Monday, 19th November 2018

Recent News

5 days ago

ವಿದ್ಯುತ್ ತಂತಿ ತಗುಲಿ 9 ಲಕ್ಷ ರೂ. ಮೌಲ್ಯದ 9 ಎಕರೆ ಕಬ್ಬು ಬೆಂಕಿಗಾಹುತಿ

ವಿಜಯಪುರ: ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ರೈತರಿಗೆ ಸೇರಿದ್ದ ಒಂಭತ್ತು ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಉಮರಾಣಿ ಗ್ರಾಮದ ಕಸ್ತೂರಪ್ಪ ಮುತ್ತಪ್ಪ ಚಿಂಚೋಳಿ ಅವರಿಗೆ ಸೇರಿದ 6 ಎಕರೆ ಹಾಗೂ ಅಶೋಕ್ ಮುತ್ತಪ್ಪ ಚಿಂಚೋಳಿರಿಗೆ ಸೇರಿದ 3 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಮಾಹಿತಿಗಳ ಪ್ರಕಾರ ಫಸಲಿಗೆ ಬಂದಿದ್ದ ಬೆಳೆಗೆ ವಿದ್ಯುತ್ ತಂತಿ ತಗುಲಿದ್ದರ ಪರಿಣಾಮ 9 ಎಕರೆಯಲ್ಲಿ ಬೆಳೆದಿದ್ದ ಸುಮಾರು 9 ಲಕ್ಷ ರೂಪಾಯಿ […]

5 days ago

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗ್ಲೇಬೇಕು, ಕರಸೇವೆಗೆ ಸಿದ್ಧ- ಸಿಎಂ ಇಬ್ರಾಹಿಂ

ವಿಜಯಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು. ಅದರ ನಿರ್ಮಾಣಕ್ಕೆ ನಾವು ಇಟ್ಟಿಗೆ, ಕರ ಸೇವೆ ಮಾಡಲು ಸಿದ್ಧ ಅಂತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಖಾಂತರ ಎಲ್ಲಾ ಸಮಾಜದವರು ಸೇರಿ ಬಗೆಹರಿಸಲಿ. ಇಲ್ಲವಾದಲ್ಲಿ ಸುಪ್ರೀಂಕೊರ್ಟ್ ತೀರ್ಪಿನಂತೆ ನಡೆದುಕೊಳ್ಳಲು ನಾವು ಸಿದ್ಧ ಅಂತ ಹೇಳಿದ್ದಾರೆ....

ಮದ್ವೆಗೊಬ್ಬ, ಸಂಸಾರಕ್ಕೊಬ್ಬ ಅನ್ನೋ ಆರೋಪಕ್ಕೆ ಮಹಿಳೆ ಸ್ಪಷ್ಟನೆ

1 week ago

ವಿಜಯಪುರ: ಈಕೆಗೆ ಬೇಕು ಮದುವೆಗೊಬ್ಬ, ಸಂಸಾರಕ್ಕೊಬ್ಬ. ಯಾಮಾರಿ ಹಿಂದೆ ಬಿದ್ರೆ ಊರಹಬ್ಬ ಮಾಡ್ತಾಳೆ ಅನ್ನೋ ಕೊಪ್ಪಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆ ಸ್ಪಷ್ಟನೆ ನೀಡಿದ್ದಾಳೆ. ಕೊಪ್ಪಳದ ವಿಶ್ವ ಎಂಬಾತನಿಗೆ ಕೈಕೊಟ್ಟು ವಂಚಿಸಿದ್ದ ಶ್ರೀಲತಾ ವಿಜಯಪುರದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾಳೆ. “ನಾನು...

ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ 4 ತಿಂಗ್ಳ ಗರ್ಭಿಣಿ ಪ್ರಕರಣಕ್ಕೆ ಟ್ವಿಸ್ಟ್- ಹೆತ್ತ ತಾಯಿಯಿಂದ ಕೊಲೆ

1 week ago

ವಿಜಯಪುರ: ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಶಂಕೆ ನಿಜಾಂಸ ಬಯಲಾಗಿದ್ದು, ಹೆತ್ತ ತಾಯಿಯೇ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದ ರೇಣುಕಾ,...

ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

2 weeks ago

ವಿಜಯಪುರ: ದೀಪ ಬೆಳಗುವ ದಿನದಂದು ಮನೆಯ ದೀಪವೊಂದು ಆರಿ ಹೋಗಿದೆ. ನಾಲ್ಕು ತಿಂಗಳ ಗರ್ಭಿಣಿ ಪ್ರೀತಿಸಿ ಮದುವೆಯಾದ ಕಾರಣ ಮಂಗಳವಾರ ಮರ್ಯಾದಾ ಹತ್ಯೆಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ. ರೇಣುಕಾ ಬರ್ಬರವಾಗಿ ಹತ್ಯೆಯಾದ ಗರ್ಭಿಣಿ. ರೇಣುಕಾ ಮೂಲತಃ ರಾಯಚೂರಿನ...

ಟಿಪ್ಪು ಜಯಂತಿ ಮಾಡಿದ್ರೆ ಸಿಎಂ ಅಧಿಕಾರ ಹೋಗುತ್ತೆ: ಶಾಸಕ ಯತ್ನಾಳ್ ಭವಿಷ್ಯ

2 weeks ago

ವಿಜಯಪುರ: ಟಿಪ್ಪು ಜಯಂತಿ ಪ್ರಾರಂಭಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡಿದ್ದಾರೆ. ಈಗ ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿಯನ್ನು ಮುಂದುವರೆಸಿದಲ್ಲಿ ಅವರು ಸಹ ಒಂದು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ....

ಹಿಂದಿ ನೆಲದಲ್ಲಿ ಕನ್ನಡದ ಕಂಪು ಹರಡಿಸ್ತಿದ್ದಾರೆ ಚಂಡೀಗಡದ ಪಂಡಿತರಾವ್

2 weeks ago

ನವದೆಹಲಿ/ವಿಜಯಪುರ: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡ ಮಾತನಾಡೋಕೆ ಹಿಂದೇಟು ಹಾಕ್ತಾರೆ. ಗಡಿ ಜಿಲ್ಲೆಗಳಲ್ಲಿ ಕನ್ನಡದ ಬಗ್ಗೆ ಹೇಳೋದೇ ಬೇಡ. ಆದ್ರೆ, ಪಬ್ಲಿಕ್ ಹೀರೋ ಪಂಡಿತರಾವ್ ಅವರು ಹೊರ ನಾಡಿನಲ್ಲಿ ಕನ್ನಡದ ಕಂಪನ್ನ ಹರಡುತ್ತಿದ್ದಾರೆ. ಹೌದು. ಮೂಲತಃ ವಿಜಯಪುರ ಜಿಲ್ಲೆ...

ಠಾಣೆಯನ್ನೇ ಬಾರ್ ಮಾಡಿ ಮದ್ಯ ಕುಡಿದು ಮಜಾ ಮಾಡಿದ್ದ ಪೊಲೀಸ್‍ಗೆ ಸಿಎಂ ಅವಾರ್ಡ್

4 weeks ago

ವಿಜಯಪುರ: ಪೊಲೀಸ್ ಠಾಣೆಯನ್ನು ಬಾರ್ ಮಾಡಿ ಮದ್ಯ ಕುಡಿದು ಮಜಾ ಮಾಡಿದ್ದ ಪೊಲೀಸ್‍ಗೆ ಸಿಎಂ ಅವಾರ್ಡ್ ದೊರಕಿದೆ. ಒಂದು ವರ್ಷದ ಹಿಂದೆ ವಿಜಯಪುರದ ಜಲನಗರ ಪೊಲೀಸ್ ಠಾಣೆಯ ಎಎಸ್‍ಐ ಆಗಿದ್ದ ಸಿದ್ದರಾಮ ಮಾಲೇಗಾವ ಠಾಣೆಯಲ್ಲೇ ಮದ್ಯ ಸೇವನೆ ಮಾಡಿ ಅಮಾನತ್ತಾಗಿದ್ದರು. ಆದರೆ...