Tag: ಉಜ್ಜಯಿನಿ

  • ಮದುವೆಯಾಗ್ತೀನಿ ಅಂತಾ ಎಣ್ಣೆ ಕುಡಿಸಿ ರಸ್ತೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದುರುಳ

    – ಕೃತ್ಯದ ವೀಡಿಯೋ ವೈರಲ್‌; ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ

    ಭೋಪಾಲ್: ಮದ್ಯ ಕುಡಿಸಿ ರಸ್ತೆಯಲ್ಲೇ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ (Ujjain) ನಡೆದಿದೆ.

    ರಸ್ತೆಯಲ್ಲೇ ದುರುಳ ಮಹಿಳೆ ಮೇಲೆ ಅತ್ಯಾಚಾರ ನಡೆಸುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ವ್ಯಕ್ತಿ ಕುಡಿದಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

    ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ವ್ಯಕ್ತಿ ಆಕೆಗೆ ಮದ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದ. ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಅಪರಾಧದ ಬಗ್ಗೆ ತಿಳಿದುಬಂದಿದ್ದು, ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?

    ಆರೋಪಿಯು ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆಕೆ ಮದ್ಯ ಸೇವಿಸುವಂತೆ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಸ್ಟಾರ್ ಸಹೋದರಿಯರು ಎಂದೇ ಹೆಸರುವಾಸಿಯಾಗಿರುವ ಸೋನು ಗೌಡ (Sonu Gowda) ಮತ್ತು ಅವರ ಸಹೋದರಿ ನೇಹಾ ಗೌಡ (Neha Gowda) ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಟೆಂಪ್ ರನ್ ಮಾಡುತ್ತಿದ್ದಾರೆ. ಸದ್ಯ ಅವರು ಉಜ್ಜಯಿನಿ (Ujjain) ಮತ್ತು ಓಂಕಾರೇಶ್ವರ ಯಾತ್ರೆಯಲ್ಲಿದ್ದು, ದೇವರ ದರ್ಶನ ಪಡೆದಿದ್ದಾರೆ.

    Sonu Gowda 2

    ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಸಹೋದರಿಯರು, ಆ ಧಾರ್ಮಿಕ ಕ್ಷೇತ್ರಗಳ ಮಹಿಮೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ಫೋಟೋಗಳನ್ನೂ ಅವರು ಶೇರ್ ಮಾಡಿದ್ದಾರೆ. ಓಂಕಾರೇಶ್ವರ ಮತ್ತು ಮಹಾಕಾಳನ ಮಹಿಮೆಯನ್ನು ಕೊಂಡಾಡಿದ್ದಾರೆ.

     

    ದೇವರ ಸನ್ನಿಧಾನದಲ್ಲಿ ವಿಶ್ವಾಸ, ಶಾಂತಿ, ನಂಬಿಕೆಗಳು ಇಮ್ಮಡಿಯಾಗುತ್ತವೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಂಬಿಕೆಗಳ ಬಗ್ಗೆ ಮಾತನಾಡಿದ್ದಾರೆ. ಭಕ್ತಿ, ಪರ್ವತ, ನದಿಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಅದೊಂದು ಪುಣ್ಯ ಸ್ಥಳ ಎಂದಿದ್ದಾರೆ.

  • ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

    ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

    ಹಿಂದೂ ದೇವಾಲಯಕ್ಕೆ (Temple) ಭೇಟಿ ನೀಡಿದರು ಎನ್ನುವ ಕಾರಣಕ್ಕಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿಖಾನ್ ಅವರನ್ನು ಕೆಲ ಸಂಪ್ರದಾಯವಾದಿಗಳು ತರಾಟೆಗೆ ತಗೆದುಕೊಂಡಿದ್ದರು. ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದು ಟೀಕಿಸಿದ್ದರು. ಪದೇ ಪದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿಸಿದ್ದರು. ಇಂಥವರಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಸಾರಾ.

    sara ali khan

    ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಸರಿಯಾಗಿಯೇ ಮಾತಿನ ಪೆಟ್ಟು ಕೊಟ್ಟಿರುವ ಸಾರಾ, ನೀವು ಎಷ್ಟೇ ಟ್ರೋಲ್ ಮಾಡಿದರೂ ನಾನು ಪದೇ ಪದೇ ದೇವಸ್ಥಾನಕ್ಕೆ ಹೋಗುತ್ತಲೇ ಇರುತ್ತೇನೆ ಎಂದಿದ್ದಾರೆ. ಇಂತಹ ಟ್ರೋಲ್ ಗಳಿಗೆ ಕೇರ್ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ಎಲ್ಲಿಗೆ ಹೋಗಬೇಕು ಅಥವಾ ಹೋಗಬಾರದು ಎಂದು ನಿರ್ಧರಿಸೋಕೆ ನೀವ್ಯಾರು ಎಂದು ಸಾರಾ ಮರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್

    sara ali khan

    ಸಾರಾ ಅಲಿ ಖಾನ್ (Sara Ali Khan) ಮೊನ್ನೆ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleshwar) ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ತಮ್ಮ ಚಿತ್ರಕ್ಕೆ ಗೆಲುವು ತಂದುಕೊಡುವಂತೆ ಅವರು ಪ್ರಾರ್ಥಿಸಿದ್ದರು. ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಹೀಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಕೇದಾರನಾಥಕ್ಕೆ ಹೋಗಿದ್ದರು.

     

    ಸಾರಾ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದು, ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದರು. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇಂಥವರಿಗೆ ತಿರುಗೇಟು ನೀಡಿ ತಮ್ಮ ಪಾಡಿಗೆ ತಾವು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.

  • ಪೋರ್ನ್ ಸ್ಟಾರ್‌ನಿಂದ ಬ್ಲ್ಯಾಕ್‌ಮೇಲ್ ಆರೋಪ – ಒಂದೇ ಕುಟುಂಬದ ಮೂವರು ವಿಷ ಸೇವನೆ

    ಪೋರ್ನ್ ಸ್ಟಾರ್‌ನಿಂದ ಬ್ಲ್ಯಾಕ್‌ಮೇಲ್ ಆರೋಪ – ಒಂದೇ ಕುಟುಂಬದ ಮೂವರು ವಿಷ ಸೇವನೆ

    ಭೋಪಾಲ್: ಮುಂಬೈ ಮೂಲದ ಪೋರ್ನ್ ಸ್ಟಾರ್ (Porn Star) ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಒಂದೇ ಕುಟುಂಬದ (Ujjain Family) ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ (Ujjain) ಜಿಲ್ಲೆಯಲ್ಲಿ ನಡೆದಿದೆ.

    LOVERS 1 1

    ಮುಂಬೈನ (Mumbai) ಬಾಲಕಿಯೊಬ್ಬಳು, ಉಜ್ಜಯಿನಿ ನಿವಾಸಿ ಆಶಿಖಾನ್‌ಗೆ `ಅಕ್ರಮ ಸಂಬಂಧ’ದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ (Blackmail) ಮಾಡಿದ್ದಾಳೆ ಎಂದು ಕುಟುಂಬ ಆರೋಪಿಸಿದೆ. ಬಳಿಕ ನೋವು ತಾಳಲಾರದೇ ತಾಯಿ, ಹೆಂಡತಿಯೊಂದಿಗೆ ಆಶಿಖಾನ್ ತಾನೂ ವಿಷ ಸೇವಿಸಿ, ವೀಡಿಯೋವನ್ನು ಜಾಲತಾಣದಲ್ಲಿ (Social Media) ಹರಿಯಬಿಟ್ಟಿದ್ದಾರೆ. ಸದ್ಯ ಮೂವರು ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಚಿಲುಮೆ ಡೇಟಾ ಅಕ್ರಮ ಪ್ರಕರಣ – ಆರೋಪಿಗಳಾದ IAS ಅಧಿಕಾರಿಗಳ ಅಮಾನತು ಕ್ರಮ ಹಿಂಪಡೆದ ಸರ್ಕಾರ

    Logo

    ವೀಡಿಯೋನಲ್ಲಿ ಏನಿದೆ?
    ಕುಟುಂಬಸ್ಥರು ವಿಷ ಸೇವನೆ ಮಾಡುವುದಕ್ಕೂ ಮುನ್ನ ವ್ಯಕ್ತಿ, `ನನ್ನ ಹೆಸರು ಆಶಿಖಾನ್, ಉಜ್ಜಯಿನಿಯ ಲೋಹೆಪುಲ್ ನಿವಾಸಿ. ಮುಂಬೈನ ರಿಮ್ಜಿಮ್ ದಾಸ್ ಎಂಬ `ಪೋರ್ನ್ ಸ್ಟಾರ್’ ಹಣಕ್ಕಾಗಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಳೆ. ನಾನು ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ನನ್ನ ಮದುವೆಯ ಸಮಯದಲ್ಲಿ, ನಾನು ಅವಳಿಗೆ ಹಣವನ್ನು ನೀಡಿದ್ದೇನೆ. ಈಗ ಅವಳು ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಿದ್ದಾಳೆ’ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ – ಬಿಜೆಪಿ, ಕಾಂಗ್ರೆಸ್‌ಗೆ ನಿಖಿಲ್ ತಿರುಗೇಟು

    Lovers 1

    ನಾನು ಮುಂಬೈನಲ್ಲಿದ್ದಾಗ ಆಕೆ ನನ್ನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದಳು. ಉಜ್ಜಯಿನಿಯಲ್ಲೂ ಜೈಲಿಗೆ ಕಳುಹಿಸಿದ್ದಳು. ಈಗ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾಳೆ. ನಾನಿರುವ ಪರಿಸ್ಥಿತಿಯಲ್ಲಿ ಆಕೆಗೆ ಹಣ ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ ಕುಟುಂಬ ಸಮೇತರಾಗಿ ವಿಷ ಸೇವನೆ ಮಾಡುತ್ತಿದ್ದೇವೆ ಎಂದು ಆಶಿಖಾನ್ ಹೇಳಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ

    ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಲ ಶಿವನ ದೇವಾಲಯದಲ್ಲಿ (Mahakal Temple) ಮಂಗಳವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ವಿಶೇಷ ಪೂಜೆ ಸಲ್ಲಿಸಿದರು.

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶದ ಪವಿತ್ರ ನಗರವನ್ನು ಪ್ರವೇಶಿಸಿದೆ. ಈ ವೇಳೆ ಉಜ್ಜಯಿನಿಯ ಶಿವನ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಅವರು ಭೇಟಿ ನೀಡಿದರು. ಬಳಿಕ ಅರ್ಚಕರ ಮಾರ್ಗದರ್ಶನದಲ್ಲಿ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿದರು.

    rahul gandhi 1 3

    ವಿಶೇಷ ಪೂಜೆ ಮುಗಿದ ನಂತರ ರಾಹುಲ್ ಗಾಂಧಿ ದೇವಾಲಯದ ಗರ್ಭಗುಡಿಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅದಾದ ಬಳಿಕ ಅವರು ದೇವಾಲಯದ ಆವರಣದಲ್ಲಿರುವ ನಂದಿ ವಿಗ್ರಹದ ಪಕ್ಕದಲ್ಲಿ ಸ್ವಲ್ಪ ಕಾಲ ಕುಳಿತುಕೊಂಡು, ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದರು. ಇದನ್ನೂ ಓದಿ: ನರ್ಮದಾ ಘಾಟ್‍ನಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಆರತಿ ಬೆಳಗಿದ ರಾಹುಲ್ ಗಾಂಧಿ

    Rahul Gandhi 6

    ಶುಕ್ರವಾರ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬ್ರಹ್ಮಪುರಿ ಘಾಟ್‍ನಲ್ಲಿರುವ ನರ್ಮದಾ ನದಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಆರತಿ ಬೆಳಗಿ ಬಳಿಕ ಬೆಟ್ಟದ ಮೇಲಿರುವ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕನನ್ನು ಸೋಲಿಸಲು ಹರಕೆ- ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ BJP ಮುಖಂಡ

    Live Tv
    [brid partner=56869869 player=32851 video=960834 autoplay=true]

  • ಜೈ ಶ್ರೀರಾಮ್ ಶಾಲು ಧರಿಸಿ ಉಜ್ಜಯಿನಿಯಲ್ಲಿ ಡಿಕೆಶಿ

    ಜೈ ಶ್ರೀರಾಮ್ ಶಾಲು ಧರಿಸಿ ಉಜ್ಜಯಿನಿಯಲ್ಲಿ ಡಿಕೆಶಿ

    ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮಧ್ಯಪ್ರದೇಶದಲ್ಲಿರುವ ಉಜ್ಜಯಿನಿ (Ujjain) ಮಹಾಕಾಲೇಶ್ವರನ ಮೊರೆ ಹೋಗಿದ್ದಾರೆ. ಉಜ್ಜಯಿನಿಗೆ ಕುಟುಂಬ ಸಮೇತರಾಗಿ ತೆರಳಿ ಮಹಾಕಾಲೇಶ್ವರನ ದರ್ಶನ ಪಡೆದಿದ್ದಾರೆ.

    ujjain mahakal

    ಉಜ್ಜಯಿನಿಗೆ ಕುಟುಂಬ ಸಮೇತವಾಗಿ ತೆರಳಿದ ಡಿಕೆಶಿ ರುದ್ರಾಭಿಷೇಕ, ವಿಶೇಷ ಹೋಮ ನೆರವೇರಿಸಿ ದೇವರ ದರ್ಶನ ಪಡೆದಿದ್ದಾರೆ. ಡಿಕೆಶಿ ಉಜ್ಜಯಿನಿಯಿಂದ ನಾಳೆ ದೆಹಲಿಗೆ ತೆರಳಿ ಇಡಿ (ED) ವಿಚಾರಣೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಉಜ್ಜಯಿನಿ ಮಹಾಕಾಲೇಶ್ವರನ ದರ್ಶನ ಪಡೆದ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾ ಕಾಲಭೈರವೇಶ್ವರ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತವಾಗಿ ಭೇಟಿ ನೀಡಿ ದರ್ಶನ ಪಡೆದೆ. ಪುರಾಣದಿಂದ ಹಿಡಿದು ಕಾಳಿದಾಸನ ಮೇಘ ಸಂದೇಶದಲ್ಲೂ ಉಜ್ಜಯಿನಿಯ ಉಲ್ಲೇಖವಿದೆ. ಶಿವನು ಇಲ್ಲಿ ವಾಸಿಸುತ್ತಿದ್ದ ಎಂದು ಪುರಾಣಗಳು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಡಿಕೆಶಿ ಧರಿಸಿರುವ ಶಾಲಿನಲ್ಲಿ ಜೈ ಶ್ರೀರಾಮ್ ಎಂದು ಬರೆದುಕೊಂಡಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೆಕಾಲೆ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ಬಿ.ಸಿ ನಾಗೇಶ್

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಭೋಪಾಲ್: ಉಜ್ಜಯಿನಿಯ ದೇವಸ್ಥಾನದ ಆವರಣದಲ್ಲಿ ಇನ್‍ಸ್ಟಾಗ್ರಾಮ್ ರೀಲ್ ( Instagram reel) ಮಾಡಿದ್ದ ಯುವತಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ (Madhya Pradesh) ಗೃಹ ಸಚಿವ ನರೋತ್ತಮ್ ಮಿಶ್ರಾ (Home Minister Narottam Mishra) ಸೂಚಿಸಿದ್ದಾರೆ.

    narottam mishra

    ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಗರ್ಭಗುಡಿ ಮತ್ತು ದೇವಸ್ಥಾನದ ಆವರಣದಲ್ಲಿ ಬಾಲಿವುಡ್ ಹಾಡಿಗೆ ಯುವತಿಯೊಬ್ಬಳು ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಳು. ನಂತರ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನರೋತ್ತಮ್ ಮಿಶ್ರಾ ಅವರ ಗಮನಕ್ಕೆ ಬಂದಿದೆ.

    instagram 1

    ಈ ಸಂಬಂಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್‍ಪಿಗೆ ಸೂಚಿಸಿದ್ದೇನೆ. ಅಲ್ಲದೇ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    ಯುವತಿ ಮಹಾಕಾಲ್ ದೇವಸ್ಥಾನದ ಗರ್ಭಗುಡಿಯಲ್ಲಿ ಜಲಾಭಿಷೇಕ ಮಾಡುವುದನ್ನು ರೀಲ್ಸ್ ಮಾಡಿದ್ದಳು. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಸುತ್ತುತ್ತಾ ರೀಲ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ಎರಡು ವೀಡಿಯೋಗಳನ್ನು ಮತ್ತೋರ್ವ ಯುವತಿ ಚಿತ್ರೀಕರಿಸಿದ್ದಾಳೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾಕಾಲ್ ದೇವಸ್ಥಾನದ ಅರ್ಚಕ ಮಹೇಶ್ ಗುರು ಒತ್ತಾಯಿಸಿದ್ದಾರೆ. ಈ ವೀಡಿಯೋ ಅವಹೇಳನಕಾರಿ ಮತ್ತು ಸನಾತನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ರೀತಿಯ ವೀಡಿಯೊವು ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡಿದೆ. ಮಹಾಕಾಲ್ ದೇವಾಲಯದ ನೌಕರರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಭೋಪಾಲ್: ಸವಾಲು ಸೋತ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಧ್ಯಪ್ರದೇಶದ ಸಂಸದರಿಗೆ 32 ಸಾವಿರ ಕೋಟಿ ರೂ. ನೀಡಬೇಕಿದೆ.

    ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ ಸಂದರೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೇ ತಿಂಗಳುಗಳಲ್ಲಿ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

    Nitin Gadkari 1

    ಉಜ್ಜಯಿನಿಯ (Ujjain) ಸಂಸದ ಅನಿಲ್ ಫಿರೋಜಿಯಾ (Anil Firojiya) ಅವರು ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರು ಗಡ್ಕರಿ ಅವರಲ್ಲಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಗಡ್ಕರಿಯವರು ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಿ, ನೀವು ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಗಡ್ಕರಿ ಅವರು ಚಾಲೆಂಜ್ ನೀಡಿದ ಸಮಯ 135 ಕೆಜಿ ಇದ್ದ ಸಂಸದರು, ತಮ್ಮ ಕ್ಷೇತ್ರಕ್ಕಾಗಿ ವರ್ಕೌಟ್, ಡಯಟ್ ಮಾಡಿ ಇದೀಗ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಈಗ ಸಂಸದರು 93 ಕೆಜಿ ತೂಗುತ್ತಿದ್ದು ಗಡ್ಕರಿಯವರ ಚಾಲೆಂಜ್ ಗೆದ್ದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

    Nitin Gadkari Anil Firojiya

    ಫಿರೋಜಿಯಾ ಅವರು ಜೂನ್‌ನಲ್ಲಿಯೇ 15 ಕೆಜಿ ತೂಕವನ್ನು ಇಳಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಆಂದೋಲನದ ವೇಳೆ ಮಾತನಾಡಿ, ಗಡ್ಕರಿ ನೀಡಿದ ಚಾಲೆಂಜ್ ಬಗ್ಗೆ ತಿಳಿಸಿದ್ದರು. ನಾನು ಕಳೆದುಕೊಳ್ಳುವ ಪ್ರತಿ ಕೆಜಿಗೆ ಗಡ್ಕರಿಯವರು 1,000 ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಾನು ಈಗಾಗಲೇ 15 ಕೆಜಿ ಕಳೆದುಕೊಂಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಇನ್ನಷ್ಟು ತೂಕವನ್ನು ಕಳೆದುಕೊಳ್ಳುತ್ತೇನೆ. ನಾನು ತೂಕ ಇಳಿಸಿಕೊಳ್ಳುವುದರಿಂದ ಉಜ್ಜಯಿನಿಗೆ ಹೆಚ್ಚಿನ ಅನುದಾನ ಸಿಗುತ್ತದೆಯಾದರೆ ನಾನು ಫಿಟ್‌ನೆಸ್ ಆಡಳಿತ ಮುಂದುವರೆಸಲು ಸಿದ್ಧ ಎಂದಿದ್ದರು.

    Anil Firojiya

    ಫಿರೋಜಿಯಾ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿ, ತಾವು 32 ಕೆಜಿ ಕಳೆದುಕೊಂಡಿರುವುದರ ಬಗ್ಗೆ ತಿಳಿಸಿದ್ದರು. ಗಡ್ಕರಿ ನೀಡಿರುವ ಭರವಸೆಯಂತೆ ಅವರು 2,300 ಕೋಟಿ ರೂ. ವೆಚ್ಚದ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    Live Tv
    [brid partner=56869869 player=32851 video=960834 autoplay=true]

  • 856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ

    856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) 856 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಉಜ್ಜಯಿನಿಯ `ಮಹಾಕಾಲೇಶ್ವರ ದೇವಾಲಯ’ (Mahakaleshwar Temple) ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.

    ಕಾರಿಡಾರ್‌ಗೆ `ಮಹಾಕಾಲ ಲೋಕ’ (MahakalLok) ಎಂದು ಹೆಸರಿಡಲಾಗಿದೆ. ಇದು ದ್ವಾದಶ, ಜೋತಿರ್ಲಿಂಗಳಲ್ಲಿ ಒಂದಾದ ಉಜ್ಜಯಿನಿಯ (Ujjaini) ಮಹಾಕಾಲೇಶ್ವರ ದೇಗುಲ ನವೀಕೃತ ರೂಪದಲ್ಲಿ ಕಂಗೊಳಿಸಲಿದೆ. ಹಾಗಾಗಿ ಪ್ರವಾಸೋದ್ಯಮ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

    Mahakaleshwar Temple 2

    ಇದಕ್ಕೂ ಮುನ್ನ ದೇಗುಲದ ಸುತ್ತಲಿನ ಜಾಗ ಇಕ್ಕಟ್ಟಾಗಿತ್ತು. ನಂತರ ತೆರವು ಕಾರ್ಯಾಚರಣೆ ನಡೆಸಿ ಕಾಶಿ ಮಾದರಿಯಲ್ಲಿ ವಿಶಾಲ ಕಾರಿಡಾರ್ ನಿರ್ಮಿಸಲಾಗಿದೆ. ಇದರಿಂದ ಕಣ್ಮನ ಸೆಳೆಯುವ ವಾಸ್ತುಶಿಲ್ಪಗಳು ಚಿತ್ತಾಕರ್ಷಕ ನೋಟವನ್ನು ಬೀರುತ್ತವೆ. ಪ್ರಧಾನಿ ಮೋದಿ ಮಂಗಳವಾರ (ಅ.11) ಸಂಜೆ 5:30ಕ್ಕೆ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕಾರಿಡಾರ್ ಉದ್ಘಾಟನೆ ಬಳಿಕ `ನಂದಿದ್ವಾರದ ಕೆಳಗೆ ಪವಿತ್ರ ಮೋಲಿ (ದಾರ)ಯಿಂದ ಸುತ್ತಿ ಮುಚ್ಚಿಡಲಾದ ಶಿವಲಿಂಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದನ್ನೂ ಓದಿ: ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಿ- ಉಕ್ರೇನ್‌ನಲ್ಲಿನ ನಾಗರಿಕರಿಗೆ ಭಾರತ ಸಲಹೆ

    Mahakaleshwar Temple 4

    ಏನಿದೆ ವಿಶೇಷತೆ?
    12 ಜೋತಿರ್ಲಿಂಗ ಕ್ಷೇತ್ರಗಳಲ್ಲಿ ಉಜ್ಜಯಿನಿ ಮಹಾಕಾಲೇಶ್ವರ ದೇಗುಲವೂ ಒಂದು. ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ 2017ರಲ್ಲಿ ಕಾಮಗಾರಿ ಆರಂಭಿಸಲಾಯಿತು. 856 ಕೋಟಿ ವೆಚ್ಚದ 1ನೇ ಹಂತದ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ಅಭಿವೃದ್ಧಿ ಯೋಜನೆಯಿಂದಾಗಿ ದೇಗುಲದ ವಿಸ್ತೀರ್ಣ 2.87 ರಿಂದ 47 ಹೆಕ್ಟೆರ್‌ಗೆ ವಿಸ್ತರಣೆಗೊಂಡಿದೆ. ದೇಶದಲ್ಲೇ ಅತಿ ಉದ್ದವಾದ 900 ಮೀಟರ್ ಕಾರಿಡಾರ್ ಇದಾಗಿದೆ.

    Mahakaleshwar Temple 1

    ಅಂಬುಲೆನ್ಸ್ (Ambulance), ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಶಿವಪುರಾಣ ಆಧರಿಸಿ ಕಾರಿಡಾರ್ ಪ್ರಾರಂಭದಲ್ಲಿ 2 ಬೃಹತ್ ಹೆಬ್ಬಾಗಿಲು ಇದೆ. ರಾಜಸ್ಥಾನ ಮರಳುಗಲ್ಲುಗಳನ್ನು ಬಳಸಿ, 3 ರಾಜ್ಯಗಳ ಕಲಾವಿದರಿಂದ ಕೆತ್ತನೆ ಕೆಲಸ ಮಾಡಿಸಲಾಗಿದೆ. ಪ್ರವಾಸಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಭೋಪಾಲ್: ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ, ಬಿಜೆಪಿ ಯುವ ಮೊರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬೆಂಬಲಿಗರು, ಮತ್ತು ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.

    TEJASWISURYA

    ದೇವಸ್ಥಾನದ ಭೇಟಿಗೆ ತೇಜಸ್ವಿ ಸೂರ್ಯ ತೆರಳಿದ ವೇಳೆ ಈ ಗಲಭೆ ನಡೆದಿದೆ. ಉಜ್ಜಯಿನಿಗೆ ತೆರಳಿದ್ದ ತೇಜಸ್ವಿ ಸೂರ್ಯ ನಿನ್ನೆ ಬೆಳಗ್ಗೆ ದೇವರ ದರ್ಶನಕ್ಕೆ ತೆರಳಿದ್ದರು. ಪೂಜೆಗಾಗಿ ಸೂರ್ಯ ಗರ್ಭಗುಡಿಯ ಕಡೆಗೆ ಹೋದರು. ಅವರನ್ನೇ ಅನುಸರಿಸಿದ ಬೆಂಬಲಿಗರು, ಕಾರ್ಯಕರ್ತರು ಗರ್ಭಗುಡಿ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಗರ್ಭಗುಡಿ ಪ್ರವೇಶ ಮಾಡದಂತೆ ಮಂದಿರದ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮಕ್ಕಳು

    ಗರ್ಭಗುಡಿ ಪ್ರವೇಶಕ್ಕೆ ನಿರಾಕರಿಸುತ್ತಿದ್ದಂತೆ ಸಿಟ್ಟಿಗೆದ್ದ ಕಾರ್ಯಕರ್ತರು, ಮಂದಿರದ ಸಿಬ್ಬಂದಿ ಜೊತೆಗೆ ಗಲಾಟೆ ನಡೆಸಿದರು. ಬ್ಯಾರಿಕೇಡ್‍ಗಳನ್ನು ತೆಗೆದುಹಾಕಿ ಒಳಗೆ ಪ್ರವೇಶಿಸಿದರು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದನ್ನೂ ಓದಿ: ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್‌, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್‌

    Live Tv
    [brid partner=56869869 player=32851 video=960834 autoplay=true]