Saturday, 15th June 2019

1 year ago

ಕುಡಿದ ಮತ್ತಲ್ಲಿ ಕಾರಿಗೆ ವಾಹನ ಡಿಕ್ಕಿ- ನ್ಯೂಜಿಲ್ಯಾಂಡ್‍ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು

ಹೈದರಾಬಾದ್: ಕುಡಿದು ಕಾರು ಓಡಿಸುತ್ತಿದ್ದ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. 29 ವರ್ಷದ ಸೈಯ್ಯದ್ ಅಬ್ದುಲ್ ರಹೀಮ್ ಫಹದ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ. ಮೂಲತಃ ಹೈದರಾಬಾದ್‍ನವರಾದ ಫಹದ್ ನ್ಯೂಜಿಲ್ಯಾಂಡ್‍ನ ಆಕ್‍ಲ್ಯಾಂಡ್ ನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸದ ಜೊತೆ ಟ್ಯಾಕ್ಸಿ ಚಾಲಕನಾಗಿ ಪಾರ್ಟ್ ಟೈಮ್ ಕೆಲಸವನ್ನು ಮಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಚಾಲಕನೊಬ್ಬ ಕುಡಿದು ಕಾರು ಚಾಲಯಿಸುತ್ತಿದ್ದು, ಅತೀ ವೇಗವಾಗಿ ಟ್ರಾಫಿಕ್ ಸಿಗ್ನಲ್ ದಾಟಿ […]

2 years ago

ಜನಾರ್ದನ ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್?

ಬೆಂಗಳೂರು/ಬೀದರ್: ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸಿ ಜೈಲು ಶಿಕ್ಷೆ ಅನುಭವಿಸಿರುವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಆಪ್ತ ಗೆಳೆಯ ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲು ಪ್ರಯತ್ನ ನಡೆಸುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ....

ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

2 years ago

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿ ಪ್ರಜೆಗಳಿಗೆ ದೀಪಾಳಿ ಉಡುಗೊರೆಯನ್ನು ನೀಡಿದ್ದಾರೆ. ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಿರುವ ಪಾಕ್ ಪ್ರಜೆಗಳಲ್ಲಿ ಅರ್ಹರಾಗಿರುವ ಎಲ್ಲಾ ಅರ್ಜಿದಾರರಿಗೆ ವೀಸಾ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಸುಷ್ಮಾ ಅವರು ತಮ್ಮ ಟ್ವೀಟ್‍ನಲ್ಲಿ ದೀಪಾವಳಿ...

ಟೂರ್‍ಗೆ ಬಂದು ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನಿಗೆ ಸುಷ್ಮಾ ಸ್ವರಾಜ್ ಸಹಾಯ

2 years ago

ನವದೆಹಲಿ: ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿ ಹಣ ಇಲ್ಲದೆ ಭಿಕ್ಷೆ ಬೇಡುತ್ತಿದ್ದ ರಷ್ಯಾದ ಪ್ರವಾಸಿಗೆ ಸುಷ್ಮಾ ಸ್ವರಾಜ್ ನೆರವಿನ ಹಸ್ತ ಚಾಚಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ಶ್ರೀ ಕುಮಾರಕೊಟ್ಟಂ ದೇವಾಲಯದ ಬಳಿ ರಷ್ಯಾದ ಇವಾಂಗೆಲಿನ್ ಭಿಕ್ಷೆ ಬೇಡುತ್ತಿದ್ದರು. ಈ ವಿಚಾರ ತಿಳಿದು ಮಾಧ್ಯಮವೊಂದು ಸುದ್ದಿ...

3 ವರ್ಷದ ಪಾಕ್ ಬಾಲಕಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್

2 years ago

ನವದೆಹಲಿ: ಪಾಕಿಸ್ತಾನದ ವ್ಯಕ್ತಿಯೊಬ್ಬರ ಲಿವರ್ ಕಸಿ ಹಾಗೂ 3 ವರ್ಷದ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಗಾಗಿ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಲಾಹೋರ್ ಮೂಲದ ಉಜೇರ್ ಹುಮಾಯುನ್ ಎಂಬವರ ಮನವಿಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್,...

ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

2 years ago

ನವದೆಹಲಿ: ಪಾಕಿಸ್ತಾನದಲ್ಲಿ ಹಲವು ದಶಕಗಳ ಕಾಲ ನೆಲೆಸಿ ಭಾರತಕ್ಕೆ ವಾಪಸ್ಸಾದ ಗೀತಾ ಪೋಷಕರಿಗಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ಲಕ್ಷ ರೂ.ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ. ತನ್ನ ಬಾಲ್ಯದಲ್ಲಿ ಭಾರತದ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ...

7 ವರ್ಷದ ಪಾಕ್ ಬಾಲಕಿಗೆ ಮಿಡಿದ ಸುಷ್ಮಾ ಹೃದಯ

2 years ago

ನವದೆಹಲಿ: ಪಾಕಿಸ್ತಾನದ ಕರಾಚಿ ನಗರದ ನಿವಾಸಿಯಾಗಿರುವ 7 ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ವೀಸಾವನ್ನು ನೀಡಲಾಗಿದೆ. ಈ ಕುರಿತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ನಾವು 7ರ ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ವೈದ್ಯಕೀಯ...

ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

2 years ago

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡಲು ಹೋಗಿ ತನ್ನ ಮಾನವನ್ನೇ ಹರಾಜು ಹಾಕಿ ನಗೆಪಾಟಲಿಗೆ ಪಾಕಿಸ್ತಾನ ಗುರಿಯಾಗಿದೆ. ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು...