Tuesday, 22nd January 2019

4 hours ago

ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

ಮೈಸೂರು/ಬೆಳಗಾವಿ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಾಡಿನ ಹಲವು ಕಲಾವಿದರು ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಲಾವಿದ ಶ್ರೀಶೈಲ್ ಗಸ್ತಿ ಸಾರ್ವಜನಿಕವಾಗಿ ಬಾಯಲ್ಲಿ ಕುಂಚ ಹಿಡಿದು ಸಿದ್ದಗಂಗಾ ಶ್ರೀಗಳ ಭಾವಚಿತ್ರ ರಚನೆ ಮಾಡಿ ಶಿವೈಕ್ಯರಾದ, ಶಿವಕುಮಾರ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ […]

2 days ago

ಅಪ್ಪನ ತೊಡೆ ಮೇಲೆ ಯುವರಾಜ – ವರ್ಧಂತಿಗೆ ಯದುವೀರ್ ವಿಶ್

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತನ್ನ ಮಗ ಯುವರಾಜ ಆಧ್ಯವೀರ್ ಗೆ ವರ್ಧಂತಿಯ(ಹುಟ್ಟುಹಬ್ಬ) ಶುಭಾಶಯವನ್ನು ಕೋರಿದ್ದಾರೆ. ಯದುವೀರ್ ಅವರು ಫೇಸ್‍ಬುಕ್ ನಲ್ಲಿ ಮಗ ತೊಡೆಯ ಮೇಲೆ ಕುಳಿತಿರುವ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಫೋಟೋದಲ್ಲಿ  ಆಧ್ಯವೀರ್ ತುಂಟತನದಿಂದ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ರೀತಿಯಲ್ಲಿ ಕಂಡು ಬಂದಿದೆ. ಅರಮನೆಯ ಸಂಪ್ರದಾಯದ ಪ್ರಕಾರ ಹುಟ್ಟುಹಬ್ಬವನ್ನು ಆಧ್ಯವೀರ್...

ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಪ್ರತಿಪಕ್ಷವೂ ಇಲ್ಲ- ಇದು ಕರ್ನಾಟಕದ ಕರ್ಮ

4 days ago

– ಖಾಲಿ ಹೊಡೆಯುತ್ತಿದೆ ವಿಧಾನಸೌಧ – ರೆಸಾರ್ಟಿನಲ್ಲಿ ಮಜಾ ಮಾಡಿ, ಕ್ಷೇತ್ರಕ್ಕೆ ಬರಬೇಡಿ – ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಡಿ ಬೆಂಗಳೂರು: ಈ ರೀತಿಯ ಕೀಳುಮಟ್ಟದ ಹೊಲಸು ರಾಜಕೀಯವನ್ನು ನಾವು ನೋಡಿಲ್ಲ. ಬರಗಾಲ ಇದೆ, ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು...

ಇಷ್ಟೊಂದು ಕೀಳುಮಟ್ಟದ ರಾಜಕಾರಣ ನಾನೆಂದೂ ನೋಡಿಲ್ಲ – ವಿ.ಶ್ರೀನಿವಾಸ ಪ್ರಸಾದ್ ಬೇಸರ

4 days ago

ಮೈಸೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದ್ದು, ಯಾವುದೇ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇಂದು ನಾನು ಮೂಕ ಪ್ರೇಕ್ಷಕನಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಕೊಟ್ಟ ಅವಕಾಶವನ್ನು...

ಪ್ರೀತ್ಸಿ ಮದ್ವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದ ಸಾವು-ಮರ್ಯಾದಾ ಹತ್ಯೆ ಶಂಕೆ

5 days ago

ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ಸೃಷ್ಟಿಯಾಗಿದೆ. ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಯುವತಿ ಸವಿತಾ(25) ಮೃತ ಯುವತಿ. ಸವಿತಾ ಕಾಳನಾಯಕ ಮತ್ತು ನಾಗಮ್ಮ ಎಂಬವರ ಪುತ್ರಿ ಆಗಿದ್ದು,...

ಕಿಚ್ಚು ಹಾಯಿಸುವಾಗ ದುರ್ಘಟನೆ – ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

6 days ago

ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ದನಗಳಿಗೆ ಕಿಚ್ಚು ಹಾಯಿಸುವಾಗ ನಾಲ್ವರು ಗಾಯಗೊಂಡಿರುವ ದುರ್ಘಟನೆ ಜಿಲ್ಲೆಯ ಹೊರವಲಯದ ಸಿದ್ದಲಿಂಗಪುರದಲ್ಲಿ ನಡೆದಿದೆ. ಸಿದ್ದಲಿಂಗಪುರದ ನಿವಾಸಿಗಳಾದ ಪುರುಷೋತ್ತಮ್, ಸಂಜು, ಜೀವನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷೋತ್ತಮ್(24) ಗಂಭೀರ ಗಾಯಗೊಂಡಿದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ...

ಸಂಕ್ರಾಂತಿ ಆಯ್ತು, ಈಗ ಬಿಜೆಪಿಯಿಂದ ಯುಗಾದಿ ರಾಗ!

1 week ago

– ಠುಸ್ಸಾಯ್ತಾ ಆಪರೇಷನ್ ಕಮಲ! ಮೈಸೂರು: ಈ ವರ್ಷದ ಆರಂಭದಿಂದಲೂ ಸಂಕ್ರಾಂತಿಗೆ ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ನಾಯಕರು ಪರೋಕ್ಷವಾಗಿ ಹೇಳುತ್ತ ಬಂದಿದ್ದರು. ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ ನಾನು ನುಡಿದ ಭವಿಷ್ಯ ನಿಜ ಆಗುತ್ತೆ ಎಂದು ಸೋಮವಾರ...

ಸಂಕ್ರಾಂತಿ ಹಬ್ಬದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀಮುರಳಿ ವಿಶೇಷ ಪೂಜೆ

1 week ago

ಮೈಸೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ‘ಮದಗಜ’ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದಗಜ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪ್ರತಿಗಳಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಪೂಜೆ ಮಾಡಿಸಿದ ಬಳಿಕ ಚಿತ್ರತಂಡ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರದ ಕೆಲಸವನ್ನು...