Wednesday, 13th November 2019

10 months ago

ಮಾನವೀಯತೆ ಮರೆತ ಕಳ್ಳ! – ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆಯ ಸರಗಳ್ಳತನ

ಚಿಕ್ಕಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯ ಅಗಲಗುರ್ಕಿ ಬಳಿ ನಡೆದಿದೆ. ಬೈಪಾಸ್ ರಸ್ತೆಯ ಬಳಿ ಇನ್ನೋವಾ ಕಾರಿನ ಮೇಲೆ ಟಿಪ್ಪರ್ ಲಾರಿ ಹರಿದಿತ್ತು. ಪರಿಣಾಮ ಕಾರು ಚಲಾಯಿಸುತ್ತಿದ್ದ 32 ವರ್ಷದ ಮಹಿಳೆ ದೀಪಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಈ ವೇಳೆ ಕಾರಿನಲ್ಲಿ ಮಹಿಳೆಯ ರಕ್ಷಣೆಗೆ ಧಾವಿಸಿದ್ದ ಜನರ ಗುಂಪಿನಲ್ಲಿದ್ದ ಕಳ್ಳನೊಬ್ಬ ಸುಮಾರು 80 ಗ್ರಾ ಮಾಂಗಲ್ಯ ಸರ ಕಳ್ಳತನ […]

1 year ago

ಚಲಿಸುತ್ತಿದ್ದ ರೈಲಿನಲ್ಲಿ ಓಡಿ ಹೋಗಿ ಕಳ್ಳನನ್ನು ಹಿಡಿದ ರೈಲ್ವೇ ಪೊಲೀಸ್ ಪೇದೆ!

ವಿಜಯಪುರ: ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ರೈಲ್ವೇ ಪೇದೆಯೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಶ್ರೀಶಾಂತ ರಾಠೋಡ್ ಬಂಧಿತ ಆರೋಪಿ. ವಿಜಯಪುರ ತಾಲೂಕಿನ ಅತಾಲಟ್ಟಿ ಗ್ರಾಮದ ನಿವಾಸಿ ಬಾಳಕ್ಕ ಮನಗೂಳಿ ಸರ ಕಳೆದುಕೊಂಡಿದ್ದ ಮಹಿಳೆ. ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ರೈಲ್ವೇ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ....