Sunday, 20th January 2019

2 days ago

ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಜಾನುವಾರುಗಳನ್ನು ರಾಯಚೂರು ಪೊಲೀಸರು ರಕ್ಷಿಸಿ, ಅವುಗಳನ್ನು ಎಲ್ಲಿ ಬಿಡುವುದು ಅಂತ ತಿಳಿಯದೇ ಠಾಣೆಯಲ್ಲೇ ಈಗ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಗರದಲ್ಲಿ ಮಿತಿಮೀರಿದ್ದರೆ, ಇನ್ನೊಂದೆಡೆ ಕಸಾಯಿಖಾನೆಯಲ್ಲಿ ಸಿಕ್ಕಸಿಕ್ಕವರು ಜಾನುವಾರುಗಳನ್ನ ತಂದು ಕತ್ತರಿಸುತ್ತಿದ್ದಾರೆ. ಕಸಾಯಿಖಾನೆ ಗುತ್ತಿಗೆಯನ್ನು ಇದುವರೆಗೂ ನಗರಸಭೆ ಅಧಿಕಾರಿಗಳು ಯಾರಿಗೂ ನೀಡಿಲ್ಲ. ಆದರೆ ಜಾನುವಾರುಗಳನ್ನು ತರುವ ಕಟುಕರಿಂದ ದುಡ್ಡುವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಸಿಕ್ಕ ಸಿಕ್ಕ ಜಾನುವಾರುಗಳನ್ನು ಕಸಾಯಿಖಾನೆಗೆ ತರಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿ ಪಡೆದ […]

4 days ago

ನಿಷೇಧವಿದ್ದರೂ ಕೋಳಿ ಪಂದ್ಯಗಳ ಜೂಜಾಟ

ರಾಯಚೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ಜಿಲ್ಲೆಯ ಸಿಂಧನೂರಿನಲ್ಲಿ ಕೋಳಿ ಪಂದ್ಯಗಳ ಜೂಜಾಟ ಜೋರಾಗಿ ನಡೆದಿದೆ. ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ರಾಜಾರೋಷವಾಗಿ ಕೋಳಿ ಪಂದ್ಯಗಳನ್ನು ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿ ಜೂಜಾಟ ನಡೆದಿದೆ. ಹುಂಜಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಪಂದ್ಯವನ್ನು ನಡೆಸಲಾಗುತ್ತದೆ. ಹುಂಜಗಳ ಮೇಲೆ ಜನ ಸಾವಿರಾರು ರೂಪಾಯಿ ಜೂಜು ಕಟ್ಟಿ ಆಡುತ್ತಿದ್ದಾರೆ. ಪಂದ್ಯಾವಳಿಗಾಗಿಯೇ ಹುಂಜಗಳನ್ನು ಬಲಿಷ್ಠವಾಗಿ ಬೆಳೆಸಿ...

ಸಂಕ್ರಾಂತಿ ಹಬ್ಬದಂದು ರಾಯಚೂರು ರೈತರಿಗೆ ಸಿಹಿ ಸುದ್ದಿ

6 days ago

ರಾಯಚೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿರುವ ಸಾಲಮನ್ನಾ ಜಾರಿಯಾಗುತ್ತೋ ಇಲ್ಲವೋ ಅನ್ನೋ ಅನುಮಾನದಲ್ಲಿದ್ದ ರೈತರಿಗೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೊದಲ ಹಂತವಾಗಿ ರಾಜ್ಯದ 57,994 ರೈತರ ವಾಣಿಜ್ಯ ಬ್ಯಾಂಕ್ ಖಾತೆಗೆ 258 ಕೋಟಿ 93 ರೂ. ಲಕ್ಷ ರೂಪಾಯಿ ಬಿಡುಗಡೆ...

ಮಗನಿಗೆ ಹೊಸ ಕಾರ್ ಸರ್ಪ್ರೈಸ್ ಕೊಡಲು ಹೋಗ್ತಿದ್ದವರು ದುರ್ಮರಣ..!

1 week ago

ರಾಯಚೂರು: ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ-ಮಗ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ರಾಯಚೂರಿನ ಸಿಂಧನೂರು ಹೊರವಲಯದ ರಾಘವೇಂದ್ರ ರೈಸ್ ಮಿಲ್ ಬಳಿ ನಡೆದಿದೆ. ಹನೀಫ್ ಕುರೇಸಿ (60) ಮತ್ತು ಅಬ್ದುಲ್ಲ (16) ಮೃತ ದುರ್ದೈವಿಗಳು. ಮೃತರು...

ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

2 weeks ago

ರಾಯಚೂರು: ಉಡುಪಿಯ ಮಲ್ಪೆಯಿಂದ ಹೊರಟಿರುವ ಮೀನುಗಾರರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ ಎಂದು ಪಶುಸಂಗೋಪನಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನಿಸಿದ್ದಾರೆ. ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವೆಂಕಟರಾವ್,...

ಸಿಎಂ ಕಾರ್ಯಕ್ರಮದಲ್ಲಿ ಕೈ ಶಾಸಕರಿಗೆ ನೋ ಎಂಟ್ರಿ

2 weeks ago

ರಾಯಚೂರು: ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಪೊಲೀಸರು ತಡೆದ ಘಟನೆ ನಡೆದಿದ್ದು, ಪೊಲೀಸರ ವರ್ತನೆಗೆ ‘ಕೈ’ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪಶು ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಕುಮಾರಸ್ವಾಮಿ...

ಇದು ಸಂಸದರ ಆದರ್ಶ ಗ್ರಾಮ-ಆಯ್ಕೆ ಮಾಡಿಕೊಂಡ ಗ್ರಾಮವನ್ನೇ ಮರೆತ ಸಂಸದ!

3 weeks ago

ರಾಯಚೂರು: ಒಂದು ದಿನ ಊಟ ಇಲ್ಲದಿದ್ದರೂ ಬದುಕಬಹುದು. ಆದರೆ ನೀರು ಇಲ್ಲದೆ ಇರಲು ಸಾಧ್ಯವೇ. ಹೀಗಾಗಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ರಾಯಚೂರಿನ ಈ ಗ್ರಾಮದ ಜನ ನೀರಿಗಾಗೇ ತಮ್ಮ ಜೀವನವನ್ನ ಮುಡುಪಿಟ್ಟಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರು ಈ...

ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಹೂತಿಟ್ಟ ಶಿಕ್ಷಕರು!

3 weeks ago

ರಾಯಚೂರು: ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರು ಹೂತಿಟ್ಟ ಘಟನೆ ಜಿಲ್ಲೆಯ ಲಿಂಗಸುಗೂರಿನ ಯರಡೋಣಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರದಿಂದ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನ ಯರಡೋಣಾ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ಗುಂಡಿ ತೆಗೆದು...