Tag: ಗಾಯಾಳು

  • ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ

    ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ

    ಭುವನೇಶ್ವರ: ಅಂಬುಲೆನ್ಸ್ ಚಾಲಕನೊಬ್ಬ (Ambulance Driver) ಆಸ್ಪತ್ರೆಗೆ ಹೋಗುತ್ತಿದ್ದ ದಾರಿಯಲ್ಲಿ ವಾಹನವನ್ನು ನಿಲ್ಲಿಸಿ, ಗಾಯಗೊಂಡಿದ್ದ ಪ್ರಯಾಣಿಕನಿಗೆ ಮದ್ಯ (Alcohol) ನೀಡಿದ್ದಲ್ಲದೇ ತಾನೂ ಸೇವಿಸಿರುವ ಘಟನೆ ಒಡಿಶಾದಲ್ಲಿ (Odisha) ನಡೆದಿದೆ. ಘಟನೆಯ ವೀಡಿಯೋವನ್ನು ಸೆರೆಹಿಡಿಯಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವರದಿಗಳ ಪ್ರಕಾರ ಅಂಬುಲೆನ್ಸ್ ಚಾಲಕ ಆಸ್ಪತ್ರೆಗೆ ಹೋಗುತ್ತಿದ್ದ ದಾರಿಯಲ್ಲಿ ವಾಹನವನ್ನು ಟೊರ್ಟೋಲ್ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದಾನೆ. ಬಳಿಕ 2 ಗ್ಲಾಸ್‌ಗಳಿಗೆ ಮದ್ಯವನ್ನು ಸುರಿದಿದ್ದಾನೆ. ಒಂದು ಗ್ಲಾಸ್ ಅನ್ನು ಅಂಬುಲೆನ್ಸ್ನಲ್ಲಿ ಮಲಗಿದ್ದ ಗಾಯಾಳುವಿಗೆ ನೀಡಿದ್ದು, ಇನ್ನೊಂದು ಗ್ಲಾಸ್‌ನಲ್ಲಿದ್ದ ಮದ್ಯವನ್ನು ತಾನು ಕುಡಿದಿದ್ದಾನೆ. ಈ ಎಲ್ಲಾ ದೃಶ್ಯಗಳು ಸೆರೆಹಿಡಿಯಲಾದ ವೀಡಿಯೋದಲ್ಲಿ ಕಂಡುಬಂದಿದೆ.

    ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಚಾಲಕನನ್ನು ಕೇಳಿದಾಗ ಆತ ಗಾಯಾಳುವೇ ತನ್ನ ಬಳಿ ಮದ್ಯ ನೀಡುವಂತೆ ಕೇಳಿದ್ದಾನೆ ಎಂದು ತಿಳಿಸಿದ್ದಾನೆ. ಅಂಬುಲೆನ್ಸ್‌ನಲ್ಲಿ ಒಬ್ಬ ಮಹಿಳೆ ಹಾಗೂ ಒಂದು ಮಗು ಇರುವುದೂ ಕಂಡುಬಂದಿದೆ.

    ಘಟನೆ ಬಗ್ಗೆ ಮಾತನಾಡಿರುವ ಜಗತ್‌ಸಿಂಗ್‌ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಡಾ. ಕ್ಷೇತ್ರಬಸಿ ದಾಶ್, ಇದು ಖಾಸಗಿ ಅಂಬುಲೆನ್ಸ್ ಆಗಿರುವುದರಿಂದ ನಾವು ಈ ಬಗ್ಗೆ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಈ ರೀತಿ ತಪ್ಪು ಮಾಡಿರುವ ಚಾಲಕನ ವಿರುದ್ಧ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ALCOHOL

    ಕುಡಿದು ವಾಹನ ಚಾಲನೆ ಮಾಡುವುದು ಸಂಚಾರ ಅಪರಾಧ ಎಂದು ಪರಿಗಣಿಸಲಾಗಿದೆ. ಆದರೆ ಇಲ್ಲಿಯವರೆಗೆ ಅಂಬುಲೆನ್ಸ್ ಚಾಲಕನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಎಫ್‌ಐಆರ್ ದಾಖಲಾದರೆ ಮಾತ್ರವೇ ತನಿಖೆ ನಡೆಸಲಾಗುವುದು ಎಂದು ತಿರ್ತೋಲ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಜುಗಲ್ ಕಿಶೋರ್ ದಾಸ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಅಂಬುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರದೇಶದ ನಿವಾಸಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

    Live Tv
    [brid partner=56869869 player=32851 video=960834 autoplay=true]

  • ಗಾಯಾಳನ್ನು ಆಸ್ಪತ್ರೆಗೆ ಹೊತ್ತು ತಂದ ಬುಲ್ಡೋಜರ್

    ಗಾಯಾಳನ್ನು ಆಸ್ಪತ್ರೆಗೆ ಹೊತ್ತು ತಂದ ಬುಲ್ಡೋಜರ್

    ಭೋಪಾಲ್: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬುಲ್ಡೋಜರ್‌ನಲ್ಲಿ(Bulldozer) ಆಸ್ಪತ್ರೆಗೆ(Hospital) ಹೊತ್ತು ತಂದ ಘಟನೆ ಮಂಗಳವಾರ ಮಧ್ಯಪ್ರದೇಶದ(Madhya Pradesh) ಕಟ್ನಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ಗೆ(Ambulance) ಕರೆ ಮಾಡಲಾಗಿತ್ತು. ಆದರೆ ಅರ್ಧಗಂಟೆಯಾದರೂ ಅಂಬುಲೆನ್ಸ್‌ನ ಸುಳಿವಿಲ್ಲದ ಕಾರಣ ಕೊನೆಗೆ ಗಾಯಾಳನ್ನು ಆಸ್ಪತ್ರೆಗೆ ಬುಲ್ಡೋಜರ್ ಮೂಲಕ ಹೊತ್ತು ತರಬೇಕಾಯಿತು. ಇದನ್ನೂ ಓದಿ: ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ

    Bulldozer 1

    ಸಮೀಪದ ಗೈರ್ತಲೈ ನಿವಾಸಿ ಮಹೇಶ್ ಬರ್ಮನ್ ಅವರ ಬೈಕ್ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದರು. ಘಟನೆ ನಡೆದು 30 ನಿಮಿಷಗಳಾದರೂ ಅಂಬುಲೆನ್ಸ್ ಬರದ್ದನ್ನು ನೋಡಿ ಬುಲ್ಡೋಜರ್ ಚಾಲಕ ಪುಷ್ಪೆಂದ್ರ ವಿಶ್ವಕರ್ಮ ಅವರು ಸ್ವಯಂಪ್ರೇರಿತರಾಗಿ ಗಾಯಾಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ಗೆ ಬಾಂಬ್ ಬೆದರಿಕೆ – ಪೊಲೀಸರಿಂದ ತೀವ್ರ ಶೋಧ

    ಬರ್ಮನ್ ಅವರ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!

    ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!

    ತಿರುವನಂತಪುರಂ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಅದರಿಂದ ಹೊರಬರಲಾಗದೇ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಸೋಮವಾರ ಸಂಜೆ ಕೋಝಿಕ್ಕೋಡ್‌ನಲ್ಲಿ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಅಂಬುಲೆನ್ಸ್ ಮೂಲಕ ಸರ್ಕಾರಿ ವೈದ್ಯಕೀಯ ಕಾಲೇಜಿನ ಬಳಿ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಂಬುಲೆನ್ಸ್‌ನ ಬಾಗಿಲು ಜಾಮ್ ಆಗಿದ್ದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಆತನನ್ನು ಅಂಬುಲೆನ್ಸ್‌ನಿಂದ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಹದಗೆಟ್ಟ ರಸ್ತೆಯಿಂದ ಗ್ರಾಮಕ್ಕೆ ಬಾರದ ಅಂಬುಲೆನ್ಸ್- ಅರ್ಧ ಕಿ.ಮೀ ನಡೆದು ಬಂದ ತುಂಬುಗರ್ಭಿಣಿ

    ambulance 1

    ಅಂಬುಲೆನ್ಸ್‌ನ ಚಾಲಕ ಮತ್ತು ಅಟೆಂಡರ್ ಸ್ವಲ್ಪ ಸಮಯ ಬಾಗಿಲು ತೆರೆಯಲು ಹರಸಾಹಸ ಪಟ್ಟಿದ್ದರು. ಬಳಿಕ ಸುತ್ತಮುತ್ತಲಿನ ಜನರು ಅಂಬುಲೆನ್ಸ್‌ನ ಕಿಟಕಿಯ ಗಾಜನ್ನು ಒಡೆದು, ಅಂಬುಲೆನ್ಸ್‌ನ ಒಳಗಿನಿಂದ ಬಾಗಿಲು ತೆರೆದಿದ್ದಾರೆ. ಆದರೆ ಗಾಯಾಳಿಗೆ ಚಿಕಿತ್ಸೆ ಕೊಡಿಸುವಲ್ಲಿ ವಿಳಂಬವಾಗಿದ್ದರಿಂದ ಆತ ಸವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಯಾಳುವನ್ನು ಬೆಂಗಾವಲು ವಾಹನದಲ್ಲಿ ಸಾಗಿಸಿ ಚಿಕಿತ್ಸೆ- ಮಾನವೀಯತೆ ಮೆರೆದ ಮಾಧುಸ್ವಾಮಿ

    ಗಾಯಾಳುವನ್ನು ಬೆಂಗಾವಲು ವಾಹನದಲ್ಲಿ ಸಾಗಿಸಿ ಚಿಕಿತ್ಸೆ- ಮಾನವೀಯತೆ ಮೆರೆದ ಮಾಧುಸ್ವಾಮಿ

    ತುಮಕೂರು: ಸಚಿವ ಮಾಧುಸ್ವಾಮಿ ಅವರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತನ್ನ ಬೆಂಗಾವಲು ವಾಹನದಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

    TMK MADHUSWAMY

    ಶಿರಾ ತಾಲೂಕಿನ ಅಮರಾಪುರ ರಸ್ತೆಯ ಹುಚ್ಚಗೀರನಹಳ್ಳಿ ಗೇಟ್ ಬಳಿ ಟಿವಿಎಸ್ ಮೊಪೆಡ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿತ್ತು. ಈ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಯೊಂಡಿದ್ದರು. ಈ ವೇಳೆ ಇದೇ ಮಾರ್ಗದಲ್ಲಿ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಹೋಗುತ್ತಿದ್ದ ಸಚಿವ ಮಾಧುಸ್ವಾಮಿ ಹಾಗೂ ಶಾಸಕರು ಚಿಕ್ಕಬಾಣಗೆರೆಗೆ ಹೋಗುತ್ತಿದ್ದರು.

    TMK MADHUSWAMY HELP AV 3

    ಈ ವೇಳೆ ಗಾಯಾಳುವನ್ನು ಗಮನಿಸಿದ ಸಚಿವರು, ತಕ್ಷಣ ಕಾರು ನಿಲ್ಲಿಸಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾರೆ. ಸ್ವತಃ ತಾವೇ 108ಗೆ ಕಾಲ್ ಮಾಡಿ ಬೇಗ ವಾಹನ ಕಳಿಸುವಂತೆ ತಾಕೀತು ಮಾಡಿದರು. ಸಚಿವರು ಕಾಲ್ ಮಾಡಿದ್ರೂ 108 ವಾಹನ ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ವಿಧಿ ಇಲ್ಲದೇ ಸಚಿವರು ಕೊನೆಗೆ ತಮ್ಮ ಬೆಂಗಾವಲು ವಾಹನದಲ್ಲಿ ಶಿರಾ ಆಸ್ಪತ್ರೆಗೆ ಗಾಯಾಳುಗಳನ್ನು ಕಳುಹಿಸಿಕೊಟ್ಟರು. ಇದನ್ನೂ ಓದಿ: ರಾಜ್ಯದ ಇಬ್ಬರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ

    TMK MADHUSWAMY

    ಸಚಿವ ಮಾಧುಸ್ವಾಮಿಗೆ ಶಿರಾ ಶಾಸಕ ರಾಜೇಶ್ ಗೌಡ, ಎಮ್ ಎಲ್ ಸಿ ಚಿದಾನಂದ ಗೌಡ ಸಾಥ್ ನಿಡಿದರು. ಜನಪ್ರತಿನಿಧಿಗಳ ಈ ಕಾರ್ಯಕ್ಕೆ ಪ್ರತ್ಯಕ್ಷದರ್ಶಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆ ಹೆಚ್ಚು ಖುಷಿ ನೀಡುತ್ತದೆ: ಕೆ.ಎಸ್ ಈಶ್ವರಪ್ಪ

  • ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ್
    – ಬರದ 108 ಅಂಬುಲೆನ್ಸ್
    – ಖಾಸಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳ ರವಾನೆ

    ಕಾರವಾರ: ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಶಾಸಕಿ ರೂಪಾಲಿ ನಾಯ್ಕ್ ಕರೆ ತಂದರೂ ಸರ್ಕಾರಿ ಆಸ್ಪತ್ರೆ ಸಮರ್ಪಕ ಚಿಕಿತ್ಸೆ ಸಿಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

    KWR Roopali Naik 1

    ಇಂದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕ್ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶಾಸಕಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಗಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನ ಕರೆತಂದಿದ್ದರು.

    KWR Roopali Naik 2

    ಗಾಯಾಳುಗಳನ್ನ ಕರೆ ತಂದ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಸಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು.

    KWR Roopali Naik 2

    ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಗಾಯಾಳುಗಳನ್ನ 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ಅಪಘಾತಕ್ಕೀಡಾಗಿ ನರಳಾಡ್ತಿದ್ದ ವ್ಯಕ್ತಿಯನ್ನು ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸವಾರ!

    ಅಪಘಾತಕ್ಕೀಡಾಗಿ ನರಳಾಡ್ತಿದ್ದ ವ್ಯಕ್ತಿಯನ್ನು ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸವಾರ!

    – ಮಾನವೀಯತೆ ಮೆರೆದ ಪ್ರತಾಪ್
    – ಸಾರಿಗೆ ಸಚಿವರ ವಿರುದ್ಧ ಆಕ್ರೋಶ

    ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ವಿಲಕ್ಷಣ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.

    ಈ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿ ನಡೆದಿದೆ. ಅಪಘಾತವಾಗಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿ ಗದಗ ಮೂಲದವನು. ಗಾಯಗೊಂಡು ನರಳಾಡುತ್ತಿದ್ದುದನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿ ಪ್ರತಾಪ್, ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಕೆಲ ಹೊತ್ತಾದರೂ ಅಂಬುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಕೊನೆಗೆ ತನ್ನ ಬೈಕಿನಲ್ಲಿಯೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    hospital bed

    ಅಳವಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳುವನ್ನು ಪ್ರತಾಪ್ ಸೇರಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ್ ಗೆ ರವಾನೆ ಮಾಡಿದ್ದಾರೆ. ಗಾಯಾಳುವನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿರುವ ಪ್ರತಾಪ್, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    LAXMAN 2

    ವೀಡಿಯೋದಲ್ಲಿ ಪ್ರತಾಪ್ ಅವರು ಸಾರಿಗೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ರಿಪೇರಿ ಮಾಡಲು ಮನವಿ ಮಾಡಿದ್ರೂ ಕ್ಯಾರೇ ಅನ್ನದ ಸಾರಿಗೆ ಸಚಿವರರ ವಿರುದ್ಧ ಕಿಡಿಕಾರಿದ್ದಾರೆ.

  • ಶಾಸಕ ರೇಣುಕಾಚಾರ್ಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಶಾಸಕ ರೇಣುಕಾಚಾರ್ಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾನವೀಯತೆ ಮೆರೆದಿದ್ದಾರೆ.

    ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ರೇಣುಕಾಚಾರ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಗೊಲ್ಲರಹಳ್ಳಿ ಸಮೀಪ ಬೈಕ್ ಅಪಘಾತವಾಗಿತ್ತು. ಘಟನೆಯಲ್ಲಿ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಬಿದ್ದಿದ್ದನು.

    DVG 1 1

    ಈ ವೇಳೆ ರೇಣುಕಾಚಾರ್ಯ ಅವರು ಅದೇ ದಾರಿಯಲ್ಲಿ ಕುಂದೂರು ಗ್ರಾಮಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಅಪಘಾತದ ಮಾಹಿತಿ ಅರಿತ ಶಾಸಕರು ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಸ್ಥಳೀಯರ ಸಹಾಯದಿಂದ ಆರೈಕೆ ಮಾಡಿದರು. ನಂತರ ತನ್ನ ಬೆಂಬಲಿಗರ ಸಹಾಯದಿಂದ ದಾರಿಯಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    DVG 3

  • ಬಸ್ ಕಂದಕಕ್ಕೆ ಉರುಳಿ 33 ಮಂದಿ ಸಾವು, 13 ಜನರಿಗೆ ಗಾಯ

    ಬಸ್ ಕಂದಕಕ್ಕೆ ಉರುಳಿ 33 ಮಂದಿ ಸಾವು, 13 ಜನರಿಗೆ ಗಾಯ

    ಶ್ರೀನಗರ್: ಬಸ್ ಕಂದಕಕ್ಕೆ ಉರುಳಿ 33ಕ್ಕೂ ಹೆಚ್ಚು ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿರುವ ಘಟನೆ ಜಮ್ಮು- ಕಾಶ್ಮೀರದ ಕಿಶ್ತಾವರ್ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಸುಮಾರು 7.30ಕ್ಕೆ ಈ ಘಟನೆ ನಡೆದಿದೆ. 45 ಮಂದಿ ಪ್ರಯಾಣಿಕರಿದ್ದ ಬಸ್ ಕಿಶ್ತಾವರ್ ನಿಂದ ಕೇಶವನ್ ಕಡೆಗೆ ಸಂಚರಿಸುತಿತ್ತು. ಈ ವೇಳೆ ಶ್ರೀಗ್ವಾರಿ ಬಳಿ ಬಸ್ ಜಾರಿ ಆಳವಾದ ಕಂದಕಕ್ಕೆ ಉರುಳಿದೆ. ಪರಿಣಾಮ 33 ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ.

    bus accident 1

    ಬಸ್‍ನಲ್ಲಿ ಓವರ್ ಲೋಡ್ ಮಾಡಲಾಗಿತ್ತು. ಅಲ್ಲದೆ ಓವರ್ ಸ್ಪೀಡ್ ಹಾಗೂ ಸರಿಯಾದ ರಸ್ತೆ ಇಲ್ಲದ ಕಾರಣ ಈ ಅಪಘಾತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ ಈ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

    ಪೊಲೀಸರು ಪರಿಹಾರ ಹಾಗೂ ರಕ್ಷಣಾ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಅಲ್ಲದೆ ಈ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ, ಜಮ್ಮು- ಕಾಶ್ಮೀರದ ಹಿರಿಯ ರಾಜಕಾರಣಿಗಳಾದ ಮೆಹಬೂಬ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ದೇವರ ದರ್ಶನ ಪಡೆದು ಬರುತ್ತಿದ್ದ ಕ್ರೂಸರ್ ಪಲ್ಟಿ- 12 ಮಂದಿ ಗಂಭೀರ

    ದೇವರ ದರ್ಶನ ಪಡೆದು ಬರುತ್ತಿದ್ದ ಕ್ರೂಸರ್ ಪಲ್ಟಿ- 12 ಮಂದಿ ಗಂಭೀರ

    ವಿಜಯಪುರ: ದೇವರ ದರ್ಶನ ಪಡೆದು ವಾಪಾಸ್ ಬರುತ್ತಿದ್ದ ವೇಳೆ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಕ್ರೂಸರ್ ಪಲ್ಟಿಯಾಗಿದೆ.

    ಇಂಡಿ ತಾಲೂಕಿನ ಧೂಳಖೇಡ ಬಳಿಯ ಚಾಚಾ ದಾಬಾದ ಹತ್ತಿರ ಈ ಅಪಘಾತ ಸಂಭವಿಸಿದೆ. ತುಳಜಾಪುರಕ್ಕೆ ಹೋಗಿ ವಾಪಸ್ಸು ಬರುವಾಗ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಮದುವೆಯ ನಂತರ ದೇವಸ್ಥಾನಕ್ಕೆ ಹೋಗಿದ್ದ ನವ ದಂಪತಿ ಕೂಡ ಗಾಯಗೊಂಡಿದ್ದಾರೆ. ಜೊತೆಗೆ ವಾಹನದಲ್ಲಿದ್ದ 12 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    bij accident 1

    ರಾಷ್ಟೀಯ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಕ್ರೂಸರ್ ಚಾಲಕ ಮುಂದಾಗಿದ್ದನು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಏಕಾಏಕಿ ಪಲ್ಟಿಯಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    – ಶಾಸಕ ಹರತಾಳು ಹಾಲಪ್ಪ ಸಹಾಯ

    ಶಿವಮೊಗ್ಗ: ಸಾಗರಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಪಲ್ಟಿಯಾಗಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಈ ಘಟನೆ ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ನಡೆದಿದೆ. ಹೊನ್ನಾವರದ ಕೀರ್ತನಾ, ಸುಜಾತ, ಚಿತ್ರದುರ್ಗ ಜಿಲ್ಲೆಯ ಮೊಹಮ್ಮದ್ ಮೃತ ದುರ್ದೈವಿಗಳಾಗಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು.

    SMG final

    ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಪಲ್ಟಿಯಾದ ಬಳಿಕ ಬಸ್ ಒಳಗೆ ಸಿಲುಕಿಕೊಂಡಿದ್ದವರನ್ನು ಹರಸಾಹಸಪಟ್ಟು ಸ್ಥಳೀಯರು, ಪೊಲೀಸರು ಹೊರತೆಗೆದಿದ್ದಾರೆ. ಬಳಿಕ ಗಾಯಾಳುಗಳನ್ನು ಕೂಡಲೇ ಸಾಗರ, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

    ಗಾಯಾಳುಗಳನ್ನು ಸಾಗಿಸುತ್ತಿದ್ದಾಗ ಅದೇ ಮಾರ್ಗವಾಗಿ ಶಾಸಕ ಹರತಾಳು ಹಾಲಪ್ಪ ಬರುತ್ತಿದ್ದರು. ಈ ವೇಳೆ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ್ರು.

    ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Haratalu Halappa