Tag: ಕದನ ವಿರಾಮ

  • ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

    ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

    ವಾಷಿಂಗ್ಟನ್‌: ಕಳೆದ 12 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್‌ (Israel) ಇರಾನ್‌ (Iran) ನಡುವಿನ ಯುದ್ಧ ಕೊನೆಗೂ ಅಂತ್ಯವಾಗಿದ್ದು ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅಮೆರಿಕ (USA) ಮತ್ತು ಕತಾರ್‌ (Qatar) ಪ್ರಯತ್ನದಿಂದ ಈ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.

    ಜೂನ್‌ 23 ರ ರಾತ್ರಿಯಿಡಿ ನಡೆದ ವಿದ್ಯಮಾನದಲ್ಲಿ ಅಮೆರಿಕ ಇಸ್ರೇಲ್‌ ಮನವೊಲಿಸಿದರೆ ಕತಾರ್‌ ಇರಾನ್‌ ಮನವೊಲಿಸಲು ಯಶಸ್ವಿಯಾಯಿತು.

    ಕದನ ವಿರಾಮ ಹೇಗಾಯ್ತು?
    ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಜೊತೆ ಮಾತನಾಡಿದರು. ಆರಂಭದಲ್ಲಿ ಕದನ ವಿರಾಮಕ್ಕೆ ಒಪ್ಪದ ಇಸ್ರೇಲ್‌ ಕೊನೆಗೆ ಇರಾನ್‌ ಮುಂದೆ ಯಾವುದೇ ದಾಳಿ ಮಾಡುವುದಿಲ್ಲ ಎಂದು ಒಪ್ಪಿಕೊಂಡರೆ ಮಾತ್ರ ಕದನ ವಿರಾಮಕ್ಕೆ ಒಪ್ಪುತ್ತೇನೆ ಎಂದು ಷರತ್ತು ವಿಧಿಸಿದರು.

    ಬಾಂಬ್‌ ದಾಳಿ ನಡೆಸಿದ್ದರಿಂದ ಇರಾನ್‌ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ಅಮೆರಿಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಟ್ರಂಪ್ ಇರಾನ್‌ ಆಪ್ತ ದೇಶವಾಗಿರುವ ಕತಾರ್‌ ಸಂಪರ್ಕಿಸಿದರು. ಕತಾರ್‌ ಎಮಿರ್‌ ಜೊತೆ ಮಾತನಾಡಿ ಕದನ ವಿರಾಮಕ್ಕೆ ಇರಾನ್‌ ಮನವೊಲಿಸುವಂತೆ ಕೇಳಿಕೊಂಡರು ನಂತರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕತಾರ್‌ ಪ್ರಧಾನಿ ಕಚೇರಿಯೊಂದಿಗೆ ಸಮನ್ವಯ ಸಾಧಿಸಿದರು. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?

     

    ವ್ಯಾನ್ಸ್ ಜೊತೆಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಯುಎಸ್ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಕೂಡ ಇರಾನ್ ಜೊತೆ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಕತಾರ್ ಪ್ರಧಾನಿಯೊಂದಿಗೆ ಮಾತನಾಡಿದ ನಂತರ ಇರಾನ್ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು.

    ಅಮೆರಿಕ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕೆ ಇರಾನ್‌ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಅದರಂತೆ ಸೋಮವಾರ ರಾತ್ರಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ದೊಡ್ಡ ವಾಯುನೆಲೆಯ ಮೇಲೆ ದಾಳಿ ಮಾಡಿತ್ತು. ಆದರೆ ಈ ದಾಳಿ ನಡೆಸುವ ಮೊದಲೇ ಇರಾನ್‌ ಕತಾರ್‌ಗೆ ತಿಳಿಸಿತ್ತು. ಈ ವಿಚಾರವನ್ನು ಕತಾರ್‌ ಅಮೆರಿಕಗೆ ಹೇಳಿತ್ತು. ಮೊದಲೇ ದಾಳಿ ನಡೆಸುವ ವಿಚಾರ ತಿಳಿದ ಕಾರಣ ಅಮೆರಿಕ ಎಲ್ಲದ್ದಕ್ಕೂ ಸನ್ನದ್ದವಾಗಿತ್ತು ಮತ್ತು ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

     

    ನಮಗೆ ಮುಂಚಿನ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಿಂದ ಯಾವುದೇ ಜೀವ ಹಾನಿ ಮತ್ತು ಯಾರು  ಗಾಯಗೊಂಡಿಲ್ಲ ಎಂದು ಟ್ರಂಪ್‌ ಹೇಳಿದ್ದರು. ಒಂದು ವೇಳೆ ದಾಳಿಯಿಂದ ವಾಯುನೆಲೆಗೆ ಹಾನಿಯಾಗಿದ್ದರೆ ಅಮೆರಿಕ ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಈ ಬಾರಿ ಶಾಂತಿ ಮಂತ್ರವನ್ನು ಜಪಿಸಿದ ಟ್ರಂಪ್‌ ಪ್ರತಿದಾಳಿ ನಡೆಸಲು ಮುಂದಾಗಲಿಲ್ಲ. ಹೀಗಾಗಿ ಕದನ ವಿರಾಮದ ಮಾತುಕತೆ ಯಶಸ್ವಿಯಾಯಿತು.

    ಇಸ್ರೇಲಿ ದಾಳಿಯಿಂದ ಸುಮಾರು 600 ಜನ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಮಾನವ ಹಕ್ಕುಗಳ ಗುಂಪು 950ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇಸ್ರೇಲ್ ನಗರಗಳ ಮೇಲೆ ಇರಾನ್‌ ಕ್ಷಿಪಣಿಗಳು ಬಿದ್ದ ಪರಿಣಾಮ 24 ಮಂದಿ ಮೃತಪಟ್ಟಿದ್ದಾರೆ.

  • ಇಸ್ರೇಲ್‌ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್‌

    ಇಸ್ರೇಲ್‌ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್‌

    ಟೆಹ್ರಾನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ (Israel) ತನ್ನ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ತಾನೂ ದಾಳಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇರಾನ್‌ (Iran) ಹೇಳಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದ್ದರೂ ಎರಡು ದೇಶಗಳು ಅಧಿಕೃತವಾಗಿ ದಾಳಿ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಇದನ್ನೂ ಓದಿ: ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ


    ಮೊದಲು ನಮ್ಮ ಮೇಲೆ ದಾಳಿ ನಡೆಸಿದ್ದು ಇಸ್ರೇಲ್‌. ಹೀಗಾಗಿ ಇಸ್ರೇಲ್‌ ಟೆಹ್ರಾನ್‌ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಿದರೆ ನಾವು ದಾಳಿ ನಿಲ್ಲಿಸುವುದಾಗಿ ಇರಾನ್‌ ತಿಳಿಸಿದೆ. ಇದನ್ನೂ ಓದಿ: ಖಮೇನಿ ಕೈ ಬೆರಳಲ್ಲಿರೋ ನೀಲಿ ಕಲ್ಲಿನ ಉಂಗುರದ ರಹಸ್ಯವೇನು? ಇದು ಇರೋವರೆಗೂ ಸೋಲೇ ಇಲ್ವಾ?


    ಈ ಸಂಬಂಧ ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, ಇಸ್ರೇಲ್‌ನ ಆಕ್ರಮಣಕ್ಕೆ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ, ಅಂದರೆ ಬೆಳಿಗ್ಗೆ 4 ಗಂಟೆಯವರೆಗೆ ಮುಂದುವರೆದವು. ಕೊನೆಯ ರಕ್ತದ ಹನಿಯವರೆಗೂ ಎಲ್ಲಾ ಇರಾನಿಯನ್ನರ ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸುವ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ಇಸ್ರೇಲ್‌- ಇರಾನ್‌ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್‌

    ಇಸ್ರೇಲ್‌- ಇರಾನ್‌ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್‌

    ವಾಷಿಂಗ್ಟನ್‌: ಕಳೆದ 12 ದಿನಗಳಿಂದ ಇಸ್ರೇಲ್‌ ಮತ್ತು ಇರಾನ್‌ ಮಧ್ಯೆ (Israel-Iran conflict) ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಎರಡೂ ದೇಶಗಳು ಕದನ ವಿರಾಮಕ್ಕೆ (Ceasefire) ಒಪ್ಪಿಗೆ ನೀಡಿವೆ ಎಂದು ಘೋಷಣೆ ಮಾಡಿವೆ. ಇದನ್ನೂ ಓದಿ: ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ

    ಟ್ರಂಪ್‌ ಹೇಳಿದ್ದೇನು?
    ಕದನ ವಿರಾಮಕ್ಕೆ ಇರಾನ್‌ ಮತ್ತು ಇಸ್ರೇಲ್‌ ಒಪ್ಪಿಕೊಂಡಿದೆ. 12 ನೇ ದಿನದ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು.

    ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ.

    ಈ ಯುದ್ಧ ವರ್ಷಗಳ ಕಾಲ ನಡೆಯುತ್ತಿತ್ತು ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಈ ರೀತಿ ಆಗಲಿಲ್ಲ ಮತ್ತು ಎಂದಿಗೂ ಈ ರೀತಿ ಆಗುವುದು ಇಲ್ಲ. ದೇವರು ಇಸ್ರೇಲ್ ಮತ್ತು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ. ಎಲ್ಲರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

  • ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಇಸ್ತಾನ್‌ಬುಲ್‌: ಯುದ್ಧಪೀಡಿತ ರಷ್ಯಾ-ಉಕ್ರೇನ್‌ ನಡುವೆ 2022ರ ಬಳಿಕ 2ನೇ ಸುತ್ತಿನ ಶಾಂತಿ ಮಾತುಕತೆ ಸೋಮವಾರ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ನಡೆಯಿತು. ಸಭೆಯು ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಶುರುವಾದ್ರೂ ಒಂದು ಗಂಟೆಗೆ ಮಾತುಕತೆ ಮುಕ್ತಾಯಗೊಂಡಿತು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿತು.

    ಸಭೆಯ ಆರಂಭದಲ್ಲೇ ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿ ವಿಚಾರ ಬಲವಾಗಿ ವಿರೋಧಿಸಿದ ರಷ್ಯಾ ಪ್ರತಿನಿಧಿಗಳು, ಉಕ್ರೇನ್‌ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದ ದಾಳಿಗೆ ತಿರುಗೇಟು ನೀಡುವ ಶಕ್ತಿ ನಮಗೂ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

    ರಷ್ಯಾ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯೇ ಎಲ್ಲದಕ್ಕೂ ಕಾರಣ. ರಷ್ಯಾ ಪ್ರತಿನಿಧಿಗಳು ಉಕ್ರೇನ್‌ನ ಈ ದಾಳಿಯನ್ನು ಬಲವಾಗಿ ವಿರೋಧಿಸಿ, ಷರತ್ತುರಹಿತ ಕದನ ವಿರಾಮ ಮಾತುಕತೆಯನ್ನ ತಿರಸ್ಕರಿಸಿದರು. ʻಆಪರೇಷನ್ ಸ್ಪೈಡರ್ಸ್ ವೆಬ್ʼ ಎಂದು ಹೆಸರಿಸಲಾದ ಈ ರಹಸ್ಯ ಕಾರ್ಯಾಚರಣೆಯಲ್ಲಿ, ಉಕ್ರೇನ್ ಒಂದೂವರೆ ವರ್ಷದಿಂದ ಯೋಜನೆ ರೂಪಿಸಿತ್ತು. ಹೀಗಾಗಿ ಇಸ್ತಾನ್‌ಬುಲ್‌ನಲ್ಲಿ ನಡೆದ ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯ ಸಮಯದಲ್ಲಿ ರಷ್ಯಾ ಬೇಷರತ್‌ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಕೈವ್ ಸಂಧಾನಕಾರರು ತಿಳಿಸಿದ್ದಾರೆ.

    ಸೇನಾ ದಾಳಿಯ ವಿಚಾರವಾಗಿ ಉಭಯ ದೇಶಗಳ ಪ್ರತಿನಿಧಿಗಳ ನಡುವಿನ ವಾಗ್ವಾದದಿಂದ ಸಭೆ ಅಪೂರ್ಣಗೊಂಡಿತು. ‘ಕದನ ವಿರಾಮ ಸಂಬಂಧ ಉಭಯ ದೇಶದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಸಂಘರ್ಷ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಯುದ್ಧ ಕೈದಿಗಳ ಹಸ್ತಾಂತರದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಸಂಘರ್ಷ ಕೊನೆಗೊಳಿಸುವ ವಿಷಯವಾಗಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್‌ ಫಿಡಾನ್‌ ತಿಳಿಸಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

    ಚರ್ಚೆ ವೇಳೆ ರಷ್ಯಾ ಪ್ರತಿನಿಧಿ ಮೆಡಿನ್ಸ್ಕಿ ಅವರು, ಯುದ್ಧದಲ್ಲಿ ಕೊಲಲ್ಪಟ್ಟ 6,000 ಉಕ್ರೇನಿಯನ್ ಸೈನಿಕರ ಶವಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದರು. ಹಾಗಾಗಿ 2-3 ದಿನಗಳ ಸೀಮಿತ ಕದನ ವಿರಾಮ ಪ್ರಸ್ತಾಪಿಸಲಾಗಿದೆ. ಇದು ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ತಿಳಿಸಿದರು.

    ಪರಸ್ಪರ 1,000 ಯುದ್ಧ ಕೈದಿಗಳ ವಿನಿಮಯ ಒಪ್ಪಂದ
    ಉಕ್ರೇನ್‌ ಮತ್ತು ರಷ್ಯಾ ನಡುವೆ ತಲಾ 1,000 ಯುದ್ಧ ಕೈದಿಗಳ ವಿನಿಮಯದ ಕುರಿತು ರಷ್ಯಾ ಮತ್ತು ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಮುಂದುವರಿದು… ಯುದ್ಧ ಕೈದಿಗಳ ವಿನಿಮಯಕ್ಕಾಗಿ ಶಾಶ್ವತ ಸಮಿತಿ ರಚನೆಯ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧ ಕೈದಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪೂರ್ಣಗೊಳಿಸಬಹುದು ಎಂದು ರಷ್ಯಾ ಪ್ರತಿನಿಧಿ ತಿಳಿಸಿದ್ರು.

    ಅಲ್ಲದೇ, ಕ್ರೈಮಿಯಾ, ಡಾನ್‌ಬಾಸ್, ಖೆರ್ಸನ್ ಮತ್ತು ಜಪೊರೊಝೈಗಳನ್ನು ರಷ್ಯಾದ ಪ್ರದೇಶವೆಂದು ಅಂತಾರಾಷ್ಟ್ರೀಯವಾಗಿ ಗುರುತಿಸಬೇಕೆಂದು ಒತ್ತಾಯಿಸಿ ರಷ್ಯಾ ಉಕ್ರೇನ್‌ಗೆ ಶಾಂತಿ ಜ್ಞಾಪಕ ಪತ್ರವನ್ನ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ಎರಡೂ ದೇಶಗಳು ಹೊಸ ಕೈದಿಗಳ ವಿನಿಮಯಕ್ಕಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು. ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ

  • ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ಗಾಜಾದಲ್ಲಿ ಕದನವಿರಾಮ ಘೋಷಿಸಲು ಅಮೆರಿಕ ಪ್ರಸ್ತಾವನೆಗೆ ಹಮಾಸ್ ಒಪ್ಪಿಗೆ

    ವಾಷಿಂಗ್ಟನ್: ಗಾಜಾದಲ್ಲಿ (Gaza) ಕದನ ವಿರಾಮ ಘೋಷಿಸುವಂತೆ ಕೋರಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ (Steve Witkoff) ಮಂಡಿಸಿದ ಪ್ರಸ್ತಾವನೆಗೆ ಹಮಾಸ್ (Hamas) ಒಪ್ಪಿಕೊಂಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳ ಮೂಲಕ ಹಮಾಸ್‌ಗೆ ರವಾನಿಸಲಾಗಿದೆ. ಪ್ರಸ್ತಾವನೆಯಲ್ಲಿ 70 ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ ಹತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಮಾತ್ರವಲ್ಲದೇ ಇಸ್ರೇಲ್‌ನಿಂದ ಬಂಧನದಲ್ಲಿರುವ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನ ಬಿಡುಗಡೆ ಮಾಡುವುದನ್ನು ಸಹ ಈ ಪ್ರಸ್ತಾವನೆ ಒಳಗೊಂಡಿದೆ. ಇದರಲ್ಲಿ ನೂರಾರು ಜನರು ದೀರ್ಘ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

  • ಪಾಕ್‌ನಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ: ವಿಕ್ರಂ ಮಿಸ್ರಿ

    ಪಾಕ್‌ನಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರ ಇಲ್ಲ: ವಿಕ್ರಂ ಮಿಸ್ರಿ

    ನವದೆಹಲಿ: ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಅಲ್ಲದೇ ʻಆಪರೇಷನ್‌ ಸಿಂಧೂರʼ (Operation Sindoor) ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಪಾತ್ರ ಎಲ್ಲಿಯೂ ಇಲ್ಲ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ಸ್ಪಷ್ಟನೆ ನೀಡಿದ್ದಾರೆ.

    donald trump

    ಆಪರೇಷನ್‌ ಸಿಂಧೂರ ಕದನ ವಿರಾಮ (Ceasefire) ಏರ್ಪಟ್ಟ ಬಳಿಕ ಡೊನಾಲ್ಡ್‌ ಟ್ರಂಪ್‌, ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ ಎಂದು ಕ್ರೆಡಿಟ್‌ ಪಡೆಯಲು ಮುಂದಾಗಿದ್ದರು. ಪದೇ ಪದೇ ಈ ವಿಚಾರವನ್ನು ಒತ್ತಿ ಹೇಳುತ್ತಿದ್ದರು. ಈ ಕುರಿತು ವಿಕ್ರಂ ಮಿಸ್ರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್‌ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್‌

    Kirna Hilla Mushaf Airbase Sargodha Pakistan

    ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಿಗೆ ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ. ಕದನ ವಿರಾಮ ಮನವಿ ಇಸ್ಲಾಮಾಬಾದ್‌ನಿಂದ ಬಂದಿದೆ. ನಿರ್ದಿಷ್ಟವಾಗಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ದೆಹಲಿಯಲ್ಲಿರುವ ತಮ್ಮ ಹೈಕಮಿಷನ್‌ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಇದರಲ್ಲಿ ಎಲ್ಲಿಯೂ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಮಿಶ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    Pakistan Mirage Jet

    ಕಳೆದ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ನಡೆಸಿತ್ತು. ಮೇ 7ರ ಮಧ್ಯರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ (PoK) 9 ಉಗ್ರ ನೆಲೆಗಳನ್ನು ಉಡೀಸ್‌ ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ

    ಇದಾದ ಬಳಿಕ ಪಾಕಿಸ್ತಾನ ಮೇ 8, 9 ಮತ್ತು 10 ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದ್ರೆ ಪಾಕ್‌ನ ಎಲ್ಲ ದಾಳಿಗಳನ್ನು ವಿಫಲಗೊಳಿಸಿದ್ದ ಭಾರತದ ವಾಯುರಕ್ಷಣಾ ವ್ಯವಸ್ಥೆ, ಮರುದಿನವೇ ಪಾಕಿಸ್ತಾನದ ಪ್ರಮುಖ 9 ವಾಯುನೆಲೆಗಳನ್ನ ಧ್ವಂಸಗೊಳಿಸಿತ್ತು, ಕರಾಚಿ ಬಂದರು, ನೂರ್‌ ಖಾನ್‌ ವಾಯುನೆಲೆಯ ಮೇಲೂ ದಾಳಿ ಮಾಡಿತ್ತು. ಜೊತೆಗೆ ಪಾಕ್‌ನ ರೆಡಾರ್‌ ಕೇಂದ್ರವನ್ನೇ ಛಿದ್ರಗೊಳಿಸಿತ್ತು. ಇದರಿಂದ ಕಂಗಾಲಾದ ಪಾಕ್‌ ಮೇ 10 ರಂದು ಕದನ ವಿರಾಮಕ್ಕೆ ಮನವಿ ಮಾಡಿತು.

  • ದೇಶದ ವಿದೇಶಾಂಗ ನೀತಿಯನ್ನ ಯಾರು ತೀರ್ಮಾನ ಮಾಡ್ತಾರೆ?: ಪ್ರಿಯಾಂಕ್ ಖರ್ಗೆ

    ದೇಶದ ವಿದೇಶಾಂಗ ನೀತಿಯನ್ನ ಯಾರು ತೀರ್ಮಾನ ಮಾಡ್ತಾರೆ?: ಪ್ರಿಯಾಂಕ್ ಖರ್ಗೆ

    – ಉತ್ತರ ಕೊಡಬೇಕಾದ ಪ್ರಧಾನಿ ಎಲ್ಲಿದ್ದಾರೆ ಅಂತ ವ್ಯಂಗ್ಯ

    ಬೆಂಗಳೂರು: ದೇಶದ ವಿದೇಶಾಂಗ ನೀತಿಯನ್ನು ಯಾರು ತೀರ್ಮಾನ ಮಾಡ್ತಾರೆ. ಪ್ರಧಾನಿ ಮೋದಿಯವರಾ ಅಥವಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದರು.

    ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ಮಾತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರು ಹೇಳ್ತಾರೆ. ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಯಾವುದೇ ನಿರ್ಧಾರ ಇದ್ದರೂ ಸರ್ಕಾರದ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಕದನ ವಿರಾಮ ನಿಮ್ಮಿಂದ ಆಗಿದ್ರೆ ಬಹಳ ಸಂತೋಷ. ಅದನ್ನ ಡೊನಾಲ್ಡ್ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ. ನಿಮ್ಮ ಹೇಳಿಕೆಗೆ, ಅಮೆರಿಕ ಅಧ್ಯಕ್ಷರ ಹೇಳಿಕೆಗೆ ವ್ಯತ್ಯಾಸ ಯಾಕಿದೆ ಎಂದರು. ಇದನ್ನೂ ಓದಿ: ಮಗನಿಗೆ ಇನ್ನೊಂದು ವಾರದಲ್ಲಿ ಮದುವೆ ನಿಶ್ಚಿತಾರ್ಥ ಇತ್ತು: ಹತ್ಯೆಯಾದ ಟೆಕ್ಕಿಯ ತಂದೆ ಕಣ್ಣೀರು

    ನನ್ನಿಂದ ಕದನ ವಿರಾಮ(Ceasefire) ಆಗಿದೆ ಎಂದು ಏಳನೇ ಬಾರಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ, ಟ್ರಂಪ್ ಅವರಿಗೆ ಕದನ ವಿರಾಮದ ಕ್ರೆಡಿಟ್ ಸಿಗ್ತಿಲ್ಲ ಎಂದು ಅಫಿಶಿಯಲ್ ಆಗಿ ಹಾಕ್ತಾರೆ. ನಾವು ಕೇಳಿದ್ದು, ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು? ನರೇಂದ್ರ ಮೋದಿಯವರಾ ಅಥವಾ ಡೊನಾಲ್ಡ್ ಟ್ರಂಪ್ ಅವರಾ ಎಂದು ಕೇಳಿದರು. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?

    ಆಪರೇಷನ್ ಸಿಂಧೂರದ ಬಗ್ಗೆ ಮಾತಾಡಿದ್ದೇವಾ. ಸೇನಾ ಪಡೆಗೆ ಇವರು ಕೊಟ್ಟಿರುವ ದಾಖಲೆ ಬಗ್ಗೆ ಮಾತಾಡಿದ್ದೇವಾ? ಸೈನಿಕರಿಗೆ ಅಗೌರವ ಮಾಡ್ತಿರೋದು ಬಿಜೆಪಿ. ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವರು ಮಾತಾಡ್ತಾರೆ. ಯಾಕೆ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡ್ತಿಲ್ಲ. ಇವರಿಂದ ನಾವು ಕಲಿಯಬೇಕಾ? ಅದರ ಬಗ್ಗೆ ಬಿಜೆಪಿಯವರು ಮಾತಾಡ್ತಾರಾ, ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು

    ವಿದೇಶಾಂಗ ನೀತಿ ಬಗ್ಗೆ ಅಮೆರಿಕದ ಅಧ್ಯಕ್ಷರು ಮಾತಾಡ್ತಾರೆ. 100 ದೇಶ ಸುತ್ತಿ 200 ಜನರನ್ನ ಅಪ್ಪಿಕೊಂಡ್ರಲ್ಲ ಏನಾಯ್ತು? ಮೇಕ್ ಇನ್ ಇಂಡಿಯಾ ಮಾಡಬಾರದು. ಆಪಲ್ ಮಾಡಬಾರದು ಅಂತ ನೇರವಾಗಿ ಹೇಳ್ತಾರೆ. ತೆರಿಗೆಯನ್ನ ಶೂನ್ಯ ಮಾಡಿದ್ದೀರಾ ಎಂದು ಡೊನಾಲ್ಡ್ ಟ್ರಂಪ್ ಹೇಳ್ತಾರೆ. ಅದಕ್ಕೆ ಯಾರಾದ್ರು ಉತ್ತರ ಕೊಟ್ಟಿದ್ದೀರಾ. ಇದಕ್ಕೆ ಉತ್ತರ ಕೊಡಬೇಕಾದವರು ಯಾರು? ಇದಕ್ಕೆ ವಿಜಯೇಂದ್ರ, ಅಶೋಕ್ ಉತ್ತರ ಕೊಡ್ತಾರಾ? ಉತ್ತರ ಕೊಡಬೇಕಾದವರು ಪ್ರಧಾನಿ ಮೋದಿ(Narendra Modi), ಎಲ್ಲಿದ್ದಾರೆ ಅವರು ಎಂದು ಪ್ರಶ್ನಿಸಿದ್ದಾರೆ.

  • ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ದೋಹಾ: ಭಾರತ- ಪಾಕಿಸ್ತಾನ (India- Pakistan) ಮಧ್ಯೆ ಕದನ ವಿರಾಮಕ್ಕೆ (Ceasefire) ನಾನು ನೇರವಾಗಿ ಮಧ್ಯಸ್ಥಿಕೆ (Mediation) ವಹಿಸಿದ್ದೆ ಎಂದು ಬಿಲ್ಡಪ್‌ ಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಯೂಟರ್ನ್‌ ಹೊಡೆದಿದ್ದಾರೆ.

    ನಾನೇ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಲ್ಲ. ಆದರೆ ಭಾರತ-ಪಾಕ್ ಮಧ್ಯೆ ಸಂಘರ್ಷದ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದೆ ಅಷ್ಟೇ ಎಂದಿದ್ದಾರೆ.

    ಕತಾರ್‌ನಲ್ಲಿರುವ ಅಲ್-ಉದೈದ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹಾಗೆ ಮಾಡಿದೆ ಎಂದು ಹೇಳಲು ಬಯಸುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.

    ನಾನೇ ಭಾರತ- ಪಾಕ್ ಮಧ್ಯೆ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲುವಂತೆ ಮಾಡಿದ್ದೆ ಎಂದು ಟ್ರಂಪ್‌ ಹೇಳುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿದ್ದರು.

    ಕದನ ವಿರಾಮ ಸಂಬಂಧ ಭಾರತ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಮೇ 12 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಟ್ರಂಪ್‌ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    Operation Sindoor AK Bharti Copy

    ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ. ಅದು ಕೆಟ್ಟ ಪರಮಾಣು ಯುದ್ಧವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಲಕ್ಷಾಂತರ ಜನರು ಮೃತಪಡಬಹುದಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಕೆಲಸಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯೂ ತಮ್ಮ ಭಾಷಣದಲ್ಲಿ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲದೇ ಭಾರತ ಪಾಕಿಸ್ತಾನದ ವಿಚಾರದಲ್ಲಿ ಮೂರನೇಯವರ ಅಗತ್ಯವಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದರು.

    ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.ಇದರಲ್ಲಿ ಯಾರು ಮಧ್ಯಸ್ಥಿಕೆ ವಹಿಸಿಲ್ಲ ಎಂದು ಭಾರತ ಹೇಳಿಕೊಂಡೇ ಬಂದಿದೆ.

  • ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್

    ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್

    – ಮೋದಿ ಹೇಳೋದನ್ನ ನಂಬೋಕೆ ಆಗ್ತಿಲ್ಲ ಎಂದ ಸಚಿವ

    ಬೆಂಗಳೂರು: ಬಿಜೆಪಿಯವರು (BJP) ತಿರಂಗಾ ಯಾತ್ರೆ ಮಾಡೋ ಬದಲು ಪಾಕಿಸ್ತಾನ ವಿರುದ್ಧ ಕದನ ವಿರಾಮ ಯಾಕೆ ಘೋಷಣೆ ಮಾಡಿದ್ರು? ಅಂತ ಪ್ರಧಾನಿ ನರೇಂದ್ರ ಮೋದಿಯನ್ನ (Narendra Modi) ಕೇಳಲಿ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಆಗ್ರಹಿಸಿದ್ದಾರೆ.

    ನಾಳೆಯಿಂದ (ಮೇ 15) ಬಿಜೆಪಿ ತಿರಂಗಾ ಯಾತ್ರೆ ನಡೆಸುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಿರಂಗಾ ಯಾತ್ರೆ ಮಾಡಲಿ. ಆದರೆ ಮೊದಲು ಬಿಜೆಪಿ ಅವರು ಏನ್ ಆಗಿದೆ ಹೇಳಲಿ. ಪಾಕಿಸ್ತಾನದ ಮೇಲೆ ಯುದ್ಧದ ಬಗ್ಗೆ ಮೊದಲು ಮಾಹಿತಿ ‌ಕೊಡಿ. ಕದನ ವಿರಾಮ (Ceasefire) ಯಾಕೆ ಆಯ್ತು ಗೊತ್ತಿಲ್ಲ. ಟ್ರಂಪ್ (Donald Trump) ಯಾಕೆ ಮಧ್ಯಸ್ಥಿಕೆ ವಹಿಸಿದ್ರು ಕೇಂದ್ರ ಹೇಳಲಿ. ಕದನ ವಿರಾಮ ಯಾಕೆ ಆಯ್ತು? ಎಷ್ಟು ದಿನಕ್ಕೆ ಇದು ಇರುತ್ತೆ ಮೊದಲು ಹೇಳಲಿ. ರಾಜಕೀಯ ಲಾಭಕ್ಕೆ ತಿರಂಗಾ ಯಾತ್ರೆ ‌ಮಾಡೋದಲ್ಲ. ಪ್ರಧಾನಿಗಳು ಇದಕ್ಕೆ ಮೊದಲು ಉತ್ತರ ಕೊಡಲಿ ಅಂತ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ.

    PM Modi at Adampur Airbase 3

    ಮೋದಿಗೆ ಭಯ ಅನ್ನಿಸುತ್ತೆ:
    11 ವರ್ಷಗಳಲ್ಲಿ ಪ್ರಧಾನಿಗಳು ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಕರೆದಿಲ್ಲ. ಮಾಧ್ಯಮಗಳನ್ನ ತಿರಸ್ಕಾರ ಮಾಡಿ ಇಟ್ಟಿದ್ದಾರೆ. ಮಾಧ್ಯಮ ಅಂದರೆ ಕೇರ್ ಮಾಡ್ತಿಲ್ಲ. ಮೋದಿ ಚುನಾವಣೆ ಭಾಷಣ ಮಾಡೋಕೆ ರೆಡಿ, ‌ಮನ್ ಕೀ ಬಾತ್ ಮಾಡೋಕೆ ರೆಡಿ. ಮೊದಲು ಜನರಿಗೆ ಉತ್ತರ ಕೊಡಿ. ಸುಮ್ಮನೆ ಭಾಷಣ ಬಿಗಿಯೋದಲ್ಲ. ಮೋದಿ ಹೇಳೋದು ಯಾವುದು ನಂಬೋಕೆ ಆಗ್ತಿಲ್ಲ. ಯಾವುದಕ್ಕೂ ಸಾಕ್ಷಿಗಳಿಲ್ಲ. ಟ್ರಂಪ್ ಅವರು ಹೇಳಿದ ಮೇಲೆ ಮೋದಿ ಅವರು ಇಲ್ಲ ಅಂತ ಹೇಳಬೇಕಿತ್ತು. ಮೋದಿಗೆ ಭಯ ಅನ್ನಿಸುತ್ತೆ ಅದಕ್ಕೆ ಬಗ್ಗೆ ಮಾತಾಡಿಲ್ಲ. ಇಂದಿರಾ ಗಾಂಧಿ – ಮೋದಿ ಅವರಿಗೂ ಇರೋ ವ್ಯತ್ಯಾಸ ಇಷ್ಟೆ ಅಂತ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    Donald Trump Special Flight From Qatar

    ಮೋದಿಯದ್ದು ಬರೀ ಮಾತು:
    ರಾಜಕೀಯ ಗಿಮಿಕ್ ಮಾಡಬಾರದು. ಜನರನ್ನ ದಾರಿ‌ ತಪ್ಪಿಸಬಾರದು. ಮುಂಬೈ ಅಟ್ಯಾಕ್ ಅದಾಗ ಮನಮೋಹನ್ ಸಿಂಗ್ ಬಂದು ಮಾತಾಡಿದ್ರು. ಇವರು ಕೇವಲ ಮಾತು ಅಷ್ಟೇ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

  • ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ

    ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ

    ಇಸ್ಲಾಮಾಬಾದ್‌: ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terrorist Attack) ಕೊನೆಗೂ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ʻಆಪರೇಷನ್‌ ಸಿಂಧೂರʼ ಹೆಸರಿನಲ್ಲಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆದಿದೆ. ಭಾರತ ದಾಳಿಗೆ ಬೆಚ್ಚಿರುವ ನಾಗರಿಕರು ಈಗ ಅಲ್ಲಿನ ಮಸರಸಾಗಳ (Madrasa) ವಿರುದ್ಧ ತಿರುಗಿ ಬಿದ್ದಿದ್ದಾರೆ.

    Pakistan 2

    ಹೌದು. ʻಆಪರೇಷನ್‌ ಸಿಂಧೂರʼ (Operation Sindoor) ಬಳಿಕ ಪಾಕ್‌ ನಾಗರಿಕರು ಹಾಗೂ ವಿದ್ಯಾರ್ಥಿಗಳು ಅಲ್ಲಿನ ಮದರಸಾಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮದರಸಾಗಳಲ್ಲಿ ಭಯೋತ್ಪಾದನೆಯ ಪಾಠ ಬೋಧಿಸಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಇಂತಹ ಮದರಸಾಗಳನ್ನ ಬಂದ್‌ ಮಾಡುಂತೆಯೂ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

    ವಿಡಿಯೋ ವೈರಲ್‌
    ಪಾಕಿಸ್ತಾನದ ಗುಹೆರ್ಬಾದ್ ಜಿಲ್ಲೆಯ ಸರ್ಕಾರಿ ಬಾಲಕರ ಫ್ರೌಡಶಾಲೆ ಮೇಲೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರೂ ಸೇರಿದಂತೆ ಎಲ್ಲಾ ನಾಗರಿಕರು ಕಲ್ಲು ತೂರಾಟ ನಡೆಸಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 31 ಸೆಕೆಂಡುಗಳ ಈ ವಿಡಿಯೋನಲ್ಲಿ ಮಹಿಳಾ ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಕ್ರೋಶಭರಿತರಾಗಿ ಕಲ್ಲು ತೂರಾಟ ನಡೆಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

    ಪಾಕ್‌ನಲ್ಲೇ ಶುರುವಾಯ್ತಾ ಆಂತರಿಕ ದಂಗೆ?
    ಭಾರತ-ಪಾಕ್‌ ನಡುವಿನ ಸಂಘರ್ಷದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಆಂತರಿಕ ದಂಗೆ ಶುರುವಾದಂತೆ ಕಾಣ್ತಿದೆ. ಒಂದೆಡೆದ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಹೋರಾಟಕ್ಕಿಳಿದಿದೆ, ಈ ನಡುವೆ ತಹ್ರಿಕ್‌-ಎ-ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ದಕ್ಷಿಣ ವಜೀರಿಸ್ತಾನದ ಮಿಲಿಟರಿ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರನ್ನ ಹತ್ಯೆ ಮಾಡಿ ಆತಂಕ ಸೃಷ್ಟಿಸಿದೆ. ಈ ಘಟನೆಗಳು ಮಾಸುವ ಮುನ್ನವೇ ನಾಗರಿಕರು ಮದರಸಾಗಳ ವಿರುದ್ಧ ಸಿಡಿದೆದ್ದಿರುವುದು ಆಂತರಿಕ ದಂಗೆಯ ಮುನ್ಸೂಚನೆ ಎಂದು ಕೆಲ ವರದಿಗಳು ತಿಳಿಸಿವೆ. ಇದನ್ನೂ ಓದಿ:  ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ