Friday, 20th September 2019

2 months ago

ವಿಶ್ವಕಪ್ ಸೋಲಿನ ಬಗ್ಗೆ ಕೊಹ್ಲಿ ಮನದಾಳದ ಮಾತು

ನವದೆಹಲಿ: ಈ ಬಾರಿ ವಿಶ್ವಕಪ್ ಕ್ರಿಕೆಟ್‍ನ ಸೆಮಿಫೈನಲ್ ಹಂತದಲ್ಲಿ ಟೀಂ ಇಂಡಿಯಾ ಎಡವಿತ್ತು. ಭಾರತಕ್ಕೆ ಹಿಂದಿರುಗಿರುವ ಟೀಂ ಇಂಡಿಯಾ ಆಟಗಾರರು ಸೇರಿದಂತೆ ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಗ್ಗೆ ಮಾತನಾಡಿರಲಿಲ್ಲ. ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ್ದಾರೆ. ವಿಶ್ವಕಪ್ ಪಂದ್ಯದಿಂದ ಹೊರಗೆ ಬಂದಾಗ ಜನರು ಅಷ್ಟು ಬೇಗ ನಮ್ಮನ್ನು ಸ್ವೀಕಾರ ಮಾಡಲ್ಲ. ನಾವು ಮಲಗಿ ಎದ್ದ ಮೇಲೆಯೂ ಕೆಲವೊಮ್ಮೆ ಸೋಲಿನ ಬಗ್ಗೆ ಚಿಂತಿಸುತ್ತೇವೆ. ನಾವು […]

2 months ago

ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿಯ ಸೂಪರ್ ಓವರ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕಿವೀಸ್ ಪರ ಪ್ರಮುಖ ಪಾತ್ರವಹಿಸಿದ ಆಲ್‍ರೌಂಡರ್ ಜಿಮ್ಮಿ ನೀಶಮ್ ಬಾಲ್ಯದ ಕೋಚ್ ಸೂಪರ್ ಓವರ್ ವೇಳೆಯೇ ಸಾವನ್ನಪ್ಪಿದ್ದರು. ಈ ಕುರಿತು ಅವರ ಪುತ್ರಿ ಮಾಹಿತಿ ನೀಡಿದ್ದಾರೆ. Dave Gordon, my High School teacher, coach...

ವಿಶ್ವಕಪ್ ಬಳಿಕ ಧೋನಿ ನಿವೃತ್ತಿ?

3 months ago

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಪಂದ್ಯಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಸಮಯದಲ್ಲಿ ಏನು ಹೇಳಲು ಸಾಧ್ಯವಿಲ್ಲ. ವಿಶ್ವಕಪ್ ನಲ್ಲಿ ಆಡುವ ಪಂದ್ಯಗಳೇ ಧೋನಿಯವರ...

ಇಂಟರ್ ನೆಟ್ ಸೆನ್ಷನಲ್ ಅಜ್ಜಿಗೆ ಗುಡ್ ನ್ಯೂಸ್ ನೀಡಿದ ಆನಂದ್ ಮಹಿಂದ್ರಾ

3 months ago

ಬೆಂಗಳೂರು: ಮಂಗಳವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಎಂಟ್ರಿ ನೀಡಿದೆ. ಪಂದ್ಯದಷ್ಟೇ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ 87 ವರ್ಷದ ಚಾರುಲತಾ ಪಟೇಲ್ ಒಂದೇ ದಿನದಲ್ಲಿ ಭಾರತೀಯರ ಫೇವರೇಟ್ ಆಗಿದ್ದಾರೆ. ಇದೀಗ ಮಹಿಂದ್ರಾ...

ಪಾಕ್ ಗೆಲುವಿನ ಬಳಿಕ ಸಾನಿಯಾ ಟ್ವೀಟ್ – ನೆಟ್ಟಿಗರಿಂದ ಟ್ರೋಲ್

3 months ago

ನವದೆಹಲಿ: 2019ರ ವಿಶ್ವಕಪ್ ನಲ್ಲಿ ಗೆಲುವಿನ ನಾಗಲೋಟದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನ ಬುಧವಾರ ಸೋಲಿನ ರುಚಿಯನ್ನು ತೋರಿಸಿದೆ. ಸತತ ಎರಡು ಸೋಲುಗಳಿಂದ ಟೀಕೆಗೊಳಗಾಗಿದ್ದ ಪಾಕ್ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಕ್ ತಂಡ ಗೆಲುವಿನ ಬಳಿಕ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ...

ಇಂಡೋ-ವಿಂಡೀಸ್ ನಡುವೆ ಕದನ-ಮ್ಯಾಂಚೇಸ್ಟರ್ ನಲ್ಲಿ ಸಿದ್ಧ ರಣಾಂಗಣ

3 months ago

ಮ್ಯಾಂಚೆಸ್ಟರ್: ವಿಶ್ವಕಪ್ ಮಹಾಯುದ್ಧದಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ. ವಿಶ್ವಕಪ್ ಕದನದಲ್ಲಿ 1992 ರ ಬಳಿಕ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಗೆಲುವನ್ನೇ...

ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

3 months ago

ಸೌತಾಂಪ್ಟನ್: ಹರಿಣಗಳ ಬೇಟೆಯಾಡಿ, ಕಾಂಗರೂಗಳ ಹುಟ್ಟಡಗಿಸಿ, ಪಾಕ್ ತಂಡವನ್ನ ಬಡಿದಟ್ಟಿದ ಟೀಂ ಇಂಡಿಯಾ ವಿಶ್ವಕಪ್‍ನಲ್ಲಿ ವಿರಾಜಮಾನವಾಗಿದೆ. ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ವಿಶ್ವಕಪ್‍ನಲ್ಲಿ ವಿಜಯಿಶಾಲಿಯಾಗಿ ಮುನ್ನುಗ್ಗುತ್ತಿರುವ ಕೊಹ್ಲಿ ಸೈನ್ಯಕ್ಕೆ ಕ್ರಿಕೆಟ್ ಶಿಶು ಅಪ್ಘಾನಿಸ್ತಾನ್ ಪಡೆ ಇಂದು ಸವಾಲೊಡ್ಡಲಿದೆ. ಸೌತಾಂಪ್ಟನ್‍ನಲ್ಲಿ ಇಂದು ಮಧ್ಯಾಹ್ನ...

ಇಂಡೋ-ಪಾಕ್ ಮ್ಯಾಚ್ ಬಳಿಕ ಸಾನಿಯಾ, ವೀಣಾ ನಡುವೆ ಟ್ವೀಟ್ ವಾರ್

3 months ago

ನವದೆಹಲಿ: ಭಾನುವಾರ ನಡೆದ ಭಾರತ ವಿರುದ್ಧ ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಇಡೀ ದೇಶವೇ ಸಂಭ್ರಮಿಸಿದೆ. ಇದರ ಬೆನ್ನಲ್ಲಿ ಟಿನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ನಟಿ ವೀಣಾ ಮಲಿಕ್ ನಡುವೆ ಟ್ವೀಟ್ ವಾರ್...