Saturday, 18th January 2020

Recent News

8 months ago

ಹಣ ಹಂಚಿಕೊಳ್ಳುವ ವಿಚಾರದಲ್ಲಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರಂಜಾನ್ ದಿನವೇ ಚಿಕನ್ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ. ಪಾದರಾಯನಪುರದ ಸಿಬ್ಗತ್ (35) ಕೊಲೆಯಾದ ದುರ್ದೈವಿ. ಪಾದರಾಯನಪುರದ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ರಂಜಾನ್ ಹಬ್ಬದ ನಿಮಿತ್ತ ಮಾಸದ ವ್ಯಾಪಾರ ಜೋರಾಗಿ ನಡೆದಿತ್ತು. ಹೀಗಾಗಿ ಸಿಬ್ಗತ್, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿದ್ದ ನಾಲ್ವರು ಹಣ […]

8 months ago

ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ – ಉಗ್ರ ನಾಯಕರ ಪೋಸ್ಟರ್ ಹಿಡಿದ ಕಿಡಿಗೇಡಿಗಳು

ಶ್ರೀನಗರ: ರಂಜಾನ್ ಹಬ್ಬದಂದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದ್ದು, ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಬೆಳ್ಳಂಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಭದ್ರತಾ ಪಡೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಕೆಲ ಭಧ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಜೈಷ್-ಇ- ಮೊಹ್ಮದ್...

ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ – ಡಿ ಬಾಸ್ ನಂಬರಿನ ಬೈಕಲ್ಲಿ ದಾಸ

8 months ago

ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದೆ. ದರ್ಶನ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಚಿತ್ರ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ದರ್ಶನ್...

ನಮ್ಮನ್ನ ಹೊಡೆಯುವವರು ತುಂಡು-ತುಂಡಾಗ್ತಾರೆ : ಬಿಜೆಪಿ ವಿರುದ್ಧ ದೀದಿ ಕಿಡಿ

8 months ago

– ಬಿಜೆಪಿಗೆ ನೀವು ಹೆದರಬೇಕಾಗಿಲ್ಲ – ಅಲ್ಪಸಂಖ್ಯಾತರ ಮನವೊಲಿಸಲು ಬ್ಯಾನರ್ಜಿ ಯತ್ನ ಕೋಲ್ಕತ್ತಾ: ನಮ್ಮನ್ನ ಹೊಡೆಯುವವರು ಚೂರ್-ಚೂರ್ (ತುಂಡು-ತುಂಡು) ಆಗುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ...

ರಂಜಾನ್ ಮೆರವಣಿಗೆ ವೇಳೆ ಸೋಮವಾರಪೇಟೆಯಲ್ಲಿ ಕಿಡಿಗೇಡಿಗಳ ಪುಂಡಾಟ

8 months ago

ಮಡಿಕೇರಿ: ರಂಜಾನ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಪುಂಡಾಟ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ನಡೆದಿದೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಮೆರವಣಿಗೆ ಮಾಡಲಾಗುತಿತ್ತು. ಈ ವೇಳೆ ಕಿಡಿಗೇಡಿಗಳು ನಿಂತಿದ್ದ ಕಾರಿಗೆ ಕಲ್ಲು ತೂರಿದ್ದಾರೆ....

ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

8 months ago

ರಾಯಚೂರು: ಇಂದು ಮುಸ್ಲಿಂ ಬಾಂಧವರು ಖುಷಿಯಿಂದ ಆಚರಿಸುವ ರಂಜಾನ್ ಹಬ್ಬದ ಜೊತೆಗೆ ವಿಶ್ವ ಪರಿಸರ ದಿನವೂ ಹೌದು. ಹೀಗಾಗಿ ಈ ವಿಶೇಷ ದಿನದಂದು ರಾಯಚೂರಿನ ಜನತೆ ಸಸಿಗಳನ್ನು ನೆಟ್ಟು ರಂಜಾನ್ ಹಬ್ಬವನ್ನು ಸಂಭ್ರಮಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ದೇವದುರ್ಗದ ಜಾಲಹಳ್ಳಿಯಲ್ಲಿ...

ರಂಜಾನ್ ಸ್ಪೆಷಲ್: ಮಟನ್ ಬಿರಿಯಾನಿ ಮಾಡುವ ವಿಧಾನ

8 months ago

ಇನ್ನೇನು ಒಂದೆರೆಡು ದಿನಗಳಲ್ಲಿ ರಂಜಾನ್ ಹಬ್ಬ ಬಂದೇ ಬಿಡ್ತು. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ಸ್ಪೆಷಲ್ ಅಂತ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೇ ಸಿಂಪಲ್ ಆಗಿ ಕಡಿಮೆ ವಸ್ತುಗಳನ್ನು...

ಅನಾರೋಗ್ಯಕ್ಕೀಡಾದ ಮುಸ್ಲಿಂ ಚಾಲಕನ ಪರವಾಗಿ ಅರಣ್ಯಾಧಿಕಾರಿ ಉಪವಾಸ

8 months ago

ಮುಂಬೈ: ಅನಾರೋಗ್ಯಕ್ಕೀಡಾದ ಮುಸ್ಲಿಂ ಡ್ರೈವರ್ ಪರವಾಗಿ ಅರಣ್ಯ ಅಧಿಕಾರಿ ಉಪವಾಸ ಮಾಡಿದ್ದಾರೆ. ಅರಣ್ಯ ಅಧಿಕಾರಿ ಸಂಜಯ್ ಎನ್ ಮಾಲಿ ಅವರು ಮೇ 6ರಂದು ತಮ್ಮ ಡ್ರೈವರ್ ಬಳಿ ನೀನು ಉಪವಾಸ ಮಾಡುತ್ತೀಯಾ ಎಂದು ಕೇಳಿದ್ದಾರೆ. ಆಗ ಡ್ರೈವರ್ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ....