Tuesday, 25th June 2019

10 hours ago

ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಸಾವು

ಹುಬ್ಬಳ್ಳಿ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ಹೊತ್ತಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಛಾಯಾ ನಾಗರಾಜ್ ಚಂದ್ರಶೇಖರಮಠ (49) ಮೃತಪಟ್ಟ ಮಹಿಳೆ ಆಗಿದ್ದು, ಕಳೆದ 1 ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಅವರ ದೇಹ ಶೇ.60 ರಷ್ಟು  ಸುಟ್ಟು ಹೋಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಆದರ್ಶ ನಗರ ನಿವಾಸಿಯಾಗಿದ್ದ ಛಾಯಾ ಅವರು ಜೂನ್ 17 ರಂದು ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. […]

4 days ago

ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

– ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡುವುದರಿಂದ ಅಭಿವೃದ್ಧಿಯಾಗಲ್ಲ ಹುಬ್ಬಳ್ಳಿ: ಸಿಎಂ ಗ್ರಾಮ ವಾಸ್ತವ್ಯ ಮಾಡಿ ಕೇವಲ ಅರ್ಜಿ ತೆಗೆದುಕೊಂಡು ಬಂದರೆ ಅಭಿವೃದ್ಧಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಇಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾಡೋ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ವಾಸ್ತವ್ಯ...

ಹೆಚ್‍ಡಿಡಿ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಕೆಶಿ ಹಿಂದೇಟು

4 days ago

ಹುಬ್ಬಳ್ಳಿ/ಧಾರವಾಡ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ನನಗೇನೂ ಗೊತ್ತಿಲ್ಲ, ಅದರ ಬಗ್ಗೆ ತಿಳಿದುಕೊಂಡು ಮಾತನಾಡ್ತೇನೆ ಎಂದು ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ದೇವೇಗೌಡರು ಸಮ್ಮಿಶ್ರ ಸರ್ಕಾರದ...

ಹುಬ್ಬಳ್ಳಿಯ ದೇವಸ್ಥಾನದಲ್ಲಿ ಅಗ್ನಿ ಅವಘಡ – ಮಹಿಳೆ ಸೀರೆಗೆ ತಗುಲಿದ ದೀಪದ ಬೆಂಕಿ

5 days ago

ಹುಬ್ಬಳ್ಳಿ: ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿಯುವ ವೇಳೆ ಮಹಿಳೆಯೊಬ್ಬರ ಸೀರೆಗೆ ಬೆಂಕಿ ಹತ್ತಿಕೊಂಡ ಘಟನೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆ ಜೂನ್ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ದೇವಸ್ಥಾನದಲ್ಲಿರುವ ನಾಗರಕಟ್ಟೆಗೆ...

ಹಾಡನ್ನು ಉಲ್ಟಾ ಹಾಡಿ ಕೇಳುಗರನ್ನು ದಂಗಾಗಿಸಿದ ಕನ್ನಡ ಪ್ರತಿಭೆ

5 days ago

ಹುಬ್ಬಳ್ಳಿ: ಉಲ್ಟಾವಾಗಿ ಹಾಡು ಹೇಳುವ ಅಪರೂಪದ ಕಲೆಯನ್ನು ಕನ್ನಡತಿಯೊಬ್ಬಳು ಕರಗತ ಮಾಡಿಕೊಂಡಿದ್ದಾಳೆ. ಈ ಕನ್ನಡ ಪ್ರತಿಭೆ `ಬೊಂಬೆ ಹೇಳುತೈತೆ’ ಹಾಡನ್ನು ಉಲ್ಟಾ ಹಾಡಿ ಬೇಷ್ ಎನಿಸಿಕೊಂಡಿದ್ದಾಳೆ. ಹೌದು. ಹುಬ್ಬಳ್ಳಿಯ ತನುಶ್ರೀ ಮಸನಿ ವಿನೂತನವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ....

ಹುಬ್ಬಳ್ಳಿಯ ಸಬ್‍ಜೈಲಿನ ಎದುರೇ ಆರ್ಭಟಿಸಿದ ಲಾಂಗು, ಮಚ್ಚು, ತಲ್ವಾರ್

6 days ago

ಹುಬ್ಬಳ್ಳಿ: ಹಾಡಹಗಲೇ ಹುಬ್ಬಳ್ಳಿಯ ಸಬ್ ಜೈಲಿನ ಎದುರು ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು, ಎರಡು ಗುಂಪುಗಳು ತಲ್ವಾರ್, ಮಚ್ಚು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ...

ಹುಬ್ಬಳ್ಳಿಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಮಾಜಿ ಮೇಯರ್‌ನಿಂದ ಅಮಾಯಕರ ಮೇಲೆ ಹಲ್ಲೆ

1 week ago

ಹುಬ್ಬಳ್ಳಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪಗಳ ನಡುವೆ ಘರ್ಷಣೆ ನಡೆದಿದ್ದು, ಮಾಜಿ ಮೇಯರ್ ಸೇರಿದಂತೆ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿರುವ ಘಟನೆ ಹುಬ್ಬಳ್ಳಿಯ ತೊರವಿಹಕ್ಕಲ್‍ದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಮರಿಪೇಟ್‍ನಲ್ಲಿ ಮಾಜಿ ಮೇಯರ್ ವೆಂಕಟೇಶ...

ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

1 week ago

ಹುಬ್ಬಳ್ಳಿ/ಧಾರವಾಡ: ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಕೂಗಿದ್ದಾರೆ. ಹುಬ್ಬಳ್ಳಿಯ ಖಾಸಗಿ ಕಾಲೇಜ್‍ನಲ್ಲಿ ಅಮರ್ ಚಿತ್ರ ತಂಡದ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂವಾದ ಕಾರ್ಯಕ್ರಮಕ್ಕೆ ಸುಮಲತಾ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ....