Tag: ಕಾಲೇಜು ಕ್ಯಾಂಪಸ್

  • ನೇಹಾ ಹತ್ಯೆಗೆ ಭುಗಿಲೆದ್ದ ಆಕ್ರೋಶ- ಪಾತಕಿ ಎನ್‍ಕೌಂಟರ್‌ಗೆ ಹಿಂದೂಪರ ಸಂಘಟನೆಗಳ ಆಗ್ರಹ

    ನೇಹಾ ಹತ್ಯೆಗೆ ಭುಗಿಲೆದ್ದ ಆಕ್ರೋಶ- ಪಾತಕಿ ಎನ್‍ಕೌಂಟರ್‌ಗೆ ಹಿಂದೂಪರ ಸಂಘಟನೆಗಳ ಆಗ್ರಹ

    – ರಾಜ್ಯ ಸರ್ಕಾರದ ವಿರುದ್ಧ ಜೋಶಿ, ಟೆಂಗಿನಕಾಯಿ ಕಿಡಿ

    ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್‍ನಲ್ಲಿಯೇ ವಿದ್ಯಾರ್ಥಿನಿಯ ಬರ್ಬರ ಹತ್ಯೆ ನಡೆದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವಿದ್ಯಾರ್ಥಿನಿ ನೇಹಾ ಹಿರೇಮಠ  (Neha Hiremath) ಹತ್ಯೆಗೆ ಇದೀಗ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.

    HUBBALLI

    ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ನೂರಾರು ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆ ಮುತ್ತಿಗೆ ಹಾಕಿದ್ದಾರೆ. ಪರಿಣಾಮ ವಿದ್ಯಾನಗರ ಪೆÇಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನೇಹಾ ಕೊಂದವನನ್ನು ಎನ್‍ಕೌಂಟರ್ ಮಾಡಬೇಕೆಂದು ವಿವಿಧ ಹಿಂದೂಪರ ಸಂಘಟನೆಗಳು ಠಾಣೆ ಎದುರು ಆಗ್ರಹಿಸುತ್ತಿವೆ. ಇದನ್ನೂ ಓದಿ: ನೇಹಾ ಹಿರೇಮಠ ಕೊಲೆಗೆ ಕಾರಣವೇನು?- ಪೊಲೀಸರ ಮುಂದೆ ಆರೋಪಿ ಹೇಳಿದ್ದೇನು?

    ಇನ್ನೊಂದೆಡೆ ನೇಹಾ ಕೊಲೆ ಖಂಡಿಸಿ ಎನ್‍ಎಸ್‍ಯುಐ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಮುಂಭಾಗ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, ಆಕ್ರೋಶ ಹೊರಹಾಕಿದೆ. ಅಲ್ಲದೇ ಕೊಲೆ ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದೆ. ಇದನ್ನೂ ಓದಿ: ನಮ್ಮನೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಗ್ಯಾರಂಟಿ ಯಾವಾಗ ಕೊಡ್ತೀರಿ? – ಸಿಎಂಗೆ ಸಿ.ಟಿ ರವಿ ಪ್ರಶ್ನೆ

    PRALHAD JOSHI

    ಕಿಮ್ಸ್ ಆಸ್ಪತ್ರೆಗೆ ಪ್ರಲ್ಹಾದ್ ಜೋಶಿ, ಬೆಲ್ಲದ್ ಟೆಂಗಿನಕಾಯಿ ಭೇಟಿ ಕೊಟ್ಟು ನೇಹಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣದಿಂದಲೇ ಇಂಥ ಘಟನೆ ನಡೆದಿದೆ. ಸರ್ಕಾರ ತಮ್ಮ ಬೆಂಬಲಕ್ಕಿದೆಯೆಂದು ಇಂತಹ ಘಟನೆ ಮರುಕಳಿಸುತ್ತವೆ. ಹಾಡಹಗಲೇ ಕೊಲೆ ಮಾಡುವ ಮನಸ್ಥಿತಿಗೆ ತಲುಪಿದ್ದಾರೆ. ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಅಗಬೇಕು ಎಂದು ಆಗ್ರಹಿಸಿದರು.

  • ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್‌ನಲ್ಲಿ ಅಪರೂಪದ ದೃಶ್ಯ ಸೆರೆ

    ಜಿಂಕೆ ಮೇಲೆ ಕೋತಿ ಸವಾರಿ- ಐಐಟಿ ಮದ್ರಾಸ್‌ನಲ್ಲಿ ಅಪರೂಪದ ದೃಶ್ಯ ಸೆರೆ

    ಚೆನ್ನೈ: ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ‌ (Social Media) ಕಂಡು ಬರುವ ಮುಗ್ದ ಪ್ರಾಣಿಗಳ ವೀಡಿಯೋಗಳು (Animal Video) ಜನರನ್ನು ನಕ್ಕು ನಗಿಸದೇ ಇರಲಾರದು. ಪ್ರಾಣಿಗಳ ಆಟಾಟೋಪಗಳನ್ನು ನೋಡುವುದು ಜನರ ಖಿನ್ನತೆಗೆ ರಾಮಬಾಣವೂ ಹೌದು. ಇಂತಹುದೇ ಒಂದು ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಎಂದಾದರೂ ನೀವು ಜಿಂಕೆಯ (Deer) ಮೇಲೆ ಕೋತಿ (Monkey) ಸವಾರಿ ಮಾಡಿರುವುದನ್ನು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲೊಂದು ಅಂತಹುದೇ ವೀಡಿಯೋ ವೈರಲ್ ಆಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT Madras) ಕ್ಯಾಂಪಸ್‌ನಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.

    ವೀಡಿಯೋದಲ್ಲಿ ಜಿಂಕೆಯೊಂದು ಕ್ಯಾಂಪಸ್‌ನ ಕಟ್ಟಡಗಳ ಸಮೀಪ ಹುಲ್ಲನ್ನು ಮೇಯಲು ಅಡ್ಡಾಡುತ್ತಿದೆ. ಅದರ ಮೇಲೆ ಆರಾಮವಾಗಿ ಕುಳಿತ ಕೋತಿಯೊಂದು ಆ ಗಳಿಗೆಯನ್ನು ಆನಂದಿಸುತ್ತಿದೆ. ತನ್ನ ಮೇಲೆ ಮಂಗ ಸವಾರಿ ಮಾಡುತ್ತಿದ್ದರೂ ಜಿಂಕೆ ಕಿಂಚಿತ್ತೂ ವಿಚಲಿತವಾಗದೇ ಹಾಯಾಗಿ ಓಡಾಡಿಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಇದೀಗ ವೀಡಿಯೋ ಭಾರೀ ವೈರಲ್ ಆಗುತ್ತಿರುವುದು ಮಾತ್ರವಲ್ಲದೇ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಐಐಟಿ ಮದ್ರಾಸ್‌ನಲ್ಲಿ ಮಂಗಗಳು ಹೀಗಿರುತ್ತವೆ ಎಂದು ಕೆಲವರು ಹೇಳಿದರೆ, ಇನ್ನೊಬ್ಬರು, ಮಂಗಗಳು ಮನುಷ್ಯರಂತೆ ಪ್ರಾಣಿಗಳ ಮೇಲೆ ಸವಾರಿ ಮಾಡಲು ಹೇಗೆ ಸಾಧ್ಯ ಎಂದು ಆಶ್ಚರ್ಯಪಟ್ಟಿದ್ದಾರೆ. ಇನ್ನೊಬ್ಬರು ಅದು ಐಐಟಿ ಕ್ಯಾಂಪಸ್‌ನ ಮಂಗ, ಹೀಗಾಗಿ ಇಷ್ಟೊಂದು ಸ್ಮಾರ್ಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    deer monkey

    ಐಐಟಿ ಮದ್ರಾಸ್ ಕ್ಯಾಂಪಸ್ ಅನ್ನು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದ್ದು, ಅದರ ಹೆಚ್ಚಿನ ಭಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಹೀಗಾಗಿ ಅಲ್ಲಿನ ಕ್ಯಾಂಪಸ್‌ನಲ್ಲಿ ಜಿಂಕೆ, ಕೋತಿ ಸೇರಿದಂತೆ ಅನೇಕ ಜಾತಿಯ ಪ್ರಾಣಿಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದೆ. ಇದನ್ನೂ ಓದಿ: ಅಪ್ಪು ಗುಣಗಳನ್ನ ಅಳವಡಿಸಿಕೊಳ್ಳಬೇಕು ಎಂದು ಫ್ಯಾನ್ಸ್‌ಗೆ ಉಪ್ಪಿ ಸಂದೇಶ

    Live Tv
    [brid partner=56869869 player=32851 video=960834 autoplay=true]