Saturday, 23rd March 2019

2 days ago

ಪ್ರೀತಿ ನಿರಾಕರಿಸಿದಕ್ಕೆ ಯೂಟ್ಯೂಬ್‍ನಲ್ಲಿ ಆಡಿಯೋ ಹಾಕಿ ಯುವಕ ಆತ್ಮಹತ್ಯೆ!

ಹೈದರಾಬಾದ್: ಪ್ರೀತಿ ನಿರಾಕರಿಸಿದಕ್ಕೆ ಯುವಕನೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅತ್ಮಕುರ್ ಮಂದಲ್‍ನಲ್ಲಿ ನಡೆದಿದೆ. ಕಿರಣ್ ಕುಮಾರ್ ಗವಡ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿರಣ್ ಕುಮಾರ್ ಮೂಲತಃ ಅರೇಪಲ್ಲಿ ಜಿಲ್ಲೆಯವನಾಗಿದ್ದು, ಹೈದರಾಬಾದ್‍ನ ಮೆದಿಪಟ್ನಂನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕಿರಣ್ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಕಿರಣ್ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಖಿನ್ನತೆಕ್ಕೊಳಗಾದ ಕಿರಣ್ ತನ್ನ ಸಾವಿಗೆ ಕಾರಣವನ್ನು ಡೆತ್‍ನೋಟ್‍ನಲ್ಲಿ ಬರೆದಿದ್ದ. […]

2 days ago

ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

ಕಾರವಾರ: ಅತಿವೇಗದ ಚಾಲನೆಯಿಂದ ಕಾರು ಪಲ್ಟಿಯಾಗಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂರು ವಿದ್ಯಾರ್ಥಿಗಳಿಗೆ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಶಮ್ಮಾಸ್(19) ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಶಮ್ಮಾಸ್ ಭಟ್ಕಳ ಪಟ್ಟಣದ ಜಾಮೀಯಾ ಸ್ಟ್ರೀಟ್ ನಿವಾಸಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿ...

ಸ್ವೀಟ್ ಆಸೆ ತೋರಿಸಿ 9ರ ಬಾಲಕಿ ಮೇಲೆ ಅತ್ಯಾಚಾರ!

2 weeks ago

ಹೈದರಾಬಾದ್: ಸ್ವೀಟ್ ನೀಡುವುದಾಗಿ ಆಸೆ ತೋರಿಸಿ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಸಿಂಗರೆನಿ ಕಾಲೋನಿಯಲ್ಲಿ ನಡೆದಿದೆ. ಸಿಂಗರೆನಿ ಕಾಲೋನಿಯ ನಿವಾಸಿ ಶ್ರೀನಿವಾಸ್(28) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಯ ಪಕ್ಕದ ಮನೆಯಲ್ಲಿಯೇ...

ರೇವಣ್ಣ ವಿರುದ್ಧ ಹಾಡಿನ ಮೂಲಕ ಆಕ್ರೋಶ ಹೊರಹಾಕಿದ ಯುವಕ

2 weeks ago

ಮಂಡ್ಯ: ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶಿಸುವ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆಗೆ ಹಾಡಿನ ಮೂಲಕ ಮಂಡ್ಯದ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದು, ಈ ವಿಡಿಯೋ ಸದ್ಯ ಎಲ್ಲಡೆ ವೈರಲ್ ಆಗಿದೆ. ಉಮೇಶ್‍ಗೌಡ  ಎಂಬವರ ಫೇಸ್ ಬುಕ್ ಪೇಜ್‍ನಿಂದ...

ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

2 weeks ago

ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬ ಕೊನೆಗೆ ತಾನೇ ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ...

ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

3 weeks ago

ಭೋಪಾಲ್: ಪಬ್‍ಜಿ ಆಡುವ ಭರದಲ್ಲಿ ನೀರು ಅಂತ ಭಾವಿಸಿ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 19ರಂದು ಈ ಘಟನೆ ನಡೆದಿದೆ. ಚಿಂದ್ವಾರ ಮೂಲದ 25 ವರ್ಷದ ಯುವಕನೊಬ್ಬ ತನ್ನ ಮನೆ ಬಳಿ...

ಪಾಕ್‍ಗೆ ಜಿಂದಾಬಾದ್ ಎಂದಿದ್ದ ಯುವಕನ ಪರ ವಕಲತ್ತು ವಹಿಸದಿರಲು ನಿರ್ಧಾರ

3 weeks ago

ಬಳ್ಳಾರಿ: ಪುಲ್ವಾಮಾ ದಾಳಿಯಾದ ಬಳಿಕ ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಹಾಕಿ ಬಂಧನವಾಗಿರುವ ಯುವಕರ ಪರ ನ್ಯಾಯಾಲಯದಲ್ಲಿ ವಾದ ಮಾಡದೆ ಇರಲು ನ್ಯಾಯಾವಾದಿಗಳ ಸಂಘ ತೀರ್ಮಾನ ಮಾಡಿದೆ. ದೇಶದ್ರೋಹಿ ಪೊಸ್ಟ್ ಹಾಕಿದ ಯುವಕನ ಪರವಾಗಿ ವಕಲತ್ತು ಮಾಡದಿರಲು ಹೂವಿನಹಡಗಲಿ ನ್ಯಾಯವಾದಿಗಳು ನಿರ್ಧಾರ...

300 ಹೆಣ ಬೀಳಿಸಿದ್ದೀವಿ ಎಂದ್ರಿ, ಈಗ ನೋಡಿದ್ರೆ 1 ಪಾಕಿಸ್ತಾನಿ ಹೆಣವೂ ಇಲ್ಲ- ಯುವಕನ ಪೋಸ್ಟ್

3 weeks ago

ಚಾಮರಾಜನಗರ: ಸೈನಿಕರ ದಾಳಿ ಬಗ್ಗೆ ಪ್ರಶ್ನೆ ಮಾಡಿದ ಯುವಕನಿಗೆ ಧರ್ಮದೇಟು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಪ್ರಕಾಶ್ ಗೌಡ ಪೋಸ್ಟ್ ಹಾಕಿದ ವ್ಯಕ್ತಿ. ಪ್ರಕಾಶ್ ತನ್ನ ಫೇಸ್‍ಬುಕ್ ಖಾತೆಯಲ್ಲಿ, ಎಲ್ರೋ 300 ಹೆಣ ಬೀಳಿಸಿದ್ದೀವಿ ಎಂದು ಟಾಂಟಾಂ ಹೋಡ್ಕೋತಾ ಇದ್ರಲ್ಲ. ಈಗ...