Monday, 19th November 2018

Recent News

2 days ago

ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

-ರಾಜಸ್ಥಾನ ಸಿಎಂ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಸ್ವಂತ್ ಸಿಂಗ್ ಪುತ್ರ ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರನ್ನು ಸೋಲಿಸಲು ಕಾಂಗ್ರೆಸ್ ಪ್ರಬಲ ಅಸ್ತ್ರ ಪ್ರಯೋಗ ಮಾಡಿದ್ದು, ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆಗೆ ನವೆಂಬರ್ 19 ಕೊನೆಯ ದಿನವಾಗಿದ್ದು, ಇಂದು ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ವಸುಂದರಾ ರಾಜೇ ಅವರಿಗೆ ಶಾಕ್ ಕೊಟ್ಟಿದೆ. ಮುಖ್ಯಮಂತ್ರಿ ವಸುಂದರಾ ರಾಜೇ ಸ್ಪರ್ಧಿಸಿರುವ […]

1 week ago

ವಿಧಾನಸಭಾ ಚುನಾವಣೆ ಮುನ್ನಾದಿನವೇ ಛತ್ತೀಸ್‍ಗಡನಲ್ಲಿ ಗುಂಡಿನ ಚಕಮಕಿ

ರಾಯಪುರ್: ಛತ್ತೀಸ್‍ಗಡ ವಿಧಾಸಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಮಾವೋವಾದಿಗಳು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದ್ದು, ಓರ್ವ ಮಾವೋವಾದಿ ಬಲಿಯಾಗಿದ್ದಾನೆ. ಭದ್ರತಾ ಸಿಬ್ಬಂದಿ ಇರುವ ಸ್ಥಳಗಳ ಮೇಲೆ ಹಂತ ಹಂತವಾಗಿ ಆರು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಮಾವೋವಾದಿಗಳು ಸಿಡಿಸಿದ್ದಾರೆ. ಇದರಿಂದಾಗಿ ಗಡಿಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ...

ನಾನೇ ಸೀನಿಯರ್ ರೌಡಿ, ನನಗೆ ಟಿಕೆಟ್ ಕೊಡಿ: ಕಾಂಗ್ರೆಸ್ ಮುಖಂಡ – ವಿಡಿಯೋ ವೈರಲ್

3 weeks ago

ಹೈದರಾಬಾದ್: ನಾನು ಸೀನಿಯರ್ ರೌಡಿಯಾಗಿದ್ದು, ನನಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕರಿಗೆ ಬೇಡಿಕೆ ಇಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್...

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್-ಪ್ರಣಾಳಿಕೆ ಬದಲಿಸಲು ಮುಂದಾದ ಭಾಜಪ 

3 weeks ago

ಭೋಪಾಲ್: ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಲಿದೆ ಎಂಬುವುದನ್ನು ಹಲವು ಸರ್ವೆಗಳು ಹೇಳಿವೆ. ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ತೀವ್ರ...

ಟೈಮ್ಸ್ ನೌ ಸಮೀಕ್ಷೆ – ರಾಜಸ್ಥಾನದಲ್ಲಿ ಕೈ, ಮಧ್ಯಪ್ರದೇಶ, ಛತ್ತೀಸ್‍ಗಢದ ಮತ್ತೆ ಅರಳಲಿದೆ ಕಮಲ

1 month ago

ನವದೆಹಲಿ: 2019 ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆ ಎಂದೇ ಕರೆಯಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಟೈಮ್ಸ್ ನೌ ವಾಹಿನಿ ಸಮೀಕ್ಷೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೆ, ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಬಿಜೆಪಿ ಮತ್ತೆ...

ಇವಿಎಂ ಹ್ಯಾಕ್ ಮಾಡಿ ಗೆದ್ದಿದ್ದಾರೆ: ಹೈಕೋರ್ಟ್ ಮೆಟ್ಟಿಲೇರಿದ ಕೈ ಮಾಜಿ ಶಾಸಕರು

5 months ago

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿ ಕಂಗಾಲಾಗಿರುವ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕರು, ವಿದ್ಯುನ್ಮಾನ ಮತ ಯಂತ್ರಗಳು ಹ್ಯಾಕ್ ಆಗಿವೆ ಎಂದು ಆರೋಪಿಸಿ ಹೈಕೋರ್ಟ್ ಮೊರೆಹೋಗಿದ್ದಾರೆ. ಜಿಲ್ಲೆಯ ಕೆ.ಆರ್. ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಚಾಮರಾಜ ಕ್ಷೇತ್ರದ ಮಾಜಿ...

60 ಲಕ್ಷ ನಕಲಿ ಮತದಾರರ ತನಿಖೆಗೆ ಆಯೋಗದಿಂದ ತಂಡ ರಚನೆ

6 months ago

ನವದೆಹಲಿ:ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ನೋಂದಣಿಯಾಗಿದೆ ಎನ್ನುವ ಆರೋಪದ ಮೇಲೆ ಚುನಾವಣಾ ಆಯೋಗ ತನಿಖೆ ಶುರುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಚುನಾವಣಾ ಆಯೋಗ ನಾಲ್ಕು ತಂಡವನ್ನು ರಚಿಸಿದೆ. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇದ್ದು ಜೂನ್ 7 ರ...

ಸ್ಪೀಕರ್ ಚುನಾವಣೆ: ಬಿಜೆಪಿಯಿಂದ ಸುರೇಶ್ ಕುಮಾರ್ ಕಣಕ್ಕೆ

6 months ago

ಬೆಂಗಳೂರು: ವಿಧಾನಸಭಾ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ನಿಂದ ರಮೇಶ್ ಕುಮಾರ್ ಕಣದಲ್ಲಿದ್ದರೆ, ಬಿಜೆಪಿ ಸುರೇಶ್ ಕುಮಾರ್ ಅವರನ್ನು ನಿಲ್ಲಿಸಿದೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೊಂಡ ಹಿನ್ನೆಲೆಯಲ್ಲಿ ಸಂಖ್ಯಾಬಲ ಇರುವ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಬಹುದು. ಬಿಜೆಪಿ ಸದನದಲ್ಲಿ...