Tuesday, 21st May 2019

Recent News

2 months ago

ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ

ಬೆಂಗಳೂರು: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚಿಂಚೋಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಉಮೇಶ್ ಜಾಧವ್ ಅಯ್ಕೆಯಾಗಿದ್ದರು. ಮಾರ್ಚ್ 4ರಂದು ಸ್ಪೀಕರ್ ನಿವಾಸಕ್ಕೆ ತೆರಳಿದ್ದ ಉಮೇಶ್ ಜಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಭಾರತ ಸಂವಿಧಾನದ ಅನುಚ್ಛೇದ 190(3)ಬಿ ಯಲ್ಲಿ ಸಭಾಧ್ಯಕ್ಷರು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 190(3)ಬಿ […]

2 months ago

ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

ಕೋಲಾರ: ಮುನಿಯಪ್ಪ ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗೆ ಇಷ್ಟವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದಿದ್ದ ಮುನಿಯಪ್ಪ ಹೇಳಿಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಗಂಡಸರೊಂದಿಗೆ ಮಲಗುವುದಿಲ್ಲ, ನಾನು ನನ್ನ ಮನೆಯಲ್ಲಿ ಮಲಗುವೆ. ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ...

ಏರ್ ಸ್ಟ್ರೈಕ್ – ಕೇಂದ್ರ, ಮೋದಿ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ಟಾಂಗ್

3 months ago

ಕೋಲಾರ: ದೇಶಭಕ್ತಿ ಹಾಗೂ ದೇಶ ಕಾಯುವ ಸೈನ್ಯದ ಹೆಸರಿನಲ್ಲಿ ರಾಜಕೀಯ ಮಾಡಬಾರದು ಅದು ಶುದ್ಧ ಅವಿವೇಕಿತನ ಎಂದು ಕೇಂದ್ರ ಸರ್ಕಾರ ಹಾಗೂ ಮೋದಿಗೆ ಸ್ಪೀಕರ್ ರಮೇಶ್ ಕುಮಾರ್ ಕೋಲಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು. ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ...

ಸಿದ್ದರಾಮಯ್ಯ ಅವರು ಕರ್ನಾಟಕದ ಹುಲಿ: ರಮೇಶ್ ಕುಮಾರ್ ವರ್ಣನೆ

3 months ago

ಕೋಲಾರ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ನಾನು ಮೊದಲೇ ಹೇಳಿದ್ದೆ, ಅವರು ಈಗಲೂ ನಮ್ಮ ಮುಖ್ಯಮಂತ್ರಿಯೇ. ಅವರು ನಿಧಾನವಾಗಿ ನಡೆಯುತ್ತಿದ್ದರೆ ಹುಲಿ(ಪುಲಿ) ನಡೆಯುತ್ತಿದ್ದಂತೆ ಕಾಣುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಬಣ್ಣ ಬಣ್ಣವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ವರ್ಣಿಸಿದ್ದಾರೆ. ಹೌದು...

ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ

3 months ago

– ಎಚ್‍ಡಿಕೆಗೆ ಗೌರವವಿದ್ರೆ ಗೌಪ್ಯತೆ ಕಾಪಾಡಲಿ ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈನಿಂಗ್ ವಿಚಾರದಲ್ಲಿ ಎಸ್‍ಐಟಿಯನ್ನು ರಾಜಕೀಯ ದುರ್ಬಳಕೆಗೋಸ್ಕರ ರಚನೆ ಮಾಡಿದ್ರು. ಅಂದು ಕುಮಾರಸ್ವಾಮಿಯವರೇ ಎಸ್‍ಐಟಿಯನ್ನು ವಿರೋಧಿಸಿದ್ದರು. ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಮಾಡಿಸಿದ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿರುತ್ತಾರೆ. ಆರೋಪಿ ಕೈಕೆಳಗೆ...

ರೇಪ್ ಒಳಗಾದ ವ್ಯಕ್ತಿಯ ಸ್ಥಿತಿ ನನ್ನದು – ಎಲ್ಲರೂ ಸೇರ್ಕೊಂಡು ರೇಪ್ ಮಾಡ್ತಿದ್ದೀರಿ: ಸ್ಪೀಕರ್

3 months ago

ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಸದನದಲ್ಲಿ...

ಕಳ್ಳನ ಕೈಗೆ ಬೀಗ ಕೊಟ್ರೆ ಏನ್ ಲಾಭ?: ಈಶ್ವರಪ್ಪ

3 months ago

-ಸದನದಲ್ಲಿ ಸಿಡಿ ಪ್ರದರ್ಶಿಸಿದ ರೇಣುಕಾಚಾರ್ಯ ಬೆಂಗಳೂರು: ಆಪರೇಷನ್ ಕಮಲ ನಡೆದಿದೆ ಎಂದು ಆರೋಪಿಸಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ತನಿಖೆಯನ್ನು ಎಸ್‍ಐಟಿಗೆ ನೀಡುವ ತೀರ್ಮಾನದ ಕುರಿತು ಶಾಸಕ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ....

ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ

3 months ago

ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ. ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತನಿಖೆ ಶಾಸನ ಸಭೆಯ ಅಧ್ಯಕ್ಷರಿಂದ ನಡೆಯಬೇಕು ಎಂದು ನಾವು ಬಹಳ ಸ್ಪಷ್ಟವಾಗಿಯೇ ಹೇಳಿದ್ದೇವೆ. ಅವರು ನೇಮಕ ಮಾಡಬಹುದಾದ...