Tag: ಚುನಾವಣೆ 2018

  • ಕರ್ನಾಟಕ ಚುನಾವಣೆಗೆ ಅಜ್ಞಾತವಾಸಿ ಪವನ್ ಕಲ್ಯಾಣ್ ಎಂಟ್ರಿ!

    ಕರ್ನಾಟಕ ಚುನಾವಣೆಗೆ ಅಜ್ಞಾತವಾಸಿ ಪವನ್ ಕಲ್ಯಾಣ್ ಎಂಟ್ರಿ!

    ಬೆಂಗಳೂರು: ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಚುನವಾಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳತ್ತ ಸಿನಿಮಾ ತಾರೆಯರು ಮುಖ ಮಾಡುತ್ತಿದ್ದಾರೆ.

    ಇತ್ತೀಚೆಗೆ ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಜೆಡಿಎಸ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಇದರ ಮಧ್ಯೆಯೇ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೆಡಿಎಸ್ ಪರವಾಗಿ ಪ್ರಚಾರ ಮಾಡೋಕೆ ಕರ್ನಾಟಕಕ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಮಾಹಿತಿಯೊಂದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

    ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪವನ್ ಕಲ್ಯಾಣ್ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿದೆ. ಜೆಡಿಎಸ್ ಮುಖಂಡರ ಮಾತಿಗೆ ಪವನ್ ಕಲ್ಯಾಣ್ ಓಕೆ ಅಂದಿದ್ದು, ಕರ್ನಾಟಕದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಕರ್ನಾಟಕ-ಆಂಧ್ರ ಗಡಿ ಭಾಗಗಳ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ. ಚುನಾವಣೆ ಪ್ರಚಾರಕ್ಕಾಗಿ ಜೆಡಿಎಸ್ ಸಿನಿಮಾ ತಾರೆಯರನ್ನು ಬಳಸಿಕೊಳ್ಳುತ್ತಿದೆ.

    ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, 2014 ಮಾರ್ಚ್ ನಲ್ಲಿ ತಮ್ಮದೇ ‘ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ‘ಜನಸೇನಾ’ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ ‘ಜನಸೇನಾ’ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.

    Pawan Klyan Politics 3

    Pawan Klyan Politics 2

    Pawan Klyan Politics 4

    Pawan Klyan Politics 1

  • ಬಳ್ಳಾರಿ ರಾಜಕೀಯಕ್ಕೆ ಗಾಲಿ ಜನಾರ್ದನ ರೆಡ್ಡಿ ರಿಟರ್ನ್?

    ಬಳ್ಳಾರಿ ರಾಜಕೀಯಕ್ಕೆ ಗಾಲಿ ಜನಾರ್ದನ ರೆಡ್ಡಿ ರಿಟರ್ನ್?

    ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಬರಬೇಕು ಅಂತಾ ಸಂಸದ ಶ್ರೀರಾಮುಲು ಹೇಳಿದ್ದಾರೆ.

    ಬಳ್ಳಾರಿಯಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಬಂದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ರೆಡ್ಡಿ ಅವರು ಸುಮ್ಮನೆ ಮನೆಯಲ್ಲಿ ಕುಳಿತರೂ ಬಳ್ಳಾರಿಯ 9 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    vlcsnap 2018 01 16 14h14m09s793

    ಜನಾರ್ದನರೆಡ್ಡಿ ಸಕ್ರೀಯ ರಾಜಕಾಣರಕ್ಕೆ ಬರೋದರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆದಿದೆ. ಶ್ರೀಘ್ರದಲ್ಲೆ ರೆಡ್ಡಿ ಕಮ್ ಬ್ಯಾಕ್ ಮಾಡೋ ಬಗ್ಗೆ ಅಂತಿಮ ಸೂಚನೆ ಸಿಗಲಿದೆ. ಅಲ್ಲದೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಪಕ್ಷ ತಮಗೆ ಸ್ಪರ್ಧೆ ಮಾಡುವಂತೆ ಸೂಚಿಸಿದ್ರೆ, ತಾವೂ ಕಣಕ್ಕೆ ಇಳಿಯಲು ಸಿದ್ದವಿದ್ದೇನೆ. ಆದರೆ ನನ್ನ ಕುಟುಂಬದಲ್ಲಿ ನನ್ನಿಂದಲೇ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳೋ ಮೂಲಕ ಪತ್ನಿ ಭಾಗ್ಯಲಕ್ಷಿಯವರು ಸ್ಪರ್ಧೆ ಮಾಡೋದನ್ನು ಸಂಸದ ಶ್ರೀರಾಮುಲು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ಭಿಕ್ಷೆ ಕೇಳಿದ್ರೆ ಎಡಗೈಯಲ್ಲೇ ಭಿಕ್ಷೆ ನೀಡ್ತೀನಿ, ಇನ್ಮುಂದೆ ಸಾಯುವವರೆಗೆ ಪಂಚೆಯನ್ನೇ ಧರಿಸ್ತೀನಿ- ಜನಾರ್ದನ ರೆಡ್ಡಿ

    ಕೂಡ್ಲಿಗಿ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದಸಿಂಗ್ ಅಸಮಾಧಾನಗೊಂಡಿದ್ದು ಇಬ್ಬರ ಮನವೊಲಿಸುವ ಪ್ರಯತ್ನ ಮುಂದುವರೆದಿದೆ. ನಾಗೇಂದ್ರರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಆದ್ರೆ ಅವರು ಪಕ್ಷದಲ್ಲಿ ಉಳಿಯಲ್ಲ ಅಂದ್ರೆ ಎನೂ ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: 2018ರ ಚುನಾವಣೆಗೆ ನಿಲ್ತೀರಾ: ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಉತ್ತರಿಸಿದ್ದು ಹೀಗೆ

    vlcsnap 2018 01 16 14h12m50s982

    ಇದೇ ವೇಳೆ ಬಿಜೆಪಿ ಆರ್ ಎಸ್‍ಎಸ್ ಬ್ಯಾನ್ ಮಾಡೋ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಭಯೋತ್ಪಾದನೆಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್ ಸುಷ್ಮಾ ಸ್ವರಾಜ್ ಅಭಿಪ್ರಾಯ ಏನು?

  • ಇವಿಎಂ ವಿರುದ್ಧ ಹೋರಾಟಕ್ಕೆ ಮುಂದಾದ ಹೆಚ್‍ಡಿಡಿ

    ಇವಿಎಂ ವಿರುದ್ಧ ಹೋರಾಟಕ್ಕೆ ಮುಂದಾದ ಹೆಚ್‍ಡಿಡಿ

    ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕು ಎನ್ನುವ ಕೂಗು ಜೋರಾಗಿದೆ. ಇವಿಎಂ ವಿರುದ್ಧದ ಹೋರಾಟಕ್ಕೆ ಈಗ ಸ್ವತಃ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರು ಮುಂದಾಳತ್ವ ವಹಿಸಿಕೊಂಡಿದ್ದಾರೆ.

    ಇವಿಎಂ ವಿರುದ್ಧ ಗೌಡರ ನೇತೃತ್ವದಲ್ಲಿ ಜೆಡಿಎಸ್, ಎಡಪಕ್ಷಗಳು ಇನ್ನೆರಡು ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಿವೆ. ಒಂದು ವೇಳೆ ಆಯೋಗ ಮನವಿಯನ್ನು ಸ್ವೀಕರಿಸದೇ ಹೋದ್ರೆ ಆಗ ಸುಪ್ರೀಂಕೋರ್ಟ್ ಗೆ ಹೋಗೋದಕ್ಕೂ ನಿರ್ಧರಿಸಲಾಗಿದೆ. ಖ್ಯಾತ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಇವಿಎಂ ಹ್ಯಾಕಥಾನ್‍ಗೆ ಅವಕಾಶ ನೀಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

    EVM 2

    EVM 1

    69 EVMmachine 5

  • ಮತ್ತಿಬ್ಬರು ಶಾಸಕರು ಜೆಡಿಎಸ್ ಗೆ ಗುಡ್‍ಬೈ?

    ಮತ್ತಿಬ್ಬರು ಶಾಸಕರು ಜೆಡಿಎಸ್ ಗೆ ಗುಡ್‍ಬೈ?

    ರಾಯಚೂರು: ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ. ಆದರೆ ಬಿಜೆಪಿಯಿಂದ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ. ಹೀಗಾಗಿ ಇಬ್ಬರು ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.

    ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದೆ. ಈಗಾಗಲೇ ಪಕ್ಷ ಸಂಘಟನೆಯಿಂದ ದೂರ ಉಳಿದಿರುವ ಈ ಇಬ್ಬರು ಶಾಸಕರು ಬಿಜೆಪಿ ಟಿಕೆಟ್‍ಗಾಗಿ ನಡೆಸಿರುವ ಪ್ರಯತ್ನ ಗುಟ್ಟಾಗಿಯೇನು ಉಳಿದಿಲ್ಲ.

    RCR JDS 2

    ರಾಯಚೂರು ಜಿಲ್ಲಾ ಜೆಡಿಎಸ್ ಉಸ್ತುವಾರಿ ಟಿ.ಎ.ಶರವಣ ಕಳೆದ ಎರಡು ದಿನಗಳಿಂದ ರಾಯಚೂರಿನಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸಿದ್ದರೂ ಶಾಸಕರು ಪತ್ತೆಯಿಲ್ಲ. ಡಾ.ಶಿವರಾಜ್ ಪಾಟೀಲ್ ವಿದೇಶದಲ್ಲಿದ್ದೇನೆ ಅಂತ ಶರವಣಗೆ ಹೇಳಿ ರಾಯಚೂರಿನಲ್ಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ ವಜ್ಜಲ್ ಜೆಡಿಎಸ್ ಕಚೇರಿ ಕಡೆಗೆ ತಲೆಯೇ ಹಾಕಿಲ್ಲ. ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನ ಗುರುತಿಸಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೇ ಹೇಳಿರುವುದರಿಂದ ಈ ಇಬ್ಬರು ಶಾಸಕರು ಜೆಡಿಎಸ್ ನಿಂದ ಹೊರನಡೆಯುತ್ತಿರುವುದು ಖಚಿತವಾಗಿದೆ.

    ರಾಯಚೂರು ನಗರ ಕ್ಷೇತ್ರಕ್ಕೆ ಮಹಾಂತೇಶ್ ಪಾಟೀಲ್, ದೇವದುರ್ಗಕ್ಕೆ ಕರಿಯಮ್ಮ ನಾಯಕ್, ಲಿಂಗಸುಗೂರಿಗೆ ಹನುಮಂತಪ್ಪ ಆಲ್ಕೋಡ್, ಮಾನ್ವಿಗೆ ರಾಜಾ ವೆಂಕಟಪ್ಪ ನಾಯಕ್, ಸಿಂಧನೂರಿಗೆ ವೆಂಕಟರಾವ್ ನಾಡಗೌಡ ಸ್ಪರ್ಧಿಸುವುದು ಖಚಿತವಾಗಿದೆ. ಮಸ್ಕಿ ಮತ್ತು ರಾಯಚೂರು ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮವಾಗಿಲ್ಲ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಹೇಳಿದ್ದಾರೆ.

    RCR JDS 3

    ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಇಬ್ಬರು ಶಾಸಕರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಇದನ್ನ ಮೊದಲೇ ಅರಿತಿರುವ ಜೆಡಿಎಸ್ ಹೈಕಮಾಂಡ್, ಪರ್ಯಾಯ ಅಭ್ಯರ್ಥಿಗಳನ್ನ ಸಿದ್ಧಮಾಡಿಕೊಂಡಿದೆ. ಬಿಜೆಪಿಯಿಂದ ಜೆಡಿಎಸ್‍ಗೆ ಬಂದಿದ್ದ ಮಾನಪ್ಪ ವಜ್ಜಲ್‍ಗೆ ಪುನಃ ಬಿಜೆಪಿ ಟಿಕೆಟ್ ನೀಡುತ್ತಾ, ಜೆಡಿಎಸ್‍ನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾದ ಶಿವರಾಜ್ ಪಾಟೀಲ್‍ಗೆ ಕಮಲದ ಟಿಕೆಟ್ ಸಿಗುತ್ತಾ ಕಾದು ನೋಡಬೇಕಿದೆ.

    RCR JDS 1

  • ರಾಜ್ಯ ಬಿಜೆಪಿ ನಾಯಕರಿಗೆ 23 ಹೊಸ ಟಾಸ್ಕ್ ನೀಡಿದ ಅಮಿತ್ ಶಾ!

    ರಾಜ್ಯ ಬಿಜೆಪಿ ನಾಯಕರಿಗೆ 23 ಹೊಸ ಟಾಸ್ಕ್ ನೀಡಿದ ಅಮಿತ್ ಶಾ!

    ಬೆಂಗಳೂರು: ಕರ್ನಾಟಕವನ್ನು ಕೈವಶ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂತ್ರಾಲೋಚನೆ ತೀವ್ರಗೊಳಿಸಿದ್ದು, ಮಂಗಳವಾರ ರಾತ್ರಿವರೆಗೂ ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಸಿದ್ರು. ನಾವು ಕೊಟ್ಟ ಕೆಲಸವನ್ನು ಸೂಚನೆ ಎಂದು ಭಾವಿಸದೇ ನಿಮ್ಮ ಜವಾಬ್ದಾರಿ ಎಂದು ಭಾವಿಸಿ ನಿರ್ವಹಿಸಿ. ಮೈ ಚಳಿ ಬಿಟ್ಟು ಕೆಲ್ಸ ಮಾಡಿ ಅಂತ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬಾರಿ ನಮ್ಮದೇ ಸರ್ಕಾರ ತಾನಾಗಿಯೇ ಬರುತ್ತದೆ. ನೀವು ಅದ್ರ ಬಗ್ಗೆ ಯೋಚನೆ ಮಾಡ್ಬೇಡಿ. ನಾನು ಇದೊಂದು ಚುನಾವಣೆ ನೋಡಿದವನಲ್ಲ. ಕೆಲವು ಚುನಾವಣೆಯಲ್ಲಿ ಗೆದಿದ್ದೇವೆ, ಸೋತಿದ್ದೇವೆ. ಸರ್ವೆ ವರದಿಗಳ ಬಗ್ಗೆ ಆತಂಕ ಬೇಡ. ಮಾರ್ಚ್ 10ರೊಳಗೆ ಚುನಾವಣಾ ಸಿದ್ಧತೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದಾರೆ.

    Amit shah meeting 2

    ಒಂದು ವೇಳೆ ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ಹೇಳಿ, ಬೇರೆಯವರನ್ನು ನಿಯೋಜಿಸುತ್ತೆವೆ. ಗುಜರಾತ್‍ನಲ್ಲಿ ನಮ್ಮ ಸೂಚನೆಯನ್ನು ಪಾಲಿಸಿದವರು ಗೆದ್ದಿದ್ದಾರೆ. ಸೋಮಾರಿತ ಮಾಡಿದವರು ಮನೆಗೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸ್ತೇವೆ. ಗೆಲ್ಲಬೇಕು ಅಂದ್ರೆ ನೀವು 23 ಸೂತ್ರಗಳನ್ನು ಅನುಷ್ಠಾನಕ್ಕೆ ತನ್ನಿ ಅಷ್ಟೇ ಅಂತ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

    23 ಸೂತ್ರಗಳನ್ನು ಹೇಳಿದ ಬಳಿಕ ಮಹಿಳಾ ಹಾಸ್ಟೆಲ್, ಸಂಘ ಸಂಸ್ಥೆಗಳಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರ ವಾಸ್ತವ್ಯವನ್ನೂ ಸೇರಿಸುವಂತೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ತಿಳಿಸಿದ್ದಾರೆ. ಹೇಳಿದ ಕೆಲಸ ಮೊದಲು ಮಾಡಿ. ಯಾವುದನ್ನು ಸೇರಿಸಬೇಕು, ಬಿಡಬೇಕು ಅನ್ನೋದು ನನಗೆ ಗೊತ್ತು ಅಂತಾ ಅಮಿತ್ ಶಾ ಗರಂ ಆದ್ರು ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಅಮಿತ್ ಶಾ ನೀಡಿರುವ ಆ 23 ಸೂತ್ರಗಳು ಈ ಕೆಳಗಿನಂತಿವೆ.

    ಅಮಿತ್ ಶಾ ನೀಡಿರುವ 23 ಸೂತ್ರಗಳ ಟಾಸ್ಕ್ ಏನು…?
    1. ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ.
    2. ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ.
    3. ಮಂಡಳದ ವಿಸ್ತೃತ ಸಭೆ ನಡೆಸಲು ಸೂಚನೆ.
    4. ಶಕ್ತಿಕೇಂದ್ರದ ಪ್ರಮುಖರು ಜನವರಿ ಮತ್ತು ಫೆಬ್ರುವರಿ ಯಲ್ಲಿ ಎರಡು ದಿನ ಪ್ರವಾಸ ಕಡ್ಡಾಯ.
    5. 2008, 2013, 2014 ರ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳ ಎ, ಬಿ, ಸಿ ಎಂದು ವರ್ಗಿಕರಸಿಬೇಕು.
    6. ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.
    7. ಎಸ್‍ಇ, ಎಸ್ಟಿ, ಓಬಿಸಿ ಸಮುದಾಯದವರನ್ನು ಕನಿಷ್ಠ 10 ಹೊಸ ಸದಸ್ಯತ್ವ ಮಾಡಬೇಕು.
    8. ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.
    9. ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು.
    10. ಪಂಚಾಯಿತಿ ಚುನಾವಣೆಯಲ್ಲಿ ಸೋತವರ ಪಟ್ಟಿ ಸಿದ್ಧಪಡಿಸಬೇಕು, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು
    11. ಸ್ಮಾರ್ಟ್ ಫೋನ್ ಇರುವವರ ಪಟ್ಟಿ ತಯಾರಿಸಬೇಕು.
    12. ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.
    13. ಪ್ರತಿ ಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆ ಬರಹ 5 ಸ್ಥಳದಲ್ಲಿ ಬರೆಯಬೇಕು.
    14. ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕು, ಮಾರ್ಚ್ ನಲ್ಲಿ ಬೈಕ್ ರ‍್ಯಾಲಿ ತೆರಳಿ ಚಾರ್ಜ್ ಶೀಟ್ ಹಂಚಬೇಕು.
    15. ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.
    16. ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ.
    17. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು.
    18. ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು.
    19. ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು.
    20 ವಾಟ್ಸಪ್ ಗ್ರುಪ್ ಗಳ ರಚನೆ.
    21. ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.
    22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.
    23. ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.

    Amit Shah home work 1

    Amit Shah home work 11

    Amit Shah home work 10

    Amit Shah home work 9

    Amit Shah home work 8

    Amit Shah home work 7

    Amit Shah home work 6

    Amit Shah home work 5

    Amit Shah home work 4

    Amit Shah home work 3

    Amit Shah home work 2

    Amit shah meeting 3

    Amit shah meeting 4

    Amit shah meeting 5

    Amit shah meeting 6

    Amit shah meeting 7

    Amit shah meeting 8

    Amit shah meeting 9

    Amit shah meeting 1

  • ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಬೆಂಗಳೂರಿಗೆ ಆಗಮನ- ಖಾಸಗಿ ರೆಸಾರ್ಟ್ ನಲ್ಲಿ ಗೌಪ್ಯ ಸಭೆ

    ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಬೆಂಗಳೂರಿಗೆ ಆಗಮನ- ಖಾಸಗಿ ರೆಸಾರ್ಟ್ ನಲ್ಲಿ ಗೌಪ್ಯ ಸಭೆ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 31ರಂದು ನಾಲ್ಕು ಗಂಟೆ ತಡವಾಗಿ ಬಂದಿದ್ದರಿಂದ ಎರಡು ಪ್ರಮುಖ ಸಭೆಗಳು ನಡೆದಿರಲಿಲ್ಲ. ಹೀಗಾಗಿ ಇಂದು ಸಂಜೆ ರಾಜ್ಯ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

    ನಾಲ್ಕೈದು ತಿಂಗಳಲ್ಲಿ ಅಧಿಕಾರ ಯುದ್ಧಕ್ಕೆ ಸಾಕ್ಷಿಯಾಗಲಿರುವ ಕರ್ನಾಟಕದ ಜಯದ ರಣತಂತ್ರ ರೂಪಿಸಲು ಅಧ್ಯಕ್ಷ ಅಮಿತ್ ಶಾ ಇವತ್ತು ಮತ್ತೆ ಬೆಂಗಳೂರಿಗೆ ಬರುತ್ತಿದ್ದಾರೆ. ನಾಳೆ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಕ್ಷೇತ್ರ ಹೊಳಲ್ಕೆರೆಯಲ್ಲಿ ನಡೆಯೋ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

    vlcsnap 2018 01 09 07h48m19s194

    ಇವತ್ತು ಸಂಜೆ 4.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಶಾ, ಸೀದಾ ಆಲ್ಲಾಳಸಂದ್ರದಲ್ಲಿರುವ ಖಾಸಗಿ ರೆಸಾರ್ಟ್ ಗೆ ತೆರಳಲಿದ್ದಾರೆ. ಬಳಿಕ ರೆಸಾರ್ಟ್ ನಲ್ಲಿ ಸಂಜೆ 5.30ರಿಂದ ರಾತ್ರಿ 11 ಗಂಟೆವರೆಗೆ ನಿರಂತರ ಸಭೆ ನಡೆಸಲಿದ್ದಾರೆ. ಮೊದಲು ಉತ್ತರ ಕರ್ನಾಟಕದ ಸಂಸದರು, ಶಾಸಕರು, ಎಂಎಲ್‍ಸಿ, ಜಿಲ್ಲಾಧ್ಯಕ್ಷರು, ಉಸ್ತುವಾರಿಗಳ ಸಭೆ ನಡೆಯಲಿದೆ. ತರುವಾಯ ದಕ್ಷಿಣ ಕರ್ನಾಟಕದವರ ಸರದಿ. ನಂತರ ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೊಳಲ್ಕೆರೆಯಲ್ಲಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಗಮನದ ಹೊತ್ತಲ್ಲೇ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಪಟ್ಟಿಯೂ ಸಿದ್ಧವಾಗಿದ್ದು, ಎಲ್ಲಾ 224 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಅಂತಾ ಹೇಳಲಾಗುತ್ತಿದೆ. 110 ಕ್ಷೇತ್ರಗಳಲ್ಲಿ ತಲಾ ಒಬ್ಬರಷ್ಟೇ ಆಕಾಂಕ್ಷಿಗಳಾಗಿದ್ದಾರೆ. 70 ಕ್ಷೇತ್ರಗಳಲ್ಲಿ ತಲಾ ಇಬ್ಬರು, 54 ಕ್ಷೇತ್ರಗಳಲ್ಲಿ ತಲಾ ಮೂವರು ಟಿಕೆಟ್ ನಿರೀಕ್ಷಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಉಸ್ತುವಾರಿಗಳಾಗಿ ನೇಮಕಗೊಂಡಿದ್ದವರು ಅಮಿತ್ ಶಾ ಕೈಗೆ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಿದ್ದು, ಈ ವರದಿ ಆಧರಿಸಿ ಶಾ ಟೀಂ, ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಗಿರುವ ಶಕ್ತಿ-ಸಾಮರ್ಥ್ಯಗಳ ಅಧ್ಯಯನ ಮಾಡಲಿದೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    amit 1

    amit 5

    amit 4

    amit 3

  • ಹಳೇ ಮೈಸೂರು, ಬೆಂಗಳೂರು ನಗರದಲ್ಲಿ ಜಯಮಾಲೆ ಯಾರಿಗೆ?

    ಹಳೇ ಮೈಸೂರು, ಬೆಂಗಳೂರು ನಗರದಲ್ಲಿ ಜಯಮಾಲೆ ಯಾರಿಗೆ?

    ಬೆಂಗಳೂರು: ಹಳೆ ಮೈಸೂರು, ಬೆಂಗಳೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆಯಿದೆ. ನಗರದ ಪ್ರದೇಶದಲ್ಲಿ ಬಿಜೆಪಿಯತ್ತ ಜನ ಒಲವು ತೋರಿಸಿದರೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ಒಲವು ತೋರಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಕಾರಣ ತ್ರಿಕೋನಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಆದರೂ ಒಂದು ವೇಳೆ ಈಗ ಚುನಾವಣೆ ನಡೆದರೆ ಒಟ್ಟು 89 ಸ್ಥಾನಗಳಲ್ಲಿ ಶೇ.38.69 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ 30-35 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

    ಹಳೇ ಮೈಸೂರು (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
    ಚಾಮರಾಜನಗರ – 04
    ಮಡಿಕೇರಿ – 02
    ಮೈಸೂರು – 11
    ಮಂಡ್ಯ – 07
    ರಾಮನಗರ -04
    ಹಾಸನ – 07
    ತುಮಕೂರು – 11
    ಚಿಕ್ಕಬಳ್ಳಾಪುರ – 05
    ಕೋಲಾರ – 06
    ಬೆಂಗಳೂರು ಗ್ರಾಮಾಂತರ – 04
    ಬೆಂಗಳೂರು ನಗರ -28 ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    ಹಳೇ ಮೈಸೂರು (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
    2013 ಚುನಾವಣೆಯ ಪಕ್ಷಗಳ ಬಲಾಬಲ
    ಕಾಂಗ್ರೆಸ್ – 40
    ಬಿಜೆಪಿ – 16
    ಜೆಡಿಎಸ್ – 28
    ಕೆಜೆಪಿ – 00
    ಬಿಎಸ್‍ಆರ್ – 00
    ಇತರೆ – 05  ಇದನ್ನೂ ಓದಿ: ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ? 

    HALE MYSURU 2

    ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?
    ಹೌದು – 55.79%
    ಇಲ್ಲ – 27.77%
    ಏನೂ ಹೇಳಲ್ಲ -16.43%  ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?

    HALE MYSURU 3

    ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
    Margin of Error ±2.43%
    ಕಾಂಗ್ರೆಸ್ -38.69%
    ಬಿಜೆಪಿ – 29.86%
    ಜೆಡಿಎಸ್ – 29.55%
    ಇತರೇ/ ನೋಟಾ -1.90% ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?

    HALE MYSURU 5

    ಹಳೇ ಮೈಸೂರಿನ (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
    ಯಾವ ಪಕ್ಷ ಮುನ್ನಡೆಯಲ್ಲಿದೆ?
    ಕಾಂಗ್ರೆಸ್ 30-35
    ಬಿಜೆಪಿ 21-27
    ಜೆಡಿಎಸ್ 25-33
    ಇತರೆ 0-4

    HALE MYSURU 6

    HALE MYSURU 7 2

    HALE MYSURU 1

  • ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಎಂದೂ ಕಂಡಿರದ ಚುನಾವಣೆ ನಡೆಯಲಿದ್ದು, ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದರೂ ಬಹುಮತ ಪಡೆದಿಲ್ಲ. ಒಂದು ವೇಳೆ ಈಗ ಚುನಾವಣೆ ನಡೆದರೆ 2004ರಲ್ಲಿ ನಿರ್ಮಾಣವಾಗಿದ್ದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಸಮೀಕ್ಷೆಯ ಅಂತಿಮ ಫಲಿತಾಂಶದ ಪ್ರಕಾರ ಕಾಂಗ್ರೆಸ್ 90-100 ಸ್ಥಾನ ಗಳಿಸಿದರೆ, ಬಿಜೆಪಿ 85-95, ಜೆಡಿಎಸ್ 40-45 ಸ್ಥಾನಗಳಿಸುವ ಸಾಧ್ಯತೆಯಿದೆ.

    ಸಮಗ್ರ ಕರ್ನಾಟಕ ಒಟ್ಟು ಸ್ಥಾನಗಳು 224
    ಮುಂಬೈ ಕರ್ನಾಟಕ – 50
    ಹೈದರಾಬಾದ್ ಕರ್ನಾಟಕ – 40
    ಕರಾವಳಿ/ ಮಧ್ಯ ಕರ್ನಾಟಕ – 45
    ಹಳೇ ಮೈಸೂರು – 89

    ಸಮಗ್ರ ಕರ್ನಾಟಕ
    2013 ಚುನಾವಣೆಯ ಪಕ್ಷಗಳ ಬಲಾಬಲ
    ಕಾಂಗ್ರೆಸ್ – 122
    ಬಿಜೆಪಿ – 40
    ಜೆಡಿಎಸ್ – 40
    ಕೆಜೆಪಿ – 06
    ಬಿಎಸ್‍ಆರ್ – 04
    ಇತರೇ – 12

    2013ರಲ್ಲಿ ಪಕ್ಷಗಳ ವೋಟ್ ಶೇರ್
    ಕಾಂಗ್ರೆಸ್ – 36.6%
    ಬಿಜೆಪಿ – 19.9%
    ಜೆಡಿಎಸ್ – 20.2%
    ಕೆಜೆಪಿ – 9.8%
    ಬಿಎಸ್‍ಆರ್ – 2.7%
    ಇತರೇ – 10.8%  ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?

    HALE MYSURU 5

    2014ರ ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ವಿಧಾನಸಭಾವಾರು ಮುನ್ನಡೆ
    ಬಿಜೆಪಿ 17ರಲ್ಲಿ ಗೆಲುವು, 43.4% ವೋಟ್ ಶೇರ್, 132ರಲ್ಲಿ ಗೆಲುವು
    ಕಾಂಗ್ರೆಸ್ 09ರಲ್ಲಿ ಗೆಲುವು, 41.2% ವೋಟ್ ಶೇರ್, 77ರಲ್ಲಿ ಗೆಲುವು
    ಜೆಡಿಎಸ್ 02ರಲ್ಲಿ ಗೆಲುವು, 11.1% ವೋಟ್ ಶೇರ್, 15ರಲ್ಲಿ ಗೆಲುವು  ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?

    SAMAGRA KARNATAKA

    ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
    ಸಮಗ್ರ ಕರ್ನಾಟಕ
    Margin of Error ±1.58%
    ಕಾಂಗ್ರೆಸ್ – 39.43%
    ಬಿಜೆಪಿ – 37.34%
    ಜೆಡಿಎಸ್ – 18.19%
    ಇತರೇ/ ನೋಟಾ – 05.4%   ಇದನ್ನೂ ಓದಿ: ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ? 

    PUBLIC TV MEGA SURVY PERCENATGAGE

    ಸಮಗ್ರ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು -224
    ಯಾವ ಪಕ್ಷ ಮುನ್ನಡೆಯಲ್ಲಿದೆ
    ಕಾಂಗ್ರೆಸ್ 90-100
    ಬಿಜೆಪಿ 85-95
    ಜಿಡಿಎಸ್ 40-45
    ಇತರೇ 0-6       ಇದನ್ನೂ ಓದಿ:ಹಳೇ ಮೈಸೂರು, ಬೆಂಗಳೂರು ನಗರದಲ್ಲಿ ಜಯಮಾಲೆ ಯಾರಿಗೆ?

    KARNATAKA OVERALL

    ಸಮಗ್ರ ಕರ್ನಾಟಕ 2018 ವರ್ಸಸ್ 2013
    ಕಾಂಗ್ರೆಸ್ 90-100 (122)
    ಬಿಜೆಪಿ 85-95 (40)
    ಜೆಡಿಎಸ್ 40-45 (40)
    ಇತರೇ 0-6 (22)
    ಅವರಣದ ಒಳಗಡೆ ನೀಡಿರುವುದು 2013ರ ಫಲಿತಾಂಶ