Tag: ಎಣ್ಣೆ ಬಾಟ್ಲಿ

  • ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    ಪಾಟ್ನಾ: ಬಿಹಾರದಲ್ಲಿ (Bihar) 2016 ರಿಂದ ಮದ್ಯ ಮಾರಾಟ ನಿಷೇಧವಾಗಿದೆ. ಹೀಗಾಗಿ ರಾಜ್ಯದ ಜನ ಆಲ್ಕೋಹಾಲ್ (Alcohol) ಎಲ್ಲಿ ಸಿಗುತ್ತದೆ ಅಂತಾ ಕಾಯುತ್ತಿದ್ದಾರೆ. ಅಂತೆಯೇ ಇದೀಗ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮದ್ಯದ ಬಾಟ್ಲಿಗಳನ್ನು ಯುವಕರನ್ನು ಕಸಿದುಕೊಂಡು ಓಡಿಹೋಗಿದ್ದಾರೆ.

    ಯುವಕರು ಬಾಟ್ಲಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮದ್ಯ ತುಂಬಿದ್ದ ಕಾರು ಮತ್ತು ಇನ್ನೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಸಹಾಯ ಮಾಡುದ ಉದ್ದೇಶದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕಾರೊಳಗೆ ಆಲ್ಕೋಹಾಲ್ ಬಾಟ್ಲಿಗಳಿರುವುದನ್ನು ಅವರು ಗಮನಿಸಿದ್ದು, ಕೈಗೆ ಸಿಕ್ಕಿ ಬಾಟ್ಲಿಗಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಇಬ್ಬರು ಬಾಟ್ಲಿಗಳನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಉಳಿದ ಮಂದಿಯೂ ಕೈಗೆ ಸಿಕ್ಕ ಬಾಟ್ಲಿಗಳನ್ನು ಹಿಡಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳದಲ್ಲಿದ್ದವರೊಬ್ಬರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    ಇತ್ತ ಅಪಘಾತದ ಮಾಹಿತಿ ಅರಿತ ದೋಭಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಪೊಲೀಸರು ಬಂದಿದ್ದನ್ನು ಲೆಕ್ಕಿಸದೇ ಜನ ಮದ್ಯದ ಬಾಟ್ಲಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯ ಸಹಾಯಕ ಕಮಿಷನರ್ ಪ್ರೇಮ್ ಪ್ರಕಾಶ್ ಮಾತನಾಡಿ, ವೀಡಿಯೋದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರನ್ನು ಗುರುತಿಸಲಾಗುತ್ತಿದೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

    ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

    ಬೆಂಗಳೂರು: ವಿಧಾನಸೌಧ (Vidhanasoudha) ದಲ್ಲಿ ನಡೆದ ಬ್ಲಾಕ್ ಅಂಡ್ ವೈಟ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಆಗಿದೆ.

    ಹೌದು. ಖಾಕಿ ಕಣ್ಗಾವಲಿನ ನಡುವೆಯೂ ಪೊಲೀಸ್ ಕಾನ್ಸ್‌ಟೇಬಲ್ ಮದ್ಯದ ಬಾಟ್ಲಿಯೊಂದಿಗೆ ವಿಧಾನಸೌಧದ ಒಳಗೆ ಹೋಗಿದ್ದಾನೆ. ಶಕ್ತಿಸೌಧದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕೊಡಲು ಬ್ಲಾಕ್ ಅಂಡ್ ವೈಟ್ ದುಬಾರಿ ಬೆಲೆಯ ಎಣ್ಣೆ ತೆಗೆದುಕೊಂಡು ಹೋಳಿ ಹಬ್ಬದ ಪ್ರಯುಕ್ತ ಗಿಫ್ಟ್ ಮಾಡಲು ಹೋಗಿದ್ದಾನೆ. ಪೊಲೀಸ್ ಅಧಿಕಾರಿಗೆ ಅದೇನ್ ಅನ್ನಿಸಿತೋ ತನ್ನ ಶಿಷ್ಯನ ಬಳಿ ಎಣ್ಣೆ ಬಾಟ್ಲಿ ತೆಗೆದುಕೊಳ್ಳದೇ ವಾಪಸ್ ಕಳಿಸಿಕೊಟ್ಟಿದ್ದಾರೆ.

    ALCOHOL 1

    ಬಾಸ್ ಎಣ್ಣೆ ಬಾಟ್ಲಿ ನಿರಾಕರಿಸಿದ್ದರಿಂದ ಬಾಟ್ಲಿಯೊಂದಿಗೆ ವಿಧಾನಸೌಧ ವೆಸ್ಟ್ ಗೇಟ್‍ನಿಂದ ಹೊರಗಡೆ ಬರೋದಕ್ಕೆ ಕಾನ್ಸ್‌ಟೇಬಲ್ ಮುಂದಾಗಿದ್ರು. ಈ ವೇಳೆ ದುರಾದೃಷ್ಟವಶಾತ್ ಕೈ ಜಾರಿ ಎಣ್ಣೆ ಬಾಟ್ಲಿ ಕೆಳಗಡೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟ್ಲಿ ಪೀಸ್ ಪೀಸ್ ಆಗುತ್ತಿದ್ದಂತೆ ಕಾನ್ಸ್‌ಟೇಬಲ್ ಆತುರದಲ್ಲಿಯೇ ಬಾಟ್ಲಿ ಪೀಸ್‍ಗಳನ್ನ ಬಾಚಿಕೊಂಡು ಪರಾರಿಯಾಗಿದ್ದಾನೆ. ಭದ್ರತೆಯಲ್ಲಿದ್ದ ಪೊಲೀಸರು ಕೆಲ ಗಂಟೆಗಳ ಕಾಲ ದಂಗಾಗಿ ಹೋಗಿದ್ದಾರೆ.

    ALCOHOL 3

    ಬಾಟ್ಲಿ ತಂದ ವ್ಯಕ್ತಿ ಯಾರು, ಯಾಕಾಗಿ ತಂದ್ರು ಅನ್ನೋದು ಭದ್ರತೆಯಲ್ಲಿದ್ದ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಶಕ್ತಿಸೌಧದ ವೆಸ್ಟ್ ಗೇಟ್ ಹಾಗೂ ನಾರ್ಥ್ ಗೇಟ್ ಸಿಸಿಟಿವಿ ಸರ್ಚ್ ಮಾಡಿದ್ದಾರೆ. ಆಗ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು, ಹೈಕೋರ್ಟ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಅನ್ನೋದು ಖಾತ್ರಿಯಾಗಿದೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ‌ ಇವಿ ಬಸ್‌ಗಳು

    ALCOHOL 2

    ವಿಧಾನಸೌಧ ಪೊಲೀಸರಿಗೆ ಬಾಟ್ಲಿ ವೀರನ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕರೆದು ವಿಚಾರಣೆ ಮಾಡಿದಾಗ ಬ್ಲಾಕ್ ಅಂಡ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಮಾಡಿದ್ದಾನೆ. ಸದ್ಯ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದು ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ.