Thursday, 25th April 2019

Recent News

7 days ago

ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಮತದಾನ ಮಾಡಿ – ಸಿದ್ದಗಂಗಾ ಶ್ರೀ

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಕರೆ ಕೊಟ್ಟಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ 116 ನೇ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸಿದ್ದಲಿಂಗ ಮಹಾಸ್ವಾಮಿಗಳು ಮತಗಟ್ಟೆಗೆ ಬಂದು ಮತದಾನ ಚಲಾವಣೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದರು. ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ […]

3 weeks ago

ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ

ತುಮಕೂರು: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ತೇಜಸ್ವಿ ಸೂರ್ಯಗೆ ಮಾಜಿ ಸಚಿವ ವಿ.ಸೋಮಣ್ಣ ಸಾಥ್ ನೀಡಿದ್ದು, ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀ ಸಿದ್ದಲಿಂಗ...

ಚುನಾವಣೆ ಮೊದಲು ಪ್ರಜೆಗಳೇ ಪ್ರಭು, ಬಳಿಕ ಗೆದ್ದವರೇ ಪ್ರಭು: ಸಿದ್ದಲಿಂಗ ಶ್ರೀಗಳು

1 month ago

-ದೇಶದಲ್ಲಿ ಕಡ್ಡಾಯ ಮತದಾನ ಕಾನೂನು ಅವಶ್ಯ -ಪ್ರತಿಯೊಬ್ಬರು ಮತ ಚಲಾಯಿಸಬೇಕು ಬೆಂಗಳೂರು: ಕಡ್ಡಾಯ ಮತದಾನ ಜಾರಿಗೆ ಕಾನೂನು ಮಾಡಬೇಕು. ಚುನಾವಣೆ ಮೊದಲು ಪ್ರಜೆಗಳೇ ಪ್ರಭುಗಳು, ಬಳಿಕ ಗೆದ್ದವರೇ ಪ್ರಭುಗಳು ಆಗ್ತಾರೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ನೆಲಮಂಗಲದಲ್ಲಿ ಹೇಳಿದ್ದಾರೆ....

ಸಿದ್ದಗಂಗಾ ಮಠದಲ್ಲಿ ಜಾನುವಾರು ಜಾತ್ರೆಯ ಸಂಭ್ರಮ

2 months ago

ತುಮಕೂರು: ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಸಿದ್ದಗಂಗೆಯಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಈಗಗಾಲೇ ಜಾನುವಾರುಗಳ ಜಾತ್ರೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. ವಿವಿಧ ತಳಿಯ ರಾಸುಗಳು ಇಲ್ಲಿಗೆ ಬಂದಿದ್ದು ರಾಸುಗಳ ಸ್ಪರ್ಧೆ ನಡೆಯುತ್ತಿದೆ....

ಸಂಪ್ರದಾಯದಂತೆ ನಗರದಲ್ಲಿ ಭಿಕ್ಷಾಟನೆ ಮಾಡಿದ ಸಿದ್ದಲಿಂಗ ಶ್ರೀಗಳು!

2 months ago

ತುಮಕೂರು: ಸಿದ್ದಗಂಗಾ ಮಠದ ಸಂಪ್ರದಾಯದಂತೆ ಸಿದ್ದಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಸಿದ್ದಲಿಂಗ ಸ್ವಾಮೀಜಿಗಳು ನಗರದಲ್ಲಿ ಭಿಕ್ಷಾಟನೆ ಮಾಡಿದ್ದಾರೆ. ನಗರದ ವಿವಿಧ ವಾಣಿಜ್ಯ ಸಂಕೀರ್ಣ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಶ್ರೀಗಳು ಭಿಕ್ಷಾಟನೆ ಮಾಡಿದ್ದಾರೆ. ಈ ವೇಳೆ ಧನ, ದವಸ-ಧಾನ್ಯಗಳನ್ನು ಭಕ್ತಾಧಿಗಳು ದಾನವಾಗಿ ನೀಡಿದ್ದಾರೆ....

ಸಿದ್ದಗಂಗಾ ಮಠಕ್ಕೆ ನಟ ಶಿವರಾಜ್‍ಕುಮಾರ್ ಭೇಟಿ

2 months ago

ತುಮಕೂರು: ಹ್ಯಾಟ್ರಿಕ್ ಹೀರೋ ನಟ ಶಿವರಾಜ್‍ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ. ಶಿವರಾಜ್‍ಕುಮಾರ್ ಅವರು ಗದ್ದುಗೆ ದ್ವಾರದ ಮುಂದೆ ಕೆಲಕಾಲ ಕೂತು ನಮಸ್ಕರಿಸಿದರು. ಬಳಿಕ ಹೊಸ ಮಠಕ್ಕೆ ಬಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ...

ದೇವರಿದ್ದಾಗ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ: ನಟ ಉಪೇಂದ್ರ

3 months ago

ತುಮಕೂರು: ನಟ ಉಪೇಂದ್ರ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದು, ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಹೋಗಿ ದರ್ಶನ ಪಡೆದಿದ್ದಾರೆ. ನಟ ಉಪೇಂದ್ರ ಅವರು ಮೊದಲಿಗೆ ಗದ್ದುಗೆಗೆ ಹೋಗಿ ಅಲ್ಲಿ ಶ್ರೀಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ. ಬಳಿಕ ಕೆಲ ಕಾಲ ಸಿದ್ದಲಿಂಗಸ್ವಾಮಿಗಳ...

ನಾವೇ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡ್ತೇವೆ: ಸಿಎಂ ಎಚ್‍ಡಿಕೆ

3 months ago

ತುಮಕೂರು: ಕೇಂದ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಸೇರಿದಂತೆ ಮಹಾಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಡೆದಾಡುವ ದೇವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಸಲ್ಲಿಸಿರುವ ಸೇವೆಯ ಬಗ್ಗೆ ಹೇಳಲು ಪದಗಳು...