Friday, 19th July 2019

Recent News

2 weeks ago

ವಧುವಿನೊಂದಿಗೆ ಹಾರ ಬದ್ಲಾಯಿಸಿಕೊಂಡ ನಂತ್ರ ವರ ದುರ್ಮರಣ

ಪಾಟ್ನಾ: ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಏನಿದು ಪ್ರಕರಣ? ಮೃತ ಕುಮಾರ್ ಮದುವೆ […]

1 month ago

ವೀಲ್‌ಚೇರ್‌ನಲ್ಲಿ ಪ್ರದಕ್ಷಿಣೆ ಹಾಕಿದ ವರ – ವಧು ತಳ್ಳುತ್ತಿರೋದನ್ನು ನೋಡಿ ಭಾವುಕರಾದ ಅತಿಥಿಗಳು

ಭೋಪಾಲ್: ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ವರ ಜೊತೆ ವೀಲ್‌ಚೇರ್‌ನಲ್ಲಿಯೇ ಏಳು ಪ್ರದಕ್ಷಿಣೆ ಹಾಕಿದ್ದು, ಈ ದೃಶ್ಯವನ್ನು ನೋಡಿದ ಅತಿಥಿಗಳು ಭಾವುಕರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದಿಲೀಪ್ ಸಕ್ಸೆನಾ ಹಾಗೂ ದೀಪ್ತಿ ಕಶ್ಯಪ್ ಮದುವೆ ಮೊದಲೇ ನಿಗದಿಯಾಗಿತ್ತು. ಜೂನ್ 6ರಂದು ದಿಲೀಪ್ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ದಿಲೀಪ್ ಎಡಗಾಲಿಗೆ ಹಾಗೂ...

ವಧುವಿನ ಕೈ ಹಿಡಿದ ವರನ ಸಹೋದರಿ!

2 months ago

– ಗುಜರಾತ್‍ನಲ್ಲಿ ನಡೆಯುತ್ತೇ ವಿಚಿತ್ರ ವಿವಾಹ ಗಾಂಧಿನಗರ: ಭಾರತದ ಹಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರಾದಾಯಿಕ ಮದುವೆ ಶೈಲಿಗಳು ಜಾರಿಯಲ್ಲಿದ್ದು, ಗುಜರಾತ್‍ನ ಚೋಟಾ ಉದಯ್‍ಪುರ ಪ್ರದೇಶದ ಬುಡಕಟ್ಟಿನ ಸಮುದಾಯದಲ್ಲಿ ವರನ ಸಹೋದರಿ ವಧುವನ್ನು ಮದುವೆಯಗುವ ಪದ್ಧತಿ ಜಾರಿಯಲ್ಲಿದೆ. ತನ್ನ ಮದುವೆ ಸಮಾರಂಭದಲ್ಲಿಯೇ...

ಸೀತಾ ಸ್ವಯಂವರದಂತೆ ಶಿವ ಧನಸ್ಸು ಮುರಿದು ಮದುವೆಯಾದ ವರ

2 months ago

ಕಾರವಾರ: ಇಂದಿನ ಕಾಲದ ಮದುವೆ ಅಂದ್ರೆ ಡ್ಯಾನ್ಸ್, ಸಂಗೀತ ಜೊತೆಯಲ್ಲಿ ಭರ್ಜರಿ ಊಟ, ರಾತ್ರಿ ಸ್ನೇಹಿತರಿಗೆ ಗುಂಡು ಇದಿಷ್ಟೇ ಮದುವೆಯಲ್ಲಿ ಸಾಮಾನ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾತ್ರ ತುಂಬಾನೆ ಡಿಫರೆಂಟ್ ಆಗಿ ಮದುವೆ ನಡೆದಿದೆ. ಸ್ವಯಂವರದಲ್ಲಿ ಭಾಗಿಯಾಗಿದ್ದ...

ಮದ್ಯದ ವಾಸನೆ ಮೂಗಿಗೆ ಬಡಿದದ್ದೇ ತಡ, ಮಂಟಪದಲ್ಲೇ ವರ ಬೇಡ ಎಂದ ವಧು!

2 months ago

ಭುವನೇಶ್ವರ: ವರ ಮದ್ಯಪಾನ ಮಾಡಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆ ಒಡಿಶಾದ ಜಾಜ್‍ಪುರದಲ್ಲಿ ನಡೆದಿದೆ. ಒಡಿಶಾದ ಸ್ವ-ಸಹಾಯ ಗುಂಪಿನ ಕಾರ್ಯಕರ್ತೆ ಸಂಗಮಿತ್ರ ಸೇಥಿ ಈ ದಿಟ್ಟ ನಿರ್ಧಾರ ಕೈಗೊಂಡ ವಧು. ಇವರು ಮದ್ಯಪಾನ ವಿರೋಧಿ ಹೋರಾಟಗಾರ್ತಿಯಾಗಿದ್ದು, ಸುತ್ತಮುತ್ತ ಇರುವ...

ಮದ್ವೆ ವೇಳೆ ವಧುವನ್ನು ನೋಡಿ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ವರ

2 months ago

ಪಾಟ್ನಾ: ವೇದಿಕೆ ಮೇಲಿದ್ದ ವಧುವನ್ನು ನೋಡಿ ವರ ತನ್ನ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಬಿಹಾರದ ದಾನಾಪುರದಲ್ಲಿ ನಡೆದಿದೆ. ವರಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ವರನನ್ನು ವೇದಿಕೆ ಮೇಲೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವರ ವಧುವನ್ನು ನೋಡಿದ ತಕ್ಷಣ ತನ್ನ...

ಮದ್ವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ಕತ್ತರಿಯಿಂದ ಇರಿದು ವರನ ಬರ್ಬರ ಹತ್ಯೆ

2 months ago

ಲಕ್ನೋ: ಮದುವೆಯ ಹಿಂದಿನ ರಾತ್ರಿ ಯುವಕನೊಬ್ಬ ವರನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಬಳಿ ನಡೆದಿದೆ. ಕುಮಾರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ವರನನ್ನು ಸುರೇಂದ್ರ ಕೋರಿ ಎಂದು ಗುರುತಿಸಲಾಗಿದೆ. ಆರೋಪಿ...

ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!

2 months ago

– ನನಗೆ ಮದುವೆ ಯಾವಾಗ ಎಂದು ಕೇಳ್ತಿದ್ದ – ಮಗನ ಸಂತಸವೇ ನಮಗೆ ಮುಖ್ಯ ಗಾಂಧಿನಗರ: ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಆತನ ಕನಸನ್ನು ತಂದೆ ನನಸು ಮಾಡಿದ ಘಟನೆಯೊಂದು ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ....