Tag: ಆಯೇಷಾ ಒಮರ್

  • ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಮುಂಬೈ: ಯಶಸ್ವಿ ಕ್ರೀಡಾ ಜೋಡಿಗಳಲ್ಲಿ ಒಂದಾಗಿದ್ದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಅವರಿಬ್ಬರು ವಿಚ್ಛೇದನ ಪಡೆಯುವುದು ಖಚಿತ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

    sania mirza

    ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ವೈಮನಸ್ಸನ್ನು ಮರೆತು ಪ್ರೀತಿಸಿ ಈ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆ ಬಳಿಕ 2018ರಲ್ಲಿ ಒಂದು ಮುದ್ದಾದ ಗಂಡು ಮಗವನ್ನು ಪಡೆದಿದ್ದರು. ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಕಂಡುಬಂದಿದ್ದು ಬೇರೆ ಬೇರೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    Shoaib Malik

    ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದ ಮಲಿಕ್ ಆಪ್ತ ಸೇಹ್ನಿತರೊಬ್ಬರು, ಸಾನಿಯಾ ಮಿರ್ಜಾ ಮತ್ತು ಮಲಿಕ್ ಈಗಾಗಲೇ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ನನಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಬ್ಬರೂ ಬೇರೆಯಾಗುತ್ತಿರುವುದು ಖಚಿತ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    sania mirza shoaib malik 2

    ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ಆ ಬಳಿಕ ಮಲಿಕ್ ಭಾರತದ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದರು. ಮೂಗುತಿ ಸುಂದರಿಯನ್ನು ವರಿಸಿ ಸಂತೋಷವಾಗಿಯೇ ಇದ್ದ ಮಲಿಕ್ ಇದೀಗ ಬೇರೆಯಾಗಲು ಕಾರಣ ಪಾಕಿಸ್ತಾನದ ನಟಿ ಎಂಬ ಗುಮಾನಿ ಎದ್ದಿದೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    Shoaib Malik And Ayesha Omar

    ಆಪ್ತಳಾದ ಆಯೇಷಾ:
    ಇದೀಗ ಮಲಿಕ್ ಜೊತೆ ಪಾಕಿಸ್ತಾನದ ನಟಿ ಆಯೇಷಾ ಒಮರ್ (Ayesha Omar) ಹೆಸರು ಕೇಳಿ ಬರುತ್ತಿದೆ. ಆಯೇಷಾ ಒಮರ್, ಪಾಕಿಸ್ತಾನಿ ನಟಿ, ಮಾಡೆಲ್ ಮತ್ತು ಯೂಟ್ಯೂಬರ್. ಪಾಕಿಸ್ತಾನಿ ಚಲನಚಿತ್ರಗಳಾದ ‘ಕರಾಚಿ ಸೆ ಲಾಹೋರ್’ (2015), ‘ಯಾಲ್ಘರ್’ (2017) ಮತ್ತು ‘ಕಾಫ್ ಕಂಗನಾ’ (2019)ದಲ್ಲಿ ನಟಿಸಿದಾಕೆ. ಪಾಕಿಸ್ತಾನ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಆಯೇಷಾ ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2015ರಲ್ಲಿ ಯಶಸ್ವಿ ರೊಮ್ಯಾಂಟಿಕ್-ಕಾಮಿಡಿ ಚಿತ್ರ ‘ಕರಾಚಿ ಸೆ ಲಾಹೋರ್’ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಆಯೇಷಾ ಖ್ಯಾತರಾಗಿದ್ದರು. ಇದಾದ ಬಳಿಕ ಆಯೇಶಾ ಒಮರ್, ಶೋಯೆಬ್ ಮಲಿಕ್ ಅವರೊಂದಿಗೆ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಬಳಿಕ ಇವರಿಬ್ಬರ ನಡುವೆ ಆಪ್ತತೆ ಬೆಳೆದು ಇದೀಗ ಮಲಿಕ್ ಸಾನಿಯಾ ಜೊತೆಗಿನ ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]