Wednesday, 23rd October 2019

Recent News

3 days ago

ಯುವಿ ನೀನು ನನ್ನ ಸೂಪರ್ ಸ್ಟಾರ್ ಎಂದ ಗಂಗೂಲಿ

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೇಮಕ ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ದಾದಾಗೆ ಶುಭ ಕೋರಿ ಟ್ವೀಟ್ ಮಾಡಿದ್ದು, ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಗಂಗೂಲಿ, ನೀನು ನನ್ನ ಸೂಪರ್ ಸ್ಟಾರ್ ಎಂದು ಯುವಿಗೆ ಹೊಗಳಿಕೆ ನೀಡಿದ್ದಾರೆ. Greater the man greatest the journey! Frm […]

4 weeks ago

ಯೋ ಯೋ ಟೆಸ್ಟ್ ಪಾಸ್ ಆದ್ರೂ ಕಡೆಗಣಿಸಿದ್ರು- ಯುವಿ ನೋವಿನ ನುಡಿ

ಮುಂಬೈ: ಬಿಸಿಸಿಐ ಆಟಗಾರ ಫಿಟ್ನೆಸ್ ಕುರಿತು ನಡೆಸುವ ಯೋ ಯೋ ಟೆಸ್ಟ್ ಪಾಸಾದ್ರೂ ನನ್ನನ್ನು ವಿಶ್ವಕಪ್ ಟೂರ್ನಿಯ ಆಯ್ಕೆಗೆ ಪರಿಗಣಿಸಿರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ, 2011 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದ ಯುವರಾಜ್ ಸಿಂಗ್ ಅವರನ್ನು...

ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

3 months ago

ಟೊರೆಂಟೊ: ಕ್ರಿಕೆಟ್ ಜನಪ್ರಿಯತೆಯನ್ನ ಹೆಚ್ಚಿಸಲು ಇತ್ತೀಚೆಗೆ ಕ್ರಿಕೆಟ್ ಲೀಗ್‍ಗಳನ್ನು ಆಯೋಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿ ಇಂತಹ ಟೂರ್ನಿಗಳ ಮತ್ತೊಂದು ಮುಖವನ್ನು ತೋರಿಸಿದೆ. ವಿಶ್ವ ಕ್ರಿಕೆಟ್‍ನ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕೆನಡಾ ಗ್ಲೋಬಲ್ ಟಿ20 ಕ್ರಿಕೆಟ್...

ಪ್ರೇಮಿಗಳ ನಡುವೆ ಮಧ್ಯ ಪ್ರವೇಶಿಸಿದ ಯುವರಾಜ್ ಸಿಂಗ್

3 months ago

ಟೊರೆಂಟೊ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಯುವರಾಜ್ ಸಿಂಗ್ ಗ್ಲೋಬಲ್ ಟಿ20 ಕೆನಡಾ ಲೀಗ್‍ನಲ್ಲಿ ಆಡುತ್ತಿದ್ದಾರೆ. ಲೀಗ್ ನಲ್ಲಿ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿರುವ ಯುವಿ ಶನಿವಾರ ನಡೆದ ಪಂದ್ಯದ ಸಂದರ್ಭದಲ್ಲಿ ವಿಶೇಷ ಘಟನೆಗೆ ಕಾರಣರಾದರು. ಟೊರೆಂಟೊ ಮತ್ತು ಎಡ್ಮಂಟನ್ ರಾಯಲ್ಸ್...

ಔಟಾಗದಿದ್ದರೂ ಪೆವಿಲಿಯನ್‍ಗೆ ತೆರಳಿದ ಯುವಿ – ವಿಡಿಯೋ

3 months ago

ಟೊರೊಂಟೊ: ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡದ ಪರ ಯುವಿ ಆಡುತ್ತಿದ್ದಾರೆ. ಟೂರ್ನಿಯಲ್ಲಿ ಕ್ರಿಸ್ ಗೇಲ್ ನಾಯಕತ್ವದ ವ್ಯಾಂಕೋವರ್...

ಗಾಯಗೊಂಡ ಬಳಿಕ ಯುವಿಗಾಗಿ ಮೊದಲ ಬಾರಿ ಬ್ಯಾಟ್ ಹಿಡಿದ ಧವನ್

3 months ago

ಮುಂಬೈ: ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಅರ್ಧಕ್ಕೆ ವಾಪಸ್ ಆಗಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮೊದಲ ಬಾರಿಗೆ ಬ್ಯಾಟ್ ಹಿಡಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ನೀಡಿದ್ದ ಬಾಟಲ್ ಕ್ಯಾಪ್ ಚಾಲೆಂಜ್ ಹಿನ್ನೆಲೆಯಲ್ಲಿ ಧವನ್ ವಿಡಿಯೋ...

ಎಬಿಡಿ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ – ಯುವರಾಜ್ ಸಿಂಗ್

3 months ago

ನವದೆಹಲಿ: ಸೌತ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿವಿಲಿಯರ್ಸ್ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ವಿಶ್ವಕಪ್‍ನಲ್ಲಿ ಲೀಗ್ ಹಂತದಲ್ಲೇ ಸೋತ ದಕ್ಷಿಣ...

ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

3 months ago

ಮುಂಬೈ: ಮೊಹಬ್ಬತೇನ್ ಚಿತ್ರದ ನಟಿ ಕಿಮ್ ಶರ್ಮಾ ತಡರಾತ್ರಿ ಆಟೋ ಸವಾರಿಯನ್ನು ಆನಂದಿಸಿದ್ದಾರೆ. ತಿಳಿ ಗುಲಾಬಿ ಹಾಗೂ ಬೂದು ಬಣ್ಣದ ಟೀ ಶರ್ಟ್, ಶಾರ್ಟ್ಸ್ ತೊಟ್ಟು ಕಿಮ್ ಶರ್ಮಾ ಆಟೋದಲ್ಲಿ ಮುಂಬೈನ ಬಾಂದ್ರಾದ ರಾತ್ರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ...