Wednesday, 22nd May 2019

4 weeks ago

ಬಿರುಗಾಳಿ ಸಹಿತ ಭಾರೀ ಮಳೆ- ಮೇಲ್ಛಾವಣಿ ಕುಸಿದು ವೃದ್ಧೆ ಸಾವು!

ಮೈಸೂರು: ಮಂಗಳವಾರ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹನಗೂಡು ಹೋಬಳಿಯಲ್ಲಿ ನಡೆದಿದೆ. ಹನಗೂಡಿನಲ್ಲಿ ಭಾರೀ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಭಾರೀ ಮಳೆಗೆ ವೃದ್ಧೆ ದೊಡ್ಡತಾಯಮ್ಮ(70) ಸಾವನ್ನಪ್ಪಿದ್ದಾರೆ. ಹನಗೂಡು ಹೋಬಳಿಯಾದ್ಯಂತ ಮಳೆರಾಯನ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾರೀ ಬಿರುಗಾಳಿಗೆ 50ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದೆ. ಮಳೆಗೆ ತಟ್ಟೆಕೆರೆ, ಅರಸು ಕಲ್ಲಹಳ್ಳಿ, ಹುಣಸೆಗಾಲದಲ್ಲಿ […]

1 month ago

ಕಡೇ ಕ್ಷಣದಲ್ಲಿ ಮತ ಚಲಾಯಿಸಿದ 103 ವರ್ಷದ ವೃದ್ಧೆ!

ಹಾಸನ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲನೇ ಹಂತದ ಮತ ಚಲಾವಣೆ ಮುಕ್ತಾಯವಾಗಿದ್ದು, ಕಡೇ ಕ್ಷಣದಲ್ಲಿ 103 ವರ್ಷದ ವಯೋವೃದ್ಧೆಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ 155, ಮಾರೇನಹಳ್ಳಿಯಲ್ಲಿ ಕಾಳಮ್ಮ(103) ವ್ಹೀಲ್ ಚೇರ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ. 103 ವರ್ಷವಾಗಿದ್ದರೂ ಖುಷಿಯಿಂದ ಬಂದು ವೃದ್ಧೆ ಮತ ಹಾಕಿದ್ದಾರೆ....

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ವೃದ್ಧೆ ಸಾವು

1 month ago

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು ವೃದ್ಧೆ ಮೃತಪಟ್ಟ ಘಟನೆ ಹಾಸನ ಬೇಲೂರಿನ ವಿಷ್ಣು ಸಮುದ್ರ ಕೆರೆ ಬಳಿ ನಡೆದಿದೆ. ಬಸುಬ್ಬಿ (55) ಮೃತ ವೃದ್ಧೆ. ಒಂದೇ ಕುಟುಂಬದ ಮೂವರು ಅರೇಹಳ್ಳಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ...

ಮಹಿಳಾ ಪೇದೆ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

1 month ago

ಲಕ್ನೋ: ಉತ್ತರ ಪ್ರದೇಶದ ಮಹಿಳಾ ಪೇದೆಯೊಬ್ಬರು ಅಜ್ಜಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೇದೆಯ ಕೆಲಸಕ್ಕೆ ಸಾರ್ವಜನಿಕರು ಅಪಾರ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಮಾನ್ವಿ ವಯಸ್ಸಾದ ಅಜ್ಜಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ...

ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

2 months ago

ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮದ್ದೂರಿನ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ಅವರಿಗೆ ವೃದ್ಧೆಯೊಬ್ಬರು ಮುತ್ತು ನೀಡಿ ಶುಭ ಹಾರೈಸಿದ್ದಾರೆ. ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು ಸೇರಿದಂತೆ ಹಲವು...

ಮಾತು ಬರದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

2 months ago

ಬೆಂಗಳೂರು: ಕೃಷಿ ಭೂಮಿಯ ಜೋಳದ ಪೊದೆಯೊಂದರಲ್ಲಿ ಮಾತು ಬರದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡಬೆಲೆ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ...

ಕರ್ನಾಟಕದಲ್ಲಿ ನಾಪತ್ತೆಯಾದ ವೃದ್ಧೆ ದೂರದ ಮನಾಲಿಯಲ್ಲಿ ಪತ್ತೆ

2 months ago

ದಾವಣಗೆರೆ: ಮಾನಸಿಕ ಅಸ್ವಸ್ಥತೆಯುಳ್ಳ ಕರ್ನಾಟಕದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದು, ಇದೀಗ ದೂರದ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪತ್ತೆಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮೂಲದ ಸುಶೀಲಮ್ಮ (50) ಮಾನಸಿಕ ಅಸ್ವಸ್ಥೆಯಾಗಿದ್ದು, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಕರ್ನಾಟಕ ಬಿಟ್ಟು 2014ರಲ್ಲಿ ಹಿಮಾಚಲಪ್ರದೇಶಕ್ಕೆ ಹೋಗಿದ್ದರು....

ನೀರು ಕೇಳಿದ ಕೆಲಸದವರಿಗೆ ಕಾಫಿ ಮಾಡಿ ಕೊಟ್ಟ ಮಹಾತಾಯಿಯನ್ನೇ ಕೊಲೆಗೈದ್ರು!

3 months ago

ಮಡಿಕೇರಿ: ತೋಟದ ಒಂಟಿ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಮಡಿಕೇರಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ. 74 ವರ್ಷದ ರಾಧಾ ಕೊಲೆಯಾದ ವೃದ್ಧೆಯಾಗಿದ್ದು, ಫೆ.21 ರಂದು ಮನೆಯಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಮನೆಯಲ್ಲಿದ್ದ ಅಮ್ಮ...