Saturday, 22nd February 2020

Recent News

1 week ago

ಯೋಧರ ಬಲಿದಾನದ ಕಥನಗಳನ್ನು ಮನೆ ಮಕ್ಕಳಿಗೆ ತಿಳಿಸಿ: ವೇದವ್ಯಾಸ್ ಕಾಮತ್

ಮಂಗಳೂರು: ಪುಲ್ವಾಮಾ ದುರ್ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ನಗರದ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಸುಖ ನಿದ್ರೆಯ ಹಿಂದೆ ನಿದ್ದೆಗೆಟ್ಟು ಗಡಿ ಕಾಯುವ ಯೋಧರ ಪರಿಶ್ರಮವಿದೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಮೂಲಕ ಯೋಧರ ಜೊತೆ ನಾವಿದ್ದೇವೆ ಎನ್ನುವ ಸಂದೇಶ ನೀಡಬೇಕು. ಪುಲ್ವಾಮಾದಲ್ಲಿ ಹುತಾತ್ಮರಾದ ಎಲ್ಲಾ ಯೋಧರನ್ನೂ ನೆನೆಯುವುದು ನಮ್ಮ ಕರ್ತವ್ಯ […]

3 weeks ago

ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಅದ್ಧೂರಿ ಸ್ವಾಗತ

ಹಾವೇರಿ: ಬರೋಬ್ಬರಿ 17 ವರ್ಷಗಳ ಕಾಲ ಭಾರತ ಸೇನೆಯಲ್ಲಿ ದೇಶ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ಮಾಜಿ ಯೋಧರಿಗೆ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಇಬ್ಬರು ಯೋಧರಾದ ಇಮ್ತಿಯಾಜ್ ಹಾವನೂರು ಮತ್ತು ಮಹೇಶ್ ಕುಂಬಾರ ಊರಿಗೆ ಮರಳಿದ ಮಾಜಿ ಯೋಧರು. ಭಾರತೀಯ ಸೇನೆಯಲ್ಲಿ...

ಹೊಸ ವರ್ಷಾಚರಣೆಯಂದೇ ಉಗ್ರರ ಅಟ್ಟಹಾಸ- ಯೋಧರಿಬ್ಬರು ಹುತಾತ್ಮ

2 months ago

ಶ್ರೀನಗರ: ಹೊಸ ವರ್ಷಾಚರಣೆ ಆರಂಭದಲ್ಲೇ ಪಾಕ್ ಗಡಿ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ನೌಶೇರಾ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ತಾಣಗಳ ಮೇಲೆ ಯೋಧರು ನಡೆಸಿದ್ದ...

ಸೈನಿಕರ ರೋಚಕ ಕಥೆ ಹೇಳಲಿದ್ದಾರೆ ಧೋನಿ

2 months ago

ನವದೆಹಲಿ: 2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಮಾಜಿ ನಾಯಕ ಎಂಎಸ್ ಧೋನಿ, ಸದ್ಯ ಕಿರುತೆರೆಗೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಸೈನಿಕರಿಗಾಗಿಯೇ ನಡೆಯುವ ವಿಶೇಷ ಕಾರ್ಯಕ್ರಮವೊಂದನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆಯೂ ಬಾಲಿವುಡ್...

ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

3 months ago

ಕಾರವಾರ: ಭಾರತೀಯ ಸೈನಿಕರ ಮೇಲೆ ಅಭಿಮಾನ ಮತ್ತು ಪ್ರೀತಿಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ವೈದ್ಯರೊಬ್ಬರು ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ಗಮನ ಸೆಳೆದಿದ್ದಾರೆ. ಸಿದ್ದಾಪುರ ತಾಲೂಕಿನ ಅತ್ತಿಗಾರ ಜಡ್ಡಿ ಗ್ರಾಮದ ಯುವ ವೈದ್ಯ ಡಾ.ಹರ್ಷವರ್ಧನ್ ನಾರಾಯಣ ನಾಯ್ಕ ಸೈನಿಕರ ಅಭಿಮಾನದಿಂದ ಸಾಧನೆ...

ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

3 months ago

ಶ್ರೀನಗರ: ಎಲ್‍ಒಸಿ(ಗಡಿ ನಿಯಂತ್ರಣ ರೇಖೆ) ಬಳಿ ಪಾಕಿಸ್ತಾನ ಸೈನಿಕರು ಮಾಡಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಂಡಿ ಚೆಚಿಯನ್ ಪ್ರದೇಶದ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ...

ಉಗ್ರ ಅಡಗುದಾಣಗಳ ಮೇಲೆ ದಾಳಿ- ಅಪಾರ ಪ್ರಮಾಣದ ಮದ್ದು, ಗುಂಡುಗಳು ವಶಕ್ಕೆ

3 months ago

ಶ್ರೀನಗರ: ಉಗ್ರರ ಅಡಗುದಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಜಮ್ಮು ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ಹಾಗೂ ಸಿಆರ್‌ಪಿಎಫ್ ಜಂಟಿ ದಾಳಿ ನಡೆಸಿದ್ದು, ಶಸ್ತ್ರಾಸ್ತ್ರಗಳ ಜೊತೆಗೆ...

ಸಿಯಾಚಿನ್‍ನಲ್ಲಿ ಮತ್ತೆ ಹಿಮಪಾತ – ಇಬ್ಬರು ಯೋಧರು ಹುತಾತ್ಮ

3 months ago

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನ ದಕ್ಷಿಣ ಭಾಗದಲ್ಲಿ ಮತ್ತೆ ಹಿಮಪಾತ ಸಂಭವಿಸಿದ್ದು, ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ದಕ್ಷಿಣ ಸಿಯಾಚಿನ್ ಹಿಮ ಪ್ರದೇಶದಲ್ಲಿ ಸುಮಾರು 18,000 ಅಡಿಗಳಷ್ಟು ಎತ್ತರದಲ್ಲಿ ಭಾರತೀಯ ಸೈನ್ಯದ ಗಸ್ತು ತಂಡವು ಕಾರ್ಯನಿರ್ವಹಿಸುತ್ತಿದ್ದು, ಇಂದು...