯೊಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ ತುಮಕೂರು ರಸ್ತೆಯ ಕುಲುವನಹಳ್ಳಿ ಬಳಿ ವೇಗದಲ್ಲಿ ಸಂಚರಿಸುತ್ತಿದ್ದ ಕೆಎ 01 ಎಂಯು 6646 ಸಂಖ್ಯೆಯ ಕಾರು ಡಿವೈಡರ್‌ ದಾಟಿ ಕ್ಯಾಂಟರ್‌ಗೆ ಗುದ್ದಿದೆ.

    NML ACCIDENt 2

    ಭೀಕರ ಅಪಘಾತದಲ್ಲಿ ಐಶಾರಾಮಿ ಕಾರು ನಜ್ಜುಗುಜ್ಜಾಗಿ ಹೋಗಿದೆ. ಫಾರ್ಚೂನರ್‌ ಗುದ್ದಿದ ರಭಸಕ್ಕೆ ಕ್ಯಾಂಟರ್‌ನ ಮುಂಭಾಗಕ್ಕೆ ಹಾನಿಯಾಗಿದೆ.

    ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಜ್ವರದಿಂದ ಬಳಲಿ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ- ಪೊಲೀಸ್ರು ಕಾಲ್ ಮಾಡಿದ್ರೂ ಬರ್ತಿಲ್ಲ ಅಂಬುಲೆನ್ಸ್

    ಜ್ವರದಿಂದ ಬಳಲಿ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ- ಪೊಲೀಸ್ರು ಕಾಲ್ ಮಾಡಿದ್ರೂ ಬರ್ತಿಲ್ಲ ಅಂಬುಲೆನ್ಸ್

    ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ.

    ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಸುಳಿದಿಲ್ಲ. ಇತ್ತ ಕಳೆದ ಮೂರು ಗಂಟೆಯಿಂದ ಅಂಬುಲೆನ್ಸ್ ಗೆ ಎಷ್ಟೇ ಕಾಲ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

    police 1 e1585506284178

    ಪ್ಲೇ ಓವರ್ ಮೇಲೆ ಬಿದ್ದಿರುವ ವ್ಯಕ್ತಿ ರಕ್ಷಣೆಗೆ ಪೀಣ್ಯಾ ಪೊಲೀಸರು ಹರಸಾಹಸ ಪಡುತ್ತಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರುತ್ತಿಲ್ಲ. ಹೀಗಾಗಿ ಬೆಂಗಳೂರಂತ ಸಿಟಿಯಲ್ಲಿ ಒಂದು ಆಂಬ್ಯೂಲೆನ್ಸ್ ಬರಲು ಗಂಟೆಗಳು ಬೇಕಾ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಮುಂಜಾನೆಯಿಂದ ಇಲ್ಲಿಯವರೆಗೂ ವ್ಯಕ್ತಿ ರಸ್ತೆಯಲ್ಲಿಯೇ ಬಿದ್ದಿದ್ದಾರೆ. ಯಾರೊಬ್ಬರು ವ್ಯಕ್ತಿಯ ರಕ್ಷಣೆಗೆ ಮುಂದಾಗುತ್ತಿಲ್ಲ. ಹೀಗಾಗಿ ಬಿದ್ದಿರುವ ವ್ಯಕ್ತಿಗೆ ಹೊಯ್ಸಳ ವಾಹನವನ್ನೇ ಅಡ್ಡಲಾಗಿ ನಿಲ್ಲಿಸಿ ಕಾವಲು ಕಾಯಲಾಗಿದೆ.