Wednesday, 18th September 2019

Recent News

4 days ago

ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

ಮಡಿಕೇರಿ: ಸಹಕಾರಿ ಸಾಲಾ ಮನ್ನಾ ಯೋಜನೆಯಡಿ ಜಿಲ್ಲೆಯ 4,257 ರೈತರ 32.64 ಕೋಟಿ ರೂ. ಸಾಲದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ. ಈ ಬಗ್ಗೆ ಡಿಸಿಸಿ ಬ್ಯಾಂಕ್ ತಿಳಿಸಿದ್ದು, 2018ರಲ್ಲಿ ಘೋಷಿಸಿದ ಸಾಲಮನ್ನಾದ 32,903 ರೈತರು ಫಲಾನುಭವಿಗಳು ಜಿಲ್ಲೆಯಲ್ಲಿದ್ದರೂ 254.81 ಕೋಟಿ ಹಣವನ್ನು ಬಿಡುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದಿನ ಸರ್ಕಾರ ಈಗಾಗಲೇ 10,421 ರೈತರ 68.45 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಸಾಲಮನ್ನಾಕ್ಕೆ ಅರ್ಹರೆಂದು ಪರಿಗಣಿಸಿತ್ತು. […]

4 days ago

ಹರಿಯುವ ನೀರಿಗೆ ಬ್ರೇಕ್-ಮೂರು ಗ್ರಾಮದ ಕೃಷಿ ಚಟುವಟಿಕೆಗೆ ನೀರಿಲ್ಲದೆ ರೈತರು ಕಂಗಾಲು

-ಕೆಲವರಿಗೆ ಬೆಳೆದ ಬೆಳೆಗೆ ನೀರಿಲ್ಲ -ಹಲವರಿಗೆ ನಾಟಿ ಮಾಡಲು ನೀರಿಲ್ಲ ಚಾಮರಾಜನಗರ: ಕೃಷಿ ಚಟುವಟಿಕೆಗೆ ನೀರು ಇಲ್ಲದೇ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಕಾವುದವಾಡಿ, ಬಸವಟ್ಟಿ ಮತ್ತು ಕಮರವಾಡಿ ಗ್ರಾಮಗಳ ರೈತರು ಪರದಾಡುವಂತಾಗಿದೆ. ಕಬಿನಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಯುತ್ತಿದ್ದರೂ ಮೂರು ಗ್ರಾಮಗಳು ಕೃಷಿ ಚಟುವಟಿಕೆ ಮಾಡದಂತಾಗಿದೆ. ಪರಿಣಾಮ 150ಕ್ಕೂ ಹೆಚ್ಚು ಹೆಕ್ಟರ್ ಭೂಮಿಗೆ ನೀರು...

ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

2 weeks ago

ಹುಬ್ಬಳ್ಳಿ: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಬ್ಯಾಂಕ್‍ಗಳಿಂದ ರೈತರಿಗೆ ಇನ್ನೂ ನೋಟಿಸ್ ಬರುತ್ತಿದ್ದು, ಇದರಿಂದ ಹೊಸ ಸರ್ಕಾರ ಬಂದರೂ ಬ್ಯಾಂಕ್‍ಗಳಿಂದ ನೋಟಿಸ್ ನೀಡುವುದು ಮಾತ್ರ ನಿಂತಿಲ್ಲ ಎಂದು ರೈತರು...

ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

2 weeks ago

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಟಿಸಿಯನ್ನು ಕೃಷ್ಣ ನದಿಯ ದಡ ಸೇರಿಸಿದ್ದಾರೆ. ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ ವಿದ್ಯುತ್ ಪರಿವರ್ತಕ (ಟಿ.ಸಿ)ಯನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ...

ತುಂಗಭದ್ರಾ ನದಿ ಮೈದುಂಬಿ ಹರಿದರೂ ಕಾಲುವೆಗೆ ನೀರಿಲ್ಲ

2 weeks ago

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿದ ನದಿಗಳಲ್ಲಿ ತುಂಗಭದ್ರಾ ನದಿ ಕೂಡ ಒಂದು. ಆದರೆ ನದಿ ಮೈತುಂಬಿ ಹರಿಯುತ್ತಿದ್ದರೂ ಕಾಲುವೆಗೆ ಮಾತ್ರ ನೀರಿಲ್ಲ. ಜಲಾಶಯದಿಂದ ಟಿಎಲ್‍ಬಿಸಿ ಕೆಳಭಾಗದ ಕಾಲುವೆಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಲ್ಲದೆ ಭತ್ತದ ಬೆಳೆ ಒಣಗುತ್ತಿದೆ....

10 ದಿನದೊಳಗೆ ಸಾಲ ಕಟ್ಟಿಲ್ಲಾಂದ್ರೆ ಜಮೀನು ಹರಾಜಿಗೆ ಹಾಕ್ತೀವಿ- ಕೊಪ್ಪಳ ರೈತರಿಗೆ ನೋಟಿಸ್

4 weeks ago

ಕೊಪ್ಪಳ: 10 ದಿನಗಳೊಳಗೆ ಸಾಲ ಕಟ್ಟಿ. ಇಲ್ಲವೆಂದಲ್ಲಿ ನಿಮ್ಮ ಜಮೀನು ಹರಾಜಿಗೆ ಹಾಕ್ತೀವಿ ಎಂದು ಜಿಲ್ಲೆಯ ರೈತರಿಗೆ ಬ್ಯಾಂಕ್ ನೋಟಿಸ್ ನೀಡಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ದಾಳಿಂಬೆ ಬೆಳೆಗಾರರಿಗೆ ಬ್ಯಾಂಕ್ ಲೀಗಲ್ ನೋಟಿಸ್ ನೀಡಿದೆ. ಈ ಮೂಲಕ ಸಾಲದ...

ವರುಣ ದೇವನ ಕೃಪೆಗೆ ಚಾಮರಾಜನಗರ ಮಂದಿ ಫುಲ್ ಖುಷ್ – ಚುರುಕುಗೊಂಡ ಕೃಷಿ ಚಟುವಟಿಕೆ

4 weeks ago

ಚಾಮರಾಜನಗರ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬೆಳೆ, ಬದುಕು, ಆಸ್ತಿಪಾಸ್ತಿ ನಾಶವಾಗಿದ್ದರೆ, ಇತ್ತ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಜನರು ಬರದ ಛಾಯೆಯಿಂದ ಹೊರ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಉತ್ತರ ಕರ್ನಾಟಕದ ಜನರು ಪ್ರವಾಹದಿಂದ ನಲುಗಿ ಹೋಗಿದ್ದು ಅವರು...

ಚಿಕಿತ್ಸೆಗಾಗಿ ನಡುಗಡ್ಡೆಯಲ್ಲಿ ಸಿಲುಕಿರುವ ವೃದ್ಧೆ, ಗರ್ಭಿಣಿ ನರಳಾಟ

1 month ago

ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ಹುಣಸಗಿ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದೆ. ಈ ಗ್ರಾಮದಲ್ಲಿ ವೃದ್ಧೆ ಹಾಗೂ ಗರ್ಭಿಣಿ ಚಿಕಿತ್ಸೆಗಾಗಿ ಹೊರ ಬರಲಾಗದೆ ನರಳಾಡುತ್ತಿದ್ದಾರೆ. ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದ್ದು, ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ...