Thursday, 23rd May 2019

18 hours ago

ಐಇಡಿ ಸ್ಫೋಟ – ರಾಜ್ಯದ ಯೋಧ ಹುತಾತ್ಮ

ಬಾಗಲಕೋಟೆ: ಐಇಡಿ ಸ್ಫೋಟಗೊಂಡ ಪರಿಣಾಮ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ರೆಜೂರಿ ಎಂಬಲ್ಲಿ ನಡೆದಿದೆ. ಶ್ರೀಶೈಲ್ ರಾಯಪ್ಪ ಬಳಬಟ್ಟಿ (34) ಹುತಾತ್ಮರಾದ ಯೋಧರಾಗಿದ್ದು, ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ನಿವಾಸಿಯಾಗಿದ್ದಾರೆ. ಪೂಂಚ್ ಗಡಿ ನಿಯಂತ್ರಣದ ರೇಖೆಯ ಬಳಿ ಐಇಡಿ ಸ್ಫೋಟಗೊಂಡಿರುವ ಪರಿಣಾಮ ಯೋಧ ರಾಯಪ್ಪ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಗೆ ಲಭಿಸಿದೆ. 12 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಯಪ್ಪ ಅವರು, 12ನೇ ಮದ್ರಾಸ್ ಇನ್ ಪೆಂಟ್ರಿ ರೆಜಿಮೆಂಟ್‍ನಲ್ಲಿ ಯೋಧರಾಗಿದ್ದರು. ಇವರಿಗೆ ಪತ್ನಿ ಹಾಗೂ […]

6 days ago

ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

ಶ್ರೀನಗರ: ಕಳೆದ ಗುರುವಾರ ಶೋಪಿಯಾನ್‍ನಲ್ಲಿ ಯೋಧರ ಗುಂಡಿನ ದಾಳಿಗೆ ಹತನಾದ ಉಗ್ರನ ಜೇಬಿನಲ್ಲಿ ಸಿಕ್ಕ ಮ್ಯಾಪ್ ಒಂದು ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ. ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನವನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಹಲವಾರು ದಾಳಿಯನ್ನು ಕಾಶ್ಮೀರದಲ್ಲಿ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಭದ್ರತಾ...

ಉತ್ತರ ಪ್ರದೇಶದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಪಾಕ್ ಜೈಲಿನಲ್ಲಿ ಪತ್ತೆ!

2 weeks ago

ಶ್ರೀನಗರ: ಕಳೆದ 5 ತಿಂಗಳ ಹಿಂದೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕಾಣೆಯಾಗಿದ್ದ ಕಾಶ್ಮೀರ ಮೂಲದ ಯುವಕ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರಪ್ರದೇಶದ ನೋಯ್ಡಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸೈಯದ್ ವಾಹಿದ್(23) ಡಿ. 12ರಂದು ವಿವಿಯಿಂದಲೇ ಕಾಣೆಯಾಗಿದ್ದನು. ಆದರೆ...

ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

3 weeks ago

ಶ್ರೀನಗರ: ಶನಿವಾರ ಮೂರು ಜನ ಶಂಕಿತ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಬಿಜೆಪಿ ಹಿರಿಯ ಮುಖಂಡ ಗುಲ್ ಮಹಮ್ಮದ್ ಮಿರ್ ಬಲಿಯಾಗಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮಹಮ್ಮದ್ ಮಿರ್ ಅವರನ್ನು ಕಾರು ಕೀ ಕೇಳುವ ನೆಪದಲ್ಲಿ ಮನೆಗೆ...

ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

3 weeks ago

ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ. ಎಫ್ 16 ವಿಮಾನವನ್ನು ಹೊಡೆದು...

ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ

3 weeks ago

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಬೆಳಗ್ಗೆ ಶೋಪಿಯನ್ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಸಾವನ್ನಪ್ಪಿದ ಇಬ್ಬರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಸಹಚರರು ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಉಗ್ರರನ್ನು ತಾರಿಕ್ ಮಾಲ್ವಿ...

ಕಾಶ್ಮೀರದಲ್ಲಿ ಕಾರ್ ಬ್ಲಾಸ್ಟ್ ಕೇಸ್ – ಪಿಎಚ್‍ಡಿ ಪದವೀಧರ ಸೇರಿ 6 ಉಗ್ರರ ಬಂಧನ!

3 weeks ago

ಶ್ರೀನಗರ: ಕಳೆದ ಮಾರ್ಚ್ 31 ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ನಡೆದ ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ 6 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆ.14ರಂದು ಪುಲ್ವಾಮದಲ್ಲಿ 30...

ಮಂಟಪದಿಂದ ಬಂದು ವಧು-ವರರಿಂದ ಮತದಾನ

1 month ago

ಶ್ರೀನಗರ: ಕರ್ನಾಟಕ ಮಾತ್ರವಲ್ಲದೇ ಇಂದು ಅನೇಕ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಯೊಬ್ಬ ಮದುಮಗನಂತೆ ಉಡುಪು ಧರಿಸಿ ಕುದುರೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಮದುವೆಯಾದ ಮರುಕ್ಷಣವೇ ನೂತನ ವಧು-ವರರು ಬಂದು ಮತದಾನ ಮಾಡಿದ್ದಾರೆ....