Tag: ಅನ್ನಪೂರ್ಣ ತುಕಾರಾಂ

  • ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ

    ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ

    ಬಳ್ಳಾರಿ: ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ಟೀಂ ವರ್ಕ್ ನಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಕಾಂಗ್ರೆಸ್ (Congress) ವಿಜೇತ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ (Annapurna Tukaram) ಹೇಳಿದರು.ಇದನ್ನೂ ಓದಿ: ಯಡಿಯೂರಪ್ಪ, ಪುತ್ರ ವ್ಯಾಮೋಹದಿಂದ ಬಿಜೆಪಿ ಸೋತಿದೆ: ಯತ್ನಾಳ್‌ ವಾಗ್ದಾಳಿ

    ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸ್ತೇನೆ. ನಮ್ಮ ನಾಯಕರು ನಮಗೆ ಬೆಂಬಲವಾಗಿ ನಿಂತಿದ್ದರು. ಇನ್ನೂ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ಟೀಂ ವರ್ಕ್ ನಮ್ಮ ಗೆಲುವಿಗೆ ಸಹಕಾರಿಯಾಗಿದೆ. ಈ ಬಾರಿ ಜನರ ಶೇಕಡಾವಾರು ಮತದಾನ ಹೆಚ್ಚಾಗಿದೆ. ಅದನ್ನು ನಾನು ಸೇವೆ ಮೂಲಕ ವಾಪಸ್ ಕೊಡುತ್ತೇನೆ. ನನ್ನ ಪತಿ ಸಂಸದರಾಗಿದ್ದಾರೆ. ನಾನು ಶಾಸಕಿಯಾಗಿದ್ದೇನೆ. ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ದಂಪತಿಯಾಗಿದ್ವಿ, ಇದೀಗ ಸಂಸದ, ಶಾಸಕರಾಗಿ ಜನರ ಸೇವೆ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಸದ ತುಕಾರಾಂ ಮಾತನಾಡಿ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ನಾನು ಈ ಮೂಲಕ ಧನ್ಯವಾದ ತಿಳಿಸುತ್ತೇನೆ. ಅವರ ಅಭಿಮಾನ, ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಈ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಸೋತ ಮೇಲೆ ಸಹಜವಾಗಿ ಹಣಬಲ ಎಂದು ಆರೋಪ ಮಾಡುತ್ತಾರೆ. ಆರೋಪ ಮಾಡುವವರು ಮಾಡಲಿ, ನಾವು ಗೆಲ್ಲುತ್ತಲೇ ಇರುತ್ತವೆ. ಜನಾರ್ದನರೆಡ್ಡಿ ಗಂಗಾವತಿಯಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ತೋರಿಸಲಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಸಿಪಿವೈ ಶಾಸಕರಾಗಿರಬಹುದು, ಬಿಜೆಪಿಯಲ್ಲೇ ಇದ್ದಿದ್ರೆ ಲೀಡರ್ ಆಗಿರುತ್ತಿದ್ರು: ಅಶ್ವಥ್ ನಾರಾಯಣ್

  • ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

    ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

    – ಹಣ, ಅಧಿಕಾರ ದುರುಪಯೋಗ ಮಾಡಿದ್ದಾರೆ
    – ಗ್ಯಾರಂಟಿ ಹಣ ಮೂರು ಕ್ಷೇತ್ರಗಳಿಗೆ ಮಾತ್ರ ಹಾಕಿದ್ದಾರೆ

    ಬಳ್ಳಾರಿ: ಸಂಡೂರು (Sandur By Election) ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲುತ್ತೇವೆ ಎಂದು ಅಂದುಕೊಂಡಿರಲಿಲ್ಲಾ ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ಬೇಸರ ವ್ಯಕ್ತಪಡಿಸಿದ್ದಾರೆ.

    ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ (BJP) ಸೋಲನ್ನು ಅನುಭವಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 5 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ ಅಂತ ಇತ್ತು. ಆದರೆ 9 ಸಾವಿರಕ್ಕೂ ಹೆಚ್ಚು ಅಂತರದಿಂದ ಕಾಂಗ್ರೆಸ್‌ಗೆ (Congress) ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೆವಲ್‌ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಂಡೂರು ಸರ್ಕಲ್ ಇನ್ಸ್ಪೆಕ್ಟರ್, ಮಹೇಶ್ ಗೌಡ ಸೇರಿದಂತೆ ಅನೇಕ ಪೊಲೀಸರ ದುರ್ಬಳಕೆ ಆಗಿದೆ. ಸಂಡೂರು ಜನರ 83 ಸಾವಿರ ಮತಗಳು ಬಂಗಾರು ಹನುಮಂತು ಅವರಿಗೆ ಬಂದಿವೆ ಎಂದರು. ಇದನ್ನೂ ಓದಿ: ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು – ಬೈಎಲೆಕ್ಷನ್‌ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

    Bangaru Hanumanthu

    ನಮಗೆ ಇನ್ನೂ 5 ಸಾವಿರ ಮತಗಳು ನಮಗೆ ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ. ಹಣದ ಹೊಳೆ ಹಂಚಿದ್ದಾರೆ. ಅಧಿಕಾರ ದುರುಪಯೋಗ ಆಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಟಿದೆ ನೋಡಿ. 83 ಸಾವಿರ ಮತಗಳು ನಮಗೆ ಬಂದಿವೆ. 30-40 ಸಾವಿರ ಮತಗಳ ಅಂತರದಿಂದ ನಾವು ಸೋತಿಲ್ಲಾ. ನಮಗೆ 5,000 ಮತಗಳು ಬೇಕಿತ್ತು. ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಬಂದಿದೆ. ಅಧಿಕಾರ ದುರುಪಯೋಗ ಮಾಡಲಾಗಿದೆ. ಆಡಳಿತ ಪಕ್ಷ ಇರೋ ಸಮಯದಲ್ಲಿ ಸಹಜವಾಗಿ ಆ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ: ಭರತ್ ಬೊಮ್ಮಾಯಿ

    ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಣಬಲ, ತೋಳಬಲ ಉಪಯೋಗಿಸುವುದು ಸರ್ವೇ ಸಾಮಾನ್ಯ. ಉಪಚುನಾವಣೆ, ಜನರಲ್ ಎಲೆಕ್ಷನ್‌ಗೆ ಹೋಲಿಕೆ ಮಾಡಲು ಆಗಲ್ಲ. ಮೂರು ಕ್ಷೇತ್ರಗಳಲ್ಲಿ ಮತದಾನದ ಮುಂಚೆ ದಿನ ಗೃಹಲಕ್ಷ್ಮೀ ಯೋಜನೆಯ ಹಣ ಹಾಕಿದ್ದರು. ಗ್ಯಾರಂಟಿ ಯೋಜನೆಯ ಹಣ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಾಕದೇ ಕೇವಲ ಮೂರು ಕ್ಷೇತ್ರಗಳಿಗೆ ಹಾಕಿದ್ದರು. ನೂರಾರು ಕೋಟಿ ಹಣ ಚೆಲ್ಲಿದ್ದಾರೆ. 2028ರಲ್ಲಿ ಬಂಗಾರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂಗೆ ಮುಹೂರ್ತ ಇಡ್ತಿದ್ರು, ಈಗ ಯಾರು ಬದಲಾಗ್ತಾರೆ ನೋಡೋಣ – ಬಿವೈವಿಗೆ ಮಧು ಬಂಗಾರಪ್ಪ ತಿರುಗೇಟು