Tag: ಟೊಯೋಟ ಶೋರೂಮ್

  • ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಹೆಚ್ಚಿನ ಹಣ ಕಟ್ ಮಾಡ್ತಾರೆ, ಕೇಳಿದ್ರೆ ಉತ್ತರ ಕೊಡಲ್ಲ- ಶೋರೂಂನಲ್ಲಿ ಡಿಶುಂ ಡಿಶುಂ

    ಬೆಂಗಳೂರು: ಯಾಕಪ್ಪ ಹೆಚ್ಚಿನ ಹಣ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡಿದ ಕಾರಿನ ಮಾಲೀಕರಿಗೆ ನಿಂದಿಸಿದ ಕಾರ್ ಶೋರೊಂ ಮ್ಯಾನೇಜರ್ ಒಬ್ಬರಿಗೆ ಥಳಿಸಿರುವ ಘಟನೆ ಎಚ್‍ಎಎಲ್‍ನ ಕುಂದಲಹಳ್ಳಿಯ ನಂದಿ ಟೊಯೋಟದಲ್ಲಿ ನಡೆದಿದೆ.

    ರೀಟೈಲ್ ಫೈನಾನ್ಸ್ ಇಂಚಾರ್ಜ್ ನಂದಿ ಟೊಯೋಟ ಶೋರೂಂ ನಲ್ಲಿ ಶಿವಕುಮಾರ್ ಕಾರು ಖರೀದಿ ಮಾಡಿದ್ದರು. ಕಾರು ಖರೀದಿ ಮಾಡಿ ಒಂದು ವರ್ಷದ ಬಳಿಕ ತನ್ನ ಸ್ನೇಹಿತ ಪುನಿತ್‍ನ ಜೊತೆಯಲ್ಲಿ ನಂದಿ ಟೊಯೋಟ ಶೋರೂಂಗೆ ಹೋಗಿದ್ದಾರೆ. ಸವಿರ್ಸ್‍ಗೆ ಕಾರನ್ನು ಕೊಟ್ಟು ಒಂದು ದಿನದ ಬಳಿಕ ಕಾರನ್ನು ವಾಪಸ್ ಪಡೆಯಲು ಬಂದಿದ್ದಾರೆ. ಆಗ ಶೋರೂಂ ಅವರು ಬಿಲ್ ಅನ್ನು ಕೊಟ್ಟಿದ್ದಾರೆ. ಆದರೆ ಮೊದಲು ಹೇಳಿದ ಬಿಲ್‍ನ ಮೊತ್ತವೇ ಬೇರೆ, ಬಳಿಕ ಹೆಚ್ಚಾಗಿ ಪ್ರೊಸೆಸಿಂಗ್ ಫೀ ಎಂದು ಬರೆದು ಜಾಸ್ತಿ ಹಣ ಕೇಳಿದ್ದಾರೆ.

    tayota

    ಪ್ರೊಷೆಸಿಂಗ್ ಫೀ ಬಗ್ಗೆ ಶೋ ರೂಂನ ಮ್ಯಾನೇಜರ್ ನ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ಸಮಯದಲ್ಲಿ ಮ್ಯಾನೇಜರ್ ಗುರುನಾಥ್, ಶಿವಕುಮಾರ್ ಮತ್ತು ಪುನೀತ್‍ಗೆ ಕೊಲೆ ಬೆದರಿಕೆ ಹಾಕಿದ್ದು, ಅಲ್ಲದೇ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಪುನಿತ್ ಮತ್ತು ಶಿವಕುಮಾರ್ ಮ್ಯಾನೇಜರ್ ಗುರುನಾಥ್‍ಗೆ ಚೆನ್ನಾಗಿ ಥಳಿಸಿದ್ದು, ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.