Tag: ಅರೆಸ್ಟ್

  • ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ನವದೆಹಲಿ: ಸ್ಥಳೀಯ ಬಿಜೆಪಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ರಾಜು ಕುಮಾರ್ ಅಲಿಯಾಸ್ ರಾಜು ಪೆಹಲ್ವಾನ್ (33) ಬಂಧಿತ ಆಟಗಾರ. ಆರೋಪಿ ರಾಜುನನ್ನು ಬುಧವಾರ ಪೊಲೀಸರು ದೆಹಲಿಯ ಹೊರವಲದ ಸಿರಾಸ್ಪುರ್‍ದಲ್ಲಿ ಬಂಧಿಸಿದ್ದಾರೆ.

    ಘಾಜಿಯಬಾದ್ ಖೋಡಾ ಕಾಲೋನಿ ಬಳಿ ಸೆಪ್ಟಂಬರ್ 2 ರಂದು ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಬಿಜೆಪಿ ನಾಯಕ ಗಂಜೇಂದ್ರ ಭಾಟಿ ಅವರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಭಾಟಿ ಅವರ ಸಹಾಯಕ ಬಲ್ಬೀರ್ ಸಿಂಗ್ ಚೌಹಾಣ್ ಗಾಯಗೊಂಡಿದ್ದರು.

    ಉತ್ತರ ಪ್ರದೇಶ ಪೊಲೀಸರು ಸೆಪ್ಟಂಬರ್ 11 ರಂದು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ನರೇಂದರ್ ಅಲಿಯಾಸ್ ಫೌಜಿಯನ್ನು ಅರೆಸ್ಟ್ ಮಾಡಿದ್ದರು. ಆತನ ವಿಚಾರಣೆ ವೇಳೆ ಈ ಕೃತ್ಯದಲ್ಲಿ ರಾಜು ಪೆಹಲ್ವಾನ್ ಕೂಡ ಭಾಗಿಯಾಗಿದ್ದಾನೆ ಎಂದು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ರಾಜು ಪೆಹಲ್ವಾನ್ ಸಿರಾಸ್ಪುರ್‍ದಲ್ಲಿ ಇರುವ ಮಾಹಿತಿ ತಿಳಿದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಒಂದು ತಂಡವನ್ನು ರಚನೆ ಮಾಡಿಕೊಂಡರು. ಆರೋಪಿ ರಾಜು ಬೇರೆ ಸ್ಥಳಕ್ಕೆ ನಾಪತ್ತೆಯಾಗಲು ಜಿಟಿ ಕಾರ್ನಾಲ್ ರಸ್ತೆ ಸಮೀಪದ ಸಿರಾಸ್ಪುರ್‍ದ ಗುರುದ್ವಾರದ ಬಸ್ ನಿಲ್ದಾಣದಲ್ಲಿ ನಿಂತಿದ್ದನು. ಪೊಲೀಸರು ಹಿಡಿಯಲು ಮುಂದಾಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಕೊನೆಗೆ ಪೊಲೀಸರು ರಾಜುವನ್ನು ಸೆರೆ ಹಿಡಿದಿದ್ದಾರೆ.

    ಕೊಲೆ ಕೃತ್ಯ ಎಸಗಲು ಇಬರಿಬ್ಬರು ಮುಂಗಡವಾಗಿ 10 ಲಕ್ಷ ಮತ್ತು 50 ಸಾವಿರ ರೂ. ಹಣವನ್ನು ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.

    2013 ರಲ್ಲಿ ನಮ್ಮ ವಾಹನಗಳು ಗ್ರೇಟರ್ ನೋಯ್ಡಾದ ಬಳಿ ಡಿಕ್ಕಿ ಹೊಡೆದ ಬಳಿಕ ಭಾಟಿ ನಮ್ಮ ಮೇಲೆ ದಾಳಿ ನಡೆಸಿದ್ದರು. ನಂತರ 2015 ರಲ್ಲಿ ಭಾಟಿ ಬಲವಂತವಾಗಿ ರಾಜಿ ಮಾಡಿಸಿದ್ದರು. ಆದರೆ ಅವರು ಬೆದರಿಕೆ ಹಾಕಿ ಕ್ರೀಡಾ ಆವರಣದಲ್ಲಿ ಗುಂಡು ಹಾರಿಸಿದ್ದರು. ನಾನು ಪೊಲೀಸರಿಗೆ ದೂರು ನೀಡಲು ಹೋದಾಗ ಆ ಪ್ರದೇಶದಲ್ಲಿ ಅವರು ಪ್ರಭಾವಿ ವ್ಯಕ್ತಿಯಾದ್ದರಿಂದ ಯಾರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ವಿಚಾರಣೆಯ ವೇಳೆಯಲ್ಲಿ ಬಂಧಿತ ರಾಜು ಹೇಳಿದ್ದಾನೆ.

    ಕೊನೆಗೆ ರಾಜು ಭಾಟಿ ಅವರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಫೌಜಿಯ ಜೊತೆ ಸಂಪರ್ಕದಲ್ಲಿದ್ದು, ಲೋನಿ ನಗರದ ಭೂಪ್ಖೇರಿ ಗ್ರಾಮದ ಮುಖೇಶ್ ಹಾಗೂ ರಾಜಕೀಯ ವೈರತ್ವ ಹೊಂದಿದ್ದ ಶರ್ಮಾ ಅವರು ಇವರ ಜೊತೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ನಗರದ ಇಬ್ಬರು ಉದ್ಯಮಿಗಳಾದ ಸೂರಜ್ ಮತ್ತು ಪರ್ಮೋಡಾ ಅವರ ಹತ್ತಿರ ಭಾಟಿಯನ್ನು ಕೊಲ್ಲಲು 8 ಲಕ್ಷ ರೂ. ಹಣವನ್ನು ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜು ಪೆಹಲ್ವಾನ್ ವಿವಿಧ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಆಟವಾಡಿದ್ದಾನೆ. 2005 ಮತ್ತು 2009 ರಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಪ್ರತಿನಿಧಿಸಿದ್ದ ಜೊತೆಗೆ ಭಾರತದ ಕಬಡ್ಡಿ ತಂಡದಲ್ಲೂ ಸ್ಥಾನವನ್ನು ಪಡೆದಿದ್ದ.

  • ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಥೈಲ್ಯಾಂಡ್: 11 ಜನರನ್ನು ಮದುವೆಯಾಗಿ ಯಾಮಾರಿಸಿ ಅವರ ಹಣದೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, 32 ವರ್ಷದ ಜರಿಯಪೋರ್ನ್ ನುಯಾಯ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯನ್ನು ಸೆ.7ರಂದು ಥಾಯ್ಲೆಂಡ್ ಪೊಲೀಸರು ನಖೋನ್ ಪಾಥೊಮ್ ಪ್ರಾಂತ್ಯದ ಸ್ಯಾಮ್ ಫ್ರಾನ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಥೈಲ್ಯಾಂಡ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಪ್ರತಿ ಪುರುಷ ಭಾವಿ ಪತ್ನಿಗೆ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಈಕೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಡಾಲರ್ (38 ಸಾವಿರದಿಂದ- 1.9 ಲಕ್ಷ ರೂ.) ವಧುದಕ್ಷಿಣೆ ಪಡೆದು ಪರಾರಿಯಾಗಿದ್ದಳು.

    THILAND

    ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಆ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾಳೆ. ಆ ನಂತ್ರ ಆತನನ್ನು ಮದುವೆಯಾಗುತ್ತಾಳೆ. ಆ ಬಳಿಕ ವಧು ದಕ್ಷಿಣೆಯೊಂದಿಗೆ ಅಲ್ಲಿಂದ ಕಾಲ್ಕೀಳುತ್ತಾಳೆ.

    ಈಕೆಯ ಚಾಣಾಕ್ಷತನ ಎಷ್ಟಿದೆ ಅಂದ್ರೆ ಅಗಸ್ಟ್ ಒಂದೇ ತಿಂಗಳಿನಲ್ಲಿ ಈಕೆ ನಾಲ್ವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ 11 ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ಇಲ್ಲಿನ ಸ್ಥಳೀಯ ಪತ್ರಿಕೆ ತಿಳಿಸಿದ್ದಾರೆ. ಇದೇ ರೀತಿ ಮೋಸ ಹೋದ ವ್ಯಕ್ತಿಯೊಬ್ಬರು ಈಕೆಯ ಬಗ್ಗೆ ಎಚ್ಚರವಾಗಿರಿ ಎಂದು ಫೇಸ್‍ಬುಕ್ ಪೋಸ್ಟ್ ಹಾಕುವವರೆಗೆ ಮೋಸ ಹೋದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪೋಸ್ಟ್ ನೋಡಿದ ನಂತರ ಪೊಲೀಸರ ಬಳಿ ಹೋಗಿ ಹೇಗೆ ಮೋಸ ಹೋದ್ರು ಅನ್ನೋದನ್ನ ಹೇಳಿಕೊಂಡಿದ್ದಾರೆ.

    ಕಳೆದ ಎರಡು ವರ್ಷದಿಂದ ಈಕೆಯ ವಿರುದ್ಧ 4 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು.

    ಸದ್ಯ ಮೋಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿ ಕಿಮಿನಲ್ ಕೋಡ್‍ನ ಸೆಕ್ಷನ್ 342 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    THILAND 3

    THILAND 5

    THILAND 2

    THILAND 6

  • ದುರುಗುಟ್ಟಿ ನೋಡಿದ ನೆರೆ ಮನೆಯ ಯುವತಿಗೆ ಪಾಠ ಕಲಿಸಲು ಆ್ಯಸಿಡ್ ಹಾಕ್ದ!

    ದುರುಗುಟ್ಟಿ ನೋಡಿದ ನೆರೆ ಮನೆಯ ಯುವತಿಗೆ ಪಾಠ ಕಲಿಸಲು ಆ್ಯಸಿಡ್ ಹಾಕ್ದ!

    ಮುಂಬೈ: ದುರುಗುಟ್ಟಿ ನೋಡಿದ್ದಕ್ಕೆ ಯುವಕನೊಬ್ಬ ನೆರೆ ಮನೆಯ ಯುವತಿಗೆ ಆ್ಯಸಿಡ್ ಹಾಕಿರುವ ಘಟನೆ ಮುಂಬೈನ ದಷೀರ್‍ನಲ್ಲಿ ನಡೆದಿದೆ.

    ಹೇಮಂತ್(25) ಆ್ಯಸಿಡ್ ಎರಚಿದ ಆರೋಪಿ. ಗುರುವಾರ ಈ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    ಗುರುವಾರ ರಾತ್ರಿ 10.45ರ ವೇಳೆ ರಾಮನಗರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಯುವತಿ ತೆರಳುತ್ತಿದ್ದಾಗ ಆಕೆಯನ್ನು ಹೇಮಂತ್ ಹಿಂಬಾಲಿಸಿ ಆ್ಯಸಿಡ್ ಹಾಕಿದ್ದಾನೆ. ಶೌಚಾಲಯ ಸ್ವಚ್ಚಗೊಳಿಸುವ ಪುಡಿಯನ್ನು ಹಾಗೂ ನೀರನ್ನ ಬಳಸಿ ಯುವತಿ ಮೇಲೆ ಎರಚಿದ್ದಾನೆ. ದಾಳಿಯಲ್ಲಿ ಯುವತಿ ಮುಖ ಮತ್ತು ತುಟಿಗಳು ಸಂಪೂರ್ಣ ಸುಟ್ಟು ಹೋಗಿದೆ.

    ಯುವತಿ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಗಾಯಗೊಂಡ ಯುವತಿಯನ್ನ ಹತ್ತಿರದ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆರೋಪಿ ಹೇಮಂತ್ ನಿರುದ್ಯೋಗಿಯಾಗಿದ್ದು ತನ್ನ ತಾಯಿ ಹಾಗೂ ತಂಗಿ ಜೊತೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಯುವಕನನ್ನು ಕೋರ್ಟ್ ಗೆ ಹಾಜರು ಪಡಿಸಿದ್ದು, ಕೋರ್ಟ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

    ವಿಚಾರಣೆ ವೇಳೆ ನನ್ನನ್ನು ಆಕೆ ಯಾವಾಗಲೂ ನನ್ನನ್ನು ಕೋಪ ಮತ್ತು ದ್ವೇಷದಿಂದ ದುರುಗುಟ್ಟಿ ನೋಡುತ್ತಿದ್ದಳು. ಇದಕ್ಕೆ ಆಕೆಗೆ ಪಾಠ ಕಲಿಸಲು ಈ ಕೃತ್ಯ ಎಸಗಿದ್ದೇನೆ ಎಂಬುದಾಗಿ ಹೇಮಂತ್ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಡ್ರಾಪ್ ನೆಪದಲ್ಲಿ ಅಜ್ಜಿಯರಿಗೆ ಲೈಂಗಿಕ ಕಿರುಕುಳ- ವಿಜಯಪುರದಲ್ಲಿ ಕಾಮುಕ ಅರೆಸ್ಟ್

    ಡ್ರಾಪ್ ನೆಪದಲ್ಲಿ ಅಜ್ಜಿಯರಿಗೆ ಲೈಂಗಿಕ ಕಿರುಕುಳ- ವಿಜಯಪುರದಲ್ಲಿ ಕಾಮುಕ ಅರೆಸ್ಟ್

    ವಿಜಯಪುರ: ವಿಕೃತ ಕಾಮಿ ಉಮೇಶ್ ರೆಡ್ಡಿ ಮೀರಿಸುವ ಕಾಮುಕನೊಬ್ಬ ವಿಜಯಪುರ ಪೊಲೀಸರ ಅತಿಥಿಯಾಗಿದ್ದಾನೆ.

    ವಿಜಯಪುರದ ಜುಮ್ನಾಳ ಗ್ರಾಮದ ನಿವಾಸಿಯಾದ ಅಶೋಕ ನಾಯ್ಕೊಡಿ(43) ಬಂಧಿತ ವಿಕೃತ ಕಾಮಿ. ಈತ ವಿಜಯಪುರದ ಮನಗೂಳಿ ಗ್ರಾಮದ ಹತ್ತಿರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಅಶೋಕನ ಟಾರ್ಗೆಟ್ ಹೆಚ್ಚು ವೃದ್ಧೆಯರೇ ಅಗಿದ್ದು, ಚಿನ್ನಾಭರಣ ಧರಿಸಿದ ಮಹಿಳೆಯರನ್ನು ಕೂಡ ಈತ ಬಿಡುತ್ತಿರಲಿಲ್ಲ. ವೃದ್ಧೆಯರು ಕಂಡರೆ ಸಾಕು ಡ್ರಾಪ್ ಕೊಡೋ ನೆಪದಲ್ಲಿ ತನ್ನ ಕಾರ್ ನಲ್ಲಿ ಕೊಂಡೊಯ್ದು ಅತ್ಯಾಚಾರ ಎಸಗಿ, ಚಿನ್ನಾಭರಣ ದೋಚುವುದೇ ಇವನ ಕಸುಬಾಗಿತ್ತು.

    BIJ ARREST

    ಇದೇ ರೀತಿ ಅಶೋಕ ವಿಜಯಪುರ ಜಿಲ್ಲೆಯಲ್ಲಿಯೇ ಸುಮಾರು 32ಕ್ಕೂ ಹೆಚ್ಚು ಆತ್ಯಾಚಾರವೆಸಗಿದ್ದಾನೆ. ಈತನ ವಿರುದ್ಧ ವಿಜಯಪುರ ಜಿಲ್ಲೆಯ ಮನಗೂಳಿ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಬಗ್ಗೆ ಪ್ರಕರಣಗಳು ದಾಖಲಾಗಿವೆ.

    ಕಾಮುಕ ಅಶೋಕಗೆ ಜೂಜಾಟದ ಹುಚ್ಚಿದ್ದು, ದುಡ್ಡು ಖಾಲಿ ಆಗುತ್ತಿದ್ದಂತೆ ಈ ರೀತಿ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಇಂದು ಅತ್ಯಾಚಾರಕ್ಕೆ ಯತ್ನಿಸಿ ರೆಡ್ ಹ್ಯಾಂಡ್ ಆಗಿ ಮನಗೂಳಿ ಗ್ರಾಮದ ಬಳಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಅಶೋಕನನ್ನು ವಶಕ್ಕೆ ಪಡೆದ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

  • ಬೈಕ್‍ನಲ್ಲಿ ಬಂದು ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗ್ತಿದ್ದ ಕಾಮುಕ ಟೆಕ್ಕಿ ಅರೆಸ್ಟ್!

    ಬೈಕ್‍ನಲ್ಲಿ ಬಂದು ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗ್ತಿದ್ದ ಕಾಮುಕ ಟೆಕ್ಕಿ ಅರೆಸ್ಟ್!

    ಬೆಂಗಳೂರು: ರಸ್ತೆಯಲ್ಲಿ ನಿಂತಿರುವ ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗುತ್ತಿದ್ದ ಕಾಮುಕನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ನಗರದ ಶ್ರೀಗಂಧಕಾವಲು ನಿವಾಸಿ ವಿನೀತ್ ಬಂಧಿತ ಆರೋಪಿ. ವಿನೀತ್ ಬೈಕ್ ನಲ್ಲಿ ವೇಗವಾಗಿ ಬಂದು ರಸ್ತೆಯ ಪಕ್ಕ ನಿಂತಿರುವ ಹುಡುಗಿಯರನ್ನು ಹಿಂಬದಿಯಿಂದ ಮುಟ್ಟಿ ಪರಾರಿಯಾಗುತ್ತಿದ್ದ. ವಿನೀತ್ ಬಿಇ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಹಿಂಭಾಗಕ್ಕೆ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟ ಕಾಮುಕ! 

    ಏಪ್ರಿಲ್ 10 ರಂದು ನಾಗರಭಾವಿ ಸರ್ಕಲ್ ಬಳಿ ಯುವತಿಯೊಬ್ಬರು ಊಟದ ಪಾರ್ಸೆಲ್‍ಗಾಗಿ ಕಾಯುತ್ತಾ ರಸ್ತೆಯ ಬದಿ ನಿಂತಿದ್ರು. ಈ ವೇಳೆ ಬೈಕ್‍ನಲ್ಲಿ ಬಂದ ವಿನೀತ್ ಯುವತಿಯ ಹಿಂಭಾಗ ಮುಟ್ಟಿ ಪರಾರಿಯಾಗಿದ್ದ. ಇದ್ರಿಂದ ಭಯಭೀತಳಾದ ಯುವತಿ ಪ್ರಾಂಶುಪಾಲರ ಜೊತೆ ಬಂದು ಮೇ 3ರಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    chandralayout

    ಇದನ್ನೂ ಓದಿ: 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಂದು, ಮನೆಯಲ್ಲೇ ಮೃತದೇಹ ಬಚ್ಚಿಟ್ಟಿದ್ದ ಕಾಮುಕ 

    ಡ್ಯೂಟಿ ಬಳಿಕ ಹುಡುಗಿಯರನ್ನ ಚೇಡಿಸುತ್ತಿದ್ದ: ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ವಿನೀತ್ ತನ್ನ ಕೆಲಸ ಮುಗಿದ ಮೇಲೆ ರಸ್ತೆಯಲ್ಲಿ ಹೋಗುವ ಯುವತಿಯರನ್ನು ಚುಡಾಯಿಸುತ್ತಿದ್ದ ಹಾಗು ಜನಸಂದಂಣಿಯಿರುವ ಬಸ್‍ಗಳಲ್ಲಿ ಹತ್ತಿ ತನ್ನ ಲೈಂಗಿಕ ಆಸಕ್ತಿಯನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

    ಮೇ 3ರಂದು ದಾಖಲಾದ ದೂರಿನ್ವಯ ಚಂದ್ರಾಲೇಔಟ್ ಪೊಲೀಸರು ನಾಗರಭಾವಿ ಬಳಿಯ ಸಿಸಿಟಿವಿ ಪರಿಶೀಲನೆ ನಡೆಸಿ, ಕಾಮುಕ ವಿನೀತ್‍ನನ್ನು ಬಂಧಿಸಿದ್ದಾರೆ. ವಿನೀತ್ ವಿರುದ್ಧ ಐಪಿಸಿ ಸೆಕ್ಷನ್ 354, ಲೈಂಗಿಕ ಕಿರಿಕುಳ ಆರೊಪದಡಿ ದೂರು ದಾಖಲಿಸಿ ನ್ಯಾಯಂಗ ಬಂಧನದಲ್ಲಿ ಇರಿಸಲಾಗಿದೆ.

    ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಇದನ್ನೂ ಓದಿ:  ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು 

     

  • ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಹಾಕಿದ್ದ ಮೈಸೂರು ವಿವಿ Rank ಸ್ಟೂಡೆಂಟ್ ಬಂಧನ!

    ಅಶ್ಲೀಲ ವೆಬ್‍ಸೈಟ್‍ಗೆ ವಿದ್ಯಾರ್ಥಿನಿಯರ ಫೋಟೋ ಹಾಕಿದ್ದ ಮೈಸೂರು ವಿವಿ Rank ಸ್ಟೂಡೆಂಟ್ ಬಂಧನ!

    ಮೈಸೂರು: ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಭಾವಚಿತ್ರವನ್ನ ಅಶ್ಲೀಲ ವೆಬ್‍ಸೈಟ್‍ಗೆ ಅಪ್ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಂದು ಜಯಲಕ್ಷೀಪುರಂ ಪೊಲೀಸರು ಬಂಧಿಸಿದ್ದಾರೆ.

    MYS 2 2

    ಜೈಕುಮಾರ್ ಬಂಧಿತ ಆರೋಪಿ. ಈತ ಇದೇ ಕಾಲೇಜಿನಲ್ಲಿ ಪರಿಸರ ಅಧ್ಯಯನ ವಿಭಾಗದ ಕೊನೆ ಸೆಮಿಸ್ಟರ್ ಓದುತ್ತಿದ್ದು, ಪರಿಸರ ವಿಭಾಗದ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಟಾಪರ್ ಆಗಿದ್ದಾನೆ.

    MYS 1 2

    ಇದನ್ನೂ ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

    ಏನಿದು ಪ್ರಕರಣ?: ವಾರದ ಹಿಂದೆ ಲೋಕ್ಯಾಟೋ ಎಂಬ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಲಾಗಿತ್ತು. ಇದರಿಂದಾಗಿ ಈ ವೆಬ್‍ಸೈಟ್ ನೋಡುವ ಕಾಮುಕರು ಈ ನಂಬರ್ ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದರು. ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು? ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರು ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗಮನಕ್ಕೆ ಬಂದಿತ್ತು. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿತ್ತು. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

    fr

    ಈ ಸುದ್ದಿ ಬೆಳಕಿಗೆ ಬಂದಾಗ ವಿದ್ಯಾರ್ಥಿನಿಯರಿಗೆ ಪರಿಚಯ ಇರುವವರೇ ಈ ಕೃತ್ಯವೆಸಗಿದ್ದಾರೆ ಎನ್ನುವ ಶಂಕೆ ಮೂಡಿತ್ತು. ಅಲ್ಲದೇ ವಿದ್ಯಾರ್ಥಿನಿಯರು ಪ್ರಾಧ್ಯಾಪಕರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಪೊಲೀಸರು ಜೈಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಫೋಟೋ ಹಾಗೂ ಫೋನ್ ನಂಬರ್ ಅಪ್‍ಲೋಡ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.