Tag: ಕೆಸಿಸಿ

  • ಗಣೇಶ್ ಟೀಮ್ ವಿರುದ್ಧ ಶಿವಣ್ಣ ಟೀಮ್ ಸೋಲು: ಗಂಗಾ ವಾರಿಯರ್ಸ್ ಗೆ ಕೆಸಿಸಿ ಕಪ್

    ಗಣೇಶ್ ಟೀಮ್ ವಿರುದ್ಧ ಶಿವಣ್ಣ ಟೀಮ್ ಸೋಲು: ಗಂಗಾ ವಾರಿಯರ್ಸ್ ಗೆ ಕೆಸಿಸಿ ಕಪ್

    ಕೆಸಿಸಿ (KCC) ಪಂದ್ಯಾವಳಿ ನಿನ್ನೆಗೆ ಮುಕ್ತಾಯವಾಗಿದೆ. ಅಂತಿಮ ಹಣಾಹಣೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನೇತೃತ್ವದ ಗಂಗಾ ವಾರಿಯರ್ಸ್ ಟೀಮ್ ಈ ವರ್ಷದ ಕ್ರಿಕೆಟ್ ಕಪ್ ಅನ್ನು ಗೆದ್ದು ಬೀಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗಣೇಶ್ ಮತ್ತು ಶಿವರಾಜ್ ಕುಮಾರ್ (Shivaraj Kumar) ಟೀಮ್ ನಡುವೆ ಅಂತಿಮ ಪಂದ್ಯ ಏರ್ಪಟ್ಟಿತ್ತು. ಗಣೇಶ್ ಟೀಮ್ ಮುಂದೆ ಶಿವಣ್ಣ ಟೀಮ್ ಶರಣಾಗಬೇಕಾಯಿತು. ವಿನ್ನರ್ ಆಗಿ ಗಂಗಾ ವಾರಿಯರ್ಸ್ ಹೊರ ಹೊಮ್ಮಿದ್ದಾರೆ.

    KCC 1

    ಶುಭ ಕೋರಿದ ಡಿಕೆಶಿ

    ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ (Kannada Chalanchitra Cup) ಪಂದ್ಯ ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಶ್ಲಾಘಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿದ ಉಪಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    KCC DK Shivakumar 1

    ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.‌ ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.

     

    ಸ್ಟಾರ್ ಕಲಾವಿದರ ಕೆಸಿಸಿ ಪಂದ್ಯ ಡಿಸೆಂಬರ್ 23ರಿಂದ ನಡೆಯುತ್ತಿದೆ. ಈ ಪಂದ್ಯ 3 ದಿನಗಳ ಕಾಲ ಸ್ಟಾರ್ ಟೀಮ್‌ಗಳ ಮಧ್ಯೆ ಹಣಾಹಣಿ ನಡೆಯಿತು. ಡಿಸೆಂಬರ್ 25ರಂದು ಕಡೆಯ ದಿನದ ರೋಚಕ ಪಂದ್ಯ ವೀಕ್ಷಿಸಲು ಡಿ.ಕೆ ಶಿವಕುಮಾರ್ ಭಾಗಿಯಾಗಿ ಕಿಚ್ಚ ಸುದೀಪ್ ಜೊತೆ ಕೆಲ ಕಾಲ ಸಮಯ ಕಳೆದರು. ಕ್ರಿಕೆಟ್ ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ.

  • ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ: ಡಿಸಿಎಂ ಡಿ.ಕೆ.ಶಿವಕುಮಾರ್

    ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ (Kannada Chalanchitra Cup) ಪಂದ್ಯ ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಶ್ಲಾಘಿಸಿದರು.

    KCC DK Shivakumar 1

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿದ ಉಪಮುಖ್ಯಮಂತ್ರಿಗಳು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇದನ್ನೂ ಓದಿ: ಕಿಚ್ಚನ ಜೊತೆ ಕುಳಿತು ಕೆಸಿಸಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಡಿಕೆ ಶಿವಕುಮಾರ್

    KCC DK Shivakumar 2

    ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.‌ ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.

    ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳದ ಬಗ್ಗೆ ಕೇಳಿದಾಗ, ಯಾರೂ ಗಾಬರಿಪಡುವ ಅಗತ್ಯವಿಲ್ಲ. ಮುಂಜಾಗ್ರತೆಯಿಂದ ಇರೋಣ. ಈ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿ ಹಾಗೂ ತಾಂತ್ರಿಕ ಸಮಿತಿಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿಂದು 125 ಮಂದಿಗೆ ಕೊರೊನಾ ಸೋಂಕು – ಕೋವಿಡ್‌ಗೆ 3 ಬಲಿ

  • ಕಿಚ್ಚನ ಜೊತೆ ಕುಳಿತು ಕೆಸಿಸಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಡಿಕೆ ಶಿವಕುಮಾರ್

    ಕಿಚ್ಚನ ಜೊತೆ ಕುಳಿತು ಕೆಸಿಸಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಡಿಕೆ ಶಿವಕುಮಾರ್

    ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ಅವರು ಸದ್ಯ ಕೆಸಿಸಿ ಕ್ರಿಕೆಟ್ (Kcc Cricket) ಪಂದ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂರು ದಿನಗಳ ಟೂರ್ನಿಯಲ್ಲಿ ಕಡೆ ದಿನ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಕೂಡ ಭಾಗಿಯಾಗಿ ಸುದೀಪ್‌ಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

    sudeep

    ಸ್ಟಾರ್ ಕಲಾವಿದರ ಕೆಸಿಸಿ ಪಂದ್ಯ ಡಿಸೆಂಬರ್ 23ರಿಂದ ನಡೆಯುತ್ತಿದೆ. ಈ ಪಂದ್ಯ 3 ದಿನಗಳ ಕಾಲ ಸ್ಟಾರ್ ಟೀಮ್‌ಗಳ ಮಧ್ಯೆ ಹಣಾಹಣಿ ನಡೆಯಿತು. ಡಿಸೆಂಬರ್ 25ರಂದು ಕಡೆಯ ದಿನದ ರೋಚಕ ಪಂದ್ಯ ವೀಕ್ಷಿಸಲು ಡಿ.ಕೆ ಶಿವಕುಮಾರ್ ಭಾಗಿಯಾಗಿ ಕಿಚ್ಚ ಸುದೀಪ್ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ. ಕ್ರಿಕೆಟ್ ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ.

    ಇನ್ನೂ ಕೆಸಿಸಿ ಪಂದ್ಯಕ್ಕಾಗಿಯೇ ಈ ವಾರ ಕಿಚ್ಚನ ಪಂಚಾಯಿತಿಗೆ ಸುದೀಪ್ ಗೈರಾಗಿದ್ದರು. ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರ ಬಿಗ್ ಬಾಸ್ (Bigg Boss) ಶೋ ಮಾಡಲಾಯಿತು.

  • ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

    ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

    ಬಿಗ್ ಬಾಸ್ ಶೋನಿಂದ (Bigg Boss Kannada) ಗಮನ ಸೆಳೆದ ನಟಿ ಸಾನ್ಯ ಅಯ್ಯರ್ (Sanya Iyer) ಸಿನಿಮಾಗಳ ಮೂಲಕ ಸೌಂಡ್ ಮಾಡುವ ಬದಲು ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ಕೆಸಿಸಿ ಇವೆಂಟ್‌ನಲ್ಲಿ ಸಾನ್ಯ, ನಟಿ ರಮ್ಯಾ ಅವರನ್ನ ಭೇಟಿಯಾಗಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ನೀವೇ ವಯಸ್ಸಾದಂಗೆ ಕಾಣ್ತಿದ್ದೀರಾ ಎಂದು ನೆಟ್ಟಿಗರು ಸಾನ್ಯ ಕಾಲೆಳೆದಿದ್ದಾರೆ.

    sanya iyer 5

    ಮೋಹಕತಾರೆ ರಮ್ಯಾ (Actress Ramya) ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಸಿನಿಮಾ ಮತ್ತು ಕ್ರಿಕೆಟ್‌ಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆಕ್ಟೀವ್ ಆಗಿದ್ದಾರೆ. ಇದೀಗ ಕೆಸಿಸಿ (KCC) ಕ್ರಿಕೆಟ್ ಲೀಗ್‌ನಲ್ಲಿ ರಮ್ಯಾ ಸಾಥ್ ನೀಡಿದ್ದಾರೆ. ಈ ವೇಳೆ ಮೋಹಕತಾರೆ ರಮ್ಯಾ ಜೊತೆಗಿನ ಫೋಟೋವನ್ನ ನಟಿ ಸಾನ್ಯ ಅಯ್ಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

    RAMYA 1 1

    ಸಾನ್ಯ ಅಯ್ಯರ್ ಜೀನ್ಸ್ ಮತ್ತು ಬಿಳಿ ಬಣ್ಣದ ಟಾಪ್ ಧರಿಸಿದ್ದರೆ, ರಮ್ಯಾ ಅವರು ಬ್ಲ್ಯಾಕ್ ಡ್ರೆಸ್ ಮೇಲೆ ವೈಟ್ ಬ್ಲೇಝರ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಂಬಳದ (Kambala) ಕಿರಿಕ್ ನಂತರ ಮತ್ತೆ ಸಾನ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ರಮ್ಯಾ ಜೊತೆಗಿನ ಫೋಟೋವನ್ನ ಸಾನ್ಯ ಶೇರ್ ಮಾಡ್ತಿದ್ದಂತೆ ನಿಮಗೆ 21, ರಮ್ಯಾಗೆ 40, ನಿಮಗಿಂತ ಅವರಿಗೆ ಡಬಲ್ ವಯಸ್ಸಾಗಿದೆ. ಆದರೆ ನೀವೇ ವಯಸ್ಸಾಗಿರುವ ಹಾಗೇ ಕಾಣುತ್ತೀರಾ ಎಂದು ನೆಟ್ಟಿಗರು ಸಾನ್ಯ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ರಮ್ಯಾ ಅವರ ಸೌಂದರ್ಯವನ್ನ ನೆಟ್ಟಿಗರು ಹಾಡಿ ಹೊಗಳಿದ್ದಾರೆ.

  • KCC-2023: ಪಂದ್ಯ ಗೆದ್ದು ಅಪ್ಪುಗೆ ಕೆಸಿಸಿ ಕಪ್ ಅರ್ಪಿಸಿದ ಧನಂಜಯ್ ಟೀಮ್

    KCC-2023: ಪಂದ್ಯ ಗೆದ್ದು ಅಪ್ಪುಗೆ ಕೆಸಿಸಿ ಕಪ್ ಅರ್ಪಿಸಿದ ಧನಂಜಯ್ ಟೀಮ್

    ನ್ನಡ ಚಲನಚಿತ್ರ ಕಪ್ ಗೆ ತೆರೆಬಿದ್ದಿದೆ. ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧನಂಜಯ್ ನೇತೃತ್ವದ  ಗಂಗಾ ವಾರಿಯಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಗಂಗಾ ವಾರಿಯರ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಚಾಂಪಿಯನ್ ಆಗಿ ಕಪ್ ಅನ್ನು ಪಡೆದುಕೊಂಡಿದೆ.

    FotoJet 71

    ಎರಡು ದಿನಗಳ ಕಾಲ ನಡೆದ ಪಂದ್ಯಗಳಲ್ಲಿ ಆರು ತಂಡಗಳು ಭಾಗಿಯಾಗಿದ್ದವು. ತಲಾ ಎರಡು ಪಂದ್ಯಗಳನ್ನು ಆಡಿದವು. ಧನಂಜಯ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ಮತ್ತು ಧ್ರುವ ಸರ್ಜಾ ತಲಾ ಒಂದೊಂದು ತಂಡದ ನೇತೃತ್ವವಹಿಸಿದ್ದರು. ಸಿನಿಮಾ ನಟರು ಮತ್ತು ತಂತ್ರಜ್ಞರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    FotoJet 2 50

    ಈ ಸಲದ ಪಂದ್ಯಾವಳಿ ಹಲವು ವಿಶೇಷಗಳಿಂದ ಕೂಡಿತ್ತು. ಆಡಿದ ಎರಡು ಪಂದ್ಯಗಳನ್ನು ಧನಂಜಯ ಅಂಡ್ ಟೀಮ್ ಗೆದ್ದರೆ, ಶಿವರಾಜ್ ಕುಮಾರ್ ನೇತೃತ್ವದ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗಲಿಲ್ಲ. ಉಳಿದ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಟೋರ್ನಿಯನ್ನು ಮುಂದಕ್ಕೆ ಸಾಗುವಂತೆ ಮಾಡಿದವು. ಉಪೇಂದ್ರ ನಾಯಕತ್ವದ ತಂಡ ಅತೀ ಹೆಚ್ಚು ನೆಟ್ ರನ್ ರೇಟ್ ಹೊಂದಿತ್ತು.

    CCL 1

    ಫೈನಲ್ ತಲುಪಿದ್ದ ಗಂಗಾ ವಾರಿಯರ್ಸ್ ಮತ್ತು ವಿಜಯನಗರ ಪೇಟ್ರಿಯಾಟ್ಸ್ ಅತ್ಯುತ್ತಮವಾಗಿ ಆಡಿದವು. ಕೊನೆಗೂ ಧನಂಜಯ್ ನಾಯಕನಾಗಿದ್ದ ಗಂಗಾ ವಾರಿಯರ್ಸ್ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಈ ಗೆಲುವನ್ನು ತಂಡ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿತು. ಅಲ್ಲದೇ, ಈ ಬಾರಿ ಇಡೀ ಕ್ರಿಕೆಟ್ ಪಂದ್ಯಾವಳಿಯನ್ನು ಅಪ್ಪುಗೆ ಅರ್ಪಿಸಿದ್ದು ವಿಶೇಷವಾಗಿತ್ತು.

  • ಒಂದೇ ವೇದಿಕೆಯಲ್ಲಿ ಸುದೀಪ್‌, ದಿನಕರ್‌ ತೂಗುದೀಪ

    ಒಂದೇ ವೇದಿಕೆಯಲ್ಲಿ ಸುದೀಪ್‌, ದಿನಕರ್‌ ತೂಗುದೀಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುನಿಸು ಮರೆತು ಮತ್ತೆ ಒಂದಾದ್ರಾ ಮೋಹಕತಾರೆ ರಮ್ಯಾ- ಜಗ್ಗೇಶ್?

    ಮುನಿಸು ಮರೆತು ಮತ್ತೆ ಒಂದಾದ್ರಾ ಮೋಹಕತಾರೆ ರಮ್ಯಾ- ಜಗ್ಗೇಶ್?

    ಮೋಹಕತಾರೆ ರಮ್ಯಾ (Ramya) ಮತ್ತು ನಟ ಜಗ್ಗೇಶ್ (Actor Jaggesh) ಮತ್ತೆ ಒಂದಾಗಿದ್ದಾರೆ. `ನೀರ್‌ದೋಸೆ’ (Neerdose) ಚಿತ್ರದ ಸಂದರ್ಭದಲ್ಲಿ ಇಬ್ಬರ ನಡುವೆ ಬಿರುಕಾಗಿತ್ತು. ಈ ಚಿತ್ರಕ್ಕೆ ನಟಿ ಗುಡ್‌ಬೈ ಹೇಳಿ ಹೊರ ಬಂದಿದ್ದರು. ಈಗ ಸಾಕಷ್ಟು ವರ್ಷಗಳ ನಂತರ ಮತ್ತೆ ರಮ್ಯಾ ಮತ್ತು ಒಟ್ಟಾಗಿ ಕಾಣಿಸಿಕೊಂಡಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

    RAMYA 1ವಿಜಯ್ ಪ್ರಸಾದ್ (Vijay Prasad) ನಿರ್ದೇಶನದ ʻನೀರ್‌ದೋಸೆʼ ಚಿತ್ರದಲ್ಲಿ ಜಗ್ಗೇಶ್ ಮತ್ತು ರಮ್ಯಾ ನಟಿಸಿದ್ದರು. ಕೆಲವು ದಿನಗಳ ಚಿತ್ರೀಕರಣ ನಡೆದಿತ್ತು. ಕಾರಣಾಂತರಗಳಿಂದ ನಟಿ ಚಿತ್ರದಿಂದ ಹೊರಬಂದಿದ್ದರು. ಅಲ್ಲಿಂದ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು. ರಮ್ಯಾ ಸಡನ್ ಆಗಿ ಸಿನಿಮಾದಿಂದ ಹೊರಹೋಗಿದ್ದಕ್ಕೆ ಜಗ್ಗೇಶ್ ಕಿಡಿಕಾರಿದ್ದರು.

    ramya 2

    ಸಾಕಷ್ಟು ಬೆಳವಣಿಗೆಗಳ ನಂತರ ಈಗ ರಮ್ಯಾ, ಜಗ್ಗೇಶ್ ಇಬ್ಬರು ಒಂದಾಗಿದ್ದಾರೆ. ಸುದೀಪ್ (Sudeep) ನೇತೃತ್ವದ `ಕೆಸಿಸಿ’ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಾಗಿ ಅಕ್ಕ ಪಕ್ಕ ಕುಳಿತಿದ್ದಾರೆ. ಸಂತಸದಿಂದ ಮಾತನಾಡಿದ್ದಾರೆ. ಒಂದಿಷ್ಟು ಸಮಯ ಒಟ್ಟಿಗೆ ಕಳೆದಿದ್ದಾರೆ. ಈಗ ಇಬ್ಬರು ಜೊತೆಯಾಗಿರುವ ವೀಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ನಟಿ ರಮ್ಯಾ ಅವರು ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಅವರ ಪಕ್ಕವೇ ಇದ್ದ ಸೀಟ್‌ನಲ್ಲಿ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಜಗ್ಗೇಶ್ ಅವರ ಕೈ ಹಿಡಿದು ಹ್ಯಾಂಡ್ ಶೇಕ್ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವನ್ನು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಕುಡಿದು ಮಾತಾಡ್ತಾ ಇದ್ದೀನಿ ಅನ್ಕೊಂಡ್ರೇನೋ: ನಟ ಸುದೀಪ್‌

    ನಾನು ಕುಡಿದು ಮಾತಾಡ್ತಾ ಇದ್ದೀನಿ ಅನ್ಕೊಂಡ್ರೇನೋ: ನಟ ಸುದೀಪ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

    ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

    ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ `ಕರ್ನಾಟಕ ಚಲನಚಿತ್ರ ಕಪ್’ (KARNATAKA CHALANACHITRA CUP) ಈಗ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದು ಚಿತ್ರರಂಗದ ಕಲಾವಿದರು ಕ್ರಿಕೆಟ್ (Cricket) ಆಟಕ್ಕಾಗಿ `ಕೆಸಿಸಿ’ಗಾಗಿ (Kcc) ಸಾಥ್ ನೀಡುತ್ತಿದ್ದರು. ಈಗ ಈ ವರ್ಷ ನಡೆಯಲಿರುವ ಕೆಸಿಸಿ ಮೂರನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ (Sudeep) ಮಾತನಾಡಿದ್ದಾರೆ.

    sudeep 1 4

    ಕಳೆದ ಎರಡು ಸೀಸನ್‌ಗಳಲ್ಲಿ ಹಲವರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಈ ವರ್ಷ ಆರಂಭದಲ್ಲೇ ಉತ್ತರ ನೀಡಿದ್ದಾರೆ. ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಇದನ್ನೂ ಓದಿ: ತೆಲುಗು ಯುವನಟ ಸುಧೀರ್ ಆತ್ಮಹತ್ಯೆ: ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತ

    SUDEEP 1 1

    ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ ಎಂದು ಸುದೀಪ್ ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತನಾಡಿದ್ದಾರೆ.

    ಕಳೆದ ವರ್ಷದಂತೆ ಈ ವರ್ಷವೂ ಕೂಡ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ಸಿನಿಮಾ ರಂಗದವರು ಇರುತ್ತಾರೆ. ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಸುದೀಪ್ ಹೇಳಿದ್ದಾರೆ.

    sudeep

    ಕೆಸಿಸಿ ಸೀಸನ್- 3 ಟೂರ್ನಿಯಲ್ಲಿ ಸುದೀಪ್ ಜೊತೆ ಶಿವರಾಜ್‌ಕುಮಾರ್, ಗಣೇಶ್, ಡಾಲಿ ಧನಂಜಯ್ ಮುಂತಾದವರು ಭಾಗವಹಿಸುತ್ತಾರೆ. ಈ ಪಂದ್ಯವು ಫೆ.11 ಮತ್ತು 12ರಂದು ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಸಿದು ಬಿದ್ದ ರೆಬೆಲ್ ಸ್ಟಾರ್ ಅಂಬರೀಶ್

    ಕುಸಿದು ಬಿದ್ದ ರೆಬೆಲ್ ಸ್ಟಾರ್ ಅಂಬರೀಶ್

    ಬೆಂಗಳೂರು: ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಕರೆಕೊಂಡು ಹೋಗಲಾಗಿದೆ.

    ಇಂದು ಬೆಳಗ್ಗೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಕ್ರಿಕೆಟ್ ಕಪ್ (ಕೆಸಿಸಿ) ಆರಂಭಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ನಟ ಅಂಬರೀಶ್ ಸೇರಿದಂತೆ ಹಲವು ಸ್ಟಾರ್ ಗಳು, ನಿರ್ಮಾಪಕರು, ಕಲಾವಿದರು ಕ್ರೀಡಾಂಗಣದಲ್ಲಿ ನೆರೆದಿದ್ದರು. ನಟ ಅಂಬರೀಶ್ ಕೂಡ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲೇ ಇದ್ದರು, ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸುಸ್ತಾಗಿದ್ದ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೊಂದಿಗೆ ಅಂಬರೀಶ್ ರನ್ನು ಆಸ್ಪತೆಗೆ ಕರೆದ್ಯೊಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅಂಬರೀಶ್ ಮನೆಗೆ ತೆರಳಿದ್ದಾರೆ.

    Ambarish 1 copy

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ರಾಕ್‍ಲೈನ್ ವೆಂಕಟೇಶ್, ಅಂಬರೀಶ್ ಅವರು ಆರೋಗ್ಯವಾಗಿದ್ದಾರೆ. ಆದರೆ ಬೆಳಗ್ಗೆಯಿಂದ ಬಿಸಿಲಿನಲ್ಲಿ ಕುಳಿತ್ತಿದ್ದ ಕಾರಣ ಸ್ವಲ್ಪ ಆಯಾಸಗೊಂಡಿದ್ದರು. ಅದ್ದರಿಂದ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡಲಾಯಿತು. ಅವರೇ ನಡೆದುಕೊಂಡು ನಮ್ಮ ಜೊತೆ ಬಂದರು. ಅದ್ದರಿಂದ ಅಭಿಮಾನಿಗಳು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಕ್ರೀಡಾಂಗಣದಲ್ಲಿ ನೆರೆದಿದ್ದ ಸ್ಟಾರ್ ಗಳ ಜೊತೆ ಬೆಳಗ್ಗೆಯಿಂದಲೂ ಅಂಬರೀಶ್ ಅವರು ಉತ್ಸಾಹದಿಂದಲೇ ಮಾತನಾಡುತ್ತಾ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಕೊಡಗು ಸಂತ್ರಸ್ತರಿಗೆ ನೆರವಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಸಿಸಿಯನ್ನು ಆರಂಭಿಸಲು ತಯಾರಿ ನಡೆಸಲಾಗಿದೆ. ಇದಕ್ಕಾಗಿ ನಟರು ಕೂಡ ನಿರಂತರ ಅಭ್ಯಾಸ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv