Tuesday, 15th January 2019

Recent News

5 days ago

ಅಂಕೋಲ ಉತ್ಸವದಲ್ಲಿ ಚಂದನ್ ಶೆಟ್ಟಿ ಹವಾ – ಬೃಹತ್ ವೇದಿಕೆಯಲ್ಲೇ ಬೇಬಿಡಾಲ್‍ಗೆ ವಿಡಿಯೋ ಕಾಲ್

ಕಾರವಾರ: ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಉತ್ಸವಕ್ಕೆ ಕನ್ನಡದ ಖ್ಯಾತ ರ‍್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಆಗಮಿಸಿದ್ದು, ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದ್ದಾರೆ. ಗುರುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಜೈ ಹಿಂದ್ ಮೈದಾನದಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್‍ಬಾಸ್ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ ಆಗಮಿಸಿದ್ದು, ಅನೇಕ ಹಾಡುಗಳನ್ನು ಹಾಡಿ, ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. […]

2 weeks ago

ಹೊಸ ವರ್ಷಕ್ಕೆ ಕುರಿಗಾಯಿ ಹನುಮಂತನಿಗೆ ಬಂಪರ್ ಲಾಟರಿ!

ಬೆಂಗಳೂರು: ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಈಗ ಹೊಸ ವರ್ಷದ ಪ್ರಯುಕ್ತ ಹನುಮಂತನಿಗೆ ಬಂಪರ್ ಆಫರ್ ಬಂದಿದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ...

‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

1 month ago

ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ. ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು...

ಶಾಲೆಯಲ್ಲಿ ಪಾಠ ಸ್ಟುಡಿಯೋದಲ್ಲಿ ಗಾನ – ಸ್ವಂತ ಖರ್ಚಿನಲ್ಲಿ ಜನ ಜಾಗೃತಿ!

1 month ago

ಕೊಪ್ಪಳ: ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಹಲವಾರು ಗೀತೆಗಳನ್ನ ರಚಿಸಿ ಕೊಪ್ಪಳದ ವ್ಯಕ್ತಿಯೊಬ್ಬರು ಅದಕ್ಕೆ ತಾವೇ ದನಿಯಾಗಿದ್ದಾರೆ. ಕೆಲ ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ಬಳಿಕ ಸಮೂಹ ಸಂಪನ್ಮೂಲ ವಿಭಾಗದ ನೌಕರನಾಗಿರುವ ಹನಮಂತಪ್ಪ ಕುರಿ ತನ್ನ ಸ್ವಂತ...

ಗಬ್ಬರ್ ಸಿಂಗ್ ಸಾಂಗ್ ಪ್ಲೇ ಮಾಡಿ ಪಿಎಸ್‍ಐ ದರ್ಪ- ಡಾನ್ಸ್ ಮಾಡುತ್ತಾ ವ್ಯಕ್ತಿಗೆ ಮನಸೋ ಇಚ್ಛೆ ಥಳಿತ

2 months ago

ಕೋಲಾರ: ಪಿಎಸ್‍ಐ ಒಬ್ಬರು ಥೇಟ್ ತೆಲುಗು ಗಬ್ಬರ್ ಸಿಂಗ್ ಸಿನಿಮಾದ ದೃಶ್ಯದಂತೆ ವ್ಯಕ್ತಿಯೊಬ್ಬರ ಮೇಲೆ ಅಮಾಮವೀಯವಾಗಿ ಥಳಿಸಿರುವ ಘಟನೆ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ರಾಮಸಾಗರದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ...

ಬಾಳ ಬಂಗಾರ ನೀನು ಎಂದು ಸರಿಗಮಪಗೆ ಎಂಟ್ರಿ ಕೊಟ್ರು ಗಂಗಮ್ಮ

3 months ago

ಬೆಂಗಳೂರು: 50 ನೇ ವಯಸ್ಸಲ್ಲೂ 15ರ ಹದಿಹರೆಯದ ಹುಡುಗಿಯಂತೆ ಹಾಡಿ ನೋಡುಗರನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ಖಾಸಗಿ ಚಾನಲ್ ಅಲ್ಲಿ ಬರುವ ಸರಿಗಮಪ ಅಂಗಳದಲ್ಲಿ ಗಂಗಮ್ಮ ತಮ್ಮ ಹಂಗಾಮವನ್ನು ತೋರಿಸಿದ್ದಾರೆ. ವಯಸ್ಸಾಗ್ತಿದೆ ಅನ್ನೋದನ್ನ ತಲೆಯಲ್ಲಿಟ್ಟುಕೊಳ್ಳದೇ ಕೆಲಸ ಮಾಡಿದರೆ ನಾವು ಅಂದುಕೊಂಡ ಗುರಿಯನ್ನ ಸಾಧಿಸಬಹುದು...

ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

3 months ago

ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ...

ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

3 months ago

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಅಕ್ಷರಶಃ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ತೋರ್ಪಡಿಸುತ್ತಿದೆ. ದಸರಾ ಆರಂಭವಾಗಿ ಮೂರು ದಿನಗಳು ಕಳೆದಿದ್ದು, ಪ್ರತಿದಿನ ಒಂದೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಯುವ...