Sunday, 18th August 2019

Recent News

2 months ago

ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಮಹಾದೇವ ಅಂತ್ಯಕ್ರಿಯೆ

ಕಲಬುರಗಿ: ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾಗಿದ್ದ ಸಿಆರ್‍ಪಿಎಫ್ ಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಅಂತ್ಯಕ್ರಿಯೆ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದಲ್ಲಿ ಇಂದು ನೆರವೇರಿತು. ಮಹಾದೇವ ಅವರ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಸಂಸದ ಡಾ.ಉಮೇಶ್ ಜಾಧವ್, ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್, ಎಸ್‍ಪಿ ಯಡಾ ಮಾರ್ಟನ್ ಸೇರಿದಂತೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯೋಧ ಮಹಾದೇವ ಅವರಿಗೆ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಮಹಾದೇವ […]

2 months ago

ಮಗಳ ಸೀಮಂತಕ್ಕೆ ಸಂಜೆ ಹೊರಡಬೇಕಿದ್ದ ಯೋಧ ಬೆಳಗ್ಗೆ ಹುತಾತ್ಮ

ಕಲಬುರಗಿ: ಮಗಳ ಸೀಮಂತಕ್ಕೆ ಬರುವುದಕ್ಕಾಗಿ ರಜೆ ಪಡೆದು, ಇಂದು ಸಂಜೆ ಪ್ರಯಾಣ ಬೆಳೆಸಬೇಕಿದ್ದ ಜಿಲ್ಲೆಯ ಯೋಧರೊಬ್ಬರು ನಕ್ಸಲರು ಅಟ್ಟಹಾಸಕ್ಕೆ ಹುತಾತ್ಮರಾಗಿದ್ದಾರೆ. ಸಿಆರ್‌ಪಿಎಫ್‌ನ ಮಹಾದೇವ ಪೊಲೀಸ್ ಪಾಟೀಲ್ (50) ಹುತಾತ್ಮ ಯೋಧ. ಮಹದೇವ ಅವರು ಕಲಬುರಗಿ ತಾಲೂಕಿನ ಮರಗುತ್ತಿ ಗ್ರಾಮದ ನಿವಾಸಿ. ಶುಕ್ರವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ಮಹಾದೇವ ಸೇರಿದಂತೆ, ಮೂರು ಯೋಧರು ಬೈಕ್‍ನಲ್ಲಿ...

ಐಇಡಿ ಸ್ಫೋಟ – ರಾಜ್ಯದ ಯೋಧ ಹುತಾತ್ಮ

3 months ago

ಬಾಗಲಕೋಟೆ: ಐಇಡಿ ಸ್ಫೋಟಗೊಂಡ ಪರಿಣಾಮ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ರೆಜೂರಿ ಎಂಬಲ್ಲಿ ನಡೆದಿದೆ. ಶ್ರೀಶೈಲ್ ರಾಯಪ್ಪ ಬಳಬಟ್ಟಿ (34) ಹುತಾತ್ಮರಾದ ಯೋಧರಾಗಿದ್ದು, ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ನಿವಾಸಿಯಾಗಿದ್ದಾರೆ. ಪೂಂಚ್ ಗಡಿ ನಿಯಂತ್ರಣದ ರೇಖೆಯ ಬಳಿ...

ಕಾದಾಟದ ವೇಳೆ ಪತಿ ಹುತಾತ್ಮ, ನಂತ್ರ ಗರ್ಭಪಾತ – ಪರೀಕ್ಷೆ ಬರೆದು ಸೇನೆ ಸೇರಿದ ಪತ್ನಿ

5 months ago

ಡೆಹಾಡ್ರೂನ್: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದ ಯೋಧನ ಪತ್ನಿಯೂ ಈಗ ದೇಶಸೇವೆಗೆ ಸೇರಿದ್ದಾರೆ. ಸಂಗೀತಾ ಮಾಲ್ ಭಾರತೀಯ ಸೇನೆಗೆ ಸೇರಿದ ಯೋಧನ ಪತ್ನಿ. ಇವರು ಚೆನ್ನೈನಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಶನಿವಾರ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಸಂಗೀತಾ ಮಾಲ್ ಅವರು...

ಬೆಳಗಾವಿ ಯೋಧ ಪಂಚಭೂತಗಳಲ್ಲಿ ಲೀನ- ಅಂತಿಮ ಯಾತ್ರೆಗೆ ಹರಿದುಬಂದ ಜನ ಸಾಗರ

5 months ago

ಬೆಳಗಾವಿ: ಪಂಜಾಬ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಹಾರಿದ ಗುಂಡು ತಗುಲಿ ಹುತಾತ್ಮನಾಗಿದ್ದ ಕರ್ನಾಟಕದ ಬೆಳಗಾವಿ ಮೂಲದ ಯೋಧ ಪ್ರವೀಣ ಪಟ್ಟಣಕುಡೆ (32) ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಯೋಧ ಪ್ರವೀಣ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದವರಾಗಿದ್ದು,...

ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

6 months ago

ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಉಗ್ರರು ಮತ್ತು ಸೇನಾಪಡೆಗಳ ನಡುವೆ...

ಜಮ್ಮು ಕಾಶ್ಮೀರದಲ್ಲಿ ಮಿಗ್ ವಿಮಾನ ಪತನ – ಇತ್ತ ಪಾಕಿಸ್ತಾನದ ಯುದ್ಧ ವಿಮಾನ ಭಾರತಕ್ಕೆ ಪ್ರವೇಶ?

6 months ago

ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಹುತಾತ್ಮರಾಗಿದ್ದಾರೆ. ಬುದ್ಗಾಮ್‍ನ ನಸಲಾಪುರದಲ್ಲಿ ಗಸ್ತು ತಿರುಗುವ ವೇಳೆ ಮಿಗ್ ವಿಮಾನ ಪತನಗೊಂಡಿದೆ. ಜಮ್ಮು- ಕಾಶ್ಮೀರದ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಮೂರು ಯುದ್ಧ ವಿಮಾನ ಗಡಿ ಉಲ್ಲಂಘನೆ...

ಬೆಳಗಾವಿಯ ಯೋಧ ವಿಧಿವಶ

6 months ago

ಬೆಳಗಾವಿ: ಅನಾರೋಗ್ಯಕ್ಕೆ ತುತ್ತಾಗಿ ಬೆಳಗಾವಿಯ ಯೋಧ ವಿಧಿವಶರಾಗಿದ್ದಾರೆ. ಮಂಜುನಾಥ ಮುಸಲ್ಮಾರಿ(24) ವಿಧಿವಶರಾದ ಯೋಧ. ಮಂಜುನಾಥ ಮುಸಲ್ಮಾರಿ ಮೂಲತಃ ಮಾವನೂರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮದವರಾಗಿದ್ದು, ದೆಹಲಿಯ ಆರ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಜುನಾಥ್ ಅವರು ಉತ್ತರ ಪ್ರದೇಶದ ಮೀರತ್...