Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Join our Whatsapp group by clicking the below link
https://chat.whatsapp.com/E6YVEDajTzH06LOh77r25k
ನವದೆಹಲಿ: ಸರ್ಕಾರದ ನಿರ್ಧಾರಕ್ಕೆ ಕಂಪನಿಗಳು ಒಪ್ಪಿಗೆ ನೀಡಿದರೆ ಭಾರತದಲ್ಲೂ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಲ್ಲಿ ಇನ್ನು ಮುಂದೆ ಒಂದೇ ರೀತಿಯ ಚಾರ್ಜರ್ ಅನ್ನು ಬಳಕೆ ಮಾಡಬಹುದು.
ಹೌದು. ಲ್ಯಾಪ್‌ಟ್ಯಾಪ್, ಮೊಬೈಲ್, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್ ಪೋರ್ಟ್ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಆ.17 ರಂದು ಗ್ರಾಹಕ ಸಚಿವಾಲಯ ಮೊಬೈಲ್ ತಯಾರಕಾ ಕಂಪನಿಗಳ ಜೊತೆ ಸಭೆ ನಡೆಸಲು ಮುಂದಾಗಿದೆ.
ಫೀಚರ್ ಫೋನ್‌ಗಳಿಗೆ ಮಾತ್ರ ಪ್ರತ್ಯೇಕ ಚಾರ್ಜಿಂಗ್ ಹೊರತುಪಡಿಸಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಇಯರ್ ಬಡ್ ನಂತಹ ಸಾಧನಗಳಿಗೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ನೀಡುವುದು ಸರ್ಕಾರ ಉದ್ದೇಶ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?
ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.
ಈಗಾಗಲೇ ಯುರೋಪಿಯನ್ ಯೂನಿಯನ್ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್ ಕಡ್ಡಾಯ ಮಾಡಿದ್ದು 2024ರಲ್ಲಿ ಜಾರಿಗೆ ಬರಲಿದೆ. ಅದೇ ರೀತಿಯ ಬೇಡಿಕೆ ಈಗ ಅಮೆರಿಕದಲ್ಲೂ ವ್ಯಕ್ತವಾಗುತ್ತಿದೆ.
ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಂಗ್ ಪೋರ್ಟ್ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ.
ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ, ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿ ಪೋರ್ಟ್‌ನಲ್ಲಿ ಫೋನುಗಳನ್ನು ಬಿಡುಗಡೆ ಮಾಡುತ್ತಿವೆ. ಯುರೋಪಿಯನ್ ಒಕ್ಕೂಟದ ತೀರ್ಮಾನಕ್ಕೆ ಆಪಲ್ ಕಂಪನಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿತ್ತು.
ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು 2024ರ ನಂತರ ಯುರೋಪಿಯನ್ ಒಕ್ಕೂಟ ದೇಶಗಳಲ್ಲಿ ಮಾರಾಟ ಮಾಡಿದರೆ ಅದನ್ನು ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರು: ಭಾರತದ ಮಾರುಕಟ್ಟೆಗೆ ಕ್ಸಿಯೋಮಿ ಕಂಪನಿಯ ಹಿಂದುಗಡೆ ಮೂರು ಕ್ಯಾಮೆರಾ ಇರುವ ಮಧ್ಯಮ ಬಜೆಟಿನ ಎಂಐ ಎ3 ಫೋನ್ ಬಿಡುಗಡೆಯಾಗಿದೆ.
ಆಂಡ್ರಾಯ್ಡ್ ಒನ್ ಓಎಸ್ ಹೊಂದಿರುವ ಈ ಫೋನ್ ಎರಡು ಆಂತರಿಕ ಮಾದರಿಯಲ್ಲಿ ಬಿಡುಗಡೆ ಮಾಡಿದೆ. 4ಜಿಬಿ ರ‍್ಯಾಮ್ + 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂ. ದರ ನಿಗದಿ ಮಾಡಿದೆ. 6ಜಿಬಿ ರ‍್ಯಾಮ್+128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 15,999 ರೂ.ದರ ನಿಗದಿ ಮಾಡಿದೆ.
#MiA3 features the tough Triple Corning Gorilla Glass 5 for ultimate durability to the:
✔️back panel
✔️front display
✔️rear camera
Scratch proof, rich looking glass back is better than scratch-prone, cheap plastic back. RT if you agree.#48MPAndroidOne #xiaomiandroidone pic.twitter.com/jw4yTI9BGe— Xiaomi India (@XiaomiIndia) August 21, 2019
ಸಣ್ಣ ಪ್ರಮಾಣದ ನೀರಿನ ಮೇಲೆ ಬಿದ್ದರೂ ಏನು ಆಗದೇ ಇರುವ ಸ್ಪ್ಲಾಷ್ ಪ್ರೂಫ್ ವಿಶೇಷತೆಯನ್ನು ಈ ಫೋನ್ ಹೊಂದಿದೆ. ಕ್ವಿಕ್ ಚಾರ್ಜ್ 3.0, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6, 6.8 ಇಂಚಿನ ಸೂಪರ್ ಅಮೊಲೆಡ್ ನಾಚ್ ಡಿಸ್ಪ್ಲೇ ಹೊಂದಿದೆ. ಈ ಫೋನಿನ ಮೊದಲ ಫ್ಲ್ಯಾಶ್ ಸೇಲ್ ಆಗಸ್ಟ್ 23ರ ಮಧ್ಯಾಹ್ನ 12 ಗಂಟೆಗೆ ಎಂಐ ತಾಣ, ಅಮೇಜಾನ್.ಕಾಂ ಆರಂಭವಾಗಲಿದೆ.
ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಲ್ಪೇ
153.5*71.9*8.5 ಮಿ.ಮೀ ಗಾತ್ರ, 173.8 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಡ್ಯುಯಲ್ ಸ್ಟ್ಯಾಂಡ್ ಬೈ), 6.08 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(720*1560 ಪಿಕ್ಸೆಲ್, 286 ಪಿಪಿಐ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5)
Welcome, Mr. 3.5mm Jack back on #MiA3.
We are probably the only brand that brings a feature back on demand of our Mi fans.
Tell us once more what jack did you want the most on Mi A3 and we will give away 3 Mi Earphones Basic to 3 lucky Mi fans.#48MPAndroidOne pic.twitter.com/BbnJEdphQY
— Xiaomi India (@XiaomiIndia) August 21, 2019
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಒನ್ 9.0(ಪೈ), ಕ್ವಾಲಕಂ ಸ್ನಾಪ್‍ಡ್ರಾಗನ್ 665 ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 610 ಗ್ರಾಫಿಕ್ಸ್ ಪ್ರೊಸೆಸರ್, 64 ಜಿಬಿ + 4ಜಿಬಿ ರ‍್ಯಾಮ್, 128 ಜಿಬಿ+6ಜಿಬಿ ರ‍್ಯಾಮ್, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದು.
ಕ್ಯಾಮೆರಾ ಮತ್ತು ಇತರೇ
ಹಿಂದುಗಡೆ 48 ಎಂಪಿ, 8 ಎಂಪಿ ಅಲ್ಟ್ರಾವೈಡ್, 2 ಎಂಪಿ ಡೆಪ್ತ್ ಸೆನ್ಸರ್ ಕ್ಯಾಮೆರಾ, ಎಲ್‍ಇಡಿ ಫ್ಲ್ಯಾಶ್, ಎಚ್‍ಡಿಆರ್, ಪನೋರಮಾ. ಸೆಲ್ಫಿಗಾಗಿ ಮುಂದುಗಡೆ 32 ಎಂಪಿ ಕ್ಯಾಮೆರಾ ನೀಡಲಾಗಿದೆ. ಡಿಸ್ಪ್ಲೇಯಲ್ಲೇ ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 4030 ಎಂಎಎಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3. ಯುಎಸ್‍ಬಿ ಟೈಪ್- ಸಿ, 3.5 ಎಂಎಂ ಹೆಡ್‍ಫೋನ್ ಜಾಕ್ ನೀಡಿದೆ.
Never miss any details with the #48MP Sony IMX586 Primary Camera on #MiA3.
The power of 48MP will surely leave you amazed.
RT with #48MPAndroidOne if you love this. pic.twitter.com/B5K4Nbzcg4
— Xiaomi India (@XiaomiIndia) August 21, 2019
ಏನಿದು ಗೂಗಲ್ ಆಂಡ್ರಾಯ್ಡ್ ಒನ್?
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಈ ಹಿಂದೆ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು. ಈಗ ಕ್ಸಿಯೋಮಿ, ಮೊಟರೋಲಾ, ನೋಕಿಯಾ , ಏಸಸ್ ಸೇರಿದಂತೆ ಹಲವು ಕಂಪನಿಗಳು ಈ ಓಎಸ್ ನಲ್ಲಿ ಫೋನ್ ಬಿಡುಗಡೆ ಮಾಡುತ್ತದೆ. ಈ ಓಸ್ ಇದ್ದಲ್ಲಿ ಆಂಡ್ರಾಯ್ಡ್ ಓಎಸ್ ಅಪ್ಡೇಡ್ ಬೇಗನೇ ಸಿಗುತ್ತದೆ.
Highest quality is our top priority.
The #MiA3 is P2i splash-proof keeping itself safe against accidental spills. #48MPAndroidOne #XiaomiAndroidOne pic.twitter.com/W4BEQAdTX6
— Xiaomi India (@XiaomiIndia) August 21, 2019
ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಪ್ರೈವೆಸಿ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು ಮುಂದಾಗಿದೆ.
ಈಗ ಹೇಗೆ ಫೋನ್ ಲಾಕ್ ತೆಗೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಬಳಕೆಯಾಗುತ್ತದೋ ಅದೇ ರೀತಿಯಾಗಿ ವಾಟ್ಸಪ್ ಓಪನ್ ಮಾಡಬೇಕಾಗುತ್ತದೆ. ಈ ವಿಶೇಷತೆ ಬೇಕಾಗಿದ್ದಲ್ಲಿ ಸೆಟ್ಟಿಂಗ್ಸ್ –> ಆಕೌಂಟ್–> ಪ್ರೈವೆಸಿ ಹೋಗಿ ಫಿಂಗರ್ ಪ್ರಿಂಟ್ ಸೆನ್ಸರ್ ಎನೆಬಲ್ ಮಾಡಿಕೊಳ್ಳಬೇಕಾಗುತ್ತದೆ.
ಆರಂಭದಲ್ಲಿ ಈ ವಿಶೇಷತೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ. ಆಂಡ್ರಾಯ್ಡ್ ಮಾರ್ಶ್ ಮೆಲ್ಲೋ ಮತ್ತು ನಂತರ ಬಿಡುಗಡೆಯಾಗಿರುವ ಎಲ್ಲ ಆಪರೇಟಿಂಗ್ ಸಿಸ್ಟಂಗಳಿಗೆ ಅಪ್‍ಡೇಟ್ ಆಗಲಿರುವ ವಾಟ್ಸಪ್ ಆ್ಯಪ್ ಬೆಂಬಲ ನೀಡಲಿದೆ ಎಂದು ವಾಟ್ಸಪ್‍ಬೀಟಾಇನ್ಫೋ ವರದಿ ಮಾಡಿದೆ.
ಫಿಂಗರ್ ಪ್ರಿಂಟ್ ಸೆನ್ಸರ್ ವಾಟ್ಸಪ್ ಖಾತೆ ತೆರೆಯಲು ಮಾತ್ರ ಬಳಕೆಯಾಗುತ್ತದೆ ಹೊರತು ಪ್ರತ್ಯೇಕವಾಗಿ ವ್ಯಕ್ತಿಗಳ ಚಾಟ್ ಓಪನ್ ಮಾಡಲು ಬಳಕೆಯಾಗುವುವುದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ.
4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ ಎಂಐ 2 ಫೋನ್ ಜುಲೈ 2018 ರಲ್ಲಿ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ, ಈಗ ಈ ಫೋನ್ 13,999 ರೂ.ಗೆ ಲಭ್ಯವಿದೆ. 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ 20,500 ರೂ.ಗೆ ಬಿಡುಗಡೆಯಾಗಿದ್ದರೆ ಈಗ 15,999 ರೂ.ಗೆ ಇಳಿಕೆಯಾಗಿದೆ.
Mi fans! Here's the 1st BIG #High5 announcement! Get #MiA2 at a never before price. Massive discount of ₹4,500!
Get yours starting 12 noon from https://t.co/D3b3Qt4Ujl, @amazonIN, Mi Home & offline stores!
RT if you're getting one & stay tuned for 4 more amazing announcements. pic.twitter.com/uNP2cmOl82— Xiaomi India (@XiaomiIndia) January 7, 2019
2018ರಲ್ಲಿ ಬಿಡುಗಡೆಯಾಗಿ ದೇಶದಲ್ಲಿ 1 ಕೋಟಿ ಮಾರಾಟ ಕಂಡಿರುವ ರೆಡ್‍ಮೀ ನೋಟ್ 5 ಸರಣಿಯ ಪ್ರೋ ಫೋನಿನ ಬೆಲೆಯೂ ಇಳಿಕೆಯಾಗಿದೆ. 15,999 ರೂ.ಗೆ ಬಿಡುಗಡೆಯಾಗಿದ್ದ 4 ಜಿಬಿ ರ‍್ಯಾಮ್, 64 ಜಿಬಿಯ ಆಂತರಿಕ ಫೋನ್ ಈಗ 12,999 ರೂ.ಗೆ ಲಭ್ಯವಿದೆ. 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ ಈಗ ಬೆಲೆ 13,999 ರೂ.ಗೆ ಸಿಗುತ್ತಿದೆ.
You know you want it. Up to ₹4,000 off on #RedmiNote5Pro – India's camera beast! Give us a #High5 if you've been waiting for this sweet deal. 🤩
P.S. 1 crore units of #RedmiNote5 series have been sold! Thanks for the love. ❤️ pic.twitter.com/uyfhJxhF51
— Redmi India (@RedmiIndia) January 8, 2019
ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 158.7 * 75.4 * 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 ಓರಿಯೋ (ಆಂಡ್ರಾಯ್ಡ್ ಪೈ ಗೆ ಅಪ್‍ಡೇಟ್ ಮಾಡಬಹುದು), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್ 2.2 ಗಿಗಾಹರ್ಟ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್ , ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ ರ‍್ಯಾಮ್ /64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ:
ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್
ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
ರೆಡ್‍ಮೀ ನೋಟ್5 ಪ್ರೋ ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
158.6 * 75.4 * 8.1 ಮಿ.ಮೀ ಗಾತ್ರ, 181 ಗ್ರಾಂ ತೂಕ, 5.99 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2160 ಪಿಕ್ಸೆಲ್, 403 ಪಿಪಿಐ, 18:09 ಅನುಪಾತ), ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್.
ಪ್ಲಾಟ್‍ಫಾರಂ ಮತ್ತು ಮೆಮೊರಿ
ಆಂಡ್ರಾಯ್ಡ್ 7.1 ನೂಗಟ್ ಓಎಸ್( ಒರೊಯೋಗೆ ಅಪ್‍ಗ್ರೇಡ್ ಮಾಡಬಹುದು), ಕ್ವಾಲಕಂ ಸ್ನಾಪ್‍ಡ್ರಾಗನ್ ಅಕ್ಟಾಕೋರ್ 1.8 ಗಿಗಾಹರ್ಟ್ಸ್ ಪ್ರೊಸೆಸರ್, ಅಡ್ರಿನೋ 509 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸಿಮ್ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. 4ಜಿಬಿ/ 6ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮಮೊರಿ.
ಕ್ಯಾಮೆರಾ ಮತ್ತು ಇತರೇ:
ಹಿಂದುಗಡೆ ಡ್ಯುಯಲ್ ಕ್ಯಾಮರಾ(12 ಎಂಪಿ, 5 ಎಂಪಿ) ಡ್ಯುಯಲ್ ಎಲ್‍ಇಡಿ ಫ್ಲಾಶ್, ಮುಂದುಗಡೆ ಎಲ್‍ಇಡಿ ಫ್ಲಾಶ್ ಇರುವ 20 ಎಂಪಿ ಕ್ಯಾಮೆರಾವಿದೆ. ಫಿಂಗರ್ ಪ್ರಿಂಟ್ ಸೆನ್ಸರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0), 4000 ಎಂಎಎಚ್ ಬ್ಯಾಟರಿ.
ಕ್ಯಾಲಿಫೋರ್ನಿಯಾ: ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ.
ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಇನ್ನು ಮುಂದೆ ಜಾಹೀರಾತು ಪ್ರಕಟಗೊಳ್ಳಲಿದೆ. ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ. ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಖಾತೆ ತೆರೆಯಲು ಫೋನ್ ನಂಬರ್ ಇದ್ದರೆ ಸಾಕಿತ್ತು. ವರ್ಷ, ಇಮೇಲ್, ಆಸಕ್ತಿ ವಿಚಾರಗಳನ್ನು ಕೇಳುತ್ತಿರಲಿಲ್ಲ. ಆದರೆ ಈಗ ಜಾಹೀರಾತು ಪ್ರಕಟಿಸಲು ಮುಂದಾಗಿದ್ದು, ಯಾವ ರೀತಿ ಬಳಕೆದಾರರ ಡೇಟಾ ಪಡೆದು ಜಾಹೀರಾತು ಪ್ರಕಟಿಸುತ್ತದೆ ಎನ್ನುವ ಪ್ರಶ್ನೆ ಎದ್ದಿದೆ.
ಫೇಸ್ ಬುಕ್ ನಲ್ಲಿ ಬಳಕೆದಾರರ ಆಸಕ್ತಿಯನ್ನು ನೋಡಿಕೊಂಡು ಜಾಹೀರಾತುಗಳು ಅವರ ವಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವಾಟ್ಸಪ್ ಬಳಕೆದಾರ ಈ ವಿಚಾರದ ಬಗ್ಗೆಯೇ ಆಸಕ್ತಿ ಹೊಂದಿದ್ದಾನೆ ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಜಿಪಿಎಸ್ ಮಾಹಿತಿಯನ್ನು ಆಧಾರಿಸಿ ಅಥವಾ ಫೋನ್ ನಂಬರ್ ಯಾವ ರಾಜ್ಯದ ವ್ಯಾಪ್ತಿಗೆ ಬರುತ್ತದೋ ಆ ಮಾಹಿತಿಯನ್ನು ಆಧಾರಿಸಿ ಜಾಹೀರಾತು ಪ್ರಕಟಿಸುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಫೇಸ್‍ಬುಕ್ ಈಗಾಗಲೇ ಒಂದೊಂದೆ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಇನ್ ಸ್ಟಾಗ್ರಾಮ್ ನಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಇದರ ಜೊತೆಯಲ್ಲಿ ಮೆಸೇಂಜಿಂಗ್ ಅಪ್ಲಿಕೇಶನ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಸಪ್ ನಲ್ಲೂ ಆದಾಯ ಮಾಡಲು ಸಿದ್ಧತೆ ನಡೆಸುತ್ತಿದ್ದು, ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಈ ಹಿಂದೆ ವಾಟ್ಸಪ್ ತನ್ನ ಬ್ಲಾಗಿನಲ್ಲಿ ನಾವು ಯಾವುದೇ ಕಾರಣಕ್ಕೂ ಜಾಹೀರಾತನ್ನು ಪ್ರಕಟಿಸುವುದಿಲ್ಲ ಎಂದು ಹೇಳಿತ್ತು.
ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಈ ಹಿಂದೆ ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿತ್ತು.
ಬೀಜಿಂಗ್: ಸ್ಮಾರ್ಟ್ ಫೋನ್ ಗಳಲ್ಲಿ ಆಂತರಿಕ ಮೆಮೊರಿ ಕಡಿಮೆ ಆಯ್ತು ಎಂದು ದೂರೋ ಮಂದಿಗೆ ಗುಡ್ ನ್ಯೂಸ್. ಚೀನಾದ ಲೆನೊವೊ ಕಂಪೆನಿ 4 ಟೆರಾ ಬೈಟ್ ಆಂತರಿಕ ಮೆಮೊರಿ ಹೊಂದಿರುವ ಫೋನನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಸಾಧಾರಣವಾಗಿ 128 ಜಿಬಿ, 256 ಜಿಬಿ, 512 ಜಿಬಿ ಫೋನ್‍ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಲೆನೊವೊ ಈಗ ಝಡ್5 4ಟಿಬಿ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಲು ಮುಂದಾಗುತ್ತಿದೆ.
10 ಲಕ್ಷ ಫೋಟೋ ಮತ್ತು 2 ಸಾವಿರ ಎಚ್‍ಡಿ ಸಿನಿಮಾಗಳನ್ನು ಈ ಫೋನಿನಲ್ಲಿ ಸ್ಟೋರೇಜ್ ಮಾಡಬಹುದಾಗಿದೆ. ಈ ಫೋನ್ ಜೂನ್ 14 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ತಂತ್ರಜ್ಞಾನ ವಿಶೇಷತೆ, 18 ಪೇಟೆಂಟ್ ಹೊಂದಿರುವ ತಂತ್ರಜ್ಞಾನಗಳು ಈ ಫೋನಿನಲ್ಲಿ ಇರಲಿದೆ.
ಈಗಾಗಲೇ ಲೆನೊವೊ 1 ಟಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಬಿಡುಗಡೆ ಮಾಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಫೋನ್ ಅಂದಾಜು 93 ಸಾವಿರ ರೂ. ಬೆಲೆಯಲ್ಲಿ ಲಭ್ಯವಿದೆ. ಭಾರತಕ್ಕೆ ಇನ್ನೂ ಈ ಫೋನ್ ಬಿಡುಗಡೆಯಾಗಿಲ್ಲ.
ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಲಭ್ಯವಾಗಿದೆ.
2017ರ ಸೆಪ್ಟೆಂಬರ್ ನಲ್ಲಿ ಎಂಐ ಎ1 ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿದ್ದ ಫೋನ್ ಈಗ ಅಲಭ್ಯವಾಗಿದೆ. ಫ್ಲಿಪ್ ಕಾರ್ಟ್ ಮತ್ತು ಎಐ ತಾಣದಲ್ಲಿ “ಔಟ್ ಆಫ್ ಸ್ಟಾಕ್” ಆಗಿದೆ ಎಂದು ತೋರಿಸುತ್ತಿದೆ.
ಈ ಹಿಂದೆ ಟೆಕ್ ಮಾಧ್ಯಮವೊಂದು ಕ್ಸಿಯೋಮಿ ಕಂಪೆನಿ ಈ ಫೋನ್ ಮಾರಾಟವನ್ನು ನಿಲ್ಲಿಸಿದೆ ಎಂದು ವರದಿ ಮಾಡಿತ್ತು. ಈಗ ಈ ವರದಿಗೆ ಪೂರಕ ಎಂಬಂತೆ ಈ ಫೋನ್ ಅಲಭ್ಯವಾಗಿದೆ. ಕೆಲ ತಿಂಗಳ ಹಿಂದೆ ಆಫ್ ಲೈನ್ ಸ್ಟೋರ್ ಗಳಿಗೆ ಈ ಫೋನ್ ವಿತರಣೆಯನ್ನು ಕ್ಸಿಯೋಮಿ ನಿಲ್ಲಿಸಿತ್ತು. ಈ ಫೋನಿನ ಉತ್ತಾರಧಿಕಾರಿ ಎಂದೇ ಪರಿಗಣಿಸಲಾಗಿರುವ ಎಂಐ ಎ2 ಚೀನಾದಲ್ಲಿ ಬಿಡುಗಡೆಯಾಗಿದ್ದು, ಈ ಫೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಎ1 ಫೋನಿನ ಮಾರಾಟವನ್ನು ಕ್ಸಿಯೋಮಿ ನಿಲ್ಲಿಸಿರಬಹುದು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.
ಈ ಫೋನ್ ಸೆಪ್ಟೆಂಬರ್ ನಲ್ಲಿ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಬಳಿಕ ಡಿಸೆಂಬರ್ ನಲ್ಲಿ ಕ್ಸಿಯೋಮಿ ಇಂಡಿಯಾದ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿ 1 ಸಾವಿರ ರೂ. ಬೆಲೆ ಇಳಿಕೆಯಾಗಿದೆ ಎಂದು ತಿಳಿಸಿದ್ದರು. ಬೆಲೆ ಇಳಿಕೆಗೆ ಕೆಲ ದಿನಗಳಿಗೆ ಮಾತ್ರ ಇಳಿಕೆಯಾಗಿಲ್ಲ. ಶಾಶ್ವತವಾಗಿ ಎ1 ಫೋನಿನ ಬೆಲೆಯನ್ನು ಇಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದರು.
ಏನಿದು ಗೂಗಲ್ ಆಂಡ್ರಾಯ್ಡ್ ಒನ್?
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಒನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಒನ್ ಅಡಿಯಲ್ಲಿ ಫೋನ್ ತಯಾರಿಸಿತ್ತು
ಕ್ಸಿಯೋಮಿ ಎಂಐ ಎ1 ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
155.4*75.8*7.3 ಮಿ.ಮೀ, ಹೈ ಬ್ರಿಡ್ ಡ್ಯುಯಲ್ ಸಿಮ್, 5.5 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್( 1080*1920 ಪಿಕ್ಸೆಲ್, 16:9 ಅನುಪಾತ, 403 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.
ಪ್ಲಾಟ್‍ಫಾರಂ ಮತ್ತು ಮಮೊರಿ:
ಆಂಡ್ರಯ್ಡ್ 7.1.2 ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 625 ಅಕ್ಟಾಕೋರ್ 2.0 GHz ಕಾರ್ಟೆಕ್ಸ್ ಎ53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸ್ಲಾಟ್ ನಲ್ಲಿ ಎಸ್‍ಡಿ ಕಾರ್ಡ್ ಹಾಕಿದ್ರೆ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 64 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM
ಕ್ಯಾಮೆರಾ ಮತ್ತು ಇತರೇ:
ಹಿಂದುಗಡೆ ಡ್ಯುಯಲ್ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ ಟೈಪ್ 2.0, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 3080 ಎಂಎಎಚ್ ಬ್ಯಾಟರಿ.
Great news Mi Fans: announcing a permanent price drop of ₹ 1000 on Mi A1! 🙌#MiA1: picture perfect flagship dual camera phone. Now available for a perfect price of ₹13,999!
Buy it from https://t.co/lzFXOcGyGQ and @Flipkart. pic.twitter.com/PWplnIMC71
— Manu Kumar Jain (@manukumarjain) December 10, 2017
ಮುಂಬೈ: ರಿಲಯನ್ಸ್ ಜಿಯೋ ಹೊಸ ಮಾದರಿಯ ಜಿಯೋಫಿ 4ಜಿ ಎಲ್‍ಟಿಇ ಹಾಟ್ ಸ್ಪಾಟ್ ಸಾಧನವನ್ನು ಬಿಡುಗಡೆ ಮಾಡಿದ್ದು 999 ರೂ. ಬೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.
ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಒಂದು ವರ್ಷ ವಾರಂಟಿ ಸಿಗಲಿದೆ. ಹಿಂದೆ ಬಿಡುಗಡೆ ಮಾಡಿದ್ದ ಸಾಧನ ಮೊಟ್ಟೆ ಆಕಾರದಲ್ಲಿ ಇದ್ದರೆ ಈಗ ಬಿಡುಗಡೆಯಾಗಿರುವ ಸಾಧನ ವೃತ್ತಾಕಾರದಲ್ಲಿದೆ.
ಆನ್, ಆಫ್, ಡಬ್ಲ್ಯೂಪಿಎಸ್(ವೈಫೈ ಪ್ರೊಟೆಕ್ಟೆಡ್ ಸೆಟಪ್), ಬ್ಯಾಟರಿ ನೋಟಿಫಿಕೇಶನ್ ಲೈಟ್, 4ಜಿ, ವೈಫೈ ಸಿಗ್ನಲ್ ನೋಡಲು ಸಾಧ್ಯವಿದೆ. 150 ಎಂಬಿಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ 50 ಎಂಬಿ ಅಪ್ಲೋಡ್ ಸ್ವೀಡ್ ಇದೆ.
ಒಂದು ಬಾರಿ ಗರಿಷ್ಟ 32 ಸಾಧನಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ಮೈಕ್ರೋ ಎಸ್‍ಡಿ ಸ್ಲಾಟ್ ನೀಡಲಾಗಿದ್ದು, ಗರಿಷ್ಟ 64 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸಾಧನ 2300 ಎಂಎಎಚ್ ಬ್ಯಾಟರಿ ಹೊಂದಿದ್ದರೆ ಹೊಸ ಸಾಧನ 3000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.
ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”
ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.
ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?
ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.
ಏನಿದು ಎಂ2ಎಂ?
ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.
ಡಿಓಟಿ ಆದೇಶದಲ್ಲಿ ಏನಿದೆ?
ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?
ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.
ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?
ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.
ವೈರ್‌ಲೆಸ್ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ. ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?
ಎಂ2ಎಂ ಸಿಮ್ ಯಾರು ಕೊಡ್ತಾರೆ?
ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನೂ ಓದಿ: ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ