Tag: ಗ್ರ್ಯಾಮಿ ಪ್ರಶಸ್ತಿ

  • ಹೊಸ ಇತಿಹಾಸ ಸೃಷ್ಟಿಸಿದ ರಿಕ್ಕಿ ಕೇಜ್- ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ‍್ಯಾಮಿ ಪ್ರಶಸ್ತಿ ವಿಜೇತ

    ಹೊಸ ಇತಿಹಾಸ ಸೃಷ್ಟಿಸಿದ ರಿಕ್ಕಿ ಕೇಜ್- ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ‍್ಯಾಮಿ ಪ್ರಶಸ್ತಿ ವಿಜೇತ

    ಮೂರು ಬಾರಿ ಗ್ರ‍್ಯಾಮಿ ಪ್ರಶಸ್ತಿ ಗೆದ್ದಿರುವ ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕ್ಕಿ ಕೇಜ್ (Ricky Kej) ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ ಜನಗಣಮನಕ್ಕೆ(National Anthem) ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ದಿನಕ್ಕೂ ಮುನ್ನ ದಿನ ಅಂದ್ರೆ ಇಂದು (ಆಗಸ್ಟ್ 14)ರಂದು ರಿಕ್ಕಿ ಕೇಜ್ ಸಾರಥ್ಯದ ವಿಭಿನ್ನ ಬಗೆಯ ರಾಷ್ಟ್ರಗೀತೆ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ರಿಕ್ಕಿ ಟ್ಯೂನ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್‌- ಉಪೇಂದ್ರ

    ವಿಶೇಷ ಅಂದರೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್ ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿಯೇ, 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ರಿಕ್ಕಿ ಕೇಜ್ ಮಾಹಿತಿ ಹಂಚಿಕೊಂಡಿದ್ದರು.

    ರಿಕ್ಕಿ ಕೇಜ್ ಮಾತನಾಡಿ, ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಈ ರಾಷ್ಟ್ರಗೀತೆ ಪ್ರೆಸೆಂಟ್ ಮಾಡಲು ನಾನು ಕಾತುರನಾಗಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಹಿಂದೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಕೈಚಳಕದಿಂದ ಭಾರತದ ರಾಷ್ಟ್ರಗೀತೆ ಸಿದ್ಧವಾಗಿದೆ ಎಂದು ಸಂತಸ ಹಂಚಿಕೊಂಡರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಬೆಂಗಳೂರು: ಏಪ್ರಿಲ್ 4 ರಂದು ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಲಹರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯ್ತು. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಲಹರಿ ಸಂಸ್ಥೆ ಮುಖ್ಯಸ್ಥ ಮನೋಹರ್ ನಾಯ್ಡು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಸಿಇಓ ಅರುಣ್ ಸಿಂಗ್, ನಟರಾದ ಶಿವಣ್ಣ, ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

    GRAMY AWARD 3

    ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮನೋಹರ್ ಅವರು ನಾವು ಒಟ್ಟಿಗೆ ಬೆಳೆದವರು. ಅಕ್ಕ ಪಕ್ಕದ ಮನೆಯವರು. ಮನೋಹರ್ ಹಾರ್ಡ್ ವರ್ಕ್ ಮಾಡ್ತಾರೆ. ಓನ್ಲಿ ಹಾರ್ಡ್ ವರ್ಕ್ ಮಾಡ್ತಾರೆ. ಬಟ್ ವೇಲು ಹಾರ್ಡ್ ವರ್ಕಿಂಗ್ & ಫನ್ ಲೀವಿಂಗ್ ಮನುಷ್ಯ ಎಂದರು. ಹೀಗೆ ಇಂಗ್ಲೀಷ್‍ನಲ್ಲಿ ಮಾತು ಶುರು ಮಾಡಿದ ಸಿಎಂಗೆ ಮುಂದೆ ಕುಳಿತಿರುವ ಒಬ್ಬರು ಕನ್ನಡ ಸರ್ ಅಂದ್ರು. ಕೂಡಲೇ ಉತ್ತರಿಸಿದ ಸಿಎಂ, ತಡಿಯಪ್ಪ ನಮ್ಮದು ಉತ್ತರ ಕರ್ನಾಟಕದ ಕನ್ನಡ. ನಿಮ್ಮದೆಲ್ಲಾ ಅರ್ಧಂಬಂರ್ಧ ಕನ್ನಡ ನಮ್ಮದು ಅಪ್ಪಟ ಕನ್ನಡ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    GRAMY AWARD 1

    ನನಗೆ ಗ್ರ್ಯಾಮಿ ಅವಾರ್ಡ್ ಅಂದ್ರೆ ಗೊತ್ತಿರಲಿಲ್ಲ. ನಾನು ಗ್ರ್ಯಾಮಿ ಅವಾರ್ಡ್ ಅಂದ್ರೆ ಜಿಂಗ್ ಚಾಂಗ್ ಇರುತ್ತೆ ಅನ್ಕೊಂಡು ಬಂದಿದ್ದೆ. ಇಲ್ಲಿ ಬಂದು ಆ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ಆಯ್ತು. ಸಾರ್ಥಕ ಅನ್ನಿಸ್ತು ಎಂದರು. ಇದನ್ನೂ ಓದಿ: ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: 400 ಕೋಟಿಯತ್ತ `ಕೆಜಿಎಫ್ 2′

    ಇದೇ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಮಾತನಾಡಿ, ರಿಕ್ಕಿ ಕೇಜ್‍ರನ್ನು 12-13 ವರ್ಷದ ಹಿಂದೆ ನಮ್ಮದೊಂದು ಸಣ್ಣ ಕೆಲಸಕ್ಕೆ ಸಂಪರ್ಕಿಸಿದ್ದೆ. ಅವರ ಪ್ಯಾಶನ್ ನೋಡಿ ಅನ್ನಿಸ್ತು. ಇವರು ನಮಗೆ ವರ್ಕೌಟ್ ಆಗಲ್ಲ ಎಂದು. ಹಾಗಿತ್ತು ಅವರ ಕೆಲಸ. ಕನ್ನಡಿಗರು ಎದ್ದು ನಿಂತ್ರೆ ಹೀಗೆ ಗ್ರ್ಯಾಮಿ ಅವಾರ್ಡ್ ಬರುತ್ತೆ. ಕೆಜಿಎಫ್ ನಂತಹ ಸಿನಿಮಾವೂ ಬರುತ್ತೆ ಎಂದು ಹಾಡಿ ಹೊಗಳಿದರು.

    GRAMY AWARD 2

    ಈ ಮೊದಲು ವೇದಿಕೆಯಲ್ಲಿ ಮಾತು ಪ್ರಾರಂಭಿಸೋದಕ್ಕೂ ಮುನ್ನ ಸಿಎಂ ಜೊತೆ ರಂಗನಾಥ್ ಮಾತಿನ ಕೌಂಟರ್ ನೀಡಿದರು. ರಂಗನಾಥ್ ವೇದಿಕೆ ಏರುತ್ತಿದ್ದಂತೆ ತಾವು ಕುಳಿತಲ್ಲಿಯೇ ಪ್ರೈಮ್ ಟೈಂ ಆಯ್ತು ಎಂದು ಸಿಎಂ ಕಾಲೆಳೆದರು. ಈ ವೇಳೆ ರಂಗನಾಥ್, ನಾನು ಇಲ್ಲಿರೋದು ಬಿಟ್ಟು ಅಲ್ಲಿದ್ರೆ ನಿಮಗೇ ಡೇಂಜರ್ ಎಂದು ನಗುತ್ತಾ ಉತ್ತರಿಸಿದ್ರು.

    ಈ ಮೊದಲು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‍ರನ್ನು ಸನ್ಮಾನಿಸಿದ್ರು. ಗ್ರ್ಯಾಮಿ ಪ್ರಶಸ್ತಿ ಪಡೆದ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಲಹರಿ ಸಂಸ್ಥೆಯೇ ನಿರ್ಮಿಸಿತ್ತು.

  • ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ

    ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ

    ಬೆಂಗಳೂರು: ರಿಕ್ಕಿ ಕೇಜ್ ಮತ್ತು ಅಮೆರಿಕದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದೆ.

    Ricky Kej Stewart Copeland Lahari velu Divine Tides

    ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದ ಡಿವೈನ್ ಟೈಡ್ಸ್ ಆಲ್ಬಂ ಎಂಟು ಹಾಡುಗಳನ್ನು ಒಳಗೊಂಡಿದ್ದು, ಇದನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ನಿರ್ಮಾಣ ಮಾಡಿತ್ತು ಮತ್ತು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಸಂಯೋಜಿಸಿದ್ದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    Ricky Kej 2

    ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ ಗ್ರಾಮಿ ಅವಾಡ್ರ್ಸ್ ಆಗಿದ್ದು, ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ಸಂತಸದಲ್ಲಿದ್ದರೆ, ರಿಕ್ಕಿ ಅವರು ಎರಡನೇ ಬಾರಿಗೆ ಗ್ರಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು. ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

  • ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಹೊಸ ಸಾಧನೆಯನ್ನು ಮಾಡಿದ್ದಾರೆ.

    ರಿಕ್ಕಿ ಕೇಜ್ ಮತ್ತು ಅಮೆರಿಕಾದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಉತ್ತಮ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದನ್ನೂ ಓದಿ: Adheera is back in action – ಕೆಜಿಎಫ್ 2ಗೆ ವಾಯ್ಸ್ ಕೊಟ್ಟ ಸಂಜಯ್ ದತ್

    ಎಂಟು ಹಾಡುಗಳನ್ನು ಒಳಗೊಂಡಿರುವ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ಹೊರತಂದಿದೆ. 2022ರ ಜನವರಿ 31ರಂದು ಪ್ರಶಸ್ತಿ ಘೋಷಣೆಯಾಗಲಿದೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು.