Tag: ಉತ್ತಮ ಆಡಳಿತ

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ

    ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಉಭಯ ಬಣಗಳು ಪರಸ್ಪರ ದೂರು ಪ್ರತಿದೂರಿನಲ್ಲಿ ತೊಡಗಿವೆ.

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಸಿದ್ಧ ಕ್ಷೇತ್ರ ಮಾತ್ರವಲ್ಲದೆ, ರಾಜ್ಯದಲ್ಲಿ ಅತಿಹೆಚ್ಚು ಆದಾಯ ಬರುವ ಸ್ಥಳವೂ ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಈ ದೇವಸ್ಥಾನದಲ್ಲಿ ಆಡಳಿತಮಂಡಳಿ – ಕಾರ್ಯನಿರ್ವಹಣಾಧಿಕಾರಿ ನಡುವಿನ ಜಟಾಪಟಿ ಬೀದಿಗೆ ಬಂದಿದೆ.

    KUKKE (1)

    ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವಿರುದ್ಧ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸಾಲು-ಸಾಲು ಆರೋಪ ಮಾಡಿದ್ದಾರೆ. ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಶೀಘ್ರವಾಗಿ ಕೆಲಸ ಮಾಡಲು ಎಡವುತ್ತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರು ವಾರದಲ್ಲಿ 4 ದಿನ ಮಾತ್ರ ಇರ್ತಾರೆ. ದಾಖಲೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಕೊಡ್ತಿಲ್ಲ. ಹೀಗಾಗಿ ಅವರನ್ನು ಕೆಳಗಿಳಿಸಿ ಒಳ್ಳೆಯ ಅಧಿಕಾರಿಯನ್ನು ನೇಮಿಸಿ ಎಂದು ಸಚಿವ ಎಸ್‌.ಅಂಗಾರ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಮಾಡಿದ್ದಾರೆ.

    KUKKE 2

    ಇದಕ್ಕೆ ಸ್ಪಷ್ಟನೆ ನೀಡಿರುವ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಎರಡು-ಮೂರು ತಿಂಗಳಿನಿಂದ ಈ ರೀತಿಯ ವಿರೋಧ ಪ್ರಕಿಯೆ ನಡೆಯುತ್ತಿದೆ. ನಾನು ಕಚೇರಿ ಕೆಲಸ ಹೊರತುಪಡಿಸಿ ಬೇರೆ ಸಂಧರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬಿಟ್ಟು ಹೊರಗೆ ಹೋಗೋದಿಲ್ಲ. ಕಚೇರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ಜನ ತತ್ತರ – ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ

    ಆಡಳಿತ ಮಂಡಳಿ ಮತ್ತು ಕಾರ್ಯ ನಿರ್ವಾಹಣಾಧಿಕಾರಿಯ ನಡುವಿನ ಜಟಾಪಟಿಯಿಂದ ಭಕ್ತ ಸಮೂಹ ಬಡವಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ವಸತಿಗೃಹ ನಿರ್ಮಿಸುವ ಕಾಮಗರಿಗಳಿಗೆ ಹಿನ್ನಡೆಯಾಗಿದೆ. ಇದರಿಂದ ರಾತ್ರಿ ತಂಗಲು ವ್ಯವಸ್ಥೆಯಿಲ್ಲದೆ ಭಕ್ತರು ಕಷ್ಟಪಡುವಂತಾಗಿದೆ.

  • ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಬಿಹಾರ ಕೊನೆಯ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ ಎಂದು ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೆರ್ಸ್ ಸೆಂಟರ್ (ಪಿಎಸಿ) ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದಲ್ಲಿ ಪಟ್ಟಿಯನ್ನು ಇಂದು ಬಿಡುಗೊಡೆಗೊಳಿಸಿದೆ.

    ಸೂಚಂಕ್ಯ ಆಧಾರದ ಅಡಿಯಲ್ಲಿ ಕೇರಳ ಮೊದಲ ಸ್ಥಾನಗಳಿಸಿದೆ. 2016ರಿಂದಲೂ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಕೇರಳ ಮೊದಲ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅತಿ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ ಟಾಪ್ 5ರ ಸ್ಥಾನದಲ್ಲಿವೆ. ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

    Public Affairs Centre

    ಅತಿ ಚಿಕ್ಕ ರಾಜ್ಯಗಳ ಪೈಕಿ (2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ) ಹಿಮಾಚಲ ಪ್ರದೇಶ ಮೊದಲ ಸ್ಥಾನ ಪಡೆದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ನಂತರದ ಸ್ಥಾನಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಪಡೆದುಕೊಂಡಿವೆ. ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಚಿಕ್ಕ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿವೆ.

    ವರದಿ ಹೇಗೆ ತಯಾರಿಸಲಾಗುತ್ತೆ?
    ಮೂಲಭೂತ ಸೌಲಭ್ಯ, ಸಾಮಾಜಿಕ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ಮಾನವ ಅಭಿವೃದ್ಧಿ ಸೇರಿದಂತೆ ದೇಶಾದ್ಯಂತ ಹತ್ತು ಅಂಶಗಳನ್ನು ಕುರಿತು ಪಿಎಸಿ ವರದಿಗೂ ಮುನ್ನ ಅಧ್ಯಯನ ನಡೆಸುತ್ತದೆ. ಜನಸಂಖ್ಯೆ ಆಧಾರದ ಮೇಲೆ ದೊಡ್ಡ ಮತ್ತು ಸಣ್ಣ ರಾಜ್ಯಗಳು ಎಂದು ಎರಡು ವರ್ಗ ಮಾಡಿ ಅಧ್ಯಯನ ನಡೆಸಲಾಗುತ್ತದೆ. 2 ಕೋಟಿಗಿಂತ ಹೆಚ್ಚಿಗೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವನ್ನು ದೊಡ್ಡ ರಾಜ್ಯ ಎಂದು ವಿಭಾಗಿಸಲಾಗುತ್ತದೆ. ಒಟ್ಟು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳು ಅಂದಾಜು ಮಾಡಲ್ಪಟ್ಟ, ಸರ್ಕಾರದ ಮಾಹಿತಿಯ ಮೇಲೆ ಈ ವರದಿ ಅವಲಂಬಿಸಿರುತ್ತದೆ.

    2016ರಿಂದಲೂ ಪಿಎಸಿ ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗೊಳಿಸುತ್ತಾ ಬಂದಿದೆ. ಈ ವರದಿಯ ದತ್ತಾಂಶಗಳ ಆಧಾರದ ಮೇಲೆ ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ದಿಕ್ಸೂಚಿಯಾಗಲಿದೆ. 1994ರಲ್ಲಿ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಯಾಮುವೆಲ್ ಪೌಲ್ ಪಿಎಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.