Tag: ಡಿಆರ್ ಎಸ್

  • ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಡಿಆರ್‌ಎಸ್ ವಿರುದ್ಧ ಕೊಹ್ಲಿ ಅಪಸ್ವರ

    ಮುಂಬೈ: ಮೊಹಾಲಿ ಏಕದಿನ ಕ್ರಿಕೆಟ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಆರ್‍ಎಸ್‍ನಲ್ಲಿ ಸ್ಥಿರತೆ ಇಲ್ಲ ಎಂದು ತಿಳಿಸಿದ್ದಾರೆ.

    4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ಟರ್ನರ್ ಅವರ ಔಟ್ ಮನವಿಯನ್ನು ಅಂಪೈರ್ ನಿರಾಕರಿಸಿದ ಘಟನೆಯ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಂದ್ಯದ 44 ಓವರಿನಲ್ಲಿ ಟರ್ನರ್ 41 ರನ್ ಗಳಿಸಿದ್ದರು. ಬೌಲಿಂಗ್ ಎಸೆದ ಚಹಲ್ ಎಸೆತದಲ್ಲಿ ಭಾರೀ ಶಾಟ್‍ಗೆ ಸಿಡಿಸಲು ಮುಂದಾದ ಟರ್ನರ್ ವಿಫಲರಾಗಿದ್ದರು. ಇತ್ತ ವಿಕೆಟ್ ಹಿಂದಿದ್ದ ಪಂತ್ ಬಾಲ್ ಕ್ಯಾಚ್ ಪಡೆದು, ಕೂಡಲೇ ಸ್ಟಂಪ್ ಕೂಡ ಮಾಡಿದ್ದರು. ಆಟಗಾರರ ಮನವಿಯನ್ನು ಅಂಪೈರ್ ನಿರಾಕರಿಸಿ ನಾಟೌಟ್ ಎಂದು ತಿಳಿಸಿದ್ದರು. ಕೂಡಲೇ ಕೊಹ್ಲಿ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು.

    c7QN6Yjm

    ಟರ್ನರ್ ಸ್ಟಂಪ್ ಸೇರಿದಂತೆ ಕ್ಯಾಚ್ ಪರಿಶೀಲನೆ ನಡೆಸಿದ 3ನೇ ಅಂಪೈರ್ ಕೂಡ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಡಿಆರ್‍ಎಸ್ ನಲ್ಲಿ ಚೆಂಡು ಟರ್ನರ್ ಬ್ಯಾಟಿಗೆ ತಾಗಿ ಹೋಗಿದ್ದು ಸ್ಪಷ್ಟವಾಗಿತ್ತು. ಈ ವೇಳೆ ಕೊಹ್ಲಿ ಮೈದಾನದಲ್ಲೇ ಗರಂ ಆಗಿದ್ದರು.

    ನಿರ್ಣಯಕ ಹಂತದ ವಿಕೆಟ್ ಪಡೆದರೂ ಕೂಡ ಅಂಪೈರ್ ಕೆಟ್ಟ ತೀರ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ ಸೋಲುಂಡಿತ್ತು. ಪರಿಣಾಮ ಸರಣಿಯಲ್ಲಿ ಆಸೀಸ್ ಸಮಬಲ ಸಾಧಿಸಿತ್ತು.

    ಆಸೀಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಅವರು ಗೆಲುವಿಗೆ ಅರ್ಹರಿದ್ದಾರೆ. ಆದರೆ ಡಿಆರ್‍ಎಸ್ ನಿರ್ಧಾರ ನನ್ನನ್ನು ಕ್ಷಣ ಕಾಲ ಅಚ್ಚರಿಗೊಳ್ಳುವಂತೆ ಮಾಡಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 13ರಂದು ದೆಹಲಿಯಲ್ಲಿ ನಡೆಯಲಿದ್ದು, ಸಮಬಲ ಸಾಧಿಸಿರುವ ಇತ್ತಂಡಗಳು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

    virat kohli 2

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ ಆರಂಭದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನೋರಂಜನೆ ದೊರೆಯುತ್ತಿದ್ದು. ಟೀಂ ಫ್ರಾಂಚೈಸಿಗಳು ಟೂರ್ನಿಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರೊಂದಿಗೆ 11 ನೇ ಆವೃತ್ತಿಯ ಟೂರ್ನಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

    ಮಿಡ್ ಸೀಸನ್ ಟ್ರಾನ್ಸ್ ಫಾರ್: ಟೂರ್ನಿಯಲ್ಲಿ ಪ್ರಮುಖವಾಗಿ `ಮಿಡ್ ಸೀಸನ್ ಟ್ರಾನ್ಸ್ ಫಾರ್’ ಎಂಬ ಹೊಸ ನಿಯಮ ಜಾರಿಗೆಯಾಗಿದೆ. ಈ ನಿಯಮದ ಪ್ರಕಾರ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಆಡದ ಆಟಗಾರರು ಹರಾಜದ ತಂಡದ ಬದಲಾಗಿ ಬೇರೆಂದು ತಂಡ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಈ ವೇಳೆ ಎರಡು ಪಂದ್ಯ ಮತ್ತು ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ತಂಡದ ಬದಲಾವಣೆಗೆ ಅವಕಾಶವಿದೆ.

    ipl trophy

     

    ಮಿಡ್ ಸೀಸನ್ ಟ್ರಾನ್ಸ್ ಫಾರ್ ನಿಯಮ ಟೂರ್ನಿಯ ಮಧ್ಯದಲ್ಲಿ ಕೇವಲ 5 ದಿನಗಳು ಮಾತ್ರ ಅವಕಾಶ ನೀಡಲಾಗಿದೆ. 2016 ರ ಈ ನಿಯಮ ಜಾರಿಯಲ್ಲಿ ಇಲ್ಲದ ಕಾರಣ ಬೌಲರ್ ಡೇಲ್ ಸ್ಟೇನ್ನ್ ಸ್ಟೈನ್ ಗುಜರಾತ್ ಲಯನ್ಸ್ ಪರ ಆಡಲು ಸಾಧ್ಯವಾಗಿರಲ್ಲ. ಹಲವು ಆಟಗಾರರು ಇಂತಹ ಸಮಸ್ಯೆಯನ್ನು ಎದುರಿಸಿದ್ದರು.

    ಡಿಆರ್ ಎಸ್: ಐಸಿಸಿ ಹಾಗೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಜಾರಿ ಇದ್ದ ತೀರ್ಪು ಪುನರ್ ಪರಿಶೀಲನೆ ನೀಡುವ ನಿಯಮವನ್ನು ಜಾರಿ ಮಾಡಲಾಗಿದೆ. ಪಂದ್ಯದ ವೇಳೆ ಪ್ರತಿ ತಂಡಕ್ಕೂ ಒಂದು ಮನವಿಯನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ.

    ಡಿಆರ್ ಎಸ್ ನಿಯಮವನ್ನು ಐಪಿಎಲ್ ಟೂರ್ನಿಯಲ್ಲಿ ಜಾರಿಗೆ ತರಲು ಹಲವು ವರ್ಷಗಳಿಂದ ಚಿಂತನೆ ನಡೆಸಲಾಗಿತ್ತು. ಇದರ ಭಾಗವಾಗಿ 11 ನೇ ಆವೃತ್ತಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

    MSD 6

    ದೂರದರ್ಶನದಲ್ಲಿ ಐಪಿಎಲ್: ದೇಶದ ಗ್ರಾಮೀಣ ಭಾಗದ ಜನರಿಗೂ ಐಪಿಎಲ್ ತಲುಪಿಸುವ ಭಾಗವಾಗಿ ದೂದರ್ಶನದಲ್ಲೂ ಐಪಿಎಲ್ ಪಂದ್ಯಗಳ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನೇರ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ಸ್ಟಾರ್ ವಾಹಿಯೂ ಅನುಮತಿ ನೀಡಿದೆ. ಆದರೆ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಒಂದು ಗಂಟೆ ತಡವಾಗಿ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

    ವರ್ಚುವಲ್ ರಿಯಾಲಿಟಿ: ಅಂತರ್ಜಾಲದಲ್ಲಿ ಕ್ರಿಕೆಟ್ ನೇರ ಪ್ರಸಾರ ಮಾಡುತ್ತಿದ್ದ ಹಾಟ್ ಸ್ಟಾರ್ ಆ್ಯಪ್ ವರ್ಚುವಲ್ ರಿಯಾಲಿಟಿ ಸೇವೆಯನ್ನು ನೀಡುತ್ತಿದೆ. ಈ ಮಾದರಿಯಲ್ಲಿ ಪಂದ್ಯವನ್ನು ನೋಡಲು ಗ್ರಾಹಕರು ಮಾರುಕಟ್ಟೆಯಲ್ಲಿ ಹೊಸ ವಿಆರ್ ಗ್ಲಾಸ್ ಗಳನ್ನು ಖರೀದಿಸಬೇಕಿದೆ. ಅಲ್ಲದೇ ವಿಆರ್ ಸೇವೆ ತಂತ್ರಜ್ಞಾನವನ್ನು ಹೊಂದಿರುವ ಮೊಬೈಲ್ ನಲ್ಲಿ ಮಾತ್ರ ಈ ಸೇವೆ ಪಡೆಯಲು ಸಾಧ್ಯವಿದೆ.

    ವಿಆರ್ ವಿಶೇಷತೆ: ಆ್ಯಪ್ ನಲ್ಲಿ ಗ್ರಾಹಕರು ಲೈವ್ ಪ್ರಸಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಿ ಮತ್ತೆ ನೋಡಲು ಅವಕಾಶ ನೀಡಲಾಗಿದೆ. ವಿಆರ್ ಬಳಕೆ ಮಾಡುವುದರಿಂದ ಕ್ರೀಡಾಂಗಣದ 360 ಡಿಗ್ರಿ ಕೋನದಲ್ಲಿಯೂ ವಿಕ್ಷೀಸಬಹುದಾಗಿದೆ. ಇದರಿಂದ ಮೈದಾನದಲ್ಲೇ ಕುಳಿತು ನೋಡುತ್ತಿರುವ ಅನುಭವ ಪಡೆಯಬಹುದು ಎಂದು ಸ್ಟಾರ್ ಇಂಡಿಯಾ ವಾಹಿನಿಯ ನಿರ್ದೇಶಕ ಸಂಜಾಯ್ ಗುಪ್ತಾ ತಿಳಿಸಿದ್ದಾರೆ.

     

    opening ceremony opt