Tag: ಅತ್ತೆ

  • ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ಲಕ್ನೋ: ತನ್ನ ಸ್ವಂತ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ವ್ಯಕ್ತಿಯೊಬ್ಬ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜುಲೈ 14 ರಂದು ಆಗ್ರಾದ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೇನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. 22 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಕುಸುಮಾ ದೇವಿ ಅವರನ್ನು ಪತಿ ಶಯಂಬಿಹಾರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾನೆ. ನಂತರ ಆಕೆಯನ್ನು ಸಡಿಲಗೊಳಿಸಿ ತನ್ನ ಹಿಂದೆ ಧರಧರನೇ ಎಳೆದುಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಹಾಗೂ ಆತನ ತಾಯಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದು, ಇದೀಗ ನಾಪತ್ತೆಯಾಗಿದ್ದಾರೆ ಎಂದು ಸಿಕಂದರಾ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.

    ಜುಲೈ 14 ರಂದು ಪತಿ ಮತ್ತು ಅತ್ತೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕುಸುಮಾ ದೇವಿ ಅವರು ದೂರು ನೀಡಿದ್ದರು. ಇದೀಗ ಶ್ಯಾಂಬಿಹಾರಿ ಮತ್ತು ಆತನ ತಾಯಿ ಬರ್ಫಾ ದೇವಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು), 342 (ತಪ್ಪಾದ ಬಂಧನ) ಮತ್ತು 354 ((ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿರುವ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ.

    ಸೌಭಾಗ್ಯ ಮೃತ ಮಹಿಳೆಯಾಗಿದ್ದು, ಜುಲೈ 13 ರ ಬುಧವಾರ ಸಂಜೆ 7.30ಕ್ಕೆ ಈ ಘಟನೆ ನಡೆದಿದೆ. ಆರೋಪಿಯನ್ನು 35 ವರ್ಷದ ನಾಗರಾಜ ಎಂದು ಗುರುತಿಸಲಾಗಿದೆ. ಕಳೆದ 6 ವರ್ಷದ ಹಿಂದೆ ನಾಗರಾಜ ಮತ್ತು ಭವ್ಯಶ್ರೀ ವಿವಾಹವಾಗಿದ್ದರು. ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದರಿಂದ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಗಂಡನ ಕಾಟ ತಾಳಲಾರದೇ ಭವ್ಯ ಶ್ರೀ ಸಂಜಯನಗರದಲ್ಲಿರುವ ತನ್ನ ತಾಯಿ ನಿವಾಸಕ್ಕೆ ಬಂದಿದ್ದರು.

    CRIME 2

    ಕಳೆದ ಊರು ವರ್ಷದಿಂದ ತಾಯಿ ಮನೆಯಲ್ಲಿಯೇ ವಾಸವಾಗಿದ್ದ ಭವ್ಯ ಶ್ರೀ ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಸುತ್ತಿದ್ದರು. ಈ ವಿಚಾರ ತಿಳಿದು ಮತ್ತೆ ಪತ್ನಿ ಬೇಕು ಎನಿಸಿ ಕುಡಿದ ಅಮಲಿನಲ್ಲಿ ನಾಗರಾಜ ಜುಲೈ 12ರಂದು ಮಂಗಳವಾರ ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    KILLING CRIME

    ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ನಾಗರಾಜ ಅನ್ನು ವಾಪಸ್ ಕಳುಹಿಸಿದ್ದರು. ಆದರೆ ಬುದ್ಧಿ ಕಲಿಯದ ಆಸಾಮಿ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟು ಆರೋಪಿ ಅತ್ತೆಗೆ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ ಅವರನ್ನು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಬಂದು ನಾಗರಾಜ್ ಏಕಾಏಕಿ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಬೀರವಾಗಿ ಗಾಯಗೊಂಡ ಸೌಭಾಗ್ಯ ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.

    ಇದೀಗ ಘಟನೆ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ನನಗೆ ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಲ್ಲಿ ಯಾರು ಎನ್ನುವುದೇ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ, ಅತ್ತೆ ಮೇಲೆ ಗುಂಡು ಹಾರಿಸಿ ಸಂತ್ರಸ್ತನಂತೆ ನಾಟಕವಾಡಿದ

    ಪತ್ನಿ, ಅತ್ತೆ ಮೇಲೆ ಗುಂಡು ಹಾರಿಸಿ ಸಂತ್ರಸ್ತನಂತೆ ನಾಟಕವಾಡಿದ

    ಮುಂಬೈ: ಹಣದ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯ ಮೇಲೆ ಗುಂಡು ಹಾರಿಸಿ, ಕೊನೆಗೆ ಅನುಮಾನದಿಂದ ತಪ್ಪಿಸಿಕೊಳ್ಳಲು ತನ್ನ ಕೈಗೆ ಗುಂಡು ಹಾರಿಸಿಕೊಂಡು ನಾಟಕವಾಡಿದ ಘಟನೆ ಮಹಾರಾಷ್ಟ್ರದ ಧಾರವಿಯಲ್ಲಿ ನಡೆದಿದೆ.

    ಖಯ್ಯಮ್ಮುದಿನ್ ಸೈಯದ್(32) ಆರೋಪಿ. ಕೆಲ ದಿನಗಳ ಹಿಂದೆ ಈ ಹಣಕ್ಕಾಗಿಯೇ ಪತ್ನಿ ನಜ್ನಿನ್(30) ಜೊತೆ ಜಗಳವಾಡಿದ್ದ. ಆಗ ಆಕೆ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿ ನಜ್ನಿನ್ ಜೊತೆ ಪಿಎಂಜಿಪಿ ಕಾಲೋನಿಯಲ್ಲಿಯರುವ ತನ್ನ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಸೈಯ್ಯದ್ ನಜ್ನಿನ್ ಬಳಿ 40,000 ರೂ.ವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ. ಆದರೂ ಕೊಡಲಿಲ್ಲವೆಂದು ಕೋಪದಿಂದ ಅತ್ತೆಯಮನೆಯಿಂದ ಹೊರನಡೆದಿದ್ದಾನೆ.

    crime

    ಈ ವೇಳೆ ನಜ್ನಿನ್ ಹಾಗೂ ಆಕೆಯ ತಾಯಿ ಸೈಯ್ಯದ್‍ನನ್ನು ಅವಾಚ್ಯ ಶಬ್ದದಿಂದ ನಿಂದಿಸಿದರು. ಇದನ್ನು ಕೇಳಿದ ಆತ ಅವರಿಬ್ಬರ ಮೇಲೆ ತನ್ನ ಜೇಬಿನಲ್ಲಿದ್ದ ರಿವಾಲ್ವರ್‍ನ್ನು ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡು ಯಾರಿಗೂ ತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಅತ್ತೆ ಪೊಲೀಸರಿಗೆ ದೂರು ನೀಡಿದ್ದರು.

    ಇದಾದ ಬಳಿಕ ಸಯ್ಯದ್ ಯಾರಿಗೂ ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವೇಳೆ ತನ್ನ ಸೋದರ ಮಾವ ಪಪ್ಪು, ಅಲಿಯಾಸ್ ಶೋಯೆಬ್ ಶೇಖ್ ತನ್ನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ನಾವು ಸಹಕಾರ ನೀಡಿಲ್ಲ ಎಂದ ಭಾರತ

    crime

    ಧಾರವಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಈ ಬಗ್ಗೆ ಮಾತನಾಡಿ, ಸಯ್ಯದ್ ಎಡಗೈಗೆ ಸ್ವಪ್ರೇರಿತವಾಗಿ ಗುಂಡು ಹಾರಿಸಿಕೊಂಡಿದ್ದು, ಆತನನ್ನು ಒಂದು ದಿನ ಆಸ್ಪತ್ರೆಯ ನಿಗಾ ಇರಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯ- ಓರ್ವನ ಬಂಧನ

    Live Tv
    [brid partner=56869869 player=32851 video=960834 autoplay=true]

  • ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಬೆಂಗಳೂರು: ಈ ತಾಯಿ ಮಗನನ್ನು ಕಳೆದುಕೊಂಡು ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸೊಸೆಯ ಕಾಟದಿಂದಾಗಿ ಬದುಕೇ ಬರಡಾಗಿದೆ. ಸೊಸೆ ಎಂದು ಬಂದ ಆ ಖತರ್ನಾಕ್ ಲೇಡಿ ಇಡೀ ಕುಟುಂಬದ ನೆಮ್ಮದಿಯನ್ನೇ ಬೀದಿ ಪಾಲು ಮಾಡಿದ್ದಾಳೆ.

    ಹೌದು ಈಕೆಯ ಹೆಸರು ರೇಣುಕಮ್ಮಾ. ವಯಸ್ಸು 60 ದಾಟಿದೆ. ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ವಾಸವಾಗಿರುವ ಇವರ ಮಗ ಇತ್ತೀಚೆಗಷ್ಟೇ ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ತನ್ನ ಕಂದನ ನೆನೆದು ಈ ಜೀವ ಕಣ್ಣೀರು ಹಾಕುತ್ತಿದೆ. ಇಡೀ ಬದುಕೇ ಈಗ ಅಲ್ಲೋಲಕಲ್ಲೋಲವಾಗಿದೆ.

    kengeri 2

    ಹೆಂಡತಿಯ ಕಾಟದಿಂದ ಬದುಕೇ ಸಾಕು ಎಂದು ಮಗ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಸೊಸೆಯ ಕಾರಣದಿಂದ ಈ ಬಡ ಜೀವ ಹೆತ್ತ ಮಗುವನ್ನೂ ಕಳೆದುಕೊಂಡಿದೆ. ಬದುಕು ದುಸ್ತರವಾಗಿದೆ. ಇವರ ಮಗ ಮಂಜುನಾಥ್ ಜೂನ್ 1 ರಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೆ ಸೊಸೆ ಅನಸೂಯ.

    ಈ ಅನಸೂಯ ಖತರ್ನಾಕ್ ಲೇಡಿ. ಮದುವೆಯಾಗಿ ಬಂದ ದಿನವೇ ದುಡ್ಡಿಗಾಗಿ ತನ್ನ ಅಸಲಿ ಮುಖವನ್ನು ಗಂಡ ಹಾಗೂ ಅತ್ತೆಗೆ ತೋರಿಸಿದ್ದಾಳೆ. ಮದುವೆಯ ದಿನದಂದೇ ಶುರುವಾದ ಕಲಹ ಸುಮಾರು 3-4 ವರ್ಷಗಳು ನಡೆದಿದೆ. ಕೊನೆಗೆ ಹೆಂಡತಿಯ ಹಿಂಸೆಗೆ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಇವಳ ಕಾಟ ಎಂಥದ್ದು ಎಂದರೆ, ರೌಡಿಗಳನ್ನು ಮನೆಗೆ ಕರೆಸಿ, ಪ್ರತಿನಿತ್ಯ ಪತಿ ಮಂಜುನಾಥ್ ಹಾಗೂ ತಾಯಿ ರೇಣುಕಮ್ಮಗೆ ದುಡ್ಡು, ಜಮೀನು ಅಂತ ಕಿರುಕುಳ ಕೊಡಿಸುತ್ತಿದ್ದಳು. ಗಂಡ ಸತ್ತ ಬಳಿಕವೂ ಇದೀಗ ಅನಸೂಯ ತನ್ನ ಅತ್ತೆಗೆ ಆಸ್ತಿ ಕೊಡುವಂತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ

    kengeri 1

    ಜೂನ್ 1ರಂದು ಡೆತ್ ನೋಟ್ ಬರೆದಿಟ್ಟು ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಅನಸೂಯಾ ಕಾರಣ ಎಂದು ಬರೆದಿದ್ದರು. ಅಲ್ಲದೆ ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಕೊಡಬೇಕು ಎಂದು ಹೇಳಿದ್ದರು. ಮಂಜುನಾಥ್ ಜೊತೆಗಿನ ಖಾಸಗಿ ವೀಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಳು. ಸೈಟು, ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರುದಿನವೇ ಕಿರುಕುಳ ಕೊಟ್ಟಿದ್ದಳು. ಇದರಿಂದ ಮನನೊಂದು ಮಂಜುನಾಥ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ

    ಈ ಹಿಂದೆ ಮಂಜುನಾಥ್ ಒಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅನಸೂಯಾಳನ್ನು ವರಿಸಿಕೊಂಡಿದ್ದರು. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದ ಮಂಜುನಾಥ್ ಎರಡನೇ ಪತ್ನಿ ಅನಸೂಯಾ, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮೃತ ಮಂಜುನಾಥ್ ತಾಯಿ ರೇಣುಕಮ್ಮಾರನ್ನು ಟಾರ್ಗೆಟ್ ಮಾಡಿದ್ದಾಳೆ. ಮಂಜುನಾಥ್ ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಯಾರ ಆಶ್ರಯವೂ ಇಲ್ಲದೆ ರೇಣುಕಮ್ಮಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಲಕ್ನೋ: ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಆಗಿದೆ. ಆದರೆ ನವವಿವಾಹಿತೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದ ಪತಿ ಮತ್ತು ಅತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‍ಗಂಜ್‍ನಲ್ಲಿ ನಡೆದಿದೆ.

    ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವವಿವಾಹಿತೆಗೆ ಸೋನೋಗ್ರಫಿ ಮಾಡಲಾಯಿತು. ಈ ವೇಳೆ ಗರ್ಭಿಣಿಯಾಗಿರುವ ವಿಚಾರ ತಿಳಿದ ಅತ್ತೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಮೋದಿ ‘ಮಾಫಿವೀರ್’ ಆಗಿ ದೇಶದ ಯುವಕರ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ

    MARRIAGE GARLAND

    ಇದೀಗ ಪತ್ನಿ ವಿರುದ್ಧ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಒಂದೂವರೆ ತಿಂಗಳ ಹಿಂದೆ ಗ್ರಾಮದ ಸಂಬಂಧಿಯೊಬ್ಬರ ಮೂಲಕ ಪಕ್ಕದ ಜಿಲ್ಲೆಯ ಹುಡುಗಿಯನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಮದುವೆಯಾದ ಒಂದು ತಿಂಗಳಿನಲ್ಲಿಯೇ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಮಗಳು ಗರ್ಭಿಣಿಯಾಗಿರುವ ವಿಚಾರ ಮೊದಲೇ ಆಕೆಯ ಕುಟುಂಬಸ್ಥರಿಗೆ ತಿಳಿದಿತ್ತು. ಆದರೂ ಈ ವಿಚಾರವನ್ನು ಮರೆ ಮಾಚಿ ಮದುವೆ ಮಾಡಿದ್ದಾರೆ ಎಂದು ನವವಿವಾಹಿತೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಕೊಲ್ಹುಯಿ ಎಸ್‍ಎಚ್‍ಒ ಅಭಿಷೇಕ್ ಸಿಂಗ್ ಹೇಳಿದ್ದಾರೆ.

    Live Tv

  • ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಲಕ್ನೋ: ಮಕ್ಕಳಾಗುತ್ತಿಲ್ಲವೆಂದು ಪಾಪಿ ಅತ್ತೆಯೊಬ್ಬಳು ಸೊಸೆಯಿದ್ದ ಕೋಣೆಗೆ ತನ್ನ ಮತ್ತಿಬ್ಬರ ಪುತ್ರರಿಬ್ಬರನ್ನು ಕಳುಹಿಸಿ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    police (1)

    ಪಾಪಿ ಅತ್ತೆಗೆ ಮೂವರು ಗಂಡು ಮಕ್ಕಳು. ಓರ್ವ ಮಗನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ತನ್ನ ಸೊಸೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾಳೆ. ಇದರ ಸಲುವಾಗಿ ಸೊಸೆ ಮಲಗಿದ್ದ ಸಂದರ್ಭದಲ್ಲಿ ತನ್ನ ಇಬ್ಬರು ಪುತ್ರರನ್ನು ಆಕೆಯ ಕೋಣೆಗೆ ಕುಳಹಿಸಿದ್ದಾಳೆ. ಈ ಮೂಲಕ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಪ್ರೇರೇಪಿಸಿದ್ದಾಳೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಘಟನೆಯ ಬಳಿಕ ಸೊಸೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನಲ್ಲಿ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈದುನರಿಬ್ಬರು 2 ದಿನ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    Police Jeep

    ಈ ಬಗ್ಗೆ ತನಿಖೆ ನಡೆಸಿದಾಗ ಮೊಮ್ಮಗ ಬೇಕೆಂಬ ಆಸೆಗೆ ಮಹಿಳೆ ತನ್ನ ಸೊಸೆಯೊಂದಿಗೆ ಈ ದುಷ್ಕøತ್ಯ ಎಸಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್ಪಿ ಸಿಟಿ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಘಟನೆಯ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

  • ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ಚಂಡೀಗಢ: ಹೊಸದಾಗಿ ನಿರ್ಮಾಣವಾಗುತ್ತಿರುವ ಶೋರೂಂ ಒಂದರಲ್ಲಿ ನವವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಸೋನಿಪತ್‍ನ ಗೋಕುಲ್ ನಗರದಲ್ಲಿ ನಡೆದಿದೆ.

    MARRIAGE

    ಮೃತಳನ್ನು ರೇಣು ಎಂದು ಗುರುತಿಸಲಾಗಿದ್ದು, ವಿಕಾಸ್ ಅವರನ್ನು ಮದುವೆಯಾಗಿದ್ದರು. ಆದರೆ ವರದಕ್ಷಿಣೆಗಾಗಿ ಆಕೆಯ ಅತ್ತೆಯಂದಿರು ಕಿರುಕುಳ ನೀಡಿ ಆಕೆಯನ್ನು ಅತ್ತೆಯಂದಿರೇ ಕೊಂದಿರಬಹುದು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮಾಹಿತಿ ಪಡೆದ ಸೋನಿಪತ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

    POLICE JEEP

    ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜಯ್ ಕುಮಾರ್, ಶೋ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಆಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ – ಮಗ, ಸೊಸೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅತ್ತೆ

    ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ – ಮಗ, ಸೊಸೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅತ್ತೆ

    ಡೆಹ್ರಾಡೂನ್: ಮಗ ಮತ್ತು ಸೊಸೆ ಮೊಮ್ಮಗುವನ್ನು ನೀಡಲು ನಿರಾಕರಿಸಿದ್ದರಿಂದ ತಾನು ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಹರಿದ್ವಾರದ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ಸದ್ಯ ಈ ವಿಚಾರವಾಗಿ ಮಗ ಮತ್ತು ಸೊಸೆ ವಿರುದ್ಧ 5 ಕೋಟಿ ರೂ.ಗಳ ಮೊಕದ್ದಮೆ ಹೂಡಿ, ವಕೀಲ ಎ.ಕೆ. ಶ್ರೀವಾಸ್ತವ್ ಮೂಲಕ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಉತ್ತಮ ಪೈಲಟ್ ಮಾಡಿದ್ದೇನೆ. 2016ರಲ್ಲಿ ಭಾರೀ ಖರ್ಚು ಮಾಡಿ ತನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದೇನೆ. ಅಲ್ಲದೇ ನವದಂಪತಿಯನ್ನು ಹನಿಮೂನ್‍ಗೆ ನನ್ನ ಸ್ವಂತ ಹಣದಿಂದ ಥೈಲ್ಯಾಂಡ್‍ಗೆ ಕಳುಹಿಸಿದ್ದೇನೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.

    marriage

    ಮದುವೆಯ ನಂತರ ನನ್ನ ಸೊಸೆ ಮಗನನ್ನು ಹೈದರಾಬಾದ್‍ಗೆ ಶಿಫ್ಟ್ ಆಗೋಣಾ ಎಂದು ಒತ್ತಾಯಿಸಿದಳು. ಅಂದಿನಿಂದ ಮಗ, ಸೊಸೆ ನಮ್ಮೊಂದಿಗೆ ಮಾತನಾಡುತ್ತಿಲ್ಲ. ಅಲ್ಲದೇ ನನ್ನ ಸೊಸೆಯ ಕುಟುಂಬದ ಜವಾಬ್ದಾರಿಯನ್ನು ನನ್ನ ಮಗನ ಸಂಪೂರ್ಣ ಸಂಬಳದಲ್ಲಿ ನಡೆಸಲಾಗುತ್ತಿದೆ. ಪ್ರತಿ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮಗ ಹೆಂಡತಿಯ ಮಾತನ್ನು ಕೇಳುತ್ತಾನೆ ಮತ್ತು ಆಕೆಯನ್ನೇ ಬೆಂಬಲಿಸುತ್ತಾನೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ:  ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್

    ಒಂದು ವರ್ಷದೊಳಗೆ ಸೊಸೆ ಗರ್ಭಧರಿಸಬೇಕು ಎಂದು ಮಗ ಮತ್ತು ಸೊಸೆಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಪೋಷಕರಿಗೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ:  ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್

  • ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

    ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

    ಲಕ್ನೋ: ವರ ಮತ್ತು ಅತ್ತೆ ಮನೆಯವರನ್ನು ಮನೆಯೊಳಗೆ ಕೂಡಿ ಹಾಕಿ ಚಿನ್ನಾಭರಣ ದೋಚಿಕೊಂಡು ವಧು ರಾತ್ರೋ, ರಾತ್ರಿ ಪರಾರಿಯಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

    ಏಪ್ರಿಲ್ 25ರಂದು ಆಗ್ರಾದ ಶಾಹಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿ ಅತ್ತೆ ಮನೆಗೆ ಬಂದ ಕೇವಲ 10 ಗಂಟೆಗಳಲ್ಲೇ ವಧು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

    MARRIAGE REGISTRATION

    ಬೆಳ್ಳಿ ಕುಶಲಕರ್ಮಿಕನಾಗಿದ್ದ ಯುವಕ ವಧುವನ್ನು ಹುಡುಕುತ್ತಿದ್ದರು. ಇದೇ ವೇಳೆ ತಾಜ್‍ಗಂಜ್‍ನ ಕಾರ್ಖಾನೆಯ ಉದ್ಯೋಗಿಯೊಬ್ಬರು ತಮ್ಮ ಅತ್ತಿಗೆಗೆ ಎರಡು ತಿಂಗಳಿನಿಂದ ವರನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ನಂತರ ಎರಡು ಕಡೆಯವರು ಭೇಟಿಯಾಗಿ ಮದುವೆಗೆ ಒಪ್ಪಿದರು. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

    POLICE JEEP

    ವಧುವಿನ ಸೋದರ ಮಾವ, ಹುಡುಗಿ ಮನೆಯವರು ಬಡವರಾಗಿದ್ದು, ಮದುವೆಯ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ವರನ ಮನೆಯವರು ಇಬ್ಬರೂ ಕಡೆಯವರ ಮದುವೆಯ ವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ಬಳಿಕ ಏಪ್ರಿಲ್ 25 ರಂದು ಗೋರಖ್‍ಪುರದಲ್ಲಿ ಜೋಡಿ ಸಂಪ್ರದಾಯ ಪ್ರಕಾರ ವಿವಾಹವಾದರು. ಏಪ್ರಿಲ್ 26ರ ಬೆಳಗ್ಗೆ ವಧುವನ್ನು ವರನ ಕಡೆಯವರು ಆಗ್ರಾದಲ್ಲಿರುವ ತಮ್ಮ ಮನೆಗೆ ಕರೆದೊಯ್ದರು.

    marriage

    ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಧು ನಿಧಾನವಾಗಿ ಎದ್ದು, ಮನೆಯ ಅಂಗಳದ ಗೋಡೆಯನ್ನು ಹತ್ತಿ ಪರಾರಿಯಾಗಿದ್ದಾಳೆ. ವಧು ಪರಾರಿಯಾಗುವ ಮುನ್ನ ತನ್ನ ಅತ್ತೆ ಮತ್ತು ವರನ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಓಡಿಹೋಗಿದ್ದಾಳೆ. ಈ ವಿಚಾರ ತಿಳಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ತಡರಾತ್ರಿ ವಧು ಹೊರಗೆ ಹೋಗುತ್ತಿರುವುದನ್ನು ಕಂಡ ಕಾಲೋನಿ ವಾಚ್‍ಮನ್ ಅನುಮಾನಗೊಂಡು ಗೇಟ್ ತೆರೆಯಲು ನಿರಾಕರಿಸಿದ್ದಾನೆ ಮತ್ತು ವಧುವನ್ನು ಪ್ರಶ್ನಿಸಲು ಮುಂದಾಗಿದ್ದಾನೆ. ಆಗ ವಾಚ್‍ಮನ್‍ಗೆ ವಧು ಬೆದರಿಕೆಯೊಡ್ಡಿ ಹೋಗಿದ್ದಾಳೆ.

    ಕೊನೆಗೆ ಬಾಗಿಲು ಒಡೆದು ಹಾಕಿ ವರ ಮತ್ತು ಆತನ ಕುಟುಂಬಸ್ಥರು ಮನೆಯಿಂದ ಹೊರಬಂದು ರಾತ್ರಿಯಿಡೀ ವಧುವನ್ನು ಹುಡುಕಾಡಿದ್ದಾರೆ. ಆದರೆ ವಧು ಪತ್ತೆಯಾಗಲಿಲ್ಲ. ಇದರಿಂದ ಬೇಸರಗೊಂಡ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಲೋನಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

  • ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ HIV ಸೋಂಕಿತ ಅತ್ತೆ

    ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ HIV ಸೋಂಕಿತ ಅತ್ತೆ

    ಡೆಹ್ರಾಡೂನ್: ಹೆಚ್‍ಐವಿ ಸೋಂಕಿತ ಮಹಿಳೆಯೊಬ್ಬಳು ತನ್ನ ಸ್ವಂತ ಸೋದರಳಿಯನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.

    ಪೊಲೀಸರ ಪ್ರಕಾರ, ಸೋದರಳಿಯನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವಳು ನನ್ನ ಮಗನ ಜೊತೆ ಬಲವಂತವಾಗಿ ದೈಹಿಕ ಸಂಬಂಧವನ್ನು ಬೆಳೆಸಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಬಲವಂತದ ಸುಳ್ಳು ಕೇಸು ಹಾಕಿ ಮಾನಹಾನಿ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!

    police 2

    ನಂತರ ಬಾಲಕ ತನ್ನ ತಾಯಿಯೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ. ಆರೋಪಿ ಮಹಿಳೆ ಪಿಲಿಭಿತ್‍ನಲ್ಲಿ ವಾಸಿಸುತ್ತಿದ್ದಳು. ಹೋಳಿ ಹಬ್ಬದ ವೇಳೆ ಕುಟುಂಬ ಸಮೇತ ತಮ್ಮ ಊರಿಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದಂರ್ಭ ನೋಡಿಕೊಂಡು ನನ್ನ ಮಗನ ಮೇಲೆ ಮೊದಲ ಬಾರಿ ದೌಜನ್ಯ ಎಸಗಿದ್ದಾಳೆ ಎಂದು ಸಂತ್ರಸ್ತನ ತಂದೆ ಹೇಳಿದ್ದಾರೆ. ಇದನ್ನೂ ಓದಿ: 3 ವರ್ಷದಿಂದ ದೈಹಿಕ ಸಂಪರ್ಕ ಬೆಳೆಸಿ ವಂಚನೆ- ಸತ್ಯ ತಿಳಿದ ಬಳಿಕ ಯುವತಿ ದೂರು

    arrested new

    ನನ್ನ ಒಪ್ಪಿಗೆಯಿಲ್ಲದೆ ಅತ್ತೆ ನನ್ನ ಜೊತೆ ಇದನ್ನೆಲ್ಲಾ ಮಾಡಿದ್ದಾಳೆ ಎಂದು ಬಾಲಕ ಹೇಳಿದ್ದಾನೆ. ಈ ಹಿಂದೆ ಬಾಲಕನಿಗೆ ಅವಳು ಮಾನ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ತಂದೆಯ ಪ್ರಕಾರ, ಆರೋಪಿ ಮಹಿಳೆ ಈ ಹಿಂದೆ ರುದ್ರಪುರಕ್ಕೆ ಬಂದಿದ್ದಳು, ಅಲ್ಲಿಯೂ ಅವನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಈ ಹಿಂದೆ ಎಚ್‍ಐವಿ ಸೋಂಕಿನಿಂದಾಗಿ ಡಿಸೆಂಬರ್ ತಿಂಗಳಲ್ಲಿ ಬಾಲಕನ ಮಾವ ನಿಧನರಾಗಿದ್ದರು.

    STOP RAPE

    ಅವನಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ಮದುವೆಯಾಗಿ ಆರು ತಿಂಗಳಾದ ಮೇಲೆ ಆಕೆಯ ಆರೋಗ್ಯ ಹದಗೆಡತೊಡಗಿತ್ತು. ಆಗ ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದೆವು. ಈ ವೇಳೆ ಅವಳಿಗೆ ಎಚ್‍ಐವಿ ಸೋಂಕು ತಗುಲಿರುವುದು ಕಂಡು ಬಂದಿತ್ತು. ಇದಾದ ಬಳಿಕ ಅವಳ ಪತಿಯನ್ನೂ ಸಹ ತಪಾಸಣೆಗೊಳಪಡಿಸಿದ್ದು, ಅವನಿಗೂ ಹೆಚ್‍ಐವಿ ಸೋಂಕು ತಗುಲಿದ್ದು, ದಂಪತಿ ಇಬ್ಬರಿಗೂ ಹೆಚ್‍ಐವಿ ಇರುವುದು ಧೃಡವಾಗಿತ್ತು. ಕಳೆದ ವರ್ಷ ಅವಳ ಪತಿ ಕೂಡ ಹೆಚ್‍ಐವಿ ಸೋಂಕಿನಿಂದ ಮೃತಪಟ್ಟಿದ್ದರು. ದಂಪತಿ ಮಗುವಿನ ವೈದ್ಯಕೀಯ ವರದಿ ಮಾತ್ರ ನೆಗೆಟಿವ್ ಬಂದಿತ್ತು.

    Police Jeep

    ಈಗಾಗಲೇ ಆರೋಪಿ ಮಹಿಳೆಯು ಹೆಚ್‍ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‍ಐವಿ ಸೋಂಕು ಗಂಡನಿಂದ ಹೆಂಡತಿಗೆ ಹರಡಿದೆಯೇ ಅಥವಾ ಗಂಡನಿಂದ ಹೆಂಡತಿಗೆ ಹರಡಿದೆಯೇ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಅದೃಷ್ಟವಶಾತ್ ಹುಡುಗನ ಮೆಡಿಕಲ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಒಂದು ತಿಂಗಳ ನಂತರ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

    ಪೋಷಕರ ದೂರಿನ ಮೇರೆಗೆ ರುದ್ರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.