Sunday, 19th August 2018

Recent News

3 weeks ago

ಮೈಸೂರಿನಿಂದ ಬೆಂಗಳೂರಿಗೆ ರಸ್ತೆಯ ಮೂಲಕ ಸಾಗಿತು ಜೀವಂತ ಹೃದಯ

ಬೆಂಗಳೂರು: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಿಂದ ನಗರದ ರಾಮಯ್ಯ ಆಸ್ಪತ್ರೆಗೆ ರಸ್ತೆಯ ಮೂಲಕವೇ ಜೀವಂತ ಹೃದಯ ಸಾಗಿಸಲಾಗಿದೆ. ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕಾರ್ಡಿಯೋ ಮೈಯೋಪತಿ ಖಾಯಿಲೆಯಿಂದ 19 ವರ್ಷದ ಯುವಕನ ಬಳಲುತ್ತಿದ್ದ. ಹೀಗಾಗಿ ಪ್ರಪ್ರಥಮ ಬಾರಿಗೆ ರಸ್ತೆಯ ಮೂಲಕ ಮೈಸೂರಿನಿಂದ ನಗರದ ರಾಮಯ್ಯ ಆಸ್ಪತ್ರೆಗೆ ಹೃದಯವನ್ನು ರವಾನಿಸಲಾಗಿದೆ. ರಾಮಯ್ಯ ಆಸ್ಪತ್ರೆಯ ಇತಿಹಾಸದಲ್ಲಿ ಇದು 20ನೇ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಈ ಕುರಿತು ರಾಮಯ್ಯ ಆಸ್ಪತ್ರೆಯ ಹೃದಯಕಸಿ ತಜ್ಞರಾದ ಡಾ.ನಾಗಮಲ್ಲೇಶ್ ಮಾತನಾಡಿ, ಮೈಸೂರಿನಲ್ಲಿ ಬ್ರೈನ್‍ಡೆಡ್ ಆದ ರೋಗಿಯ ಹೃದಯವನ್ನು […]

1 month ago

9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ...

ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

6 months ago

ತುಮಕೂರು: ಮಹಿಳೆಯೊರ್ವಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಬರೋಬ್ಬರಿ 99 ಕಲ್ಲುಗಳನ್ನು ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ಸಲ್ಮಾ ಭಾನು (45) ಎಂಬುವರ ದೇಹದಲ್ಲಿ ಪತ್ತೆಯಾದ ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ನಗರದ ಶಾಂತಿನಗರದ ನಿವಾಸಿಯಾದ ಸಲ್ಮಾ ಹೊಟ್ಟೆ...

ಬಾರ್ಬಿಯಂತೆ ಕಾಣಲು ತಿಂಗಳಿಗೆ ಭಾರೀ ಹಣ ಖರ್ಚು ಮಾಡ್ತಾಳೆ ಈ ಯುವತಿ!- ವಿಡಿಯೋ

6 months ago

ಪ್ರೇಗ್: ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ. ಗೇಬ್ರಿಯೆಲಾ ಜಿರಾಕೊವಾ (18) ಬಾರ್ಬಿಯಂತೆ ಕಾಣಲು ಶಸ್ತ್ರಚಿಕಿತ್ಸೆ ಮಾಡಿಕೊಂಡ ಯುವತಿ. ಗೇಬ್ರಿಯೆಲಾ 16 ವರ್ಷದಿಂದ ಇರುವಾಗಲೇ ಬಾರ್ಬಿಯ ಹುಚ್ಚು...

ವ್ಯಕ್ತಿಯ ತಲೆಯಿಂದ 1.8 ಕೆಜಿ ತೂಕದ ಗೆಡ್ಡೆ ತೆಗೆದ ವೈದ್ಯರು!

6 months ago

ಮುಂಬೈ: ವ್ಯಕ್ತಿಯ ತಲೆಯಲ್ಲಿ ಬೆಳೆದಿದ್ದ 1.8 ಕೆಜಿ ತೂಕದ ಗೆಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಮುಂಬೈನ ನಾಯರ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. 31 ವರ್ಷದ ಬಟ್ಟೆ ವ್ಯಾಪಾರಿ ಸಂತಲಾಲ್ ಪಾಲ್ ಅವರ ತಲೆಯ ಮೇಲೆ ದೈತ್ಯ ಗೆಡ್ಡೆ ಬೆಳೆದು, ಅವರಿಗೆ ಎರಡು...

ಉಡುಪಿಯ ವಿದ್ಯಾರ್ಥಿನಿ ಬದುಕಿಸಲು 150 ಕಿ.ಮೀ ಝೀರೋ ಟ್ರಾಫಿಕ್ ನಿರ್ಮಿಸಿ ಬೆಂಗ್ಳೂರಿಗೆ ರವಾನೆ

8 months ago

ಉಡುಪಿ: ರಾಜ್ಯದ ಅತೀದೊಡ್ಡ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಆರನೇ ತರಗತಿ ವಿದ್ಯಾರ್ಥಿನಿಯನ್ನು ಉಡುಪಿಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಉಡುಪಿಯ ಬೈಂದೂರಿನ ಗ್ರಾಮದ ಆರನೇ ತರಗತಿ ವಿದ್ಯಾರ್ಥಿನಿ ಅನುಶಾ. ಈಕೆ ಗಂಭೀರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು....

ಮುಸ್ಲಿಂ ಮಹಿಳೆ ಬಾಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಆಪರೇಷನ್- ವೈದ್ಯರ ವಿರುದ್ಧ ಮಹಿಳೆ ದೂರು

8 months ago

ಚಿಕ್ಕಬಳ್ಳಾಪುರ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ವೇಳೆ ವೈದ್ಯರೊಬ್ಬರು ಮುಸ್ಲಿಂ ಮಹಿಳೆಯಿಂದ ಕೃಷ್ಣ ಕೃಷ್ಣ ಅಂತ ಹೇಳಿಸಿ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಾಸೀಮಾ ಬಾನು ಸೊಣ್ಣಶೆಟ್ಟಿಹಳ್ಳಿಯಲ್ಲಿರುವ ತಮ್ಮ ಅಜ್ಜಿ ಮನೆಗೆ ಹೋಗಿದ್ದರು. ಪ್ರತಿ ತಿಂಗಳು...

65ರ ವ್ಯಕ್ತಿಯ ಹೃದಯ-ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆ ಹೊರತೆಗೆದ ವೈದ್ಯರು

8 months ago

ಆಲಿಘರ್: 65 ವರ್ಷದ ವ್ಯಕ್ತಿಯ ದೇಹದಲ್ಲಿ ಹೃದಯ ಹಾಗೂ ಶ್ವಾಸಕೋಶದ ಮಧ್ಯೆ ಇದ್ದ 3 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆಲಿಘರ್ ನಿವಾಸಿಯಾದ ಹೇಮಂದ್ರ ಗುಪ್ತಾ ಶಸ್ತ್ರಚಿಕಿತ್ಸೆಗೆ ಒಳಗದ ವ್ಯಕ್ತಿ. ಇಲ್ಲಿನ ಎಎಮ್‍ಯು ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಂದು ವೈದ್ಯರು...