Friday, 20th September 2019

Recent News

2 days ago

ದುಬೈನಿಂದ ವಾಟ್ಸಪ್‍ನಲ್ಲೇ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಖ್

ಶಿವಮೊಗ್ಗ: ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದ್ದರೂ ದುಬೈನಿಂದ ಪತಿ ಮಹಾಶಯನೊಬ್ಬ ವಾಟ್ಸಾಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ. ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಪತ್ನಿಗೆ ತಲಾಖ್ ನೀಡಿದ ಪತಿ. ಮುಸ್ತಫಾ ಬೇಗ್ ಅದೇ ಬಡಾವಣೆಯ ಆಯಿಷಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಕೆಲಸಕ್ಕಾಗಿ ದುಬೈಗೆ ತೆರಳಿದ್ದ. ವರ್ಷಕ್ಕೆ ಎರಡು ಬಾರಿ ಮನೆಗೆ ಬಂದು, ಪತ್ನಿ ಹಾಗೂ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದ. ಇದನ್ನೂ ಓದಿ: ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ […]

3 days ago

ಡಿಕೆಶಿಗೆ ಜಾಮೀನು ಸಿಕ್ಕಿಲ್ಲ ಅಂದ್ರೆ ತಪ್ಪು ಮಾಡಿದ್ದಾರೆ ಎಂಬರ್ಥವಿರಬಹುದು: ಈಶ್ವರಪ್ಪ

ಶಿವಮೊಗ್ಗ: ಇಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಶಿವಕುಮಾರ್ ತಪ್ಪಿತಸ್ಥರಾಗಿದ್ದರೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲ ಎಂದರೆ ಹೊರ ಬರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಅವರು ಯಾವುದೇ ತನಿಖೆಯನ್ನು ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಈ ಮೊದಲೇ...

ಕಾಂಪೌಂಡ್ ಹಾರಿ ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ

5 days ago

ಶಿವಮೊಗ್ಗ: ಮನೆಯ ಒಳಗಿದ್ದ ಡ್ಯಾಶ್‍ಹಾಂಡ್ ಜಾತಿಯ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಹೊಳೆಕೊಪ್ಪ ಗ್ರಾಮದ ರಘುನಾಥ್ ಎಂಬುವವರ ಮನೆಯಲ್ಲಿ ಶುಕ್ರವಾರ ರಾತ್ರಿ 1.27 ರ ಸಮಯದಲ್ಲಿ ಈ...

ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

6 days ago

ಶಿವಮೊಗ್ಗ: ನಾಲ್ಕೂವರೆ ಅಡಿಯ ಉದ್ದದ ಹಾವು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿತ್ತು. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದ ವಿಶೇಷ ಅತಿಥಿಯನ್ನು ಕಂಡು ಒಂದು ಕ್ಷಣ ಪೊಲೀಸರೇ ಭಯಭೀತರಾಗಿದ್ದರು. ಜಯನಗರ ಠಾಣೆಯಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿತ್ತು. ಠಾಣೆಯೊಳಗೆ ಪ್ರವೇಶಿಸಿದ್ದ ಹಾವು ಠಾಣೆಯ ಟೇಬಲ್...

ಗಣಪತಿ ವಿಸರ್ಜನೆ ವೇಳೆ ಪೊಲೀಸರ 27 ಮೊಬೈಲ್ ಕದ್ದ ಕಳ್ಳರು

6 days ago

ಶಿವಮೊಗ್ಗ: ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆಯ ಬಂದೋಬಸ್ತ್ ಗೆ ಹೊರ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಯವರಿಗೆ ನಗರದ ಆರ್ ಎಂ ಎಲ್ ಕಲ್ಯಾಣ ಮಂದಿರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಕಳ್ಳರು ಅವರ ಮೊಬೈಲ್ ಕದ್ದಿದ್ದಾರೆ. ಪೊಲೀಸರು ಮಲಗಿದ್ದ...

ಡಿಕೆಶಿ ಸತ್ಯ ಹೇಳಿದ್ರೆ ಇಡಿಯವರು ಸಮಾಧಾನ ಆಗ್ತಾರೆ: ಸಿಟಿ ರವಿ

1 week ago

– ಭ್ರಷ್ಟಾಚಾರಿಗಳಿಗೆ ಜಾತಿ ಎಂಬುದಿಲ್ಲ ಶಿವಮೊಗ್ಗ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇರುವ ಸತ್ಯ ಹೇಳಿದರೆ ಇಡಿಯವರು ಸಮಾಧಾನವಾಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಡಿ ಅಧಿಕಾರಿಗಳಿಗೆ ಡಿಕೆಶಿ ಅವರಿಂದ ಸಮಗ್ರ...

ಮತ್ತೆ ಭಾರೀ ಮಳೆ – ಉತ್ತರ ಕನ್ನಡ, ದಕ್ಷಿಣಕನ್ನಡ ಚಿಕ್ಕಮಗಳೂರು, ಕೊಡಗಿನಲ್ಲಿ ಪ್ರವಾಹ ಭೀತಿ

2 weeks ago

– ಕುಮಾರಾಧಾರ ಸ್ನಾನಘಟ್ಟ ಮುಳುಗಡೆ – ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಮಹಾಪ್ರವಾಹಕ್ಕೆ ನಲುಗಿ ಈಗಷ್ಟೇ ಚೇತರಿಸಿಕೊಳ್ತಿದೆ. ಆದರೆ ಅಷ್ಟರಲ್ಲೇ ವರುಣದೇವ ಸೆಕೆಂಡ್ ರೌಂಡ್ ಆಟಕ್ಕೆ ನಿಂತಿದ್ದಾನೆ. ಮಳೆಯಿಂದ ಉತ್ತರ ಕರ್ನಾಟಕ, ಕಾಫಿನಾಡು, ಶಿವಮೊಗ್ಗ ಈಗಾಗಲೇ...

ಮತ್ತೆ ಅಬ್ಬರಿಸುತ್ತಿರುವ ಮಳೆರಾಯ- ಕೊಡಗು, ಚಿಕ್ಕಮಗ್ಳೂರು, ಶಿವಮೊಗ್ಗದಲ್ಲಿ ರೆಡ್ ಅಲರ್ಟ್

2 weeks ago

-ಕೊಡಗು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಕೊಡಗು/ಚಿಕ್ಕಮಗಳೂರು/ಶಿವಮೊಗ್ಗ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಬಿಟ್ಟು ಬಿಡದೆ ಆರ್ಭಟಿಸುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಬಿಟ್ಟುಬಿಡದೆ ಸುರಿಯುತ್ತಿರುವ...