Wednesday, 19th June 2019

1 year ago

ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

ಉಡುಪಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆ ಆಗುವುದರೊಳಗೆ ಜಿಲ್ಲಾಡಳಿತದ ಅಧಿಕಾರಿಗಳು ಬೇಟೆ ಶುರು ಮಾಡಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನದ ಮೇಲೆ ಚುನಾವಣಾಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ನಗರದ ಪ್ರವಾಸಿ ಬಂಗಲೆಯಿಂದ ಪ್ರಚಾರಕ್ಕೆಂದು ಹೊರಟ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪರವಾನಿಗೆಗೆ ಪತ್ರ ರವಾನಿಸಲಾಗಿತ್ತು. ಆದ್ರೆ ಪ್ರಚಾರದ ಸ್ಥಳ, ಸಮಯವನ್ನು ನಿಗದಿಪಡಿಸಿರಲಿಲ್ಲ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪದಡಿಯಲ್ಲಿ ನಗರ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಿ […]

1 year ago

ಸರ್ಕಾರದ ಸಾಧನೆ ತಿಳಿಸುವ ವಾಹನದಲ್ಲಿ ಅಗ್ನಿ ಅವಘಡ- ಬಾಲಕರಿಬ್ಬರಿಗೆ ಗಾಯ

ವಿಜಯಪುರ: ರಾಜ್ಯ ಸರ್ಕಾರದ ಸಾಧನೆ ತಿಳಿಸುವ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ವಿಜಯಪುರದ ಬಬಲೇಶ್ವರದಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಬಿತ್ತರಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಬಾಲಕರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ. ಕೂಡಲೇ ಗಾಯಗೊಂಡ ಬಾಲಕರನ್ನು...

ಪಿಕಪ್ ಟಯರ್ ನಿಂದ ಚಿಮ್ಮಿದ ಕಲ್ಲು ಬಡಿದು 1 ವರ್ಷದ ಕಂದಮ್ಮ ಸಾವು

2 years ago

ಕಾರವಾರ: ಚಲಿಸುತ್ತಿದ್ದ ಪಿಕಪ್ ವಾಹನದ ಟಯರ್ ನಿಂದ ಚಿಮ್ಮಿದ ಕಲ್ಲೊಂದು ಕಾರ್ಮಿಕ ದಂಪತಿಯ ಮಗುವನ್ನು ಬಲಿ ತೆಗೆದುಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಬಳಿ ನಡೆದಿದೆ. ಜಿಲ್ಲೆಯ ಶಿರಹಟ್ಟಿಯ ಅರ್ಪಿತಾ ಸಣ್ಣಪ್ಪ ಹರಿಜನ(1) ಮೃತ ಮಗುವಾಗಿದ್ದು, ಸಾತೊಡ್ಡಿ ಬಳಿ ರಸ್ತೆ ನಿರ್ಮಾಣ ಕೆಲಸಕ್ಕೆ...

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರಿಂದಲೇ ಸಾರ್ವಜನಿಕರ ಲೂಟಿ

2 years ago

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಲೂಟಿ ಮಾಡುತ್ತಾರೆ ಎನ್ನುವ ಭಯ ಜನರನ್ನು ಕಾಡುತ್ತದೆ. ಆದರೆ ಇಲ್ಲಿ ಪೊಲೀಸರ ಹೆಸರಲ್ಲೇ ಅನಧಿಕೃತವಾಗಿ ವಾಹನಗಳಿಂದ ಹಣ ವಸೂಲಿ ನಡೆಯುತ್ತಿದೆ. ಪೊಲೀಸರನ್ನು ಕೇಳಿದರೆ ಏನೋ ಒಂದು ಉತ್ತರ ನೀಡಿ ಎಸ್ಕೇಪ್ ಆಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ...

ಬೆಂಗಳೂರಿನಲ್ಲಿ ಮಹಿಳೆಯರಿಗೆ ವಾಹನ ಪಾರ್ಕಿಂಗ್‍ನಲ್ಲಿ ಮೀಸಲಾತಿ

2 years ago

ಬೆಂಗಳೂರು: ಇನ್ಮುಂದೆ ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯರು ಹೆಚ್ಚು ತೆಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ, ವಾಹನ ಪಾರ್ಕಿಂಗ್ ಸ್ಪೇಸ್ ನಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಮೀಸಲಾತಿ ಸಿಗಲಿದೆ. ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಜಾಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದೆಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಟ್ವೀಟ್...

ಕುಡಿದ ಮತ್ತಿನಲ್ಲಿ ರಸ್ತೆ ಬದಿಯಲ್ಲಿದ್ದ ವಾಹನಗಳ ಗಾಜುಗಳನ್ನು ಲಾಂಗು-ಮಚ್ಚುಗಳಿಂದ ಪುಡಿಗೈದ್ರು!

2 years ago

ಬೆಂಗಳೂರು: ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳ ತಂಡವೊಂದು ಲಾಂಗು ಮಚ್ಚುಗಳಿಂದ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಶ್ರೀರಾಂಪುರ ಮತ್ತು ಕಮಲನಗರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ ಬೈಕ್‍ಗಳಲ್ಲಿ ಬಂದ ಎಂಟು ಜನರ...

ಗದಗ: ರಸ್ತೆ ಪಕ್ಕ ಮಲಗಿದ್ದವರ ಮೇಲೆ ಹರಿದ ವಾಹನ – ಮೂವರು ಸ್ಥಳದಲ್ಲೇ ಸಾವು

2 years ago

ಗದಗ: ರಸ್ತೆ ಪಕ್ಕದಲ್ಲಿ ಮೂವರು ಸಂಶಯಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಗದಗ ತಾಲೂಕಿನ ಸಂಭಾಪೂರ ಕ್ರಾಸ್ ಬಳಿ ನಡೆದಿದೆ. ಮೂವರು ರಸ್ತೆ ಪಕ್ಕದಲ್ಲಿ ಮಲಗಿದಂತೆ ವ್ಯಕ್ತವಾಗಿದ್ದು, ತಲೆ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ...

ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

2 years ago

ನವದೆಹಲಿ: ಇನ್ಮುಂದೆ ದೇಶದ ರಾಷ್ಟ್ರಪತಿ, ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ತಮ್ಮ ಕಾರಿನ ಮೇಲೆ ಕೆಂಪು ಹಾಗೂ ನೀಲಿ ದೀಪಗಳನ್ನ ಬಳಸುವಂತಿಲ್ಲ. ಹೌದು. ವಿಐಪಿ ಸಂಪ್ರದಾಯಕ್ಕೆ ಕೊನೆಹಾಡುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರದಂದು ಈ ತೀರ್ಮಾನ ಕೈಗೊಂಡಿದ್ದು,...