Tag: ಆದಿಚುಂಚನಗಿರಿ

  • ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

    ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

    ವಾಷಿಂಗ್ಟನ್: ಅಮೆರಿಕದ (America) ನ್ಯೂಯಾರ್ಕ್ (New York) ನ್ಯೂಜೆರ್ಸಿ (New Jersey) ನಗರದಲ್ಲಿರುವ ಶ್ರೀ ಆದಿಚುಂಚನಗಿರಿ (Adichunchanagiri) ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಸೋಮವಾರ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ಮಾಡುವ ಮೂಲಕ ಭಕ್ತಿ ಭಾವದಿಂದ ಶ್ರಾವಣ ಅಮಾವಾಸ್ಯೆ ಆಚರಿಸಲಾಯಿತು.

    nirmalananda swamiji

    ಹಲವಾರು ಭಕ್ತರು ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸಿ ಧನ್ಯರಾದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ (Nirmalanandanatha Swamiji) ದಿವ್ಯ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಇದನ್ನೂ ಓದಿ: Paralympics | ಮನೀಶಾ ಕಂಚಿನ ಮಿಂಚು – ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ!

    ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಕಾರ್ಯದರ್ಶಿಗಳಾದ ಪೂಜ್ಯ ಪ್ರಸನ್ನನಾಥ ಸ್ವಾಮೀಜಿಯವರು, ಮೈಸೂರು ಶಾಖೆಯ ಪೂಜ್ಯ ಸೋಮೇಶ್ವರನಾಥ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್

  • ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

    ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

    ಮಂಡ್ಯ: ಎರಡು ರಾಷ್ಟ್ರೀಯ  ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ (BJP) ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಆದಿಚುಂಚನಗಿರಿಯಲ್ಲಿ (Adichunchanagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕರು ಕೂಡ ಇಲ್ಲಿಯೇ ಇದ್ದಾರೆ. ಆದರೆ ಕರ್ನಾಟಕದ ದುರಾದೃಷ್ಟವೇನೆಂದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಇಬ್ಬರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಾರೆ. ಕಾಂಗ್ರೆಸ್‌ನವರು (Congress) ಅವರನ್ನು ವಿಷಸರ್ಪ ಎಂದು ಮಾತನಾಡುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಳಗಾವಿಯ (Belagavi) ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ

    Congress BJP JDS

    ನಾಡಿನ ಜನರ ಬದುಕಿನ ಬಗ್ಗೆ ಎರಡೂ ಪಕ್ಷಗಳು ಸಂದೇಶ ನೀಡುತ್ತಿಲ್ಲ. ಕಾಂಗ್ರೆಸ್ ಎರಡು ಸಾವಿರ ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಇಲ್ಲ. ನಾಡಿನ ಸಮಸ್ಯೆಗಳಿಗೆ ಜೆಡಿಎಸ್ (JDS) ಪರಿಹಾರ ನೀಡುತ್ತದೆ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ ಎಂದರು. ಇದನ್ನೂ ಓದಿ: `ನಮೋ’ ರೋಡ್ ಶೋ; ಮೈಸೂರಿನ ಈ ಮಾರ್ಗಗಳಲ್ಲಿಂದು ವಾಹನ ಸಂಚಾರ ಬಂದ್

    ಅಶೋಕ್ (R.Ashok) ಅವರು ಜೆಡಿಎಸ್ ಲಾಟರಿ ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದ್ದರು. ನಾವು ಯಾವುದೇ ಲಾಟರಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಜೆಡಿಎಸ್‌ಗೆ 20 ಸೀಟ್ ಬರುತ್ತದೆ ಎಂದು ಹೇಳುತ್ತಾರೆ. ಬಿಜೆಪಿಗೆ ಎಷ್ಟು ಸೀಟ್ ಬರುತ್ತದೆ ಎಂದು ನೋಡಿಕೊಳ್ಳಲಿ. ಮಂಡ್ಯ (Mandya) ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಅಶೋಕ್ ಸಾಮ್ರಾಟ್ ಎಲ್ಲಿ ಹೋಗಿದ್ದರು? ನಾನು ಸಿಎಂ ಆಗಿದ್ದಾಗ ಬಜೆಟ್ ಘೋಷಣೆ ಮಾಡಿದ್ದಕ್ಕೆ ಮಂಡ್ಯ ಬಜೆಟ್ ಎಂದರು. ಈಗ ಬಿಜೆಪಿ ಮಂಡ್ಯಕ್ಕೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮನೆಯಿಂದ್ಲೇ ಮತದಾನ ಮಾಡಿದ ಮೂಡಿಗೆರೆ ಕ್ಷೇತ್ರದ ಶತಾಯುಷಿಗಳು


    ಬಿಜೆಪಿಯವರು ಇಡಿ, ಐಟಿಯನ್ನು ಆಕ್ಟಿವ್ ಮಾಡುತ್ತಿದ್ದಾರೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದಲ್ಲೂ ಒಂದೊಂದು ಮೋರ್ಚಾ ಇಟ್ಟುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಇಡಿ, ಐಟಿ ಮೋರ್ಚಾ ಎಂದು ಇಟ್ಟುಕೊಂಡಿದೆ. ಆ ಮೋರ್ಚಾಗಳನ್ನು ಚುನಾಚಣೆಯ (Election) ಸಂದರ್ಭದಲ್ಲಿ ಬಿಡುತ್ತಿದ್ದಾರೆ. ಅವುಗಳನ್ನು ಈಗ ಆಕ್ಟಿವ್ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವುದು ಸರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ʻಮನ್‌ ಕಿ ಬಾತ್‌ʼ100ನೇ ಸಂಚಿಕೆ ಇಂದು ಪ್ರಸಾರ

    ಸುಮಲತಾ ಅಂಬರೀಶ್ (Sumalatha Ambareesh) ಅವರ ಜೆಡಿಎಸ್ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಅವರು ಮಹಾನ್ ನಾಯಕಿ. ಅಲ್ಲದೇ ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರಾಗಿದ್ದರಿಂದ ಅವರ ಬಗ್ಗೆ ಮಾತನಾಡಲು ಆಗಲ್ಲ. ನಾವು ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇನೆ. ಲಾಟರಿ, ಸಾರಾಯಿ ಎಲ್ಲವನ್ನು ನಿಷೇಧ ಮಾಡಿದ್ದೇ ನಾನು. ಎಲ್ಲಾ ಮಾತಿಗೂ ಜನ ತೀರ್ಪು ಕೊಡುತ್ತಾರೆ ಎಂದರು. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ

  • ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ

    ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ

    ಮಂಡ್ಯ: ಅಧಿಕಾರಕ್ಕಾಗಿ ಇದೀಗ ದಳಪತಿಗಳು ದೇವರ ಮೊರೆ ಹೋಗಿದ್ದಾರೆ. ಎಚ್.ಡಿ.ದೇವೇಗೌಡ (H.D Devegowda), ಎಚ್.ಡಿ.ರೇವಣ್ಣ (H.D Revanna) ಬಳಿಕ ಇದೀಗ ಕುಮಾರಸ್ವಾಮಿ (H.D Kumaraswamy) ಯವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    HD KUMARASWAMY 2 1

    ತಿಂಗಳ ಹಿಂದೆಯಷ್ಟೇ ರೇವಣ್ಣ ಅವರು ತಮ್ಮ ಪತ್ನಿ ಜೊತೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಅಮಾವಾಸ್ಯೆಯಂದು ಹೆಚ್‍ಡಿಡಿ ಕೂಡ ಪೂಜೆ ಸಲ್ಲಿಸಿದ್ದರು. ಇಂದು (ಭಾನುವಾರ) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪೂಜೆ ಸಲ್ಲಿಕೆಯಾಗಿದೆ. ಇದನ್ನೂ ಓದಿ: ಮನೆಯಿಂದ್ಲೇ ಮತದಾನ ಮಾಡಿದ ಮೂಡಿಗೆರೆ ಕ್ಷೇತ್ರದ ಶತಾಯುಷಿಗಳು

    HD KUMARASWAMY 1

    ಈ ಮೂಲಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪದೇ ಪದೇ ಕಾಲಭೈರವೇಶ್ವರನ ಮೊರೆ ಹೊಗುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಜೊತೆ ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳಿಂದಲೂ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಭ್ಯರ್ಥಿಗಳ ಜೊತೆ ಕುಮಾರಸ್ವಾಮಿ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ಅಂತಿಮ ಅಂತದ ತಂತ್ರಗಾರಿಕೆ ಬಗ್ಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾರೆ. ಕೆಲವು ಸಲಹೆ, ಸೂಚನೆ ನೀಡಲಿದ್ದಾರೆ.

  • ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    ಚಾಮರಾಜನಗರ: ನನಗೆ ಸಿ.ಡಿ-ಪಾಡಿ ಯಾವುದೂ ಗೊತ್ತಿಲ್ಲ. ನಾನು ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಈ ಬಗ್ಗೆ ನಂಗೆ ಏನೂ ಗೊತ್ತಿಲ್ಲ. ಇದರಲ್ಲಿ ನಾನು ಎಲ್ ಬೋರ್ಡ್ ಎಂದು ಸಚಿವ ವಿ. ಸೋಮಣ್ಣ (V Somanna) ಹೇಳಿದ್ದಾರೆ.

    SOMANNA

    ಸಿಡಿ ರಾಜಕಾರಣ (CD Politics) ದ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನೀವು ಯಾವ ಪ್ರಶ್ನೆ ಯಾರಿಗೆ ಕೇಳಬೇಕು ಅಂತಾ ಕೇಳ್ದೆ ನನ್ನನ್ನು ಕೇಳಿದ್ರೆ ಹೇಗೆ? ರಾಂಗ್ ಡೈರಕ್ಷನ್‍ನಲ್ಲಿ ಕೇಳಿದ್ರೆ ನಾನೇನು ಹೇಳಲಿ? ನಾನು ಅಭಿವೃದ್ಧಿ ಜಪ ಮಾಡೋನು, ನನ್ನ ಕೇಳಿದ್ರೆ ಸುಖವಿಲ್ಲ, ದಯಮಾಡಿ ಯಾರ್ಯಾರೂ ಸಂಬಂಧಪಟ್ಟೋರು ಇದ್ದಾರೋ ಅವರನ್ನು ಕೇಳಿ ಮಾಹಿತಿ ತಗೊಳ್ಳಿ ಎಂದರು.

    H Vishwanath

    ತಮ್ಮ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆಯೆಂಬ ಎಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ (H Vishwanath) ಬುದ್ದಿಜೀವಿ, ಹಳ್ಳಿ ಹಕ್ಕಿ, ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಈ ಬಾರಿಯೂ ಗೆಲ್ಲಲಿ ಅಂತ ಆಶಿಸುವೆ: ಸುಧಾಕರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಿಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ – ಸಾವಿರಾರು ಭಕ್ತರಿಂದ ಜೈಕಾರ

    ಆದಿಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ – ಸಾವಿರಾರು ಭಕ್ತರಿಂದ ಜೈಕಾರ

    ಮಂಡ್ಯ: ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಜರುಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ಗಂಗಾಧರೇಶ್ವರಸ್ವಾಮಿಯ ಮಹಾರಥೋತ್ಸವ ಇಂದು ಮುಂಜಾನೆ 4.58ರ ಬ್ರಾಹ್ಮೀ ಮುಹೂರ್ತದಲ್ಲಿ ಅದ್ದೂರಿಯಾಗಿ ಜರುಗಿತು.

    MND RATHOTSAV 1

    ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿದ್ದು, ಕಾಲಭೈರವೇಶ್ವ ಮತ್ತು ಗಂಗಾಧರೇಶ್ವರಸ್ವಾಮಿಗೆ ಜೈಕಾರ ಕೂಗಿದ್ರು. ರಥೋತ್ಸವದ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: ಬೊಮ್ಮಾಯಿ ಸಚಿವರ ನಡುವೆ ಟಾಕ್ ಫೈಟ್- ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ

    MND RATHOTSAV 2

    ರಥೋತ್ಸವ ಹಿನ್ನೆಲೆ ಇಡೀ ಆದಿಚುಂಚನಗಿರಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಇತ್ತ ಬಾನೆತ್ತರಕ್ಕೆ ಬಾಣ ಬಿರುಸುಗಳು ಚಿಮ್ಮುತ್ತಿದ್ದವು. ಒಟ್ಟಿನಲ್ಲಿ ಕೊರೊನಾ ನಂತರ ಮಹಾರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

  • ಆದಿಚುಂಚನಗಿರಿ ಕೇತ್ರದ ಆಮ್ಲಜನಕ ಘಟಕ ಲೋಕಾರ್ಪಣೆ

    ಆದಿಚುಂಚನಗಿರಿ ಕೇತ್ರದ ಆಮ್ಲಜನಕ ಘಟಕ ಲೋಕಾರ್ಪಣೆ

    ಮಂಡ್ಯ: ಕೊರೊನಾ ಎದುರಿಸಲು ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಸಾಮರ್ಥ್ಯವುಳ್ಳ ಆಮ್ಲಜನಕ ಉತ್ಪಾದನಾ ಘಟಕವನ್ನು ಇಂದು ಲೋಕಾರ್ಪಣೆಗೊಳಿಸಿದೆ.

    Adichunchanagiri Sri

    ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದೆ. ಅಮ್ಲಜನಕ ಘಟಕವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ವರ್ಚುಯಲ್ ಮೂಲಕ ಉದ್ಘಾಟಿಸಿದರು.

    ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಇರುವ ಎಐಎಂಎಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಈ ಘಟಕ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

    adichunchanagiri 1 1 medium

    ಆಮ್ಲಜನಕ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರೀಗಳು ಕುದುರೆಮುಖ ಕಬ್ಬಿಣದ ಅದಿರು ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೇ ತಮ್ಮ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರನ್ನು ಒಳಗೊಂಡಂತೆ ವಿಶೇಷ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಆಮ್ಲಜನಕ ಉತ್ಪಾದನಾ ಘಟಕದ ಅಗತ್ಯದ ಬಗ್ಗೆ ಶಿಫಾರಸು ಮಾಡಿತ್ತು. ಅದರನ್ವಯ ಉಪಕರಣಗಳನ್ನು ಯುರೋಪ್‍ನಿಂದ ಆಮದು ಮಾಡಿಕೊಂಡು ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇದನ್ನೂ ಓದಿ:ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಬೇಕು, ಮೂರನೇ ಅಲೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕು: ರಾಮಲಿಂಗಾ ರೆಡ್ಡಿ

    ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಈ ಘಟಕ ಒಂದು ನಿಮಿಷಕ್ಕೆ 700 ಲೀಟರ್ ಅನಿಲ ರೂಪದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 143 ಸಿಲಿಂಡರ್ ಹೊಂದಿರುವ ಆಮ್ಲಜನಕ ಸಾಮರ್ಥ್ಯಕ್ಕೆ ಇದು ಸಮವಾಗಿದೆ. ಇದರಿಂದ ಏಕಕಾಲಕ್ಕೆ 150 ಆಮ್ಲಜನಕ ಅವಲಂಬಿತ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೆಐಒಸಿ ಲಿಮಿಟೆಡ್ ಮುಖ್ಯಸ್ಥರು ಹಾಗೂ ಮಠದ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಸರ್ಕಾರದ ಅಕ್ರಮಗಳನ್ನು ಚರ್ಚೆ ಮಾಡಲು ಅಧಿವೇಶನ ಕರೆಯಿರಿ – ಎಚ್‍ಡಿಕೆ ಸವಾಲ್

  • ಕೊರೊನಾ ಎಫೆಕ್ಟ್- ಆದಿಚುಂಚನಗಿರಿಯ ಜಾನಪದ ಕಲಾಮೇಳ ರದ್ದು

    ಕೊರೊನಾ ಎಫೆಕ್ಟ್- ಆದಿಚುಂಚನಗಿರಿಯ ಜಾನಪದ ಕಲಾಮೇಳ ರದ್ದು

    ಮಂಡ್ಯ: ಕೊರೊನಾ ವೈರಸ್ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ರದ್ದು ಮಾಡಲಾಗಿದೆ.

    CORONA 1 2

    ಈ ಕುರಿತು ಆದಿಚುಂಚನಗಿರಿ ಮಠದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಜನಪದ ಕಲೆ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮೇಳವನ್ನು ಏರ್ಪಡಿಸುತ್ತಿತ್ತು. ಆದರೆ ಕೊರೊನಾ ವೈರಸ್ ಹಾವಳಿ ಹಿನ್ನೆಲೆ ಈ ಬಾರಿ ಜಾನಪದ ಕಲಾಮೇಳವನ್ನು ರದ್ದು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    CORONA VIRUS 1 2

    ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 23, 24 ಮತ್ತು 25 ಮೂರು ದಿನಗಳ ಕಾಲ ಈ ಕಲಾಮೇಳವನ್ನು ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ರಾಜ್ಯಾದ್ಯಂತ ಆಗಮಿಸುವ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ಪಾಲ್ಗೊಳ್ಳುತ್ತಿದ್ದರು. ಈ ಮೂಲಕ ಅದ್ಧೂರಿಯಾಗಿ ಜಾನಪದ ಉತ್ಸವ ನಡೆಯುತ್ತಿತ್ತು. ಈ ವರ್ಷ ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಹರಡಿ ಜನರ ಆರೋಗ್ಯವನ್ನು ಕಾಡುತ್ತಿದೆ. ಹೀಗಾಗಿ ಜನರ ಆರೋಗ್ಯವನ್ನು ರಕ್ಷಿಸುವ ದೃಷ್ಟಿಯಿಂದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬೇಕಿದ್ದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಈ ವರ್ಷ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

  • ಕೊರೊನಾ ಭೀತಿ – ಮಂತ್ರಾಲಯ, ಆದಿಚುಂಚನಗಿರಿ, ನಂಜನಗೂಡು ಬಂದ್

    ಕೊರೊನಾ ಭೀತಿ – ಮಂತ್ರಾಲಯ, ಆದಿಚುಂಚನಗಿರಿ, ನಂಜನಗೂಡು ಬಂದ್

    ರಾಯಚೂರು/ಮೈಸೂರು/ಬೆಂಗಳೂರು: ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯ, ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯದಲ್ಲಿ ಭಕ್ತರ ದರ್ಶನ ಬಂದ್ ಆಗಿದೆ. ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. 11 ವರ್ಷಗಳ ಬಳಿಕ ಮತ್ತೆ ಇಂದಿನಿಂದ ರಾಯರ ದರ್ಶನ ಭಕ್ತರಿಗೆ ಲಭ್ಯವಿಲ್ಲ. ಕೊರೊನಾ ಭೀತಿ ಮುಗಿಯುವರೆಗೂ ಮಂತ್ರಾಲಯಕ್ಕೆ ಬರಬೇಡಿ ಎಂದು ಶ್ರೀಮಠದ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ. ಇಂದು ಗುರುವಾರ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಭಾರೀ ನಿರಾಸೆಯಾಗಿದ್ದು, ಶ್ರೀಮಠದ ಒಳಗಡೆ ರಾಯರಿಗೆ ಎಂದಿನಂತೆ ಪೂಜೆ-ಪುರಸ್ಕಾರ ನಡೆಯಲಿವೆ. ಆದರೆ ಭಕ್ತರಿಗೆ ಮಾತ್ರ ದರ್ಶನ ರದ್ದು ಮಾಡಿ ಎಂದು ಶ್ರೀಮಠ ಸೂಚನೆ ನೀಡಿದೆ.

    temples close 1

    ಇನ್ನೂ ಮಾಧ್ಯಮ ಪ್ರಕಟಣೆಯಲ್ಲಿ ಆದಿಚುಂಚನಗಿರಿ ಮಠ ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾದ್ಯಂತ ಹರಡಿರುವ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರುಗಳು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಕ್ತಾದಿಗಳಲ್ಲಿ ತಿಳಿಸಿದ್ದಾರೆ. ಇದಕ್ಕೆ ತಾವುಗಳು ಸಹಕರಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    temples close 3 e1584590732478

    ಇತ್ತ ಕೊರೊನಾ ಎಫೆಕ್ಟ್ ನಿಂದಾಗಿ ಇಂದಿನಿಂದ ನಂಜನಗೂಡಿನ ಶ್ರೀ ನಂಜುಡೇಶ್ವರನ ದರ್ಶನ ಭಕ್ತರಿಗೆ ಇಲ್ಲ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಆಗಿದೆ. ದೇವಾಲಯಕ್ಕೆ ಇಂದಿನಿಂದ ಭಕ್ತಾದಿಗಳ ಪ್ರವೇಶ ನಿಷೇಧವಿದ್ದು ದೇವಾಲಯದ ಮುಂಬಾಗಿಲು ಮುಚ್ಚಲಾಗಿದೆ. ಮಾರ್ಚ್ 31ರವರೆಗೆ ದೇವಾಲಯ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ಇಲ್ಲ ಎಂದು ನೋಟಿಸ್ ಆಂಟಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆದಿವೆ.

    temples close 2

    ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಿನೇ ದಿನೇ ಕಿಲ್ಲರ್ ಕೊರೊನಾ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ರಜೆ ಘೋಷಣೆ ಮಾಡಿದೆ. ಕೊರೋನಾದಿಂದ ಆಗುವ ಅನಾಹುತಗಳನ್ನ ತಪ್ಪಿಸಲು ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದೇ ತಿಂಗಳ 31ರ ತನಕ ಪೊಲೀಸ್ ತರಬೇತಿ ಶಾಲೆಗೆ ರಜೆ ಘೋಷಣೆ ಮಾಡಿ ತರಬೇತಿ ವಿಭಾಗದ ಐಜಿಪಿ ಬುಧವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ತರಬೇತಿ ಶಾಲೆಗಳಲ್ಲಿ ಪೇದೆಗಳು, ಸಬ್‍ಇನ್ಸಪೆಕ್ಟರ್ ಅಭ್ಯರ್ಥಿಗಳು ಶಿಕ್ಷಣ ನೀಡುತ್ತಾರೆ.

  • ನಾನು ಪ್ರಮಾಣ ವಚನ ಸ್ವೀಕರಿಸಿದಾಗಿಂದ್ಲೂ ಉತ್ತಮ ಮಳೆಯಾಗುತ್ತಿದೆ- ಎಚ್‍ಡಿಕೆ

    ನಾನು ಪ್ರಮಾಣ ವಚನ ಸ್ವೀಕರಿಸಿದಾಗಿಂದ್ಲೂ ಉತ್ತಮ ಮಳೆಯಾಗುತ್ತಿದೆ- ಎಚ್‍ಡಿಕೆ

    ಮಂಡ್ಯ: ಜಯನಗರ ಚುನಾವಣೆಯ ಈ ಫಲಿತಾಂಶ ಮೊದಲೇ ನಿರೀಕ್ಷೆ ಇತ್ತು. ಬಿಜೆಪಿಯವರು ಸಮ್ಮಿಶ್ರ ಸರ್ಕಾರಕ್ಕೆ ಜನಬೆಂಬಲವಿಲ್ಲ ಅಂತಾ ಅಪಪ್ರಚಾರ ಮಾಡುತ್ತಿದ್ರು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಇಲ್ಲಿನ ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು, ಜನರು ಸಮ್ಮಿಶ್ರ ಸರ್ಕಾರವನ್ನು ಒಪ್ಪಿದ್ದಾರೆಂಬುದನ್ನ ಜಯನಗರ ಫಲಿಶಾಂಶ ತೋರಿಸುತ್ತಿದೆ. ಇದೇ ವೇಳೆ ಅಮಾವಾಸ್ಯೆ ಪೂಜೆ ಬಗ್ಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ನಾನು ಪ್ರಮಾಣ ವಚನ ಸ್ವೀಕಾರ ಮಾಡಿದಾಗಲಿಂದ ಉತ್ತಮ ಮಳೆಯಾಗುತ್ತಿದೆ. ಹಲವಾರು ತಿಂಗಳಿಂದ ಅಮಾವಾಸ್ಯೆ ಪೂಜೆಗೆ ಬಂದು ದರ್ಶನ ಪಡೆದು ಹೋಗುತ್ತಿದ್ದೇನೆ. ಪರಮಪೂಜ್ಯ ಸಾಮೀಜಿಯವರೇ ಪೂಜೆಯ ಕಾರ್ಯ ನಡೆಸುತ್ತಾರೆ. ಈ ರೀತಿಯ ವಿಶೇಷ ಪೂಜೆ ಬೇರೆ ಕಡೆ ನೋಡಲು ಸಾಧ್ಯವಿಲ್ಲ ಅಂದ್ರು.

    ರಾಜ್ಯದಲ್ಲಿ ಎಲ್ಲ ಕಡೆ ಉತ್ತಮ ಮಳೆಯಾಗಲು ದೇವರ ಮೇಲಿನ ನಂಬಿಕೆಯ ಶಕ್ತಿ ಕಾರಣ. ಮುಂಗಾರು ಬೆಳೆಗೆ ಇನ್ನೂ ಒಳ್ಳೆ ಮಳೆಯಾದ್ರೆ ನಾನೇ ಮಂಡ್ಯದಲ್ಲಿ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಾನು ಸಿಎಂ ಆಗಲು ಕಾಂಗ್ರೆಸ್ ಬೆಂಬಲ ನೀಡಲು ಕಾಲಭೈರವೇಶ್ವರ ಪ್ರೇರಣೆ ಎಂಬುದು ನನ್ನ ಭಾವನೆ ಅಂದ್ರು.

    ಸಾಲಮನ್ನಾ ವಿಷಯದಲ್ಲಿ ಯಾವ ಆತಂಕ ಬೇಡ. ನನ್ನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಮಾಡಿಕೊಂಡ್ರೆ ನನ್ನ ಕೆಲಸ ಮಾಡುವ ಸಾಮರ್ಥ್ಯ ಕುಗ್ಗುತ್ತೆ. ಬಜೆಟ್ ನಲ್ಲಿ ಯಾವ ರೀತಿ ಸಾಲಮನ್ನ ಮಾಡುತ್ತೇನೆ ಎಂದು ಹೇಳುತ್ತೇನೆ ಅಂತಾ ಭರವಸೆ ನೀಡಿದ್ರು.

    ಮೋದಿಗೆ ತಿರುಗೇಟು: ನನಗೆ ನನ್ನ ವೈಯಕ್ತಿಕ ಫಿಟ್ನೆಸ್ ಗಿಂತ ಅಭಿವೃದ್ಧಿ ಫಿಟ್ನೆಸ್ ಮುಖ್ಯ. ಅಭಿವೃದ್ಧಿ ಫಿಟ್ನೆಸ್ನಲ್ಲಿ ಮೋದಿಗಿಂತ ಮುಂದಿದ್ದೇನೆ. ಈ ವಿಚಾರದಲ್ಲಿ ವಿಚಾರದಲ್ಲಿ ಮೋದಿಯಿಂದ ಪಾಠಕಲಿಯುವ ಅವಶ್ಯಕತೆಯಿಲ್ಲ ಎಂದು ತಿರುಗೇಟು ನೀಡಿದ್ರು.

  • ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಂತರ ಇದೀಗ ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ ಹಾಗೂ ಬಾಲಕೃಷ್ಣ ಆದಿಚುಂಚನಗಿರಿ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    mnd pooje 2

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಜೆಡಿಎಸ್ ಬಂಡಾಯ ಶಾಸಕರು, ಮೊದಲು ಹೋಮದಲ್ಲಿ ಪಾಲ್ಗೊಂಡ್ರು. ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮುಂದೆ ನಿಂತು ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ರೇವಣ್ಣ ದಂಪತಿ ಆಗಮಿಸಿ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.

    mnd pooje 4

    ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಸತತ ಮೂರು ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂಬ ಪ್ರಬಲವಾದ ನಂಬಿಕೆಯಿದೆ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮೂವರು ಪ್ರತ್ಯೇಕವಾಗಿ ಪತ್ನಿ ಸಮೇತರಾಗಿ ಆಗಮಿಸಿ ಮೂರು ಅಮವಾಸ್ಯೆ ಪೂಜೆ ನೆರವೇರಿಸಿದ್ರು. ರಾಜ್ಯದ ಜನರಿಗೆ ಒಳಿತಾಗಲಿ, ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಕಾಲಭೈರವೇಶ್ವರ ಸ್ವಾಮಿಯಲ್ಲಿ ಕೇಳಿಕೊಂಡಿದ್ರು. ಇದೀಗ ಬಂಡಾಯ ಶಾಸಕರು ತಮ್ಮ ಪತ್ನಿ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

    mnd pooje 6

    ಈ ಹಿಂದೆ ನಾನು ಜೆಡಿಎಸ್ ಪಕ್ಷಕ್ಕೆ, ವರಿಷ್ಠರಿಗೆ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಮುಂದೊಂದು ದಿನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಕೂಡ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದ್ರು. ಹೀಗಾಗಿ ಪೂಜೆ ನಂತ್ರ ಚಲುವರಾಯಸ್ವಾಮಿ ಪ್ರಮಾಣ ಮಾಡುತ್ತಾರಾ ಎಂಬ ಕುತೂಹಲವೂ ಮೂಡಿದ್ದು, ಬಂಡಾಯ ಶಾಸಕರ ಪೂಜೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

    mnd

    mnd pooje 7

     

    mnd pooje 12

    mnd pooje 11

    mnd pooje 10

    mnd pooje 9

    mnd pooje 5

    mnd pooje 3