Tag: ಗೆಳೆಯ

  • ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

    ನವದೆಹಲಿ: ಸಾಮಾಜಿಕ ಜಾಲತಾಣದಿಂದ ಪರಿಚಯವಾಗಿದ್ದ ಗೆಳೆಯನ ಜೊತೆ ತನ್ನ ಹುಟ್ಟುಹಬ್ಬ ಆಚರಿಸಲು ಹೋಟೆಲ್ ಬುಕ್ ಮಾಡಿದ್ದ ವಿವಾಹಿತ ಮಹಿಳೆ ಬರ್ಬರವಾಗಿ ಕೊಲೆಯಾದ ಘಟನೆ ದೆಹಲಿಯ ಅಲಿಪುರದಲ್ಲಿ ನಡೆದಿದೆ.

    ಅಲಿಪುರದಲ್ಲಿರುವ ಓಯೋ ಹೋಟೆಲ್‍ನಲ್ಲಿ ಈ ಕೊಲೆ ನಡೆದಿದೆ. 33 ವರ್ಷದ ಮಹಿಳೆಯನ್ನು ವಿಕ್ಕಿ ಮನ್(21) ಕೊಲೆ ಮಾಡಿದ್ದಾನೆ. ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ವಿಕ್ಕಿ ಪರಿಚಯವಾಗಿದ್ದನು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಸೋಮವಾರ ಮಹಿಳೆಯ ಹುಟ್ಟುಹಬ್ಬವಿತ್ತು. ಹೀಗಾಗಿ ಆಕೆ ವಿಕ್ಕಿ ಜೊತೆ ಹುಟ್ಟುಹಬ್ಬದ ಪಾರ್ಟಿ ಮಾಡಲು ರೂಮ್ ಬುಕ್ ಮಾಡಿದ್ದಳು. ರಾತ್ರಿ ಇಬ್ಬರೂ ರೂಮ್‍ನಲ್ಲಿ ಮದ್ಯ ಸೇವಿಸುತ್ತ ಪಾರ್ಟಿ ಮಾಡುತ್ತಿದ್ದರು.

    Liquor Shops 3 copy

    ಈ ವೇಳೆ ವಿನಾಕಾರಣ ಮಹಿಳೆ ವಿಕ್ಕಿಯ ಕೆನ್ನೆಗೆ ಬಾರಿಸಿದ್ದಾಳೆ. ಇದಕ್ಕೆ ಕೋಪಗೊಂಡು ವಿಕ್ಕಿಯೂ ಮಹಿಳೆಗೆ ತಿರುಗಿಸಿ ಎರಡೇಟು ಕೊಟ್ಟಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ ಕೈಯಲ್ಲಿದ್ದ ಮದ್ಯವನ್ನು ವಿಕ್ಕಿ ಮೈಮೇಲೆ ಎರಚಿದ್ದಾಳೆ. ಹೀಗೆ ಇಬ್ಬರ ನಡುವೆ ವಿನಾಕಾರಣ ಜಗಳ ಶುರುವಾಗಿ ಬಳಿಕ ಅದು ತಾರಕಕ್ಕೇರಿ, ಸಿಟ್ಟಿನಲ್ಲಿದ್ದ ವಿಕ್ಕಿ ಮಹಿಳೆಯ ಕತ್ತು ಹಿಸುಕಿ ಹೋಟೆಲ್‍ನಿಂದ ಎಸ್ಕೇಪ್ ಆಗಿದ್ದಾನೆ.

    ವಿಕ್ಕಿ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಸಿಬ್ಬಂದಿ ಆತನ ಬಳಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಆಗ ನಾನು ಮನೆಗೆ ಹೋಗುತ್ತಿದ್ದೇನೆ, ಮಹಿಳೆ ರೂಮ್‍ನಲ್ಲಿಯೇ ಇದ್ದಾಳೆ. ಆದಷ್ಟು ಬೇಗ ಹಿಂದಿರುಗುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಹೋಟೆಲ್ ಸಿಬ್ಬಂದಿ ತಿಂಡಿ ಕೊಡಲು ಹೋದಾಗ ಬಾಗಿಲು ತಟ್ಟಿದರೂ ತೆಗೆಯದ್ದನ್ನು ನೋಡಿ ಬೀಗ ಒಡೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಕಿವಿ, ಮೂಗಿನಿಂದ ರಕ್ತ ಸುರಿದ ಸ್ಥಿತಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡು ಗಾಬರಿಗೊಂಡು ಹೋಟೆಲ್ ಮಾಲೀಕನಿಗೆ ಮಾಹಿತಿ ಕೊಟ್ಟಿದ್ದಾರೆ.

    social media 2

    ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಈ ಸಂಬಂಧ ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ, ಮಹಿಳೆ ಹಾಗೂ ವಿಕ್ಕಿ ಕಳೆದ 5 ತಿಂಗಳಿಂದ 6-7 ಬಾರಿ ಇದೇ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು. ಹೀಗಾಗಿ ಅವರು ರಾತ್ರಿ ದೊಡ್ಡದಾಗಿ ಹಾಡು ಹಚ್ಚಿ ಪಾರ್ಟಿ ಮಾಡುತ್ತಿದ್ದರೂ ನಾವು ಏನು ಹೇಳಿರಲಿಲ್ಲ. ಬರ್ತಡೇ ಪಾರ್ಟಿ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆವು. ಆದರೆ ಬೆಳಗ್ಗೆ ರೂಮ್‍ನಲ್ಲಿ ನೋಡಿದರೆ ಮಹಿಳೆಯ ಕೊಲೆ ಆಗಿತ್ತು ಎಂದು ತಿಳಿಸಿದ್ದಾರೆ.

    Police Jeep

    ಸದ್ಯ ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ರೂಮ್‍ನಲ್ಲಿ ಏನಾಯ್ತು ಎಂದು ವಿಕ್ಕಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ವಿಚಾರಣೆ ವೇಳೆ ಮೃತ ಮಹಿಳೆ ವಿವಾಹಿತೆ ಹಾಗೂ ಆಕೆಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಸಂಗತಿ ಕೂಡ ತಿಳಿದು ಬಂದಿದೆ.

  • ಬಾಲ್ಯದ ಗೆಳೆಯರೊಂದಿಗೆ ಧೋನಿ ಎಂಜಾಯ್

    ಬಾಲ್ಯದ ಗೆಳೆಯರೊಂದಿಗೆ ಧೋನಿ ಎಂಜಾಯ್

    – ನಾಗ್ಪುರ ಪಂದ್ಯದಲ್ಲಿ ಧೋನಿ ಜಪ ಮಾಡಿದ ಅಭಿಮಾನಿಗಳು

    ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ಕುರಿತ ವರದಿಗಳು ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿದ್ದು, ಇತ್ತ ಧೋನಿ ಮಾತ್ರ ತವರು ರಾಂಚಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಸತತ 4 ತಿಂಗಳಿನಿಂದ ವಿಶ್ರಾಂತಿ ಪಡೆದಿರುವ ಧೋನಿ, ತಮ್ಮ ಕ್ರಿಕೆಟ್ ಭವಿಷ್ಯ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕುರಿತು ಸ್ಪಷ್ಟನೆ ಲಭಿಸಲಿದೆ ಎಂಬ ಭಾವನೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಿವೃತ್ತಿ ಎಂಬುವುದು ಆಟಗಾರರ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಗಂಗೂಲಿ ಕೂಡ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಿಲ್ಲ.

     

    View this post on Instagram

     

    Happy Birthday Chittu Bhaiya ???? #SeemantLohani

    A post shared by MS Dhoni 7781 | Mahi7781 ???????? (@msdhoni.7781) on

    ಅಭಿಮಾನಿಗಳಲ್ಲಿ ಧೋನಿ ಕಮ್ ಬ್ಯಾಕ್ ಕುರಿತ ಗೊಂದಲ ಹೆಚ್ಚಾಗುತ್ತಿದ್ದು, ಆದರೆ ಧೋನಿ ಮಾತ್ರ ತಮ್ಮ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ರಾಂಚಿಗೆ ಸಮೀಪವಿರುವ ಫಾರ್ಮ್ ಹೌಸ್‍ನಲ್ಲಿ ಧೋನಿರ ಬಾಲ್ಯದ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ನಿವೃತ್ತಿಯ ಕುರಿತು ಎಷ್ಟೇ ಟೀಕೆಗಳು ಕೇಳಿ ಬಂದರು ನೀವು ತಾಳ್ಮೆಯಿಂದ ಇದ್ದೀರಿ. ಈ ನಿಮ್ಮ ಗುಣವೇ ಎಲ್ಲರಿಗೂ ಇಷ್ಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧೋನಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿರುವುದು ಲಾಭವಾಗಲಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

    https://twitter.com/barainishant/status/1193823683145609216?

    ಇತ್ತ ಭಾನುವಾರ ನಡೆದ ಬಾಂಗ್ಲಾ ದೇಶದ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೊಮ್ಮೆ ಡಿಆರ್ ಎಸ್ ಮನವಿ ಪಡೆದು ವಿಫಲರಾಗಿದ್ದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್ ಆಗಿದ್ದಾರೆ. ಅಲ್ಲದೇ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿ ಧೋನಿ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/8pareek26/status/1193579004768522240

  • ಕುಚಿಕು ಪತ್ನಿ ಮೇಲೆ ಗೆಳೆಯನ ಕಣ್ಣು-ಸಾಲ ಪಡೆದಿದ್ದಕ್ಕೆ ಒಡೆದ ಸಂಸಾರ

    ಕುಚಿಕು ಪತ್ನಿ ಮೇಲೆ ಗೆಳೆಯನ ಕಣ್ಣು-ಸಾಲ ಪಡೆದಿದ್ದಕ್ಕೆ ಒಡೆದ ಸಂಸಾರ

    -ಇದು ಮಾಜಿ ಮಂತ್ರಿ ಆಪ್ತನ ಕಾಮಕಾಂಡ

    ಚಿತ್ರದುರ್ಗ: ಗಂಡ, ಹೆಂಡತಿ ಜಗಳ ಉಂಡು ಮಲಗೋತನಕ ಎಂಬ ಮಾತಿದೆ. ಆದರೆ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ, ಮಾಜಿ ಸಚಿವರ ಆಪ್ತ ಮಾಡಿರುವ ಎಡವಟ್ಟಿನಿಂದ ಕುಟುಂಬದಲ್ಲಿ ಬಿರುಕು ಮೂಡಿದೆ.

    ಕಳೆದ 20 ವರ್ಷಗಳ ಹಿಂದೆ ಟಿ.ನುಲೇನೂರು ಗ್ರಾಮದ ಪಾರ್ವತಿ ಎಂಬಾಕೆಯನ್ನ ಸಿರಿಗೆರೆಯ ಪರಮೇಶ್ವರ್ ಎಂಬವರು ಮದುವೆಯಾಗಿದ್ದರು. ಪರಮೇಶ್ವರ್ ವೃತ್ತಿಯಲ್ಲಿ ಫೋಟೋಗ್ರಾಫರ್, ಪಾರ್ವತಿ ಶಿಕ್ಷಕಿ. ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೀಗೆ ಇವರ ಸಂಸಾರ ಸುಂದರವಾಗಿಯೇ ಸಾಗುತ್ತಿತ್ತು. 3 ವರ್ಷಗಳ ಹಿಂದೆ ಪರಮೇಶ್ವರ್ ಮನೆ ಕಟ್ಟೋದಕ್ಕೆ ಅಂತಾ ಜಿಲ್ಲಾ ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿ ಬಳಿ 9 ಲಕ್ಷ ರೂ. ಸಾಲ ಪಡೆದಿದ್ದನು.

    ctd love dhoka 1 copy

    ಇದೇ ಸಾಲ ಇವರ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. ತಿಪ್ಪೇಸ್ವಾಮಿ ಬಳಿ ಪಡೆದ ಅಷ್ಟು ಹಣವನ್ನು ಪರಮೇಶ್ವರ್ ಹಿಂದಿರುಗಿಸಿದ್ದರು. ಆದರೆ ಇದನ್ನೇ ನೆಪವಾಗಿಸಿಕೊಂಡ ಈ ತಿಪ್ಪೇಸ್ವಾಮಿ ಪರಮೇಶ್ವರನ ಪತ್ನಿ ಪಾರ್ವತಿಗೆ ಅನೈತಿಕ ಸಂಬಂಧ ಬೆಳಸಿದ್ದನು.

    ತಿಪ್ಪೇಸ್ವಾಮಿ ಮತ್ತು ಪಾರ್ವತಿ ಜೊತೆಯಲ್ಲಿದ್ದಾಗ ರೆಡ್‍ಹ್ಯಾಂಡ್ ಆಗಿ ಪರಮೇಶ್ವರನ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೂ ಪರಮೇಶ್ವರ್ ನಯವಾಗಿಯೇ ಇಬ್ಬರಿಗೂ ಬಿಟ್ಟುಬಿಡಿ ಅಂತ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ನಡುವೆಯೂ ಇವರಿಬ್ಬರೂ ತಮ್ಮ ಅಕ್ರಮ ಸಂಬಂಧ ಮುಂದುವರಿಸಿದ್ದರು ಇದರಿಂದ ರೊಚ್ಚಿಗೆದ್ದ ಪರಮೇಶ್ವರ್ ಇಬ್ಬರಿಗೂ ಭರ್ಜರಿ ಗೂಸಾ ಕೊಟ್ಟಿದ್ದಾರೆ. ಆಕ್ರೋಶಗೊಂಡ ಪಾರ್ವತಿ ಈಗ ಗಂಡ ಹಾಗೂ ಮಕ್ಕಳನ್ನು ಬಿಡುವ ಮಟ್ಟಕ್ಕೆ ತಲುಪಿದ್ದಾಳೆ. ಅಲ್ಲದೇ ತಿಪ್ಪೇಸ್ವಾಮಿ ಜೊತೆ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನನ್ನು ಪ್ರಶ್ನಿಸಲು ನೀನ್ಯಾರು ಅಂತಾ ತನ್ನ ಗಂಡ ಪರಮೇಶ್ವರ್ ಗೆ ವಿಡಿಯೋ ಕಳಿಸಿದ್ದಾಳೆ.

    ctd love dhoka copy

    ಅಂದಹಾಗೆ ಈ ತಿಪ್ಪೇಸ್ವಾಮಿ ಮಾಜಿ ಸಚಿವ ಆಂಜನೇಯನವರ ಬಂಟ. ಹೀಗಿದ್ದುಕೊಂಡು ಒಂದು ಸಂಸಾರವನ್ನೇ ಛಿದ್ರಛಿದ್ರ ಮಾಡಿದ್ದಾನೆ. ಸ್ನೇಹಿತ ಅಂತಾ ನಂಬಿ ತಿಪ್ಪೇಸ್ವಾಮಿ ಜೊತೆ ವ್ಯವಹಾರ ಮಾಡಿದ ತಪ್ಪಿಗೆ ಪರಮೇಶ್ವರ್ ಕುಟುಂಬ ಬೀದಿಗೆ ಬಿದ್ದಿದೆ. ಒಂದೇ ಮನೆಯಲ್ಲಿ ಗಂಡ -ಹೆಂಡತಿ ಪ್ರತ್ಯೇಕವಾಗಿ ವಾಸಿಸುವಂತಾಗಿದೆ. ಹೀಗಾಗಿ ತನಗಾದ ಅನ್ಯಾಯ ಮತ್ಯಾರಿಗೂ ಆಗದಿರಲಿ ಅಂತಾ ಪರಮೇಶ್ವರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

    ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.

    anchor wife 1

    ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    Police Jeep

    ನಡೆದಿದ್ದೇನು?
    ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

    ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ‘ಆ ದಿನಗಳು’ ಸಿನಿಮಾ ನಟಿ ಅರ್ಚನಾ ವೇದಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ತಮ್ಮ ಗೆಳೆಯನ ಜೊತೆಗೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಅರ್ಚನಾ ಅವರು ಜಗದೀಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಇವರು ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ನಂತರ ಎರಡೂ ಕುಟುಂಬವು ಒಪ್ಪಿ ಅರ್ಚನಾ ಮತ್ತು ಜಗದೀಶ್ ನಿಶ್ಚಿತಾರ್ಥವನ್ನು ಹೈದರಾಬಾದಿನ ರಾಡಿಸನ್ ಹೋಟೆಲಿನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ.

    archana

    ಗುರು-ಹಿರಿಯರು ನಿಶ್ಚಯ ಮಾಡಿದ್ದ ಮುಹೂರ್ತದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಅರ್ಚನಾ ಹಾಗೂ ಜಗದೀಶ್ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಬಂದು ಶುಭಾಶಯ ತಿಳಿಸಿದ್ದಾರೆ. ತಮ್ಮ ಫೇಸ್‍ಬುಕ್ ಪೇಜಿನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಅರ್ಚನಾ ಅವರು ತಮ್ಮ ಮದುವೆ ದಿನಾಂಕವನ್ನು ಮಾತ್ರ ಇದುವರೆಗೂ ಬಹಿರಂಗಪಡಿಸಿಲ್ಲ.

    ನಟಿ ಅರ್ಚನಾ ಕನ್ನಡದಲ್ಲಿ ‘ಮೈತ್ರಿ’ ‘ಮಿಂಚು’ ಮತ್ತು ‘ಮೇಘ ವರ್ಷಿಣಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು.

     

  • ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಈಗ ನನಗೆ ಪ್ರಿಯಕರ ಬೇಕು ಎಂದು ಹೇಳಿದ್ದಾರೆ.

    ಇತ್ತೀಚೆಗೆ ರಕುಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ರಿಲೇಷನ್‍ಶಿಪ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು “ಈಗ ನನಗೆ ಪ್ರಿಯಕರ ಬೇಕು” ಎಂದಿದ್ದಾರೆ. ಈ ಮೂಲಕ ಅವರು ಮದುವೆಯಾಗುವ ಸೂಚನೆ ಕೊಟ್ಟಿದ್ದು, ಗೆಳೆಯನ ಹುಡುಕಾಟದಲ್ಲಿದ್ದಾರೆ.

    rakul preet singh

    ಎಲ್ಲರೂ ನಾನು ರಿಲೇಷನ್‍ಶಿಪ್ ವಿಷಯದಲ್ಲಿ ದೂರವಿದ್ದೇನೆ ಎಂದುಕೊಂಡಿದ್ದಾರೆ. ಈ ವಿಚಾರ ತಿಳಿದು ನನಗೆ ಭೀತಿ ಉಂಟಾಯಿತು. ಹೀಗಾಗಿ ನಾನು ತುಂಬಾ ದಿನಗಳಿಂದ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಒಬ್ಬಂಟಿ ಆಗಿದ್ದು, ನನ್ನ ಹುಡುಗನಿಗಾಗಿ ಹುಡುಕಾಟದಲ್ಲಿ ಇದ್ದೇನೆ ಎಂದು ತಿಳಿಸಿದ್ದಾರೆ.

    Rakul preet

    ಈ ಹಿಂದೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ರಕುಲ್ ಭೇಟಿ ಆಗುತ್ತಿದ್ದರು. ಆಗ ಇಬ್ಬರು ರಿಲೇಷನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಟಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಆಗ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ರಕುಲ್ ಸ್ಪಷ್ಟನೆ ನೀಡಿದ್ದರು.

    ಸದ್ಯ ರಕುಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಕುಲ್ `ಮರ್ಜಾವಾ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಮಲ್ ಹಾಸನ್-ಸಿದ್ಧಾರ್ಥ್ ಅಭಿನಯದ `ಇಂಡಿಯನ್ 2′ ಮತ್ತು ಶಿವ ಕಾರ್ತಿಕೇಯನ್ ಜೊತೆ ಇನ್ನೂ ಟೈಟಲ್ ನಿಗದಿಯಾಗದ ಸಿನಿಮಾಗಳ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ.

  • 7ನೇ ಮಹಡಿಯಿಂದ 3ರ ಬಾಲಕಿಯನ್ನು ತಂದೆಯ ಗೆಳೆಯನೇ ಬಿಸಾಕ್ದ

    7ನೇ ಮಹಡಿಯಿಂದ 3ರ ಬಾಲಕಿಯನ್ನು ತಂದೆಯ ಗೆಳೆಯನೇ ಬಿಸಾಕ್ದ

    ಮುಂಬೈ: 3 ವರ್ಷದ ಬಾಲಕಿಯನ್ನು ಆಕೆಯ ತಂದೆಯ ಗೆಳೆಯನೇ 7ನೇ ಮಹಡಿಯಿಂದ ಬಿಸಾಡಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಈ ಘಟನೆ ಕೊಲಾಬಾ ಅಪಾರ್ಟ್ ಮೆಂಟ್ ನಲ್ಲಿ ಶನಿವಾರ ಸಂಜೆ 7.30ರ ಸುಮಾರಿಗೆ ನಡೆದಿದೆ. ಮಹಡಿಯಿಂದ ಬಿದ್ದ ರಭಸಕ್ಕೆ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    Police Jeep

    ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಸದ್ಯ ಪ್ರಕರಣ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

    ಮೂರು ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಗೆಳೆಯ ಕೊಲಬಾ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಸಂಜೆ 7.30 ಸುಮಾರಿಗೆ ಬಿಸಾಡಿದ್ದಾನೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆರೋಪಿ ವಿರುದ್ಧ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್ ಎಸ್ ನಿಶಾಂದರ್ ತಿಳಿಸಿದ್ದಾರೆ.

  • ಕಾರಿನಲ್ಲಿ ಹೋಗ್ತಿದ್ದಂತೆ ಎಫ್‍ಬಿ ಗೆಳೆಯನ ನೀಚತನ ಬಯಲು – ಅಪ್ರಾಪ್ತೆಯ ಹತ್ಯೆ

    ಕಾರಿನಲ್ಲಿ ಹೋಗ್ತಿದ್ದಂತೆ ಎಫ್‍ಬಿ ಗೆಳೆಯನ ನೀಚತನ ಬಯಲು – ಅಪ್ರಾಪ್ತೆಯ ಹತ್ಯೆ

    ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಯುವಕನೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ತೆಲಂಗಾಣದ ಮಹಬೂಬ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಹರ್ಷಿಣಿ(15) ಮೃತ ವಿದ್ಯಾರ್ಥಿನಿ. ಈಕೆಯನ್ನು ಫೇಸ್‍ಬುಕ್ ಗೆಳೆಯ ನವೀನ್ ರೆಡ್ಡಿ ಎಂಬಾತ ಕೊಲೆ ಮಾಡಿದ್ದಾನೆ. ಜಾಡ್ಚೆರ್ಲಾ ಪೊಲೀಸರು ಗುರುವಾರ ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ನವೀನ್ ರೆಡ್ಡಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಫೇಸ್‍ಬುಕ್ ಮೂಲಕ ಹರ್ಷಿಣಿಯನ್ನು ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹವಾಗಿದ್ದು, ಒಂದು ದಿನ ಇಬ್ಬರು ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆಯೇ ದಿನಾಂಕ 27ರಂದು ಶಂಕರ್‍ಪಲ್ಲಿ ಗ್ರಾಮದಿಂದ ನವೀನ್ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಹೋಗುವಾಗ ಎಲ್ಲಾದರೂ ನಿರ್ಜನ ಪ್ರದೇಶದಲ್ಲಿ ಇಬ್ಬರು ಕುಳಿತುಕೊಂಡು ಮಾತಾಡೋಣ ಎಂದು ಹೇಳಿದ್ದಾನೆ.

    facebook logo

    ಇದೇ ವೇಳೆ ಆಕೆಯ ಬಳಿ ದೈಹಿಕ ಸಂಪರ್ಕ ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಇದರಿಂದ ಗಾಬರಿಯಾದ ಹರ್ಷಿಣಿ ತಕ್ಷಣ ಆತನಿಂದ ತಪ್ಪಿಸಿಕೊಳ್ಳಬೇಕೆಂದು ಕಾರಿನಿಂದ ಇಳಿಯಲು ಪ್ರಯತ್ನ ಮಾಡಿದ್ದಾಳೆ. ಆಗ ಆರೋಪಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಆಕೆಯ ಬಟ್ಟೆಯನ್ನು ಹರಿದು ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಹರ್ಷಿಣಿ ಜೋರಾಗಿ ಕೂಗಾಡಿದ್ದಾಳೆ. ಆಗ ಆರೋಪಿ ಭಯದಿಂದ ಆಕೆಯನ್ನು ಕಾರಿನಿಂದ ಕೆಳಗೆ ತಳ್ಳಿ ಕಲ್ಲಿನಿಂದ ಆಕೆಯ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಕಾಡಿನಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾನೆ.

    ಮನೆಯಿಂದ ಹೋದ ಮಗಳು ಸಂಜೆಯಾದರೂ ವಾಪಸ್ ಬರಲಿಲ್ಲ ಎಂದು ತಂದೆ, ಮಗಳು ಕಾಣೆಯಾಗಿದ್ದಾಳೆಂದು ದೂರು ಸಲ್ಲಿಸಿದ್ದರು. ನಾವು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಕಾಣೆಯಾದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆವು. ಆಗ ಕಾರಿನಲ್ಲಿ ಬಾಲಕಿ ಹೋಗಿದ್ದು ಪತ್ತೆಯಾಯಿತು. ತಕ್ಷಣ ನಾವು ಕಾರಿನ ನಂಬರ್ ತೆಗೆದುಕೊಂಡು ಎರಡು ದಿನದಲ್ಲಿ ಆರೋಪಿ ನವೀನ್ ರೆಡ್ಡಿಯನ್ನು ಪತ್ತೆಹಚ್ಚಿದೆವು ಎಂದು ತನಿಖಾ ಅಧಿಕಾರಿ ತಿಳಿಸಿದರು.

    couple

    ವಿಚಾರಣೆ ಮಾಡಿದಾಗ ಮೃತದೇಹವನ್ನು ಎಸೆದಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಶವವನ್ನು ತೋರಿಸಿದನು. ನಾವು ಫೋರೆನ್ಸಿಕ್ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಸದ್ಯಕ್ಕೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಇವರಿಬ್ಬರು ಸುಮಾರು 3 ತಿಂಗಳ ಹಿಂದೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದರಿಂದ ಕೋಪಗೊಂಡ ಸ್ಥಳೀಯರು ವಿದ್ಯಾರ್ಥಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕಾಗಿ ಆರೋಪಿಯನ್ನು ಗಲ್ಲಿಗೇರಿಸಬೇಕು, ನಮಗೆ ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದ್ದರು. ಸದ್ಯಕ್ಕೆ ಆರೋಪಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ವಿದೇಶಿ ಗೆಳೆಯನ ಜೊತೆ ನಟಿ ಇಲಿಯಾನಾ ಬ್ರೇಕಪ್?

    ವಿದೇಶಿ ಗೆಳೆಯನ ಜೊತೆ ನಟಿ ಇಲಿಯಾನಾ ಬ್ರೇಕಪ್?

    ಮುಂಬೈ: ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಝ್ ಅವರು ತಮ್ಮ ಬಹುಕಾಲದ ಆಸ್ಟ್ರೇಲಿಯಾ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಮಾಧ್ಯಮಗಳ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಹಾಗೂ ಅವರ ಗೆಳೆಯ ಆ್ಯಂಡ್ರ್ಯೂ ನೀಬೋನ್ ಪರಸ್ಪರ ಅನ್‍ಫಾಲೋ ಮಾಡಿದ್ದಾರೆ. ಅಲ್ಲದೆ ಇಬ್ಬರು ತಮ್ಮ ಸಂಬಂಧದಿಂದ ದೂರವಾಗಿದ್ದಾರೆ. ಇಲಿಯಾನಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಗೆಳೆಯ ಆ್ಯಂಡ್ರ್ಯೂ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಈಗ ಇಲಿಯಾನಾ, ಆ್ಯಂಡ್ರ್ಯೂ ಜೊತೆಯಿರುವ ಫೋಟೋಗಳನ್ನು ಇನ್‍ಸ್ಟಾದಲ್ಲಿ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

    Iliana Dcruz 3

    ಇದುವರೆಗೂ ಇಲಿಯಾನಾ ತಮ್ಮ ಪ್ರೀತಿ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ತಿಳಿಸಿರಲಿಲ್ಲ. ಆದರೆ ಇಲಿಯಾನಾ, ಆ್ಯಂಡ್ರ್ಯೂ ಜೊತೆ ಹೆಚ್ಚು ಆತ್ಮೀಯರಾಗಿದ್ದರು ಎಂಬುದು ಅವರ ಪೋಸ್ಟ್ ಮೂಲಕ ತಿಳಿಯುತ್ತಿತ್ತು. 2017ರಲ್ಲಿ ಕ್ರಿಸ್‍ಮಸ್ ಹಬ್ಬದಂದು ನೀಬೋನ್ ಜೊತೆಯಿರುವ ಫೋಟೋವನ್ನು ಇಲಿಯಾನಾ ಇನ್ ಸ್ಟಾಗ್ರಾಂನಲ್ಲಿ `ಹಬ್ಬಿ’ ಎಂದು ಬರೆದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಇಲಿಯಾನಾ ತಮ್ಮ ಇನ್‍ಸ್ಟಾ ಪೋಸ್ಟ್‍ನಲ್ಲಿ ಗೆಳೆಯನಿಗೆ ‘ಪತಿ’ ಎಂದು ಬರೆದು ಟ್ಯಾಗ್ ಮಾಡುತ್ತಿದ್ದರು.

  • ಗೆಳತಿಯನ್ನ ಹತ್ಯೆಗೈದ ಪ್ರಿಯಕರನಿಗೆ ಮರಣ ದಂಡನೆ

    ಗೆಳತಿಯನ್ನ ಹತ್ಯೆಗೈದ ಪ್ರಿಯಕರನಿಗೆ ಮರಣ ದಂಡನೆ

    – ಸಹಾಯ ಮಾಡಿದ್ದ ಆರೋಪಿಯ ತಾಯಿ, ಅಕ್ಕನಿಗೆ ಜೀವಾವಧಿ ಶಿಕ್ಷೆ

    ಗುವಾಹಟಿ: ಗೆಳತಿಯನ್ನು ಹತ್ಯೆಗೈದು ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದ ಆರೋಪಿಗೆ ಅಸ್ಸಾಂನ ಗುವಾಹಟಿ ಕೋರ್ಟ್ ಮರಣ ದಂಡನೆ ವಿಧಿಸಿದೆ.

    ಶ್ವೇತಾ ಅಗರ್ವಾಲ್ ಕೊಲೆಯಾಗಿದ್ದ ವಿದ್ಯಾರ್ಥಿನಿ. ಗೋವಿಂದ್ ಸಿಂಘಾಲ್ ಮರಣ ದಂಡನೆಗೆ ಗುರಿಯಾದ ಅಪರಾಧಿ. ಗೋವಿಂದ್ ಸಿಂಘಾಲ್ ಸಹಾಯ ಮಾಡಿದ್ದ ತಾಯಿ ಕಮಲಾ ದೇವಿ ಹಾಗೂ ಅಕ್ಕ ಭುವಾನಿ ಸಿಂಘಾಲ್ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ವಿದ್ಯಾರ್ಥಿನಿ ಶ್ವೇತಾ ಅಗರ್ವಾಲ್ 2015ರ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದ ಟಾಪರ್ ಆಗಿದ್ದರು. ಬಳಿಕ ಗುವಾಹಟಿಯ ಕೆಸಿ ದಾಸ್ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಶ್ವೇತಾಗೆ ಗೋವಿಂದ್ ಪರಿಚಯವಾಗಿದ್ದ.

    Shweta Agarwalla B

    ಚಾರ್ಜ್ ಶೀಟ್ ಪ್ರಕಾರ, 2017 ಡಿಸೆಂಬರ್ 4ರಂದು ಶ್ವೇತಾ ಗೆಳೆಯ ಗೋವಿಂದ್ ಸಿಂಘಾಲ್‍ನ ಬಾಡಿಗೆ ಮನೆಗೆ ಹೋಗಿದ್ದಳು. ಇಬ್ಬರು ಮನೆಯಲ್ಲಿ ಕುಳಿತು ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದರು. ಕೋಪಗೊಂಡ ಗೋವಿಂದ್ ಶ್ವೇತಾಗೆ ಹೊಡೆದು ತಳ್ಳಿದ್ದ. ಪರಿಣಾಮ ಶ್ವೇತಾ ಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಭಾರೀ ಹೊಡೆತ ಬಿದ್ದು ಪ್ರಜ್ಞೆ ತಪ್ಪಿದ್ದರು.

    ಪ್ರಕರಣಕ್ಕೆ ಟ್ವಿಸ್ಟ್ ನೀಡಲು ಮುಂದಾಗಿದ್ದ ಗೋವಿಂದ್‍ಗೆ ತಾಯಿ ಹಾಗೂ ಅಕ್ಕ ಸಹಾಯಕ್ಕೆ ಮುಂದಾಗಿದ್ದರು. ಶ್ವೇತಾ ಅವರನ್ನು ಬಾತ್ ರೂಂನಲ್ಲಿ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆದರೆ ಪೊಲೀಸ್ ವಿಚಾರಣೆ ವೇಲೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

    Shweta Agarwalla

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಗೋವಿಂದ್, ಆತನ ತಾಯಿ ಹಾಗೂ ಅಕ್ಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಆರೋಪಿಗಳ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮೂವರನ್ನು ಅಪರಾಧಿಗಳೆಂದು ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.