Thursday, 17th October 2019

1 month ago

ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್-ಒಂದೇ ಕುಟುಂಬದ ಮೂವರು ಸಾವು

ಹಾಸನ: ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ತಾಯಿ ಭಾಗ್ಯಮ್ಮ(49) ಮತ್ತು ಮಕ್ಕಳಾದ ದಾಕ್ಷಾಯಿಣಿ(30), ದಯಾನಂದ(34) ಮೃತ ದುರ್ದೈವಿಗಳು. ಮನೆ ಬಳಿ ಇರುವ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಹಾಕಲು ತಂತಿ ಕಟ್ಟಲಾಗಿತ್ತು. ಬೆಳ್ಳಂಬೆಳಗ್ಗೆ ಈ ತಂತಿಯ ಮೇಲೆ ಬಟ್ಟೆ ಒಣಹಾಕಲು ದಾಕ್ಷಾಯಿಣಿ ಹೋಗಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ತಂತಿಗೆ […]

2 months ago

ಧ್ವಜಕಂಬಕ್ಕೆ ವಿದ್ಯುತ್ ಶಾಕ್ – ಬೆಳ್ಳಂಬೆಳಗ್ಗೆ ಐವರು ವಿದ್ಯಾರ್ಥಿಗಳ ದುರ್ಮರಣ

ಕೊಪ್ಪಳ: ಬೆಳ್ಳಂಬೆಳಗ್ಗೆ ಧ್ವಜಕಂಬಕ್ಕೆ ವಿದ್ಯುತ್ ತಗುಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದಲ್ಲಿ ನಡೆದಿದೆ. ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರಂತ ಸಂಭವಿಸಿದೆ. 10ನೇ ತರಗತಿಯ ಮಲ್ಲಿಕಾರ್ಜುನ್ ಮೆತಗಲ್, ಬಸವರಾಜ ಲಿಂಗದಳ್ಳಿ, 9ನೇ ತರಗತಿ ದೇವರಾಜ್ ಹಲಗೇರಿ, ಹೈದರನಗರದ ಕುಮಾರ್ ಮತ್ತು 8ನೇ ತಗರತಿಯ ಗಣೇಶ್ ಲಾಚನಕೇರಿ...

ಬಿಸಿಲನಾಡಿಗೆ ಕೊನೆಗೂ ತಂಪೆರೆದ ಮಳೆರಾಯ

5 months ago

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಕೊನೆಗೂ ಮಳೆರಾಯನ ದರ್ಶನವಾಗಿದ್ದು, ಜನರ ಮೊಗದಲ್ಲಿ ಕೊಂಚ ಸಂತಸ ಮೂಡಿದೆ. ಅನೇಕ ದಿನಗಳಿಂದ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗುತ್ತಿತ್ತು. ಆದರೆ ರಾಯಚೂರಿನಲ್ಲಿ ಮಳೆಯಾಗದೇ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದರು. ಕಳೆದ ದಿನ ರಾಯಚೂರಿನಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ...

ಗುತ್ತಿಗೆದಾರನ ಎಡವಟ್ಟು- ದಾರಿ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ರಸ್ತೆ ನಿರ್ಮಾಣ!

6 months ago

ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನ ಎಡವಟ್ಟಿನಿಂದ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವನ್ನು ಬಿಟ್ಟು ರಸ್ತೆ ನಿರ್ಮಾಣ ಮಾಡಲಾಗಿದೆ. ಅಥಣಿ ತಾಲೂಕಿನ ಗುತ್ತಿಗೆದಾರ ರಫೀಕ್ ತಾರಡೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೋಣನವಾಡಿಯಿಂದ ಕಲ್ಲಾಳ ಗ್ರಾಮದವರೆಗೆ ಅಂದಾಜು...

ವಿದ್ಯುತ್ ಶಾಕ್ ಹೊಡೆದ ಪ್ರಕರಣ – ಆಸ್ಪತ್ರೆಯಲ್ಲಿ ಸಾಯಿ ಚರಣ್ ಚೇತರಿಕೆ

6 months ago

ಬೆಂಗಳೂರು: ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆ ಸೇರಿರುವ ಬಾಲಕ ಸಾಯಿ ಚರಣ್ ಚೇತರಿಸಿಕೊಳ್ಳುತ್ತಿದ್ದಾನೆ. ಮಗನ ಆರೋಗ್ಯದ ಬಗ್ಗೆ ಬಾಲಕನ ತಂದೆ ಬಸವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಂದು ಕೃತಕ ಉಸಿರಾಟದ ಉಪಕರಣ ತೆಗೆಯಲಾಗುತ್ತಿದ್ದು, ನೈಸರ್ಗಿಕವಾಗಿ ಉಸಿರಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ. 6 ಗಂಟೆಗಳ...

ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

6 months ago

ಹಾವೇರಿ/ಮಂಡ್ಯ/ಕೋಲಾರ: ರಾಜ್ಯದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಲವೆಡೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಶಿರಬಡಗಿ, ಹತ್ತಿಮತ್ತೂರು, ಜಲ್ಲಾಪುರ, ಕಡಕೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿ...

ಟಿಪ್ಪರ್ ಚಾಲಕನ ಅಜಾಗರೂಕತೆ- ಧರೆಗುರುಳಿತು 10 ವಿದ್ಯುತ್ ಕಂಬಗಳು!

6 months ago

ಮೈಸೂರು: ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಒಂದು ಟ್ರಾನ್ಸ್ ಫಾರ್ಮರ್ ಮತ್ತು 10 ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರೋ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಟಿಪ್ಪರ್ ಚಾಲಕ ಡೀಸೆಲ್ ತುಂಬಿಸಿ ಟ್ರ್ಯಾಲಿಯನ್ನು ಕೆಳಗಿಳಿಸದ ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗುವಾಗ...

ಲಾರಿಗೆ ಸಿಕ್ಕಿಕೊಂಡಿತು ವಿದ್ಯುತ್ ತಂತಿ – ಧರೆಗೆ ಉರುಳಿತು 10ಕ್ಕೂ ಹೆಚ್ಚು ಕಂಬಗಳು

7 months ago

ಬೆಂಗಳೂರು: ಲಾರಿ ಚಾಲಕನೊಬ್ಬ ಅಜಾಗರೂಕತೆಯಿಂದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆ ಬೆಂಗಳೂರು ಹೊರವಲಯ ಹೊಸರೋಡ್ ಸಮೀಪದ ಬಸಾಪುರದಲ್ಲಿ ನಡೆದಿದೆ. ಬಸಾಪುರದಲ್ಲಿ ಬಹು ಮಾಹಡಿ ಅಪಾರ್ಟ್ ಮೆಂಟ್‌ಗಳು ನಿರ್ಮಾಣವಾಗುತ್ತಿತ್ತು. ಪ್ರತಿದಿನ ಬಸಾಪುರದಿಂದ ಬೇಗೂರಿಗೆ ಮಾರ್ಗ ಕಲ್ಪಿಸುವ ರಸ್ತೆಯಲ್ಲಿ ನೂರಾರು...