Tuesday, 15th October 2019

Recent News

2 months ago

ವಾಹನ ತಪಾಸಣೆ ವೇಳೆ ಕಾರಿನಲ್ಲಿ 1.5 ಕೋಟಿ ಹಣ ಪತ್ತೆ

ಚಾಮರಾಜನಗರ: ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದವ ವಾಹನ ತಪಾಸಣೆ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಘಟನೆ ಹಾಸನೂರು ಚೆಕ್ ಪೋಸ್ಟ್ ಬಳಿ ನಡೆದಿದೆ. ಚಾಮರಾಜನಗರದ ಬಾರ್ಡರ್ ತಮಿಳುನಾಡಿನ ಹಾಸನೂರು ಚೆಕ್ ಪೋಸ್ಟ್ ನಲ್ಲಿ ಹಾಸನೂರು ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಹಾರಾಷ್ಟ್ರದಿಂದ ತಮಿಳುನಾಡಿನ ಕಡೆ ಹೋಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದ್ದಾರೆ. ಆ ಕಾರಿನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 1.5 ಕೋಟಿ ರೂ. ಹಣ ಪತ್ತೆಯಾಗಿದೆ. ಮಹಾರಾಷ್ಟ್ರ […]

2 months ago

ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

ಉಡುಪಿ: ಮೂರು ಟ್ರಕ್‍ಗಳಲ್ಲಿ ಕೇರಳದ ವಯನಾಡಿನಿಂದ ಗೋಶಾಲೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಉಡುಪಿ ಜಿಲ್ಲೆ ಕಾಪುವಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಖಲೆ ಯಾವುದೂ ಇಲ್ಲದೆ ಅಕ್ರಮ ಗೋವು ಸಾಗಾಟದ ಶಂಕೆಯಲ್ಲಿ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಾಪು ಠಾಣಾ ವ್ಯಾಪ್ತಿಯಲ್ಲಿ 3 ಟ್ರಕ್‍ನಲ್ಲಿದ್ದ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದಾರೆ. ಶಿರ್ವದಲ್ಲಿ ಹೊಸದಾಗಿ ಆರಂಭಿಸಿದ ಗೋ ಶಾಲೆಗೆ ಗೋವುಗಳನ್ನು ತರಲಾಗಿದೆ ಎಂದು...

ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಿಸ್ತಿದ್ದ ಲಾರಿಗಳು ವಶ

4 months ago

ಗದಗ: ಜಿಪಿಎಸ್ ಇಲ್ಲದೆ ಓವರ್ ಲೋಡ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳ ಅಧಿಕಾರಿಗಳು ವಶಪಡೆದಿರುವ ಘಟನೆ ಗದಗನಲ್ಲಿ ನಡೆದಿದೆ. ಮುಂಡರಗಿ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ, ಧಾರವಾಡಕ್ಕೆ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗುತ್ತಿರುವ ವಾಹನಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ....

ದಾಖಲೆಯಿಲ್ಲದೆ ಸಾಗಿಸ್ತಿದ್ದ 1 ಕೋಟಿ ರೂ. ಹಣ ವಶ

5 months ago

ಮಂಗಳೂರು: ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಗಿನಲ್ಲಿ ಹಣದ ಕಂತೆಯನ್ನು ಒಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ, 56 ವರ್ಷದ ಮಂಜುನಾಥ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಬಂದರು ಠಾಣೆ ಪೊಲೀಸರು ಇಂದು ಬೆಳಗ್ಗೆ ಮಂಗಳೂರಿನ...

7.6 ಕೆಜಿ ಕಬ್ಬಿಣ ಬಳಸಿ ಚಿನ್ನ ಪ್ಯಾಕ್ ಮಾಡಿದ್ದ ಕಳ್ಳ ಅಂದರ್!

5 months ago

ಬೆಂಗಳೂರು: ಏರ್ ಇಂಟಲಿಜೆನ್ಸಿ ಯುನಿಟ್ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಬೃಹತ್ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3 ಕೆಜಿ 679 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಚಾಮರಾಜನಗರ ಮೂಲದ ವ್ಯಕ್ತಿ ದುಬೈನಿಂದ...

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 31 ಕ್ವಿಂಟಾಲ್ ಅಕ್ಕಿ ವಶ – ಆರೋಪಿ ಪರಾರಿ

6 months ago

ಕಾರವಾರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿದೆ. ಇಲ್ಲಿನ ಪರವರ್ಗ ಗ್ರಾಮದ ಗಣೇಶ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಬೊಲೆರೊ ಪಿಕಪ್ ವಾಹನಕ್ಕೆ ತುಂಬುತ್ತಿದ್ದನು. ಈತನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ...

ಕಾರಿನಲ್ಲಿ 9 ಲಕ್ಷ ನಗದು ಪತ್ತೆ!

6 months ago

ಹಾವೇರಿ: ಲೋಕಸಬಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಾಖಲೆ ಇಲ್ಲದೇ ಹಣ ಅಧಿಕವಾಗಿ ಪತ್ತೆಯಾಗುತ್ತಿದ್ದು, ಈಗ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಳಿ ಕಾರಿನಲ್ಲಿ 9 ಲಕ್ಷ ನಗದು ಹಣ  ಪತ್ತೆಯಾಗಿದೆ. ತಾಲೂಕಿನ ವರಹ ಗ್ರಾಮದ ಬಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ವಾಹನ...

ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

6 months ago

ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಬಕಾರಿ ಇಲಾಖೆ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ 5 ಕಂಟ್ರೋಲ್ ರೂಂ.ಗಳಲ್ಲಿ ಒಟ್ಟು 177 ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಬಕಾರಿ ಇಲಾಖೆ, ಅಕ್ರಮ...