Sunday, 19th May 2019

9 hours ago

ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

ಹೈದರಾಬಾದ್: ಮುಲುಗು ಕ್ಷೇತ್ರದ ಎಂಎಲ್‍ಎ ದನ್ಸಾರಿ ಅನುಸುಯಾ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ವಾರಂಗಲ್ ಜಿಲ್ಲೆಯ ಜೆಡಿವಾಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ತಂದೆ ಅರುಣ್ ಮತ್ತು ತಾಯಿ ವಿಜಯ ಜೊತೆ ಬೈಕಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಶ್ರಾವಂತಿ (3) ಮೃತಪಟ್ಟ ಕಂದಮ್ಮ. ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜುಗಿದ್ದು ಮಗುವಿನ ಪೋಷಕರು ಗಾಯಗೊಂಡಿದ್ದಾರೆ. ಮುಲುಗು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗತಿಕೊಯಗುಡೆನ್ ಊರಿಗೆ ಸೇರಿದ ಈ ದಂಪತಿ ತಮ್ಮ ಮಗಳು […]

2 days ago

ವಾಹನಗಳ ಬ್ರ್ಯಾಂಡ್ ನೋಡಿ ಲಂಚ ಫಿಕ್ಸ್- ದೊಡ್ಡ ಗಾಡಿಗೆ ಜಾಸ್ತಿ ಕೊಡಿ : ಪೊಲೀಸಪ್ಪನ ವಿಡಿಯೋ ವೈರಲ್

ಬೆಂಗಳೂರು: ವಾಹನಗಳ ಬ್ರ್ಯಾಂಡ್ ನೋಡಿ ಬೆಂಗಳೂರು ಟ್ರಾಫಿಕ್ ಪೊಲೀಸರು ಲಂಚ ಫಿಕ್ಸ್ ಮಾಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ನಿಮ್ಮ ಕಾರು ಬ್ರ್ಯಾಂಡೆಡ್ ಆಗಿದ್ದರೆ ನೀವು ಹೆಚ್ಚು ಲಂಚ ನೀಡಬೇಕು. ಹೌದು. ಆಡಿ ಕಾರಲ್ಲಿ ಬರುತ್ತಿರಾ ದುಡ್ಡು ನೀಡಲು ಆಗುವುದಿಲ್ಲವೇ ಎಂದು ಬಾಯಿ ಬಿಟ್ಟು ಲಂಚ ಕೇಳಿದ್ದಾರೆ ಸಿಲಿಕಾನ್ ಸಿಟಿಯ ಟ್ರಾಫಿಕ್ ಪೊಲೀಸರು. ಹೀಗೆ...

ಚಲಿಸುತ್ತಿರುವಾಗ್ಲೇ ದ್ವಿಚಕ್ರ ವಾಹನದಲ್ಲಿ ಬೆಂಕಿ!

2 weeks ago

ಬೆಂಗಳೂರು: ಚಲಿಸುತ್ತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಕರ್ನಾಟಕ-ತಮಿಳುನಾಡು ಗಡಿ ಸುಲಗಿರಿಯ ಬೈಪಾಸ್ ಬಳಿ ನಡೆದಿದೆ. ಸವಾರ ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸವಾರ ಬೈಕ್ ಬಿಟ್ಟು ಓಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಲೇ ದ್ವಿಚಕ್ರ...

ವಾಹನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್

2 weeks ago

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ಬುಧವಾರದಿಂದಲೇ ನಿಲ್ಲಿಸಲಾಗಿದೆ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟನ್ನು ವಾಹನಗಳ ಮಾಹಿತಿ ಸಂಗ್ರಹಿಸುವ ಕೇಂದ್ರ ಸಾರಿಗೆ ಇಲಾಖೆಯ ವಾಹನ ಡಾಟಾಬೇಸ್‍ನಲ್ಲಿ ಜೋಡಣೆ ಮಾಡದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ನಿರ್ಧಾರದಿಂದ...

ಹೈವೇ ದಾಟಿದ 3 ಮೀ. ಉದ್ದದ ಅನಕೊಂಡ!- ವಿಡಿಯೋ ನೋಡಿ

2 weeks ago

ರಿಯೋ ಡಿ ಜನೈರೋ: 3 ಮೀ. ಉದ್ದದ ಅನಕೊಂಡ ಹೈವೇ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು. ಹೆದ್ದಾರಿ ದಾಟುತ್ತಿದ್ದಾಗ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅನಕೊಂಡ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ....

ಧರೆಗುರುಳಿದ ಬೃಹತ್ ಮರ – ಕ್ಷಣಾರ್ಧದಲ್ಲಿ ಮೂವರು ಪಾರು

4 weeks ago

-ಒಬ್ಬರ ಕೈಯನ್ನೊಬ್ಬರು ಹಿಡಿದು ಮರ ಹತ್ತಿಳಿದ ಪ್ರಯಾಣಿಕರು ಚಿಕ್ಕಮಗಳೂರು: ಮಳೆ-ಗಾಳಿ ಇಲ್ಲದಿದ್ದರೂ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ಒಂದು ಗಂಟೆಗೂ ಹೆಚ್ಚು ಸಮಯ ರಾಜ್ಯ ಹೆದ್ದಾರಿ ಬಂದ್ ಆಗಿದ್ದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ತಲ್ಲಮಕ್ಕಿ ಬಳಿ ನಡೆದಿದೆ. ಬೃಹತ್...

ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣ ಜಪ್ತಿ

1 month ago

ಹಾಸನ: ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಚನ್ನಾಂಬಿಕಾ ಚಿತ್ರಮಂದಿರ ಮುಂಭಾಗ ಹಣವನ್ನು ಜಪ್ತಿ ಮಾಡಲಾಗಿದೆ. ಚನ್ನಾಂಬಿಕಾ ಚಿತ್ರಮಂದಿರ ಸಚಿವ ಹೆಚ್.ಡಿ ರೇವಣ್ಣ ಮನೆಯ ಪಕ್ಕದಲ್ಲಿದ್ದು, ಚುನಾವಣಾಧಿಕಾರಿಗಳ...

ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ KSRTC ಬಸ್!

1 month ago

ಚಿಕ್ಕಬಳ್ಳಾಪುರ: ದಾರಿ ಮಧ್ಯೆ ಅಡ್ಡ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕೆಎಸ್‍ಆರ್ ಟಿಸಿ ಬಸ್ಸೊಂದು ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಅರಣ್ಯಪ್ರದೇಶದಲ್ಲಿ ಪಲ್ಟಿಯಾಗಿದೆ. ಈ ಬಸ್ ಚಿಂತಾಮಣಿ ಕೆಎಸ್‍ಆರ್ ಟಿಸಿ ಘಟಕಕ್ಕೆ ಸೇರಿದ್ದು, ಇಂದು ಚಿಂತಾಮಣಿಯಿಂದ ಪಾವಗಡಕ್ಕೆ ಬಸ್ಸು ತೆರಳುತ್ತಿದ್ದ ಮಾರ್ಗ ಮಧ್ಯೆ...