Friday, 15th November 2019

5 days ago

ಬೆಂಗ್ಳೂರಲ್ಲಿ ರಾತ್ರಿ ಭಾರೀ ಮಳೆ – ಹೊಳೆಯಂತಾದ ರಸ್ತೆ, ಅಂಡರ್‌ಪಾಸ್‌ನಲ್ಲಿ ಪ್ರವಾಹ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಆಗಿ ಬಂದ ಮಳೆ ನಗರದ ಹಲವು ಕಡೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ವಸಂತ ನಗರ ಸೇರಿ ಹಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇತ್ತ ತಗ್ಗು ಪ್ರದೇಶದಲ್ಲಿದ್ದ ಅಂಡರ್‌ಪಾಸ್‌ಗಳು ಜಲಾವೃತವಾಗಿದೆ. ಮಲ್ಲೇಶ್ವರಂ, ರಾಜಾಜಿನಗರ, ಉತ್ತರಹಳ್ಳಿ, ಕತ್ರಿಗುಪ್ಪೆ, ಇಟ್ಟುಮಡು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ವಾಹಸ ಸವಾರರು ಪರದಾಡುವಂತಾಗಿದೆ. ಬಿಬಿಎಂಪಿ ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಓಕಳಿಪುರಂ ಅಂಡರ್ ಪಾಸ್ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ […]

1 week ago

ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

ಹಾವೇರಿ: ಜಿಲ್ಲೆಯ ಬ್ಯಾಡಗಿ ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ತಿಳಿಸಲು ದಂಪತಿ ಹಾಗೂ ಮಗ ವಿಭಿನ್ನ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬ್ಯಾಡಗಿ ನಗರದ ರಸ್ತೆಯ ತಗ್ಗುಗುಂಡಿಗಳ ಬಗ್ಗೆ ವಿಭಿನ್ನ ಫೋಟೋಶೂಟ್ ಮಾಡಿಸಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಬ್ಯಾಡಗಿ ನಗರದ...

ಕೇಂದ್ರ, ರಾಜ್ಯ ಸಚಿವರಿದ್ರೂ ಹುಬ್ಬಳ್ಳಿಯಲ್ಲಿ ಎಲ್ಲೆಲ್ಲೂ ಗುಂಡಿಗಳ ದರ್ಶನ

2 weeks ago

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಹೊಂಡಗಳಾಗಿ ಮಾರ್ಪಟ್ಟಿವೆ. ತಮ್ಮ ಕ್ಷೇತ್ರಗಳ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಬೇಸತ್ತ ಜನಸಾಮಾನ್ಯರು ತಮ್ಮ ನಾಯಕರುಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ರಸ್ತೆಗಳೆಲ್ಲ ಮಳೆಯಿಂದ ಕೊಚ್ಚಿಹೋಗಿ ಹೊಂಡಗಳಂತಾಗಿವೆ....

ಚಿಕ್ಕಮಗ್ಳೂರಲ್ಲಿ ಮಳೆಯಬ್ಬರಕ್ಕೆ 15 ಸೇತುವೆಗಳೇ ಕೊಚ್ಚಿ ಹೋದವು!

2 weeks ago

ಚಿಕ್ಕಮಗಳೂರು: ಈ ಬಾರಿ ಮಳೆ ಕೇವಲ ಜನಜೀವನವನ್ನಷ್ಟೇ ಅತಂತ್ರಗೊಳಿಸಿಲ್ಲ. ದೈನಂದಿನ ಬದುಕಿನ ಮೇಲೂ ಪರಿಣಾಮ ಬಿದ್ದಿದೆ. ಜಲರಾಕ್ಷಸನ ಅಟ್ಟಹಾಸಕ್ಕೆ ಸಂಪರ್ಕ ಕೊಂಡಿಗಳೇ ಕಳಚಿ ಬಿದ್ದಿವೆ. ಹೌದು. ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಈ ಬಾರಿ ಕಂಡು-ಕೇಳರಿಯದ ಮಳೆ ಸುರಿದಿದೆ. ಇದರಿಂದ ಒಂದಲ್ಲ-ಎರಡಲ್ಲ...

ರಸ್ತೆ ಚೆನ್ನಾಗಿ ಮಾಡಿದ್ರೆ ಅಪಘಾತಗಳು ಹೆಚ್ಚಾಗುತ್ತವೆ – ಬಿಜೆಪಿ ಸಂಸದ

2 weeks ago

ದಿಸ್ಪುರ್: ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬಿಜೆಪಿ ಸಂಸದರೊಬ್ಬರು ವಿಲಕ್ಷಣ ಹೇಳಿಕೆ ನೀಡಿದ್ದು, ರಸ್ತೆಗಳು ಚೆನ್ನಾಗಿದ್ದರೆ ಅಪಘಾತಗಳು ಹೆಚ್ಚುತ್ತವೆ ಎಂದು ಹೇಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಅಸ್ಸಾಂ ಬಿಜೆಪಿ ಸಂಸದ ಪಲ್ಲಾಬ್ ಲೋಚನ್ ದಾಸ್ ಈ ಹೇಳಿಕೆ ನೀಡಿದ್ದು, ತೀವ್ರ ಆಕ್ರೋಶಕ್ಕೆ...

ಸೂಳೆಕೆರೆ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಹೋಯ್ತು ರಸ್ತೆ

3 weeks ago

ದಾವಣಗೆರೆ: ಕಳೆದ ಕೆಲ ದಿನಗಳಿಂದ ದಾವಣಗೆರೆಯಲ್ಲಿ ಭಾರೀ ಮಳೆಯಾಗುತ್ತಿದೆ. ಸೂಳೆಕೆರೆ ಹಳ್ಳದ ನೀರಿನ ರಭಸಕ್ಕೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ಮಳೆಯಿಂದಾಗಿ ಸೂಳೆಕೆರೆ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು...

ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ಅಬ್ಬರಕ್ಕೆ ರಸ್ತೆಗಳು ಛಿದ್ರ ಛಿದ್ರ

3 weeks ago

ಗದಗ: ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹದ ಅಬ್ಬರಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಬಸರಕೋಡ ಬಳಿ ರಸ್ತೆಗಳೆಲ್ಲಾ ಛಿದ್ರ ಛಿದ್ರವಾಗಿದೆ. ಹೊಳೆಆಲೂರ ನಿಂದ ಹೊಳೆಹಡಗಲಿ, ಬಸರಕೋಡ ಬಾದಾಮಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪ್ರವಾಹದ ರುದ್ರನರ್ತನಕ್ಕೆ ಛಿದ್ರಗೊಂಡಿದೆ. ಸುಮಾರು ನೂರಾರು...

ಬಾಲಕಿಯ ಪತ್ರಕ್ಕೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ

3 weeks ago

ಬಾಗಲಕೋಟೆ: ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಬಾಲಕಿ ರಸ್ತೆ ಸಮಸ್ಯೆಯನ್ನು ಸರಿಪಡಿಸಿ ಎಂದು ಡಿಸಿಎಂ ಕಾರಜೋಳ ಹಾಗೂ ಜನಪ್ರತಿನಿಧಿಗಳಿಗೆ ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಇಂದು ಡಿಸಿಎಂ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿ...