Thursday, 18th July 2019

5 days ago

ಸರ್ಕಾರ ಯಾವುದೇ ಇರಲಿ, ನಮ್ಮ ಬೇಡಿಕೆ ಪೂರೈಕೆ ಆಗ್ಬೇಕು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

ದಾವಣಗೆರೆ: ಸರ್ಕಾರ ಯಾವುದೇ ಇರಲಿ. ನಮ್ಮ ಬೇಡಿಕೆ ಎರಡು ತಿಂಗಳಲ್ಲಿ ಪೂರೈಕೆ ಆಗಬೇಕು ಎಂದು ಮತ್ತೆ ಸರ್ಕಾರದ ವಿರುದ್ಧ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಗುಡುಗಿದ್ದಾರೆ. ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಬೇಡಿಕೆಯನ್ನು ನೆರವೇರಿಸುವಲ್ಲಿ ವಿಳಂಬವಾದರೆ ನಮ್ಮ 15 ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಕೆಲ ದಿನಗಳ ಹಿಂದೆ ಪರಿಶಿಷ್ಟ ಪಂಗಡಕ್ಕೆ ಈಗ ಇರುವ ಶೇ 3.5 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರದ […]

1 month ago

ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

ಯಾದಗಿರಿ: ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯ ದುಂದು ವೆಚ್ಚವಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಟೀಕಿಸಿದ್ದಾರೆ. ಜಿಲ್ಲೆಯಲ್ಲಿ ರೈತ ಸಂಘದ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರ ರಾಜ್ಯದ ಜನರ ಮನಸ್ಸಿನಲ್ಲಿ ಅಸ್ಥಿರಗೊಂಡಿದೆ. ಹೀಗಾಗಿ ಜನರ ಗಮನ...

ರೈತರನ್ನೇ ಗೂಂಡಾಗಳೆಂದರೆ, ಅಧಿಕಾರದಲ್ಲಿರುವ ಬಹುತೇಕರು ಕ್ರಿಮಿನಲ್ ಹಿನ್ನೆಲೆಯವ್ರು : ವಾಟಾಳ್ ನಾಗರಾಜ್

8 months ago

ಮಂಡ್ಯ: ರೈತರನ್ನು ಗೂಂಡಾಗಳೆಂದು ಕರೆಯುವುದಾದರೆ, ಅಧಿಕಾರದಲ್ಲಿರುವ ಬಹುತೇಕ ಸಚಿವರು ಹಾಗೂ ಶಾಸಕರು ಸಹ ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಬ್ಬು...

ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

8 months ago

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ. ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ...

ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

8 months ago

ಬೆಂಗಳೂರು: ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಎಚ್‍ಡಿಕೆ ವಿರುದ್ಧ ದೂರು ದಾಖಲಾಗಿದೆ. ಸಿಎಂ ಕುಮಾರಸ್ವಾಮಿ ಅವರು ರೈತ ಮಹಿಳೆ ಜಯಶ್ರೀ ಬಗ್ಗೆ...

ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

9 months ago

ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುತಾಲಿಕ್ ರಾಜಕೀಯ ಮುಖಂಡರ...

ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

10 months ago

ರಾಮನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದು ವಿಧಾನಸಭೆಯಲ್ಲಿ ಮಾತ್ರ ಬೇರೆಲ್ಲೂ ಇಲ್ಲ. ಈ ರಾಜ್ಯ ಸರ್ಕಾರವೇನೂ ನಮ್ಮದಾ? ಇದು ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲಾ ಎಂದು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಹೇಳಿಕೆ ನೀಡಿದ್ದಾರೆ....

ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

11 months ago

ಕಾಸರಗೋಡು: `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕನ್ನಡ ಶಾಲೆ ದುಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಈಗ ಕೇರಳದ ಶಾಲೆಯೊಂದರಲ್ಲಿ ಕನ್ನಡ ತರಗತಿಗೆ ಮಲೆಯಾಳಂ ಅಧ್ಯಾಪಕನ ನೇಮಕಾತಿ ಖಂಡಿಸಿ ಉಗ್ರ ಹೋರಾಟ ನಡೆಸಲು ಗಡಿಯಲ್ಲಿರುವ ಭಾಷಾಭಿಮಾನಿಗಳು ತೀರ್ಮಾನಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳದ...