Tuesday, 23rd July 2019

Recent News

11 months ago

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ರಸ್ತೆಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ರು!

ಲಕ್ನೋ: ವೈದ್ಯರು ತಂಬು ಗರ್ಭಿಣಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ ಪರಿಣಾಮ ಕೊನೆಗೆ ರಸ್ತೆ ಬದಿಯಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಮಂಗಳವಾರ ಉತ್ತರಪ್ರದೇಶದ ಶ್ರವಸ್ತಿ ಜಿಲ್ಲೆಯ ಭಿಂಗಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಸುನಿತಾ ಎಂದು ಗುರುತಿಸಲಾಗಿದ್ದು, ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. Shravasti: Woman gave birth to a child at roadside y'day in Bhinga. Her husband alleges that the hospital they first […]

11 months ago

ಅಂಬುಲೆನ್ಸ್ ನಲ್ಲಿ ವಾಹನದ ಸಿಬ್ಬಂದಿಯಿಂದ ಸುಸೂತ್ರ ಹೆರಿಗೆ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳಗಾನೂರ ಕ್ರಾಸ್ ಬಳಿ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಗೆ ಹೆರಿಗೆಯಾಗಿದೆ. ಮುದ್ದೇಬಿಹಾಳ ತಾಲೂಕಿನ ಬಿಳೇಭಾವಿ ಗ್ರಾಮದ ಬಸಮ್ಮಾ ನಿಂಗಪ್ಪ ಕೆಸರಟ್ಟಿಗೆ 108 ನಲ್ಲಿ ಹೆರಿಗೆ ಆಗಿದೆ. 108 ವಾಹನದ ಸಿಬ್ಬಂದಿ ಸಮಯೋಚಿತ ಚಿಕಿತ್ಸೆಯಿಂದಾಗಿ ಸುಸೂತ್ರ ಹೆರಿಗೆ ಆಗಿದೆ. ತಾಯಿ ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲು ಗರ್ಭಿಣಿಯನ್ನು ತಾಳಿಕೋಟೆ...

ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

1 year ago

ಹುಬ್ಬಳ್ಳಿ/ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಕುಸಿದು ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮತದಾನ ನಡೆಯುತ್ತಿತ್ತು. ಈ ವೇಳೆ ಸಾವಿತ್ರಿ ಕಿರೇಸೂರ ಗರ್ಭಿಣಿ ಮತದಾನ...

ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

1 year ago

ಚಂಡೀಘಢ: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿರುವ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ. ಸೋಮವಾರದಂದು ಇಲ್ಲಿನ ಸಿವಿಕ್ ಆಸ್ಪತ್ರೆಗೆ ಗರ್ಭಿಣಿಯನ್ನ ಹೆರಿಗೆಗಾಗಿ ದಾಖಲಿಸಲಾಗಿತ್ತು. ಆದ್ರೆ ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಯ ಬೆಡ್ ಮೇಲೆ...

ಹೆರಿಗೆಯಾದ 4 ಗಂಟೆಯಲ್ಲಿ ನವಜಾತ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಪರೀಕ್ಷೆಗೆ ಕುಳಿತ ಮಹಿಳೆ!

1 year ago

ಪಾಟ್ನಾ: ಬಿಹಾರದಲ್ಲಿ ಪರೀಕ್ಷಾ ಅವ್ಯವಹಾರಗಳ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ವಿದ್ಯಾರ್ಥಿಗಳ ಕುಟುಂಬಸ್ಥರು ಕಟ್ಟಡ ಏರಿ ಎಲ್ಲರ ಸಮ್ಮುಖದಲ್ಲೇ ಪುಸ್ತಕಗಳನ್ನ ನೀಡಿ ಕಾಪಿ ಮಾಡಲು ಸಹಾಯ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದೇ ಬಿಹಾರದಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ...

ಹೆರಿಗೆ ರೂಂಗೆ ನಡ್ಕೊಂಡು ಬರುವಂತೆ ಹೇಳಿದ ಸೂಲಗಿತ್ತಿ – ನಡ್ಕೊಂಡು ಹೋಗುವಾಗ್ಲೇ ಹೆರಿಗೆಯಾಗಿ ಮಗು ಸಾವು

1 year ago

ಭೋಪಾಲ್: ಗರ್ಭಿಣಿಯೊಬ್ಬರನ್ನು ಹೆರಿಗೆ ರೂಂ ವರೆಗೂ ನಡೆದುಕೊಂಡು ಬರುವಂತೆ ಹೇಳಿದ್ದು, ನಡೆದುಕೊಂಡು ಹೋಗುವಾಗಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬೇತುಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ಮೂಲಕ ಹೆರಿಗೆ...

ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

2 years ago

ಕಲಬುರಗಿ: ಹೆಣ್ಣು ಮಗು ಹುಟ್ಟಿದರೂ ನಿಮಗೆ ಗಂಡು ಮಗು ಹುಟ್ಟಿದೆ ಎಂದು ವೈದ್ಯರು ದಂಪತಿಗೆ ಹೇಳಿ ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಿವಾಸಿ ನಂದಮ್ಮ ಅವರನ್ನು ಎರಡು ದಿನಗಳ ಹಿಂದೆ ಹೆರಿಗೆಗೆಂದು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ...

ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

2 years ago

ಬಳ್ಳಾರಿ: ಆಂಬುಲೆನ್ಸ್ ನಲ್ಲೆ ಗರ್ಭಿಣಿಯೊಬ್ಬರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ನಡೆದಿದೆ. ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ಅವರು ಗರ್ಭಿಣಿಯಾಗಿದ್ದು, ಇಂದು ಬೆಳ್ಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಪತಿ ಆಂಬುಲೆನ್ಸ್...