Tag: ಅದಿ ಲೋಕೇಶ್

  • ಸಹನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ನೋಡಿದ್ದೇನೆ: ಆದಿ ಲೋಕೇಶ್

    ಸಹನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ನೋಡಿದ್ದೇನೆ: ಆದಿ ಲೋಕೇಶ್

    ಬೆಂಗಳೂರು: ನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ನಟ ಆದಿ ಲೋಕೇಶ್ ಅವರು ಹೇಳುವ ಮೂಲಕ ಹೊಸ ಬಂಬ್ ಸಿಡಿಸಿದ್ದಾರೆ.

    ಚಂದನವನದ ತಾರೆಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇಂದು ಈ ಬಗ್ಗೆ ಮಾತನಾಡಿರುವ ಆದಿ ಲೋಕೇಶ್ ಅವರು, ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ತೆಗೆದುಕೊಳ್ಳುವ ಯುವನಟರ ಬಗ್ಗೆ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    Adi Lokesh 2

    ಡ್ರಗ್ಸ್ ವಿಚಾರದಲ್ಲಿ ಕೇವಲ ಸ್ಯಾಂಡಲ್‍ವುಡ್ ಅನ್ನು ಟಾರ್ಗೆಟ್ ಮಡೋದು ತಪ್ಪು. ಡ್ರಗ್ಸ್ ಎಲ್ಲಿಂದ ಬರುತ್ತಿದೆ, ಯಾರು ತರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ಕೆಲವರು ಸಣ್ಣಗಾಗಲು, ದಪ್ಪಗಾಗಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ನಾನಂತೂ ಇವತ್ತಿನವರೆಗೂ ಯಾವ ರೇವ್ ಪಾರ್ಟಿಗೆ ಹೋಗಿಲ್ಲ. ನಾನು ಕೆಲ ನೈತಿಕ ನಿಯಮಗಳನ್ನು ಅಳವಡಿಸಿಕೊಂಡು ಜೀವನ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಸಿಕ್ಸ್ ಪ್ಯಾಕ್ ಮಾಡೋಕೆ ಹೋಗಿ ಪ್ರಾಣ ತೆತ್ತ ಬೆಂಗಳೂರು ಯುವಕ

    anika 2

    2001ರಲ್ಲಿ ನಾನು ಚಿತ್ರರಂಗಕ್ಕೆ ಬಂದಿದ್ದು, 100ಕ್ಕೂ ಹೆಚ್ಚಿನ ಸಿನಿಮಾ ಮಾಡಿದ್ದೇನೆ. ಕೆಲ ಯುವ ನಟರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಡ್ರಗ್ಸ್ ತೆಗೆದುಕೊಂಡರೆ ಸ್ಮೆಲ್ ಬರಲ್ಲ, ಅವರದೇ ಲೋಕದಲ್ಲಿ ಇರುತ್ತಾರೆ. ಇದನ್ನು ನಾವು ನೋಡಿದ್ದೇವೆ. ಶೂಟಿಂಗ್ ಸಮಯದಲ್ಲಿ ನನ್ನ ಸಹಾಕಲಾವಿದರು ಡ್ರಗ್ಸ್ ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಎಲ್ಲ ಕಡೆ ಎಲ್ಲ ಬಗೆಯ ವ್ಯವಹಾರಗಳೂ ನಡೆಯುತ್ತವೆ. ಅದಕ್ಕಂತಲೇ ಕೆಲ ಜನರಿದ್ದಾರೆ ಎಂದು ತಿಳಿಸಿದರು.