Recent News

2 months ago

ಕೊಡಗಿನಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆ : ಕುಶಾಲನಗರ – ಮೈಸೂರು ಸಂಪರ್ಕ ಕಡಿತ

ಮಡಿಕೇರಿ: ವರುಣನ ಅಬ್ಬರಕ್ಕೆ ಕೊಡಗಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಈವರೆಗೆ 7 ಜನರು ಮೃತಪಟ್ಟಿದ್ದು, 8 ಮಂದಿ ಕಣ್ಮರೆಯಾಗಿದ್ದಾರೆ. ಕುಶಾಲನಗರದ ಕೊಪ್ಪ ಬಳಿ ಕಾವೇರಿ ನದಿಗೆ ಕಟ್ಟಲಾದ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕುಶಾಲನಗರ- ಮೈಸೂರು ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ. ಚಾರ್ಮಾಡಿ ಘಾಟಿ ಈಗಾಗಲೇ ಕುಸಿದಿದೆ. ಇಂದು ಸಕಲೇಶಪುರದ ಬಳಿ ಗುಡ್ಡ ಕುಸಿದ ಪರಿಣಾಮ ಮಡಿಕೇರಿ ಮೂಲಕ ಮಂಗಳೂರಿಗೆ ಹೋಗಬಹುದಾಗಿತ್ತು. ಆದರೆ ಈಗ ಕೊಪ್ಪ ಸೇತುವೆ ಮುಳುಗಡೆಯಾಗಿದೆ. ಕೊಡಗಿನಲ್ಲಿ ಮಳೆ ಜಾಸ್ತಿ ಆಗುತ್ತಿದೆ. ಮಳೆ ನಿಂತರೆ ಮಾತ್ರ […]

1 year ago

ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ವ್ಯಕ್ತಿಯ 2 ಕಾಲುಗಳೇ ಮುರಿಯಿತು!

ಮಡಿಕೇರಿ: ಬಸ್ ಇಳಿದು ನಿಂತಿದ್ದ ವ್ಯಕ್ತಿ ಮೇಲೆ ಅದೇ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ವಿರಾಜಪೇಟೆಯ ಕಡಂಗದಲ್ಲಿ ನಡೆದಿದೆ. ಮೈಜುಂ ಎನಿಸೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 39 ವರ್ಷದ ಬಿಶಾಲ್ ಗಂಭೀರ ಗಾಯಗೊಂಡ ವ್ಯಕ್ತಿ. ಬಿಶಾಲ್ ಬಸ್ಸಿನಲ್ಲಿ ಬಂದು ಇಳಿದು ನಿಂತಿದ್ದರು. ಈ ವೇಳೆ ಅದೇ ಬಸ್ ಅವರ ಮೇಲೆ ಹರಿದಿದೆ....

ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

1 year ago

ಕಾಫಿ ಘಮದ ನಡುವೆ ಕರಿ ಮೆಣಸಿನ ಘಾಟು. ಮಡಿಕೇರಿಯ ಚಳಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ನು..! ಅರೆ ಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರೋ ಕೂರ್ಗ್ ಪ್ರವಾಸಿಗರ ಎವರ್ ಗ್ರೀನ್ ಹಾಟ್ ಸ್ಪಾಟ್..!ಎತ್ತ ನೋಡಿದ್ರೂ ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ...

ನಡುರಸ್ತೆಯಲ್ಲಿ ಕಿಸ್ಸಿಂಗ್ ಸೀನ್ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

2 years ago

ಮಡಿಕೇರಿ: ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬಲೂನ್ ಮರೆಮಾಡಿ ಕಿಸ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ಹೃದಯಭಾಗ ಗಡಿಯಾರ ಕಂಬದ ಬಳಿ ಈ ಘಟನೆ ನಡೆದಿದೆ. ಕಿಸ್ ಕೊಡೋದನ್ನ ನೋಡಲು ಜನ ಜಮಾಯಿಸಿದ್ದು, ಅಲ್ಲದೇ ಆ ದೃಶ್ಯವನ್ನು...

ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

2 years ago

ಮಡಿಕೇರಿ: ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮಕ್ಕೆ ಆಗಮಿಸಿದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಡೋಂಗಿ ಬಾಬಾ ಇಕ್ಬಾಲ್ ಬಾಬಾ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಾರ್ಯ ಚಟುವಟಿಕೆ...

ಸೋಮವಾರ ಕಿರಿಕ್ ಜೋಡಿಗೆ ಎಂಗೇಜ್‍ಮೆಂಟ್: ವಿರಾಜಪೇಟೆಯಲ್ಲಿ ಸಕಲ ಸಿದ್ಧತೆ

2 years ago

ಮಡಿಕೇರಿ: ಸ್ಯಾಂಡಲ್‍ವುಡ್‍ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಕಿರಿಕ್ ಜೋಡಿಗಳಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಈಗ ತಾರಾ ಜೋಡಿಗಳಾಗುತ್ತಿದ್ದು, ಅವರ ಮದುವೆ ನಿಶ್ಚಿತಾರ್ಥ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ರಶ್ಮಿಕಾ ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸೆರೆನಿಟಿ ಹಾಲ್...

ವಿದ್ಯುತ್ ಸ್ಪರ್ಶಿಸಿ ಎರಡು ಆನೆ ಸಾವು-ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ ಮತ್ತೊಂದು ಆನೆ

2 years ago

ಮಡಿಕೇರಿ: ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವನಪ್ಪಿದ್ದು, ಮತ್ತೊಂದು ಆನೆ ತನ್ನ ಸಂಗಡಿಗರ ಸಾವಿನಿಂದ ಕೆಂಗೆಟ್ಟು ಘೀಳಿಡುತ್ತಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ತೋಟವೂಂದರಲ್ಲಿ ಬೈನೆ ಮರ ತಿನ್ನಲು ಬಂದು ವಿದ್ಯುತ್ ತಂತಿ ತಲುಗಿ ಸಾವನ್ನಪ್ಪಿದೆ. ಆನೆಗಳು ಗ್ರಾಮದ ಪಾಳುಬಿದ್ದ...

ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

3 years ago

ಕೊಡಗು: ತಾಯಿಯಿಂದ ಬೇರ್ಪಟ್ಟು ಅಡವಿಯ ಮಡಿಲಲ್ಲಿ ಒಂಟಿಯಾಗಿದ್ದ ಮುದ್ದಾದ ಮರಿಯಾನೆಗೆ ಕೊನೆಗೂ ಆಶ್ರಯ ಸಿಕ್ಕಿದೆ. ಅನಾಥವಾಗಿದ್ದ ಮರಿಯಾನೆಯನ್ನು ನಾಗರಹೊಳೆಯ ಅರಣ್ಯಾಧಿಕಾರಿಗಳು ಹಿಡಿದು ಕೊಡಗಿನ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ನೀಡಿದ್ದಾರೆ. ಮುದ್ದಾದ ಮರಿಯಾನೆಯನ್ನು ಮಾವುತರು ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ...